Homeಮುಖಪುಟಸರ್ಕಾರದ ಆದೇಶದಿಂದ ಇಂಟರ್ನೆಟ್ ಸ್ಥಗಿತ: ಸತತ 6ನೇ ಬಾರಿಗೆ ಭಾರತಕ್ಕೆ ಅಗ್ರಸ್ಥಾನ

ಸರ್ಕಾರದ ಆದೇಶದಿಂದ ಇಂಟರ್ನೆಟ್ ಸ್ಥಗಿತ: ಸತತ 6ನೇ ಬಾರಿಗೆ ಭಾರತಕ್ಕೆ ಅಗ್ರಸ್ಥಾನ

- Advertisement -
- Advertisement -

ಸರ್ಕಾರದ ಆದೇಶದಿಂದ ಇಂಟರ್‌ನೆಟ್‌ ಸ್ಥಗಿತಗೊಳಿಸಿರುವ ಪ್ರಕರಣಗಳಲ್ಲಿ 2023ರಲ್ಲಿ ಜಾಗತಿಕವಾಗಿ ಭಾರತ 6ನೇ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ ಎಂದು ವರದಿಯೊಂದು ಹೇಳಿದೆ.

‘Accessnow’ ಎಂಬ ಸಂಸ್ಥೆ ಬುಧವಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 2023ರಲ್ಲಿ ಜಾಗತಿಕವಾಗಿ 283 ಬಾರಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಈ ಅವಧಿಯಲ್ಲಿ ಭಾರತದಲ್ಲಿ 116 ಬಾರಿ ಇಂಟರ್ನೆಟ್ ಸ್ಥಗಿತಕ್ಕೆ ಸರ್ಕಾರ ಆದೇಶಿಸಿದೆ.

ಒಟ್ಟು 116 ಬಾರಿ ಇಂಟರ್ನೆಟ್ ಸ್ಥಗಿತಗೊಳಿಸಿರುವುದರ ಪೈಕಿ 65 ಬಾರಿ ಕೋಮು ಹಿಂಸಾಚಾರದ ಹಿನ್ನೆಲೆ ಆದೇಶಿಸಲಾಗಿತ್ತು. ಒಟ್ಟು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಾದ ಇಂಟರ್ನೆಟ್‌ ಸ್ಥಗಿತದಲ್ಲಿ ಏಳು ರಾಜ್ಯಗಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ಸ್ಥಗಿತ ಆದೇಶ ನೀಡಲಾಗಿತ್ತು ಎಂದು ವರದಿ ಹೇಳಿದೆ.

ಕಳೆದ ಐದು ವರ್ಷಗಳಲ್ಲಿ ಭಾರತೀಯ ಪ್ರಾಧಿಕಾರಗಳು 500ಕ್ಕೂ ಹೆಚ್ಚು ಬಾರಿ ಅಂತರ್ಜಾಲ ಸ್ಥಗಿತಗೊಳಿಸಿದ್ದವು ಹಾಗೂ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದಲ್ಲಿ ಸತತವಾಗಿ ಲಕ್ಷಾಂತರ ಮಂದಿಯನ್ನು ಕತ್ತಲೆಗೆ ನೂಕಿದ್ದವು” ಎಂದು ವರದಿ ತಿಳಿಸಿದೆ.

ಮೇ ಮತ್ತು ಡಿಸೆಂಬರ್‌ 2023ರ ನಡುವೆ ಮಣಿಪುರದ 32 ಲಕ್ಷ ಜನರು 212 ದಿನಗಳ ಕಾಲ ಅಂತರ್ಜಾಲ ಸ್ಥಗಿತ ಎದುರಿಸಿದ್ದರು ಎಂದು ವರದಿ ಹೇಳಿದೆ. ಇದು 2023ರಲ್ಲಿ ಜಗತ್ತಿನ ಅತ್ಯಂತ ದೀರ್ಘಾವಧಿಯ ಅಂತರ್ಜಾಲ ಸ್ಥಗಿತವಾಗಿದೆ.

ಮಣಿಪುರದಲ್ಲಿ ದೀರ್ಘಾವಧಿ ಇಂಟರ್ನೆಟ್ ಸ್ಥಗಿತಗೊಳಿಸಿದ್ದ ವೇಳೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಇಂಟರ್ನೆಟ್ ಬಳಕೆಯಿಂದ ಜನರನ್ನು ತಡೆಯುವುದು, ಅವರ ಹಕ್ಕುಗಳಿಂದ ತಡೆದಂತೆ ಎಂದು ಕೋರ್ಟ್ ಹೇಳಿತ್ತು. ತಕ್ಷಣ ಇಂಟರ್ನೆಟ್ ಸೇವೆ ಮರುಸ್ಥಾಪನೆಗೆ ಆದೇಶಿಸಿತ್ತು.

