Homeಮುಖಪುಟಭಾರತ-ಚೀನಾ: ಗಡಿಯಲ್ಲಿ ಜಮಾವಣೆಗೊಂಡ ಚೀನಿ ಯುದ್ಧ ಟ್ಯಾಂಕ್‌‌ಗಳು

ಭಾರತ-ಚೀನಾ: ಗಡಿಯಲ್ಲಿ ಜಮಾವಣೆಗೊಂಡ ಚೀನಿ ಯುದ್ಧ ಟ್ಯಾಂಕ್‌‌ಗಳು

ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಪರಿಸ್ಥಿತಿ ಸ್ವಲ್ಪ ಉದ್ವಿಗ್ನವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ ಇಂದು ಬೆಳಿಗ್ಗೆ ಹೇಳಿದ್ದರು.

- Advertisement -
- Advertisement -

ಪೂರ್ವ ಲಡಾಖ್‍‌ ಸಮೀಪದ ದಕ್ಷಿಣ ಪ್ಯಾಂಗ್ಯೊಂಗ್ ಪ್ರದೇಶದಲ್ಲಿ ಚೀನಿ ಯುದ್ಧ ಟ್ಯಾಂಕ್‍ಗಳು ಹಾಗೂ ಸೇನಾ ಪಡೆಗಳು ದೊಡ್ಡ ಮಟ್ಟದಲ್ಲಿ ಜಮಾವಣೆಗೊಂಡಿದ್ದು, ಪಿರಂಗಿದಳವು ವಾಸ್ತವಿಕ ನಿಯಂತ್ರಣ ರೇಖೆಯಿಂದ 20 ಕಿಲೋ ಮೀಟರ್‌‌ ದೂರದಲ್ಲಿದೆ ಎಂದು ವರದಿಯಾಗಿದೆ.

ಆಗಸ್ಟ್ 30 ರಂದು ಚೀನಾ ಅತಿಕ್ರಮಣ ಯತ್ನವನ್ನು ಹಿಮ್ಮೆಟ್ಟಿಸಿ ಈ ಪ್ರದೇಶದ ಕೆಲವೊಂದು ಪ್ರಮುಖ ಸ್ಥಳಗಳ ಮೇಲೆ ಭಾರತ ನಿಯಂತ್ರಣ ಸಾಧಿಸಿದ ನಂತರದ ಬೆಳವಣಿಗೆ ಇದಾಗಿದೆ.

ಇದನ್ನೂ ಓದಿ: ಮಾಸ್ಕೋದಲ್ಲಿ ರಾಜನಾಥ್ ಸಿಂಗ್, ಚೀನಾ ರಕ್ಷಣಾ ಸಚಿವರ ಭೇಟಿ ಸಾಧ್ಯತೆ

ದಕ್ಷಿಣ ಪ್ಯಾಂಗೊಂಗ್‌ನ ಮೊಲ್ಡೊದಲ್ಲಿನ ಚೀನಾದ ಪ್ರದೇಶಗಳಲ್ಲಿ ಹೆಚ್ಚುವರಿ ಯುದ್ದ ಟ್ಯಾಂಕ್‌ಗಳು ಇದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

PC: NDTV

ಭಾರತೀಯ ಸೇನೆಯು ಈ ಪ್ರದೇಶದಲ್ಲಿ ತನ್ನ ಯುದ್ದ ಟ್ಯಾಂಕ್‌ಗಳನ್ನು ಬಲಪಡಿಸಿದ್ದು, ಪ್ರದೇಶದಲ್ಲಿನ ವಿವಾದಿತ ಗಡಿಯ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ.

ಈ ಪ್ರದೇಶದಲ್ಲಿ ಇದೀಗ ಭಾರತದ ಸ್ಥಿತಿ ಸುದೃಢವಾಗಿದೆಯಾದರೂ ಚೀನಾ ಸೇನೆ ಬ್ಲ್ಯಾಕ್‌ಟಾಪ್ ಮತ್ತು ಹೆಲ್ಮೆಟ್ ಪ್ರದೇಶಗಳಲ್ಲಿ ಇನ್ನೂ ಪ್ರಾಬಲ್ಯ ಹೊಂದಿದೆ.

ಚೀನಾದ ವಾಯುಪಡೆಯು ಟಿಬೆಟ್‌ನ ನ್ಗರಿ-ಗುನ್ಸಾ ಮತ್ತು ಹೊಟಾನ್ ವಾಯುನೆಲೆಗಳಿಂದ ತನ್ನ ಯುದ್ಧವಿಮಾನವನ್ನು ಹೆಚ್ಚಿಸುವುದರೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ತನ್ನ ಚಟುವಟಿಕೆ ಮುಂದುವರೆಸಿದೆ.

ಎಲ್‌ಎಸಿಯ ಉದ್ದಕ್ಕೂ ಪರಿಸ್ಥಿತಿ ಸ್ವಲ್ಪ ಉದ್ವಿಗ್ನವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಅವರು ಇಂದು ಬೆಳಿಗ್ಗೆ ಹೇಳಿದ್ದರು, “ನಮ್ಮ ಸುರಕ್ಷತೆಗಾಗಿ ನಾವು ಕೆಲವು ಮುನ್ನೆಚ್ಚರಿಕೆ ನಿಯೋಜನೆಗಳನ್ನು ಕೈಗೊಂಡಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಾಲ್ವಾನ್‌ ಕಣಿವೆಯಲ್ಲಿ ಸಾವಿಗೀಡಾದ ಚೀನಾ ಸೈನಿಕರ ಸಮಾಧಿಯೆಂದು ಹಳೆಯ ಚಿತ್ರಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...