ಜುಲೈ 2 ರಂದು ಹತ್ರಾಸ್‌ನಲ್ಲಿ ನಡೆದ ‘ಸತ್ಸಂಗ’ದಲ್ಲಿ ಭಾರೀ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಪರಿಹಾರ ಮೊತ್ತ ಹೆಚ್ಚಿಸುವಂತೆ ಲೋಕಸಭೆ ವಿರೋಧಪಕ್ಷ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಭೋಲೆ ಬಾಬಾ ಆಯೋಜಿಸಿದ್ದ ‘ಸತ್ಸಂಗ’ದ ಸಂದರ್ಭದಲ್ಲಿ ಕಾಲ್ತುಳಿತದಲ್ಲಿ ಕನಿಷ್ಠ 121 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಕಾಲ್ತುಳಿತದ ಸಂತ್ರಸ್ತರ ಕುಟುಂಬಗಳನ್ನು ಇತ್ತೀಚೆಗೆ ಭೇಟಿ ಮಾಡಿದ ರಾಹುಲ್ ಗಾಂಧಿ ಅವರು ಯೋಗಿ ಆದಿತ್ಯನಾಥ್ ಅವರಿಗೆ ಬರೆದ ಪತ್ರದಲ್ಲಿ, ದುರಂತದ ಬಗ್ಗೆ ನ್ಯಾಯಯುತ ಮತ್ತು ಪಾರದರ್ಶಕ ತನಿಖೆಗೆ ಒತ್ತಾಯಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಉತ್ತರ ಪ್ರದೇಶ ಸರ್ಕಾರವು ಪ್ರಸ್ತುತ ಒದಗಿಸಿರುವ ಪರಿಹಾರವು “ಅಸಮರ್ಪಕವಾಗಿದೆ” ಎಂದು ಅವರು ಹೇಳಿದರು. ಯೋಗಿ ಆದಿತ್ಯನಾಥ್ ಅವರು ಪರಿಹಾರ ಮೊತ್ತವನ್ನು ಹೆಚ್ಚಿಸಿ, ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಅಥವಾ ಗಾಯಗೊಂಡವರ ಕುಟುಂಬಗಳಿಗೆ ಶೀಘ್ರವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ಪ್ರತ್ಯೇಕವಾಗಿ ಘೋಷಿಸಿವೆ.
हाथरस में भगदड़ हादसे से प्रभावित पीड़ित परिवारों से मुलाकात कर, उनका दुख महसूस कर और समस्याएं जान कर उत्तर प्रदेश के माननीय मुख्यमंत्री योगी आदित्यनाथ जी को पत्र के माध्यम से उनसे अवगत कराया।
मुख्यमंत्री जी से मुआवजे की राशि को बढ़ाकर शोकाकुल परिवारों को जल्द से जल्द प्रदान… pic.twitter.com/omrwp3QGNP
— Rahul Gandhi (@RahulGandhi) July 7, 2024
ಹತ್ರಾಸ್‌ನಲ್ಲಿ ಕಾಲ್ತುಳಿತ ಸಂತ್ರಸ್ತರನ್ನು ಭೇಟಿಯಾದಾಗ ಮತ್ತು ಅವರ ಕಷ್ಟಗಳನ್ನು ಆಲಿಸಿದಾಗ ಕುಟುಂಬದ ಸದಸ್ಯರ ಮಾತಿಗೆ ಕಂಗಾಲಾಗಿದ್ದೇನೆ, ಕಷ್ಟದ ಸಮಯದಲ್ಲಿ ಅವರನ್ನು ಬೆಂಬಲಿಸುವುದು ಮುಖ್ಯ ಎಂದು ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ರಾಜ್ಯ ಸರ್ಲಾರವು ಅವರ ಮನವಿಗಳನ್ನು ಪರಿಹರಿಸಿ ಶೀಘ್ರ ಕ್ರಮಕೈಗೊಳ್ಳುವ ಭರವಸೆಯನ್ನು ಅವರು ವ್ಯಕ್ತಪಡಿಸಿದರು.
ತನಿಖೆ ಚುರುಕು
ಕಾಲ್ತುಳಿತ ದುರಂತದ ತನಿಖೆಗಾಗಿ ರಚಿಸಲಾದ ತ್ರಿಸದಸ್ಯ ನ್ಯಾಯಾಂಗ ಆಯೋಗವು ಭಾನುವಾರ ಹತ್ರಾಸ್ ತಲುಪಿದ್ದು, ‘ಸತ್ಸಂಗ’ದಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ಪೊಲೀಸರು ಮತ್ತು ಇತರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ.
“ನಾವು ಸಂಪೂರ್ಣ ಸ್ಥಳವನ್ನು ನೋಡಿದ್ದೇವೆ. ಎಲ್ಲ ಸದಸ್ಯರು (ಸಮಿತಿಯ) ಇಲ್ಲಿದ್ದಾರೆ. ನಾವು ವಿಚಾರಣೆ ಮಾಡಬೇಕಾದ ಎಲ್ಲರನ್ನು ಪ್ರಶ್ನಿಸುತ್ತೇವೆ. ಹೌದು, ನಾವು ನಮ್ಮ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸುತ್ತೇವೆ” ಎಂದು ನ್ಯಾಯಮೂರ್ತಿ (ನಿವೃತ್ತ) ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಹೇಳಿದರು.
ಭೋಲೆ ಬಾಬಾ ವಿರುದ್ಧ ಮೊದಲ ಪ್ರಕರಣ ದಾಖಲಾಗಿತ್ತು ಮತ್ತು ಈ ಹಿಂದೆ ಎಫ್‌ಐಆರ್‌ನಲ್ಲಿ ಆತನ ಹೆಸರಿರಲಿಲ್ಲ, ಅದರಲ್ಲಿ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ಹೆಸರಿಸಲಾಗಿತ್ತು. ಶುಕ್ರವಾರ ರಾತ್ರಿ ಮಧುಕರ್ ಅವರನ್ನು ಬಂಧಿಸಲಾಗಿದೆ.
ಶನಿವಾರ ಸಂದೇಶದಲ್ಲಿ, ಭೋಲೆ ಬಾಬಾ ಅವರು ಕಾಲ್ತುಳಿತದ ಘಟನೆಯಿಂದ ಖಿನ್ನತೆಗೆ ಒಳಗಾಗಿದ್ದೇನೆ ಎಂದು ಹೇಳಿದ್ದು, ಸಂತ್ರಸ್ತ ಕುಟುಂಬಗಳು ನ್ಯಾಯಾಂಗದಲ್ಲಿ ನಂಬಿಕೆ ಇಡುವಂತೆ ಕೇಳಿಕೊಂಡರು.
ಇದನ್ನೂ ಓದಿ; ‘ನನ್ನ ಮಗ ಖಲಿಸ್ತಾನಿ ಬೆಂಬಲಿಗನಲ್ಲ’ ಎಂಬ ತಾಯಿ ಹೇಳಿಕೆಯನ್ನು ನಿರಾಕರಿಸಿದ ಅಮೃತಪಾಲ್ ಸಿಂಗ್


