Homeರಾಷ್ಟ್ರೀಯದೆಹಲಿ ಪೊಲೀಸರಿಗೆ ಸುಪ್ರೀಂಕೋರ್ಟ್ ತಪರಾಕಿ ನಂತರ ಸುದರ್ಶನ್‌ ಟಿವಿ ಸಂಪಾದಕನ ದ್ವೇಷ ಭಾಷಣದ ವಿರುದ್ದ FIR

ದೆಹಲಿ ಪೊಲೀಸರಿಗೆ ಸುಪ್ರೀಂಕೋರ್ಟ್ ತಪರಾಕಿ ನಂತರ ಸುದರ್ಶನ್‌ ಟಿವಿ ಸಂಪಾದಕನ ದ್ವೇಷ ಭಾಷಣದ ವಿರುದ್ದ FIR

- Advertisement -
- Advertisement -

ಸುಪ್ರೀಂ ಕೋರ್ಟ್‌ನಿಂದ ವಾಗ್ದಂಡನೆಗೆ ಒಳಗಾದ ನಂತರ ‘ಧರಮ್ ಸಂಸದ್’ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದ್ವೇಷ ಭಾಷಣದ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೊಸದಾಗಿ ಅಫಿಡವಿಟ್ ಸಲ್ಲಿಸಿದ್ದು, ಇಂದು ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ನಡೆದ ಹಿಂದೂ ಯುವ ವಾಹಿನಿಯ ಕಾರ್ಯಕ್ರಮವೊಂದರಲ್ಲಿ “ಹಿಂದೂ ರಾಷ್ಟ್ರ”ಕ್ಕಾಗಿ ಕರೆ ನೀಡಿದ ಭಾಷಣವು ‘‘ದ್ವೇಷ ಭಾಷಣವಲ್ಲ” ಎಂದು ದೆಹಲಿ ಪೊಲೀಸರು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಇದಕ್ಕೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದೆಹಲಿಯ ಕಾರ್ಯಕ್ರಮದಲ್ಲಿ ಸುದರ್ಶನ ಸುದ್ದಿ ಟಿವಿ ಮುಖ್ಯ ಸಂಪಾದಕ ಸುರೇಶ್ ಚವ್ಹಾಂಕೆ ಸಭೆಯಲ್ಲಿ ಸೇರಿದ್ದ ಜನರಿಗೆ ಪ್ರತಿಜ್ಞೆ ಹೇಳಿಕೊಡುತ್ತಾ, “ದೇಶವನ್ನು ಹಿಂದೂ ರಾಷ್ಟ್ರ ಮಾಡುವುದಕ್ಕಾಗಿ ನಾವು ಹೋರಾಡುತ್ತೇವೆ. ಅದಕ್ಕಾಗಿ ಸಾಯುತ್ತೇವೆ ಮತ್ತು ಅಗತ್ಯವಿದ್ದರೆ ಕೊಲ್ಲುತ್ತೇವೆ” ಎಂದು ಹೇಳಿ ಕೊಟ್ಟಿದ್ದರು.

ಇದನ್ನೂ ಓದಿ:ಹಿಂದೂ ರಾಷ್ಟ್ರಕ್ಕಾಗಿ ಕೊಲೆ ಮಾಡಲು ಪ್ರಚೋದಿಸಿದ್ದು ದ್ವೇಷ ಭಾಷಣವಲ್ಲ ಎಂದ ದೆಹಲಿ ಪೊಲೀಸರು; ಸುಪ್ರೀಂ ಆಕ್ಷೇಪ 

ಕಾರ್ಯಕ್ರಮವೂ ಕಳೆದ ವರ್ಷ ಡಿಸೆಂಬರ್ 19 ರಂದು ನಡೆದಿದ್ದು, ಬಲಪಂಥೀಯ ಗುಂಪು ಹಿಂದೂ ಯುವ ವಾಹಿನಿ ಆಯೋಜಿಸಿತ್ತು.

ದೆಹಲಿ ಪೊಲೀಸರು ಸಲ್ಲಿಸಿರುವ ಹೊಸ ಅಫಿಡವಿಟ್‌ನಲ್ಲಿ, ವಿಷಯಗಳನ್ನು ಪರಿಶೀಲಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