ಇದನ್ನೂ ಓದಿ : ಇವಿಎಂ ಸಂಖ್ಯೆಗಳಲ್ಲಿನ ವ್ಯತ್ಯಾಸ: ಚುನಾವಣಾ ಪಾರದರ್ಶಕತೆ ಬಗ್ಗೆ ಹುಟ್ಟು ಹಾಕಿದ ಕಳವಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಹೇಡಿತನದ, ಅವಿವೇಕದ ಹಿಂಸಾಚಾರ’: 400 ಜನರನ್ನು ಬಲಿತೆಗೆದುಕೊಂಡ ಕಾಬೂಲ್ ಆಸ್ಪತ್ರೆಯ ಮೇಲಿನ ಪಾಕ್ ದಾಳಿ ಖಂಡಿಸಿದ ಭಾರತ 

ಕಾಬೂಲ್‌ನ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಭಾರತ ಮಂಗಳವಾರ ಖಂಡಿಸಿದೆ. ಈ ದಾಳಿಯಲ್ಲಿ ಕನಿಷ್ಠ 400 ಜನರು ಅಸ್ವಸ್ಥರಾಗಿ 250 ಜನರು ಗಾಯಗೊಂಡಿದ್ದರು. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA)...

ಮೂಡುಬಿದಿರೆ ಠಾಣೆ ಇನ್‌ಸ್ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ: ತನಿಖೆಗೆ ಕಮಿಷನರ್ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಮಹಿಳೆಯರಿಗೆ ಲೈಂಗಿಕ, ಮಾನಸಿಕ ಕಿರುಕುಳ ನೀಡಿದ್ದಲ್ಲದೆ, ಹಣ ಕೊಡುವಂತೆ ಪೀಡಿಸಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ಈ...

ಅಸ್ಸಾಂ: ರಂಜಾನ್ ಆಹಾರ ವ್ಯವಸ್ಥೆಗಾಗಿ ಮೀನು ಹಿಡಿಯುತ್ತಿದ್ದ ಮುಸ್ಲಿಂ ಸಹೋದರರ ಮೇಲೆ ಬಿಎಸ್‌ಎಫ್ ಗುಂಡಿನ ದಾಳಿ: ಗಂಭೀರ ಗಾಯ

ಅಸ್ಸಾಂನ ದಕ್ಷಿಣ ಸಲ್ಮಾರಾ–ಮಂಕಚಾರ್ ಜಿಲ್ಲೆಯ ಇಬ್ಬರು ಸಹೋದರರು ಭಾರತದ ಭೂಪ್ರದೇಶದೊಳಗಿನ ನದಿನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಗುಂಡು ಹಾರಿಸಿ ಪ್ರಾಣಕ್ಕಾಗಿ ಹೋರಾಡುತ್ತಿದ್ದಾರೆ. ಈ ಘಟನೆ ಮಾರ್ಚ್ 8-9, 2026...

ಊನಾ ದಲಿತ ದೌರ್ಜನ್ಯ ಪ್ರಕರಣ: ಐವರು ದೋಷಿಗಳೆಂದು ತೀರ್ಪು ನೀಡಿದ ನ್ಯಾಯಾಲಯ; 37 ಆರೋಪಿಗಳು ಖುಲಾಸೆ

ದೇಶದಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಗುಜರಾತ್‌ನ ಊನಾ ದಲಿತರ ಮೇಲೆ ಹಲ್ಲೆ ಪ್ರಕರಣದಲ್ಲಿ, ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್ ನ್ಯಾಯಾಲಯವು ಸೋಮವಾರ ತನ್ನ ತೀರ್ಪು ನೀಡಿದ್ದು,...

ರಾಜ್ಯಸಭೆ ಚುನಾವಣೆ : ಬಿಹಾರದ ಎಲ್ಲಾ ಐದು ಸ್ಥಾನಗಳು ಎನ್‌ಡಿಎ ಪಾಲು; ಒಡಿಶಾದ ಮೂರು ಸ್ಥಾನಗಳಲ್ಲಿ ಗೆಲುವು

ರಾಜ್ಯಸಭೆಯ 37 ಸ್ಥಾನಗಳಿಗೆ ಸೋಮವಾರ (ಮಾ.16) ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 21 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಪೈಕಿ ಬಿಜೆಪಿ ಮಾತ್ರ 11 ಸ್ಥಾನಗಳನ್ನು ಪಡೆದಿದೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಒಟ್ಟು 11 ಸ್ಥಾನಗಳನ್ನು...

