ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆ, ಅವರಿಗೆ ಸ್ವಾಗತ ಕೋರಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹಾಕಿರುವ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಬ್ಯಾನರ್‌ನಲ್ಲಿ ಮುರ್ಮು ಅವರನ್ನು ‘ದೇಶದ ಮೊದಲ ಮಹಿಳಾ ರಾಷ್ಟ್ರಪತಿ’ ಎಂದು ಉಲ್ಲೇಖಿಸಿದ್ದು ಸಾರ್ವಜನಿಕರು ಕಿಡಿಹಾಕಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಎನ್‌ಎಸ್‌ಯುಐ ಮಾಜಿ ಕಾರ್ಯದರ್ಶಿ ಮಹಾಂತೇಶ ಕಂಬಾರ,“ಬೆಲ್ಲದ ಅವರು ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ. ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಅನುಮಾನ ಬರುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಭಾರತ ದೇಶದ ಪ್ರಥಮ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ, ಬೆಲ್ಲದ ಅವರು ಮುರ್ಮು ಅವರನ್ನು ಮೊದಲ ಮಹಿಳಾ ರಾಷ್ಟ್ರಪತಿಯೆಂದು ಉಲ್ಲೇಖಿಸಿದ್ದಾರೆ. ಮುರ್ಮು ಅವರು ಮೊದಲ ಮಹಿಳಾ ಬುಡಕಟ್ಟು ಜನಾಂಗದ ರಾಷ್ಟ್ರಪತಿ ಎಂಬುದು ಶಾಸಕರಾದ ಬೆಲ್ಲದ ಅವರಿಗೆ ತಿಳಿಯದಿರುವುದು ವಿಪರ್ಯಾಸ” ಎಂದು ಅವರು ಹೇಳಿದ್ದಾರೆ.
“ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಗೆ ಇತಿಹಾಸದ ಪ್ರಜ್ಞೆ ಇರಬೇಕು. ಪ್ರಚಾರದ ಗೀಳಿಗಾಗಿ ಇತಿಹಾಸವನ್ನು ತಿರುಚಬಾರದು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರಖಾಂಡ್: ಯುವತಿ ಕೊಲೆ ಪ್ರಕರಣದ ಆರೋಪಿಯ ರೆಸಾರ್ಟ್ ಕೆಡವುತ್ತಿರುವುದೇಕೆ? ಸಾಕ್ಷಿನಾಶಕ್ಕೆ ಮುಂದಾಯಿತೆ ಬಿಜೆಪಿ ಸರ್ಕಾರ?
ಸೋಮವಾರ ಬೆಳಿಗ್ಗೆ ರಾಜ್ಯಕ್ಕೆ ಭೇಟಿ ನೀಡಿರುವ ರಾಷ್ಟ್ರಪತಿ ಮುರ್ಮು ಅವರು ಸೋಮವಾರ ಬೆಳಗ್ಗೆ ಮೈಸೂರಿನಲ್ಲಿ ದಸರಾ ಹಬ್ಬಕ್ಕೆ ಚಾಲನೆ ನೀಡಿದ್ದಾರೆ. ಮಧ್ನಾಹ ಅವರು ಧಾರವಾಡಕ್ಕೆ ತೆರಳಲಿದ್ದು, ನೂತನವಾಗಿ ನಿರ್ಮಾಣಗೊಂಡಿರುವ ‘ಐಐಐಟಿ’ಯನ್ನು ಉದ್ಘಾಟಿಸಲಿದ್ದಾರೆ.



ಈ ಧಾರವಾಡ ಐಐಟಿ ಎಷ್ಟು ಸಲ ಉದ್ಘಾಟನೆ ಆಗುತ್ತೋ ಆ ದೇವರಿಗೆ ಗೊತ್ತು….