Homeಮುಖಪುಟಇರಾನ್ ಅಣು ಸ್ಥಾವರಗಳ ವಿಕಿರಣ ಮಟ್ಟಗಳ ಮೇಲೆ ಭಾರತದ ಸೂಕ್ಷ್ಮ ನಿಗಾ: ಇರಾನ್‌ನಿಂದ ಭಾರತಕ್ಕೆ ಕೃತಜ್ಞತೆ

ಇರಾನ್ ಅಣು ಸ್ಥಾವರಗಳ ವಿಕಿರಣ ಮಟ್ಟಗಳ ಮೇಲೆ ಭಾರತದ ಸೂಕ್ಷ್ಮ ನಿಗಾ: ಇರಾನ್‌ನಿಂದ ಭಾರತಕ್ಕೆ ಕೃತಜ್ಞತೆ

- Advertisement -
- Advertisement -

ಹೊಸದಿಲ್ಲಿ: ಇಸ್ರೇಲ್ ಮತ್ತು ಅಮೆರಿಕ ಇರಾನ್‌ನ ಅಣು ಸ್ಥಾವರಗಳ ಮೇಲೆ ದಾಳಿ ನಡೆಸಿದ ನಂತರ, ವಿಶ್ವಸಂಸ್ಥೆ ಸಂಬಂಧಿತ ಅಣು ನಿಗಾ ಸಂಸ್ಥೆ (IAEA) ಒದಗಿಸುತ್ತಿರುವ ಮಾಹಿತಿಗಳನ್ನು ಭಾರತ ಹತ್ತಿರದಿಂದ ಗಮನಿಸುತ್ತಿದೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಚರ್ಚೆ ಹಾಗೂ ರಾಜತಾಂತ್ರಿಕತೆಯ ಮೂಲಕ ಶೀಘ್ರವಾಗಿ ಮರುಸ್ಥಾಪಿಸಲು ಭಾರತ ಒತ್ತಾಯಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಗುರುವಾರ (ಜೂನ್ 26) ನಡೆದ ಸಚಿವಾಲಯದ ವಾರದ ಪತ್ರಿಕಾಗೋಷ್ಠಿಯಲ್ಲಿ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಇರಾನ್‌ನಲ್ಲಿರುವ ಅಣು ವಿಜ್ಞಾನಿಗಳ ಮೇಲಿನ ಇಸ್ರೇಲ್ ದಾಳಿಯ ಬಗ್ಗೆ ಭಾರತದ ನಿಲುವಿನ ಪ್ರಶ್ನೆಗೆ  ಪ್ರತಿಕ್ರಿಯಿಸಿ, ಇಸ್ರೇಲ್ ಮತ್ತು ಅಮೆರಿಕ ದಾಳಿ ಮಾಡಿದ ತಾಣಗಳಲ್ಲಿನ ವಿಕಿರಣ ಮಟ್ಟಗಳ ಕುರಿತು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ನೀಡುತ್ತಿರುವ ಮಾಹಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದರು.

ಇರಾನ್‌ನಲ್ಲಿ ಗುರಿಯಾಗಿಸಿದ ಸ್ಥಾವರಗಳಲ್ಲಿ ಯಾವುದೇ ಅಣು ವಸ್ತುವಾಗಲಿ, ಅಥವಾ ಕಡಿಮೆ ಪ್ರಮಾಣದ ನೈಸರ್ಗಿಕ ಅಥವಾ ಕಡಿಮೆ ಸಮೃದ್ಧಗೊಳಿಸಿದ ಯುರೇನಿಯಂ ಆಗಲಿ ಇರಲಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ. ದಾಳಿಗೊಳಗಾದ ಕಟ್ಟಡಗಳ ಹೊರಗೆ ಯಾವುದೇ ವಿಕಿರಣ ಮಾಲಿನ್ಯವಿಲ್ಲ ಎಂಬ ನಿಗಾ ಸಂಸ್ಥೆಯ ಅಂದಾಜನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಜೈಸ್ವಾಲ್ ಸ್ಪಷ್ಟಪಡಿಸಿದರು.