“ದೂರುಗಳಲ್ಲಿನ ಎಲ್ಲಾ ಲಿಂಕ್‌ಗಳು ಮತ್ತು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿರುವ ಇತರ ವಿಷಯಗಳನ್ನು ವಿಶ್ಲೇಷಿಸಲಾಗಿದೆ. ಘಟನೆಯ ವಿಡಿಯೊ ಯೂಟ್ಯೂಬ್‌ನಲ್ಲಿ ಕಂಡುಬಂದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಶೀಲನೆಯ ನಂತರ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A, 295A, 298 ಮತ್ತು 34 ರ ಅಡಿಯಲ್ಲಿ ಅಪರಾಧಗಳಿಗಾಗಿ ಓಖ್ಲಾ ಕೈಗಾರಿಕಾ ಪ್ರದೇಶ ಪೊಲೀಸ್ ಠಾಣೆಯಲ್ಲಿ ಮೇ 4 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಎಲ್ಲಾ ಆರೋಪಗಳು ಧಾರ್ಮಿಕ ದ್ವೇಷವನ್ನು ಉತ್ತೇಜಿಸಲು ಸಂಬಂಧಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಹಿಂದೂ ರಾಷ್ಟ್ರದ ಗುರಿ ತಯಾರಾಗಿದೆ, ಜನರು ಸಿದ್ಧರಾಗಬೇಕು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ 

ಪೊಲೀಸರು ತಮ್ಮ ಹಿಂದಿನ ಅಫಿಡವಿಟ್‌ನಲ್ಲಿ, ಕಾರ್ಯಕ್ರಮದಲ್ಲಿ ಹಿಂದೂರಾಷ್ಟ್ರಕ್ಕಾಗಿ ತೆಗೆದುಕೊಂಡ ಪ್ರತಿಜ್ಞೆಯು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷದ ಭಾಷಣವಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದರು. ಮುಸ್ಲಿಮರ ಹತ್ಯಾಕಾಂಡದ ಬಹಿರಂಗ ಕರೆ ಎಂದು ಅರ್ಥೈಸಬಹುದಾದ ಯಾವುದೆ ಪದಗಳ ಬಳಕೆ ಅಲ್ಲಿ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದರು.

ಆಪಾದಿತ ದ್ವೇಷ ಭಾಷಣದ ವೀಡಿಯೊದಲ್ಲಿ, “ಜನಾಂಗೀಯ ಶುದ್ಧೀಕರಣ ಮಾಡುವ ಸಲುವಾಗಿ ಮುಸ್ಲಿಮರ ನರಮೇಧಕ್ಕೆ ಅಥವಾ ಇಡೀ ಸಮುದಾಯದ ಹತ್ಯೆಗೆ ನೀಡಿದ ಮುಕ್ತ ಕರೆ” ಎಂದು ಅರ್ಥೈಸಬಹುದಾದಂತಹ ಪದಗಳ ಬಳಕೆ ಮಾಡಿಲ್ಲ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಅದರೆ ಏಪ್ರಿಲ್ 22 ರಂದು, ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿ, “ಉತ್ತಮ ಅಫಿಡವಿಟ್” ಸಲ್ಲಿಸುವಂತೆ ಪೊಲೀಸರನ್ನು ಕೇಳಿತ್ತು.

ಹರಿದ್ವಾರ ಮತ್ತು ದೆಹಲಿಯಲ್ಲಿ ನಡೆದ ಧರ್ಮ ಸಂಸದ್‌ಗಳಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದ ದ್ವೇಷ ಭಾಷಣಗಳ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಮಾಜಿ ಹೈಕೋರ್ಟ್ ನ್ಯಾಯಾಧೀಶೆ ಮತ್ತು ಹಿರಿಯ ವಕೀಲೆ ಅಂಜನಾ ಪ್ರಕಾಶ್ ಮತ್ತು ಪತ್ರಕರ್ತ ಕುರ್ಬಾನ್ ಅಲಿ ಈ ಅರ್ಜಿಯನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಇದು ಜಾತ್ಯತೀತ ರಾಷ್ಟ್ರ, ಹಿಂದೂ ರಾಷ್ಟ್ರ ಬೇಕು ಅನ್ನೋರು ದೇಶ ಬಿಟ್ಟು ಹೋಗಿ: ಬಾಲನ್‌

ಡಿಸೆಂಬರ್ 17 ಮತ್ತು 19 ರ ನಡುವೆ, ದೆಹಲಿಯಲ್ಲಿ ಹಿಂದೂ ಯುವ ವಾಹಿನಿಯಿಂದ ಮತ್ತು ಹರಿದ್ವಾರದಲ್ಲಿ ಯತಿ ನರಸಿಂಹಾನಂದ ಅವರಿಂದ ಆಯೋಜಿಸಲಾದ ಎರಡು ಕಾರ್ಯಕ್ರಮಗಳು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಮುಕ್ತ ಕರೆಗಳನ್ನು ನೀಡಿದ್ದವು ಮತ್ತು ಅಲ್ಲಿ ದ್ವೇಷದ ಭಾಷಣಗಳನ್ನು ಮಾಡಲಾಗಿತ್ತು.

ದ್ವೇಷದ ಭಾಷಣ ಪ್ರಕರಣದ ವಿಚಾರಣೆ ಮೇ 9 ರಂದು ನಡೆಯಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...