Homeಅಂತರಾಷ್ಟ್ರೀಯಭಾರತ ಹಲವು ವರ್ಷಗಳಿಂದ ನಮಗೆ ತೀವ್ರ ಹೊಡೆತ ನೀಡುತ್ತಿದೆ: ಟ್ರಂಪ್‌

ಭಾರತ ಹಲವು ವರ್ಷಗಳಿಂದ ನಮಗೆ ತೀವ್ರ ಹೊಡೆತ ನೀಡುತ್ತಿದೆ: ಟ್ರಂಪ್‌

- Advertisement -
- Advertisement -

ಭಾರತವು ಹಲವು ವರ್ಷಗಳಿಂದ ಹೆಚ್ಚಿನ ಸುಂಕದ ವ್ಯಾಪಾರವನ್ನು ಅಮೆರಿಕ ಮೇಲೆ ಹೇರುವ ಮೂಲಕ ನಮಗೆ ತೀವ್ರ ಹೊಡೆತ ನೀಡುತ್ತಿದೆ ಎಂದು ಡೊನಾಲ್ಡ್‌ ಟ್ರಂಪ್‌ ದೂರಿದ್ದಾರೆ.

ಕೆಲವೇ ದಿನಗಳಲ್ಲಿ ಭಾರತಕ್ಕೆ ಮೊದಲ ಬಾರಿಗೆ ಆಗಮಿಸುತ್ತಿರುವ ಅವರು ’ಈ ಸಂದರ್ಭದಲ್ಲಿ ಅಮೆರಿಕದ ಉತ್ಪನ್ನಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವ್ಯವಹಾರ ಮಾತನಾಡುತ್ತೇನೆ’ ಎಂದು ತಿಳಿಸಿದ್ದಾರೆ.

ಅಧ್ಯಕ್ಷ ಟ್ರಂಪ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾರವರು ಎರಡು ದಿನಗಳ ಭಾರತ ಪ್ರವಾಸದ ಮೇರೆಗೆ ಫೆಬ್ರವರಿ 24 ಮತ್ತು 25 ರಂದು ಅಹಮದಾಬಾದ್, ಆಗ್ರಾ ಮತ್ತು ನವದೆಹಲಿಗೆ ಪ್ರಯಾಣಿಸಲಿದ್ದಾರೆ.

“ನಾನು ಮುಂದಿನ ವಾರ ಭಾರತಕ್ಕೆ ಹೋಗುತ್ತಿದ್ದೇನೆ ಮತ್ತು ನಾವು ವ್ಯಾಪಾರವನ್ನು ಮಾತನಾಡುತ್ತಿದ್ದೇವೆ. ಅವರು ಅನೇಕ ವರ್ಷಗಳಿಂದ ನಮ್ಮನ್ನು ತೀವ್ರವಾಗಿ ಹೊಡೆಯುತ್ತಿದ್ದಾರೆ” ಎಂದು ಟ್ರಂಪ್ ಗುರುವಾರ ಕೊಲೊರಾಡೋದಲ್ಲಿ ನಡೆದ ‘ಕೀಪ್ ಅಮೇರಿಕಾ ಗ್ರೇಟ್’ ರ್‍ಯಾಲಿಯಲ್ಲಿ ಹೇಳಿದ್ದಾರೆ.

“ಈಗ ನಾವು ಸ್ವಲ್ಪ ಮಾತನಾಡಬೇಕಾಗಿದೆ … ನಾವು ಸ್ವಲ್ಪ ವ್ಯವಹಾರವನ್ನು ಕುರಿತು ಮಾತನಾಡಬೇಕಾಗಿದೆ. ಅಮೆರಿಕಾದ ಮೇಲೆ ವಿಶ್ವದಲ್ಲೇ ಅತಿ ಹೆಚ್ಚು ತೆರಿಗೆಯನ್ನು ಹೇರಿರುವ ದೇಶ ಭಾರತವಾಗಿದೆ. ಇದು ನಮಗೆ ತೀವ್ರ ಹೊಡೆತ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

“ನಾನು ಬಹುದೊಡ್ಡ ವ್ಯಾಪರ ಒಪ್ಪಂದವನ್ನು ಭಾರತದಿಂದ ನಿರಿಕ್ಷಿಸುತ್ತೇನೆ. ಬಹುಶಃ ಚುನಾವಣೆಯ ನಂತರ ನಾವು ಅದನ್ನು ಮಾಡುತ್ತೇವೆ ಎಂದು ಅವರು ಎರಡು ದಿನದ ಹಿಂದೆ ಹೇಳಿದ್ದರು.

“ಉತ್ತಮ ವ್ಯವಹಾರಗಳಾಗಿದ್ದರೆ ಮಾತ್ರ ನಾವು ಒಪ್ಪಂದಗಳನ್ನು ಮಾಡಿಕೊಳ್ಳುತ್ತೇವೆ. ಏಕೆಂದರೆ ನಾವು ಅಮೆರಿಕವನ್ನು ಮೊದಲ ಸ್ಥಾನದಲ್ಲಿರಿಸುತ್ತೇವೆ. ಜನರು ಇಷ್ಟಪಡುತ್ತಾರೋ ಇಲ್ಲವೋ, ನಾವು ಅಮೆರಿಕವನ್ನು ಮೊದಲ ಸ್ಥಾನದಲ್ಲಿರಿಸುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...