ಅಲ್ಲಿನ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಮರುಸ್ಥಾಪಿಸಲು, ಚರ್ಚೆ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳುವಂತೆ ನಾವು ಒತ್ತಾಯಿಸುತ್ತೇವೆ ಎಂದು ಜೈಸ್ವಾಲ್ ತಿಳಿಪಡಿಸಿದರು. ಅಮೆರಿಕದ ದಾಳಿಗಳ ನಂತರ ಪ್ರದೇಶದ ಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ತಮ್ಮ ಸಚಿವಾಲಯದ ಹಿಂದಿನ ಹೇಳಿಕೆಯನ್ನು ಅವರು ಉಲ್ಲೇಖಿಸಿದರು. ಜೊತೆಗೆ, ಅಮೆರಿಕ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಕದನವಿರಾಮವನ್ನು ಸ್ವಾಗತಿಸಿದರು.

ಸಂಘರ್ಷದ ಆರಂಭ ಮತ್ತು ಅಂತರರಾಷ್ಟ್ರೀಯ ಪ್ರತಿಕ್ರಿಯೆ

ಜೂನ್ 13ರಂದು ತನ್ನ ‘ಆಪರೇಷನ್ ರೈಸಿಂಗ್ ಲಯನ್’ ಕಾರ್ಯಾಚರಣೆಯ ಭಾಗವಾಗಿ ಇರಾನ್‌ನ ಅಣು ಸ್ಥಾವರಗಳು ಸೇರಿದಂತೆ ಇತರ ಗುರಿಗಳ ಮೇಲೆ ಇಸ್ರೇಲ್ ದಾಳಿ ಮಾಡಲು ಪ್ರಾರಂಭಿಸಿತು. ಇರಾನ್ ಅಣುಬಾಂಬ್ ಪಡೆಯುವ ಅಂಚಿನಲ್ಲಿದೆ ಎಂಬ ಆರೋಪದ ಮೇಲೆ ಇದನ್ನು ಆರಂಭಿಸಲಾಯಿತು, ಆದರೆ ಟೆಹ್ರಾನ್ ತನ್ನ ಅಣು ಕಾರ್ಯಕ್ರಮ ಕೇವಲ ನಾಗರಿಕ ಉದ್ದೇಶಗಳಿಗಾಗಿ ಮಾತ್ರ ಎಂದು ಹೇಳುತ್ತಿದೆ.

ಇಸ್ರೇಲಿನ ದಾಳಿಯ ನಂತರ ಉಭಯ ದೇಶಗಳು ಪರಸ್ಪರ ಕ್ಷಿಪಣಿಗಳನ್ನು ಹಾರಿಸಿದವು. ಭಾನುವಾರ (ಜೂ.21) ಅಮೆರಿಕ ಸಂಘರ್ಷಕ್ಕೆ ಪ್ರವೇಶಿಸಿತು; ಅದರ ವಾಯುಪಡೆಯು ಫೋರ್ಡೋ, ನಟಾನ್ಜ್ ಮತ್ತು ಇಸ್ಫಹಾನ್‌ನಲ್ಲಿರುವ ಮೂರು ಪ್ರಮುಖ ಇರಾನಿನ ಅಣು ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಿತು. ಇರಾನ್ ಕತಾರ್‌ನಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಒಂದು ದಿನದ ನಂತರ ಅಮೆರಿಕ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಕದನವಿರಾಮವು ಯುದ್ಧವನ್ನು ಕೊನೆಗೊಳಿಸಿತು.

ಸಂಘರ್ಷದ ಸಮಯದಲ್ಲಿ ಹಲವು ಬಾರಿ ಕಳವಳ ವ್ಯಕ್ತಪಡಿಸಿದ್ದ ಭಾರತ, ಇಸ್ರೇಲ್ ಅಥವಾ ಅಮೆರಿಕದ ವಿರುದ್ಧ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಭಾರತ ಸದಸ್ಯನಾಗಿರುವ ಶಾಂಘೈ ಸಹಕಾರ ಸಂಘಟನೆ (SCO) ಇಸ್ರೇಲ್‌ನ ಇರಾನ್ ಮೇಲಿನ ದಾಳಿಗಳನ್ನು ಬಲವಾಗಿ ಖಂಡಿಸಿತ್ತು, ಆದರೆ ಭಾರತವು ಆ ಹೇಳಿಕೆಯಿಂದ ದೂರ ಉಳಿದಿತ್ತು.

