ವಿಪಕ್ಷಗಳ ಮೈತ್ರಿ ಕೂಟವಾದ ಇಂಡಿಯಾ ಮೈತ್ರಿಯಲ್ಲಿ ಸಿಪಿಐ (ಎಂ) ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ ಎಂದು ಪಕ್ಷದ ನೂತರ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದ್ದು, ಮುಂಬರುವ ಚುನಾವಣೆಯಲ್ಲಿ ಕೇಂದ್ರದ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಜೊತೆ ಪಕ್ಷವೂ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ. ಇಂಡಿಯಾ ಮೈತ್ರಿ ಬಗ್ಗೆ
ಕಳೆದ ವಾರ ರಾಷ್ಟ್ರ ರಾಜಧಾನಿಯಲ್ಲಿ ಎಂ.ಎ. ಬೇಬಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವಿನ ಸಭೆಯಲ್ಲಿ ಈ ಸಂದೇಶವನ್ನು ರವಾನಿಸಲಾಗಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷರ ಜೊತೆಗಿನ ಭೇಟಿಯಂತೆ ಶೀಘ್ರದಲ್ಲೇ ಆಮ್ ಆದ್ಮಿ ಪಕ್ಷದ ನಾಯಕರು ಸೇರಿದಂತೆ ಇಂಡಿಯಾ ಮೈತ್ರಿಯ ಇತರ ಪಕ್ಷದ ಮುಖ್ಯಸ್ಥರನ್ನೂ ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಸಿಪಿಐ(ಎಂ)ನ ನೂತನ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ಬಗ್ಗೆ ಹೇಗೆ ವರ್ತಿಸುತ್ತಾರೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲವಿದೆ. ಅದಾಗ್ಯೂ, ಬಿಜೆಪಿಯನ್ನು ಎದುರಿಸಲು ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸಲು ಪಕ್ಷವು ತನ್ನ ದಿವಂಗತ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಮಾರ್ಗವನ್ನು ಮುಂದುವರಿಸುತ್ತದೆ ಎಂದು ಬೇಬಿ ಅವರು ಖರ್ಗೆಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ ಮೊದಲ ವಾರದಲ್ಲಿ ಮಧುರೈನಲ್ಲಿ ನಡೆದ 24 ನೇ ಪಕ್ಷದ ಮಹಾ ಅಧಿವೇಶನದಲ್ಲಿ ಸಿಪಿಎಂನ ಉನ್ನತ ಹುದ್ದೆಗೆ ಕೇರಳದ ಮಾಜಿ ಸಚಿವರೂ ಆಗಿರುವ ಎಂ.ಎ. ಬೇಬಿ ಆಯ್ಕೆಯಾದ ನಂತರ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ನಡೆದ ಮೊದಲ ಸಭೆ ಇದಾಗಿತ್ತು.
ತಡವಾಗಿ ಎಚ್ಚರಗೊಳ್ಳುವ ಬದಲು ಇಂಡಿಯಾ ಮೈತ್ರಿಯು ಚುನಾವಣೆಗೆ ಮುನ್ನ ಚುನಾವಣಾ ಕ್ರಮಕ್ಕೆ ಇಳಿಯಬೇಕು ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ ಎಂದು ವರದಿಯಾಗಿದೆ. “ಚುನಾವಣೆಗೆ ಸ್ವಲ್ಪ ಮೊದಲು ಕಾರ್ಯತಂತ್ರ ಮತ್ತು ಸಿದ್ಧತೆಗಳನ್ನು ಯೋಜಿಸಬಾರದು. ಅದನ್ನು ಬಹಳ ಮುಂಚಿತವಾಗಿಯೇ ಮಾಡಬೇಕು” ಎಂದು ಬೇಬಿ ಹೇಳಿದ್ದಾರೆ.
ಇಂಡಿಯಾ ಮೈತ್ರಿ ನಡುವಿನ ಸಮನ್ವಯದ ಕೊರತೆ, ಸುಸಂಬದ್ಧ ಕಾರ್ಯತಂತ್ರಗಳ ಅಗತ್ಯತೆ ಮತ್ತು ಭವಿಷ್ಯದ ಕ್ರಮಗಳ ರೂಪರೇಷೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. “ಸಮನ್ವಯ ಸಮಿತಿ ಸಭೆಗಳು ನಡೆಯುತ್ತಿಲ್ಲ. ಇಂಡಿಯಾ ಮೈತ್ರಿ ಸಭೆ ಬಹಳ ಸಮಯದಿಂದ ನಡೆದಿಲ್ಲ. ಸಂಸತ್ತಿನಲ್ಲಿಯೂ ಹೆಚ್ಚಿನ ಸಮನ್ವಯವಿಲ್ಲ” ಎಂದು ಅವರು ಹೇಳಿದ್ದಾರೆ.
ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿನ ಮೈತ್ರಿ ಚರ್ಚೆಯಲ್ಲಿ ಪ್ರಮುಖ ಪಾತ್ರ ವಹಿಸಲಿಲ್ಲ ಎಂದು ನಾಯಕರೊಬ್ಬರು ಹೇಳಿದ್ದಾರೆ. ಸಿಪಿಎಂ ಮತ್ತು ಕಾಂಗ್ರೆಸ್ ಕೇರಳದಲ್ಲಿ ಮತ್ತು ಟಿಎಂಸಿ ಬಂಗಾಳದಲ್ಲಿ ಪರಸ್ಪರ ಸ್ಪರ್ಧಿಸುವಂತೆ ಪರಿಸ್ಥಿತಿ ಇರುತ್ತದೆ.
ಈ ಮಧ್ಯೆ ಬೇಬಿ ಅವರು ಭಾನುವಾರ ಚೆನ್ನೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಮೈತ್ರಿ ಮತ್ತು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳ ಕುರಿತು ಚರ್ಚಿಸಿದ್ದಾರೆ. ಸಿಪಿಎಂ ಜೊತೆ ಡಿಎಂಕೆಯ ಬಾಂಧವ್ಯ ದೃಢವಾಗಿದೆ ಎಂದು ಸ್ಟಾಲಿನ್ ಪ್ರತಿಪಾದಿಸಿದ್ದಾರೆ. ಇಂಡಿಯಾ ಮೈತ್ರಿ ಬಗ್ಗೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಸಾಮಾಜಿಕ ಮಾಧ್ಯಮದಲ್ಲಿ ಲೈಕ್ ಒತ್ತುವುದು ಹಂಚಿಕೆಗೆ ಸಮನಲ್ಲ..’; ವ್ಯಕ್ತಿ ವಿರುದ್ಧದ ಪ್ರಕರಣ ಕೈಬಿಟ್ಟ ನ್ಯಾಯಾಲಯ
‘ಸಾಮಾಜಿಕ ಮಾಧ್ಯಮದಲ್ಲಿ ಲೈಕ್ ಒತ್ತುವುದು ಹಂಚಿಕೆಗೆ ಸಮನಲ್ಲ..’; ವ್ಯಕ್ತಿ ವಿರುದ್ಧದ ಪ್ರಕರಣ ಕೈಬಿಟ್ಟ ನ್ಯಾಯಾಲಯ

