ದೇಶದಲ್ಲಿ ಸರಿಯಾದ ಶಿಕ್ಷಣವನ್ನು ಹರಡುವ ಮೂಲಕ ಭಾರತದ ಹಳೆಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಮತ್ತು ‘ಸನಾತನ ಧರ್ಮ’ ತತ್ವಗಳನ್ನು ಪುನಃಸ್ಥಾಪಿಸುವ ಅಗತ್ಯವಿದೆ ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ಹೇಳಿದ್ದಾರೆ.
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಕಲಾನ್ ಪಟ್ಟಣದಲ್ಲಿ ಖಾಸಗಿ ಶಾಲೆಯೊಂದನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ದೇಶದ ಹಳೆಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕಾಗಿದೆ. ನಾವು ಹಿಂತಿರುಗಿ ಹೋಗಬೇಕಾಗಿರುವುದು ಮಾತ್ರವಲ್ಲದೆ, ‘ಸನಾತನ’ ತತ್ವಗಳನ್ನು ಮರಳಿ ತರಬೇಕು, ಇದು ಶಿಕ್ಷಣವಿಲ್ಲದೆ ಸಾಧ್ಯವಿಲ್ಲ” ಎಂದು ರಾಜ್ಯಪಾಲ ಹೇಳಿದ್ದಾರೆ.
ಇದನ್ನೂ ಓದಿ: ಈ ವಾರದ ಟಾಪ್ 10 ಸುದ್ದಿಗಳು: ಮಿಸ್ ಮಾಡದೆ ಇಂದು ಓದಿ
ಮಾನವ ಜೀವನದ ಉದ್ದೇಶವು ಜ್ಞಾನದ ಸಾಧನೆಯಾಗಿದೆ ಮತ್ತು ವಿನಯತೆಯು ಜ್ಞಾನದ ಫಲಿತಾಂಶವಾಗಿದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಎಂದು ಆರೀಫ್ ಖಾನ್ ಹೇಳಿದ್ದಾರೆ.
ವಿನಯತೆಯನ್ನು ಹೊಂದಿರುವ ಯಾರನ್ನೂ ಕೀಳಾಗಿ ಕಾಣಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಖಾಸಗಿ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರೊಂದಿಗೆ ಜಿಲ್ಲಾಧಿಕಾರಿ ಉಮೇಶ್ ಪ್ರತಾಪ್ ಸಿಂಗ್, ಪೊಲೀಸ್ ವರಿಷ್ಠಾಧಿಕಾರಿ ಎಸ್. ಆನಂದ್ ಮತ್ತು ಶಾಸಕ ಹರಿ ಪ್ರಕಾಶ್ ವರ್ಮಾ ಉಪಸ್ಥಿತರಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.



Kaffir
Devil
Holding Muslim name