ದೇಶದ 60 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲು ಸಿದ್ಧತೆಗಳು ನಡೆಯುತ್ತಿದ್ದು, ಮುಂದಿನ ಆರು-ಎಂಟು ತಿಂಗಳೊಳಗೆ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಕೋಲ್ಡ್ ಸ್ಟೋರೇಜ್ ಸೇರಿದಂತೆ ಇತರ ವ್ಯವಸ್ಥೆಗಳ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.
ಎರಡರಿಂದ ಎಂಟು ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನದ ಕೋಲ್ಡ್ ಸ್ಟೋರೇಜ್ ತಯಾರಿಸಲಾಗುತ್ತಿದೆ ಎಂದು ಲಸಿಕೆ ವಿತರಣೆಯ ಉಸ್ತುವಾರಿ ವಹಿಸಿರುವ ವಿ.ಕೆ.ಪಾಲ್ ಹೇಳಿದ್ದಾರೆಂದು ಮಾಧ್ಯಮಂ.ಕಾಮ್ ವರದಿ ಮಾಡಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಬಳಕೆಗೆ ಅನುಮತಿ ಕೋರಿದ ’ಸೀರಮ್ ಇನ್ಸ್ಟಿಟ್ಯೂಟ್’
ಸೀರಮ್, ಭಾರತ್, ಸಿಡಸ್ ಮತ್ತು ಸ್ಪುಟ್ನಿಕ್‌ನಂತಹ ಲಸಿಕೆಗಳನ್ನು ಸಂಗ್ರಹಿಸಲು ಈ ತಾಪಮಾನವು ಸಾಕಾಗುತ್ತದೆ ಎಂದು ಅವರು ಹೇಳಿದ್ದು, ಆದಾಗ್ಯೂ ಭಾರತದಲ್ಲಿ ತುರ್ತು ಬಳಕೆಗಾಗಿ ಅನುಮತಿ ಕೇಳಿರುವ ಫೈಝರ್ ಲಸಿಕೆಯನ್ನು ಈ ತಾಪಮಾನದಲ್ಲಿ ಸಂಗ್ರಹಿಸಲು ಸಾಧ್ಯವಿಲ್ಲ ಎನ್ನಲಾಗಿದೆ.
ಭಾರತದಲ್ಲಿ ಕೊರೊನಾ ಲಸಿಕೆಯೊಂದನ್ನು ಶೀಘ್ರದಲ್ಲೇ ಅನುಮೋದಿಸಲಾಗುವುದು ಎಂಬ ವರದಿಗಳಿದೆ. ಲಸಿಕೆಯನ್ನು ಒಂದು ಸ್ಥಳದಲ್ಲಿ ದಿನವೊಂಕ್ಕೆ 100 ಜನರಿಗೆ ವಿತರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಮೊದಲ ಹಂತದ ಲಸಿಕೆಯನ್ನು ಆಸ್ಪತ್ರೆಗಳನ್ನು ಕೇಂದ್ರವಾಗಿಟ್ಟುಕೊಂಡು ವಿತರಿಸಲಾಗಲಿದ್ದು, ಎರಡನೇ ಹಂತದಲ್ಲಿ ಸಮುದಾಯಿಕವಾಗಿ ವಿತರಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: ಪ್ರಯೋಗಾರ್ಥ ಕೊರೊನಾ ಲಸಿಕೆ ತೆಗೆದುಕೊಂಡಿದ್ದ ಹರಿಯಾಣ ಆರೋಗ್ಯ ಸಚಿವನಿಗೆ ಕೊರೊನಾ ಪಾಸಿಟಿವ್!