ಅಫ್ಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನದಿಂದ ವಾಯುದಾಳಿ ; ಕನಿಷ್ಠ 400 ಸಾವು : ವರದಿ

ರಾಜಧಾನಿ ಕಾಬೂಲ್‌ನಲ್ಲಿ ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ಮೇಲೆ ಪಾಕಿಸ್ತಾನದ ಮಿಲಿಟರಿ ವಾಯು ದಾಳಿ ನಡೆಸಿದ್ದು, ಕನಿಷ್ಠ 400 ಜನರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನ ಆರೋಪಿಸಿದೆ. ಅಲ್‌-ಜಝೀರಾ ವರದಿಯ ಪ್ರಕಾರ, ಅಫ್ಘಾನಿಸ್ತಾನದ ಆರೋಪವನ್ನು...

‘ನನ್ನ ಮನೆ ಮೇಲೆ ದಾಳಿ ಮಾಡಿ… ಹೇಗೆ ಎದುರಿಸಬೇಕೆಂದು ಗೊತ್ತಿದೆ..’; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು

"ತಮ್ಮ ನಿವಾಸ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕರ ನಿವಾಸವನ್ನು ಗುರಿಯಾಗಿಸಿಕೊಳ್ಳುವಂತೆ" ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಬಿಜೆಪಿಗೆ ಸವಾಲು ಹಾಕಿದರು. ರಾಜ್ಯದಲ್ಲಿ, ಟಿಎಂಸಿ ನಾಯಕರ ಮೇಲಿನ ದಾಳಿಗೆ...

ಬೆಂಗಳೂರು: ವಿಶೇಷ ಪೂಜೆ ಹೆಸರಿನಲ್ಲಿ ಐಟಿ ಅಧಿಕಾರಿಗೆ 35 ಲಕ್ಷ ವಂಚನೆ: 59 ವರ್ಷದ ‘ಗಿಳಿ ಶಾಸ್ತ್ರ’ ಹೇಳುವ ವ್ಯಕ್ತಿ ಬಂಧನ

ಬೆಂಗಳೂರು: ವಿಶೇಷ ಪೂಜೆ ಮಾಡುವುದಾಗಿ ಹೇಳಿಕೊಂಡು ಆದಾಯ ತೆರಿಗೆ ಅಧಿಕಾರಿಗೆ 35 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಥೇಣಿಯ ಶೇಖರ್...

ಬಿಹಾರ| ರಾಜ್ಯಸಭಾ ಚುನಾವಣೆ ಮತದಾನದಿಂದ ಹೊರಗುಳಿದ ನಾಲ್ವರು ಶಾಸಕರು; ಮಹಾಘಟಬಂಧನ್‌ಗೆ ಹಿನ್ನಡೆ

ಸೋಮವಾರ ಸಂಜೆ 4 ಗಂಟೆಗೆ ಮುಕ್ತಾಯಗೊಂಡ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ವರು ಶಾಸಕರು ಮತದಾನದಿಂದ ಹೊರಗುಳಿಯುವ ಮೂಲಕ ಬಿಹಾರದ ಮಹಾಘಟಬಂಧನ್‌ಗೆ ಭಾರಿ ಹಿನ್ನಡೆಯಾಗಿದೆ. ಐದನೇ ಸ್ಥಾನಕ್ಕಾಗಿ ನಡೆಯುವ ಸ್ಪರ್ಧೆಯಲ್ಲಿ ವಿರೋಧ ಮೈತ್ರಿಕೂಟದ ನಿರೀಕ್ಷೆಗೆ ಭಾರಿ...

ರಾಜ್ಯಸಭೆಯಲ್ಲಿ LPG ಕೊರತೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ; ಪ್ರತಿಪಕ್ಷ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದ ಸರ್ಕಾರ !

ನವದೆಹಲಿ: ರಾಜ್ಯಸಭೆಯಲ್ಲಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್‌ಪಿಜಿ ಕೊರತೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಅಡುಗೆ ಅನಿಲದ ಬಿಕ್ಕಟ್ಟು ಮತ್ತು ಕಾಳಸಂತೆಕೋರತನವನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು...