Homeಮುಖಪುಟಇಂಡಿಯಾ ಓಪನ್ ಟೂರ್ನಮೆಂಟ್‌‌: ಕೋವಿಡ್‌ ಸೋಂಕಿನ ಬಳಿಕ ಏಳು ಮಂದಿ ಆಟಗಾರರು ವಾಪಸ್‌

ಇಂಡಿಯಾ ಓಪನ್ ಟೂರ್ನಮೆಂಟ್‌‌: ಕೋವಿಡ್‌ ಸೋಂಕಿನ ಬಳಿಕ ಏಳು ಮಂದಿ ಆಟಗಾರರು ವಾಪಸ್‌

- Advertisement -
- Advertisement -

ಕೋವಿಡ್-19 ಸೋಂಕು ಹೆಚ್ಚಾಗುತ್ತಿದ್ದು, ಇಂಡಿಯಾ ಓಪನ್ ಟೂರ್ನಮೆಂಟ್ ತೊಂದರೆ ಎದುರಿಸುತ್ತಿದೆ. ಏಳು ಭಾರತೀಯ ಆಟಗಾರರು ಕೋವಿಡ್‌ ಪಾಸಿಟಿವ್ ಆಗಿದ್ದು, ಹಲವು ಭಾರತೀಯ ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ಗುರುವಾರ ತಿಳಿಸಿದೆ.

“ಆಟಗಾರರು ಮಂಗಳವಾರ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಟ್ಟರು. ಅದರಲ್ಲಿ ಏಳು ಮಂದಿಗೆ ಸೋಂಕು ದೃಢಪಟ್ಟಿದೆ. ಡಬಲ್ಸ್ ಜೊತೆಗಾರರು ಏಳು ಆಟಗಾರರ ನಿಕಟ ಸಂಪರ್ಕವನ್ನು ಹೊಂದಿದ್ದು ಪಂದ್ಯಾವಳಿಯಿಂದ ಹಿಂದುಳಿದಿದ್ದಾರೆ” ಎಂದು ವರ್ಡ್ ಬ್ಯಾಡ್ಮಿಂಟನ್‌ ಆಡಳಿತ ಮಂಡಳಿ ಹೇಳಿದೆ.

“ಆಟಗಾರರನ್ನು ಬದಲಾಯಿಸಲಾಗುವುದಿಲ್ಲ ಮತ್ತು ಅವರ ಎದುರಾಳಿಗಳಿಗೆ ಮುಂದಿನ ಸುತ್ತಿಗೆ ವಾಕ್‌ಓವರ್ ನೀಡಲಾಗುವುದು” ಎಂದು ಬಿಡಬ್ಲ್ಯೂಎಫ್‌‌ ಪ್ರಕಟಿಸಿದೆ. ಆದರೆ ಏಳು ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಲಿಲ್ಲ.

2019ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಬಿ ಸಾಯಿ ಪ್ರಣೀತ್, ಡಬಲ್ ಸ್ಪೆಷಲಿಸ್ಟ್‌ಗಳಾದ ಮನು ಅತ್ರಿ ಮತ್ತು ಧ್ರುವ್ ರಾವತ್ ಅವರು ರಾಷ್ಟ್ರ ರಾಜಧಾನಿಗೆ ನಿರ್ಗಮಿಸುವ ಮೊದಲು ಪಾಸಿಟಿವ್‌ ಆಗಿದ್ದರು. ಪಂದ್ಯಾವಳಿಯ ಆರಂಭಕ್ಕೂ ಮುನ್ನವೇ ಹಿಂದೆ ಸರಿದಿದ್ದರು.

ಡಬಲ್ಸ್ ಸ್ಪೆಷಲಿಸ್ಟ್ ಸೀನ್ ವೆಂಡಿ ಮತ್ತು ಕೋಚ್ ನಾಥನ್ ರಾಬರ್ಟ್‌ಸನ್ ಕೋವಿಡ್‌ ಪಾಸಿಟಿವ್‌‌ಗೆ ಒಳಪಟ್ಟ ಬಳಿಕ ಇಡೀ ಇಂಗ್ಲೆಂಡ್ ಬ್ಯಾಡ್ಮಿಂಟನ್ ತಂಡ ಟೂರ್ನಿಯಿಂದ ಹಿಂದೆ ಸರಿಯಿತು.

ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಷನ್ ​​2022ರ ಇಂಡಿಯಾ ಓಪನ್ ಟೂರ್ನಮೆಂಟ್‌ ಆಯೋಜಿಸಿದೆ. ಇಂದಿರಾ ಗಾಂಧಿ ಸ್ಟೇಡಿಯಂನ ಕೆಡಿ ಜಾಧವ್ ಒಳಾಂಗಣ ಸಭಾಂಗಣದಲ್ಲಿ ಟೂರ್ನಿ ನಡೆಯಲಿದೆ.

COVID-19 ಪ್ರೋಟೋಕಾಲ್‌ಗಳ ಪ್ರಕಾರ, ಭಾಗವಹಿಸುವ ಎಲ್ಲಾ ಆಟಗಾರರನ್ನು ಪ್ರತಿದಿನ ಹೋಟೆಲ್ ಮತ್ತು ಕ್ರೀಡಾಂಗಣದ ಹೊರಗೆ ಪರೀಕ್ಷಿಸಲಾಗುತ್ತಿದೆ.

ಎರಡು ಬಾರಿಯ ಒಲಂಪಿಕ್ ಪದಕ ವಿಜೇತೆ ಪಿ ವಿ ಸಿಂಧು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರಾದ ಕಿಡಂಬಿ ಶ್ರೀಕಾಂತ್, ಲಕ್ಷ್ಯ ಸೇನ್, ಲಂಡನ್ ಗೇಮ್ಸ್ ಕಂಚಿನ ವಿಜೇತೆ ಸೈನಾ ನೆಹ್ವಾಲ್ ಟೂರ್ನಿಯ ಎರಡನೇ ಸುತ್ತಿಗೆ ತಲುಪಿರುವ ಭಾರತದ ಆಟಗಾರರಲ್ಲಿ ಪಟ್ಟಿಯಲ್ಲಿದ್ದಾರೆ.

ಅಗ್ರ ಕ್ರಮಾಂಕದ ಅಂತಾರಾಷ್ಟ್ರೀಯ ತಾರೆಗಳಲ್ಲಿ ವಿಶ್ವ ಚಾಂಪಿಯನ್ ಲೋಹ್ ಕೀನ್ ಯೂ, ಮೂರು ಬಾರಿ ಪುರುಷರ ಡಬಲ್ಸ್ ವಿಶ್ವ ಚಾಂಪಿಯನ್ ಮೊಹಮ್ಮದ್ ಅಹ್ಸಾನ್ ಮತ್ತು ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರು ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ದೆಹಲಿಯಲ್ಲಿ 27,561 ಕೋವಿಡ್ ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ಬುಧವಾರ 40 ಮಂದಿ ಸಾವನ್ನಪ್ಪಿದ್ದಾರೆ.


ಇದನ್ನೂ ಓದಿರಿ: ರಾಜ್ಯದಲ್ಲಿ ಒಂದೇ ದಿನ 21 ಸಾವಿರ ಕೊರೊನಾ ಪ್ರಕರಣಗಳು: ಬೆಂಗಳೂರಿನಲ್ಲಿ 15 ಸಾವಿರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....