ಆದಾಗ್ಯೂ, ಭಾರತವು ಸದಸ್ಯನಾಗಿರುವ ಬ್ರಿಕ್ಸ್ (BRICS) ಒಕ್ಕೂಟವು ಇರಾನ್ ಮೇಲಿನ ದಾಳಿಗಳ ಬಗ್ಗೆ “ತೀವ್ರ ಕಳವಳ” ವ್ಯಕ್ತಪಡಿಸಿ ಅವುಗಳನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಕರೆದಾಗ, ಭಾರತ ಅಂತಹ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಇರಾನ್‌ನಿಂದ ಭಾರತಕ್ಕೆ ಕೃತಜ್ಞತೆ

ಹೊಸದಿಲ್ಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯು ಬುಧವಾರ ಒಂದು ಹೇಳಿಕೆಯನ್ನು ಪೋಸ್ಟ್ ಮಾಡಿದ್ದು, “ಇರಾನ್‌ನೊಂದಿಗೆ ದೃಢವಾಗಿ ಮತ್ತು ಗಟ್ಟಿಯಾಗಿ ನಿಂತಿದ್ದ ಭಾರತದ ಎಲ್ಲಾ ಉದಾತ್ತ ಮತ್ತು ಸ್ವಾತಂತ್ರ್ಯ-ಪ್ರಿಯ ಜನರಿಗೆ ಹೃತ್ಪೂರ್ವಕ ಕೃತಜ್ಞತೆ” ವ್ಯಕ್ತಪಡಿಸಿದೆ.

ಭಾರತದ ಜನರು ಮತ್ತು ಸಂಸ್ಥೆಗಳು ತೋರಿಸಿದ ನೈಜ ಮತ್ತು ಅಮೂಲ್ಯ ಬೆಂಬಲಕ್ಕಾಗಿ ನಾವು ಮತ್ತೊಮ್ಮೆ ನಮ್ಮ ಪ್ರಾಮಾಣಿಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ” ಎಂದು ಅದು X (ಹಿಂದಿನ ಟ್ವಿಟರ್) ನಲ್ಲಿ ಹೇಳಿದೆ.

ಅಣು ಕಾರ್ಯಕ್ರಮದ ಹಾನಿ: IAEA ವರದಿ ಮತ್ತು ಅಮೆರಿಕದ ಪ್ರತಿಕ್ರಿಯೆ

ಇರಾನ್‌ನ ಅಣು ತಾಣಗಳ ಮೇಲಿನ ದಾಳಿಗಳು ವಿವಿಧ ಮಟ್ಟಗಳಲ್ಲಿ ಸಮೃದ್ಧಗೊಳಿಸಿದ ಯುರೇನಿಯಂ ಹೊಂದಿರುವ ಸ್ಥಾವರಗಳ ಒಳಗೆ ಕೆಲವು ಸ್ಥಳೀಯ ವಿಕಿರಣ ಮತ್ತು ರಾಸಾಯನಿಕ ಬಿಡುಗಡೆಗೆ ಕಾರಣವಾಗಿವೆ. ಆದರೆ, ಈ ಸ್ಥಳಗಳ ಹೊರಗೆ ವಿಕಿರಣ ಹೆಚ್ಚಳದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು IAEA ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಏತನ್ಮಧ್ಯೆ, IAEA ಸಂಸ್ಥೆಯ ಮಹಾನಿರ್ದೇಶಕ ರಫೆಲ್ ಗ್ರೋಸ್ಸಿ, ದಾಳಿಗಳ ಪರಿಣಾಮವಾಗಿ ಇರಾನ್‌ನ ಅಣು ಕಾರ್ಯಕ್ರಮ “ತೀವ್ರ ಹಾನಿ” ಅನುಭವಿಸಿದೆ ಎಂದು ಅಂದಾಜಿಸಿದ್ದಾರೆ.

ದಾಳಿಗಳು ದೇಶದ ಅಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆಯೇ ಎಂದು ಫ್ರೆಂಚ್ ಪ್ರಸಾರಕ RFI ಕೇಳಿದಾಗ, “ನಾನು ಅಮೆರಿಕ ಧ್ವಂಸಗೊಳಿಸಿದೆ ಎಂದು ಹೇಳುವುದು ಅತಿರೇಕವಾಗುತ್ತದೆ” ಎಂದು ಗ್ರೋಸ್ಸಿ ಹೇಳಿದರು. ಆದಾಗ್ಯೂ, ಇರಾನ್ ತನ್ನ ಹೆಚ್ಚಿನ ಯುರೇನಿಯಂ ಸಮೃದ್ಧಗೊಳಿಸುವಿಕೆ ಮತ್ತು ಪರಿವರ್ತನೆ ಚಟುವಟಿಕೆಗಳನ್ನು ಮೂರು ಪ್ರಮುಖ ತಾಣಗಳಲ್ಲಿ ಕೇಂದ್ರೀಕರಿಸಿದ್ದರಿಂದ ಕಾರ್ಯಕ್ರಮವು “ಅತ್ಯಂತ ತೀವ್ರ ಹಾನಿ” ಅನುಭವಿಸಿರುತ್ತದೆ ಎಂದು ಅವರು ಹೇಳಿದರು.

