ಕೇಂದ್ರದ ಬಿಜೆಪಿ ಸರ್ಕಾರದ ಹಲವಾರು ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಹೆಚ್ಚಿಸಲಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಆದಾಯವನ್ನು ಹೆಚ್ಚಿಸುವ ಬದಲು “ಭ್ರಷ್ಟಾಚಾರವನ್ನು ಹೆಚ್ಚಿಸಲು” ಬಿಜೆಪಿ ಯೋಜಿಸುತ್ತಿದೆ ಎಂದು ಗುರುವಾರ ವಾಗ್ದಾಳಿ ನಡೆಸಿದ್ದಾರೆ. ಆದಾಯ ಹೆಚ್ಚಿಸುವ ಬದಲು
ಈ ಬಗ್ಗೆ ಎಕ್ಸ್‌ನಲ್ಲಿ ಬರೆದಿರುವ ಅವರು, “ಬಿಜೆಪಿ ‘ಒಂದು ದೇಶ, ಒಂದು ತೆರಿಗೆ’ ಎಂದು ಹೇಳುತ್ತಿದೆ. ಆದರೆ ಅವರ ಈ ಹೇಳಿಕೆಯು ‘ಜುಮ್ಲಾಯಿ ಜೂಟ್’ (ಸುಳ್ಳು) ಆಗಿ ಮಾರ್ಪಟ್ಟಿದೆ. ಏಕೆಂದರೆ ಈಗ ಅವರು ಹೊಸದಾಗಿ ತೆರಿಗೆ ಸ್ಪಾಬ್‌ಗಳನ್ನು ತರುತ್ತಿದ್ದಾರೆ.” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಾಯ ಹೆಚ್ಚಿಸುವ ಬದಲು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
‘ಒಂದು ತೆರಿಗೆ, ಹಲವು ಸ್ಲ್ಯಾಬ್‌ಗಳು’ ಎಂದಾಗ ‘ಒಂದು ತೆರಿಗೆ’ ಎಂಬ ಘೋಷಣೆಯು ನಿಜವಾದ ಅರ್ಥದಲ್ಲಿ ಸುಳ್ಳು ಎಂದು ಸಾಬೀತಾಗಿದೆ. ವಾಸ್ತವವಾಗಿ, ತೆರಿಗೆ ದರಗಳನ್ನು ಹೆಚ್ಚಿಸುವುದರ ಹಿಂದೆ ದೊಡ್ಡ ಆಟವಿದೆ. ಭ್ರಷ್ಟಾಚಾರ ಹೆಚ್ಚಿಸುವ ಬಿಜೆಪಿಯ ಪ್ಲಾನ್ ಇದಾಗಿದ್ದು, ಅಧಿಕಾರಿಗಳ ಮೂಲಕ ಅಂಗಡಿಕಾರರು ಮತ್ತು ವ್ಯಾಪಾರಸ್ಥರ ಮೇಲೆ ಹೆಚ್ಚಿನ ಒತ್ತಡ ಹೇರುವ ಮೂಲಕ ಆದಾಯ ಹೆಚ್ಚಿಸಿ ‘ವಸೂಲಿ’ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
कहां तो भाजपाई कह रहे थे ‘एक देश, एक टैक्स’ लेकिन उनकी ये बात भी ‘जुमलाई झूठ’ निकली क्योंकि अब वो टैक्स की नयी स्लैब ला रहे हैं। जब ‘एक टैक्स, कई स्लैब’ हैं तो ‘एक टैक्स’ का नारा सही मायनों में झूठा ही साबित हुआ ना।
दरअसल टैक्स की रेट्स को बेतहाशा बढ़ाने के पीछे एक बड़ा खेल है।… pic.twitter.com/H4l4XZv1EV
— Akhilesh Yadav (@yadavakhilesh) December 5, 2024
ಹಾನಿಕಾರಕ ಸರಕುಗಳಾದ ಕಾರ್ಬೋನೇಟೆಡ್ ಪಾನೀಯಗಳು, ಸಿಗರೇಟ್, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲಿನ ತೆರಿಗೆ ದರವನ್ನು ಪ್ರಸ್ತುತ ಶೇಕಡಾ 28 ರಿಂದ ಶೇಕಡಾ 35 ಕ್ಕೆ ಹೆಚ್ಚಿಸಲಾಗುವುದು ಎಂಬ ಕೇಂದ್ರದ ಸಚಿವಾಲಯಗಳ ವರದಿಗಳ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಆದಾಗ್ಯೂ, ಮಂಗಳವಾರ ಕೇಂದ್ರೀಯ ಪರೋಕ್ಷ ತೆರಿಗೆಗಳ ಮಂಡಳಿಯು ಜಿಎಸ್‌ಟಿ ದರಗಳ ತರ್ಕಬದ್ಧಗೊಳಿಸುವಿಕೆಗೆ ಸಂಬಂಧಿಸಿ ಕೇಂದ್ರದ ಸಚಿವಾಲಯಗಳ ಶಿಫಾರಸುಗಳನ್ನು ಜಿಎಸ್‌ಟಿ ಕೌನ್ಸಿಲ್‌ಗೆ ಸಲ್ಲಿಸಬೇಕಿದೆ. ಜಿಎಸ್‌ಟಿ ಕೌನ್ಸಿಲ್ ತೆರಿಗೆ ದರಗಳನ್ನು ನಿಗದಿಪಡಿಸುವಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.
ತೆರಿಗೆ ದರ ಹೆಚ್ಚಿದಷ್ಟೂ ತೆರಿಗೆ ವಂಚನೆ ನಡೆಯುತ್ತದೆ ಎಂಬುದು ಜಗತ್ತಿನ ನಿಯಮ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಹೆಚ್ಚು ತೆರಿಗೆ ವಂಚಿಸಿದಾಗ ಭ್ರಷ್ಟ ಆಡಳಿತರೂಢ ಪಕ್ಷ ಹೆಚ್ಚು ಆದಾಯ ಗಳಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ, ತೆರಿಗೆ ವಂಚಿಸಲು ಮತ್ತು ಅದನ್ನು ಸಂಗ್ರಹಿಸಲು ಹಿಂಬಾಗಿಲಿನ ಮಾರ್ಗಗಳನ್ನು ಮೊದಲು ಸಿದ್ಧಪಡಿಸಲಾಗಿದೆ. ಅದರ ನಂತರ ಯಾವುದೇ ಹೊಸ ತೆರಿಗೆ ಯೋಜನೆಯು ಮುಂಭಾಗದ ಬಾಗಿಲಿನಿಂದ ಹೊರಬರುತ್ತದೆ ಎಂದು ಅವರು ಆರೋಪಿಸಿದ್ದಾರೆ. ಕೊನೆಯಲ್ಲಿ ಪ್ರತಿ ತೆರಿಗೆ ಕಟ್ಟುವ ಹೊರೆ ಸಾರ್ವಜನಿಕರ ಮೇಲೆ ಬೀಳುತ್ತದೆ, ಹೀಗಾಗಿಯೇ ತೆರಿಗೆಯ ಗಿರಣಿಯಲ್ಲಿ ನಲುಗಿ ಹೋಗುವುದು ಸಾರ್ವಜನಿಕರೇ ಆಗಿದ್ದು, ಹೊಡೆತ ಬೀಳುವುದು ಸಾರ್ವಜನಿಕರಿಗೆ ಆಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ವೈದ್ಯಕೀಯ ಇಂಟರ್ನ್‌ಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ – ಕೇಂದ್ರ ಸರ್ಕಾರ