ಅಮೆರಿಕವು ‘ಬಂಕರ್ ಬಸ್ಟರ್’ ಬಾಂಬ್‌ಗಳಿಂದ ದಾಳಿ ನಡೆಸಿದೆ ಎಂದು ವರದಿಯಾಗಿರುವ ಫೋರ್ಡೋ ನೆಲದಡಿಯ ತಾಣದಲ್ಲಿನ ಸೆಂಟ್ರಿಫ್ಯೂಜ್‌ಗಳು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಗ್ರೋಸ್ಸಿ ತಿಳಿಯಪಡಿಸಿದರು.

ದಾಳಿಗಳಿಂದಾಗಿ ಇರಾನ್‌ನ ಅಣು ಕಾರ್ಯಕ್ರಮಕ್ಕೆ ಎಷ್ಟು ದೊಡ್ಡ ನಷ್ಟವಾಗಿದೆ ಎಂಬ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇರುವುದರಿಂದ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ತಮ್ಮ ಸೇನೆಯ ‘ಬಂಕರ್ ಬಸ್ಟರ್’ ಬಾಂಬ್ ದಾಳಿಯಿಂದ ಇರಾನ್‌ನ ಮೂರು ಪ್ರಮುಖ ತಾಣಗಳು ಸಂಪೂರ್ಣವಾಗಿ ಮತ್ತು ಒಟ್ಟಾಗಿ ನಾಶವಾಗಿವೆ ಎಂದು ಹೇಳಿಕೊಂಡಿದ್ದರು. ಆದರೆ, ಇರಾನ್ ಈ ದಾಳಿಯಿಂದ ನಮ್ಮ ಪರಮಾಣು ಕಾರ್ಯಕ್ರಮವು ಕೇವಲ ಕೆಲವೇ ತಿಂಗಳುಗಳ ಹಿನ್ನಡೆ ಅನುಭವಿಸಿದೆ ಎಂಬ ಗುಪ್ತಚರ ವರದಿಗಳನ್ನು ನಿರಾಕರಿಸಿದೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್‌ಸೆತ್ ಗುರುವಾರ, ತಮ್ಮ ದೇಶವು ಬಾಂಬ್ ದಾಳಿ ನಡೆಸುವ ಮೊದಲು ಇರಾನ್ ಯಾವುದೇ ಹೆಚ್ಚು ಸಮೃದ್ಧಗೊಳಿಸಿದ ಯುರೇನಿಯಂ ಅನ್ನು ಗುರಿಯಾಗಿಸಿದ ಸ್ಥಾವರಗಳಿಂದ ಸ್ಥಳಾಂತರಿಸಿದೆ ಎಂಬ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದರು.

ಇರಾನ್-ಇಸ್ರೇಲ್ ಸಂಘರ್ಷ: ಕದನವಿರಾಮದ ನಂತರವೂ ಅನಿಶ್ಚಿತತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...

ಬುರ್ಖಾ ಧರಿಸದ ಕಾರಣಕ್ಕೆ ಪತ್ನಿ-ಮಕ್ಕಳ ಕೊಲೆ; ಮನೆಯೊಳಗೆ ಹೂತುಹಾಕಿದ ವ್ಯಕ್ತಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಘೋರ ಘಟನೆಯಿಂದು ವರದಿಯಾಗಿದೆ, ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ತ್ರಿವಳಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಫಾರೂಕ್ ಎಂದು...

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ವಿಶೇಷ ಕಾರ್ಯಾಚರಣೆ: ಮೊಬೈಲ್ ಫೋನ್, ಗಾಂಜಾ ವಶ: ಡಿಜಿಪಿ ಅಲೋಕ್ ಕುಮಾರ್

ಕರ್ನಾಟಕದ ಕಾರಾಗೃಹಗಳಲ್ಲಿ 36 ಗಂಟೆಗಳ ಕಾಲ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾಕುಗಳು ಮತ್ತು ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿದ್ದುಪಡಿ ಸೌಲಭ್ಯಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು...