ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಭಾರತೀಯ ಮೂಲದ ಮಾಲಾ ಅಡಿಗಾ ಅವರನ್ನು ತಮ್ಮ ಪತ್ನಿ ಜಿಲ್ ಬಿಡೆನ್ ಅವರ ನೀತಿ ನಿರ್ದೇಶಕಿಯನ್ನಾಗಿ ನೇಮಕ ಮಾಡಿದ್ದಾರೆ. ಮಾಲಾ ಅಡಿಗಾ ಈ ಹಿಂದೆ ಜಿಲ್ ಬಿಡೆನ್ ಅವರ ಹಿರಿಯ ಸಲಹೆಗಾರರಾಗಿ ಮತ್ತು ಜೋ ಬಿಡೆನ್-ಕಮಲಾ ಹ್ಯಾರಿಸ್ ಪ್ರಚಾರಾಭಿಯಾನದ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ’ಅಮೆರಿಕಾಗಿಂತ ಭಾರತ 50 ವರ್ಷಗಳ ಹಿಂದೆಯೇ ಮಹಿಳಾ ಪ್ರಧಾನಿಯನ್ನು ಆಯ್ಕೆ ಮಾಡಿತ್ತು’
ಮಾಲಾ ಅಡಿಗಾ ಬೈಡನ್ ಫೌಂಡೇಶನ್‌ನಲ್ಲಿ ಉನ್ನತ ಶಿಕ್ಷಣ ಹಾಗೂ ಮಿಲಿಟರಿ ಕುಟುಂಬಗಳಿಗೆ ನಿರ್ದೇಶಕಿಯಾಗಿದ್ದರು. ಅಷ್ಟೇ ಅಲ್ಲದೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ ಒಬಾಮರ ಆಡಳಿತದ ಸಮಯದಲ್ಲಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೋದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳ ರಾಜ್ಯ ಉಪ ಸಹಾಯಕ ಕಾರ್ಯದರ್ಶಿಯಾಗಿ, ಜಾಗತಿಕ ಮಹಿಳಾ ಸಮಸ್ಯೆಗಳ ರಾಜ್ಯ ಕಚೇರಿಯ ಸೆಕ್ರೆಟರಿಯಲ್ಲಿ ಸಿಬ್ಬಂದಿ ಮುಖ್ಯಸ್ಥರಾಗಿ ಹಾಗೂ ರಾಯಭಾರಿಯ ಹಿರಿಯ ಸಲಹೆಗಾರಾಗಿಯೂ ಸೇವೆ ಸಲ್ಲಿಸಿದ್ದರು.
ಇಲಿನಾಯ್ಸೆ ಮೂಲದ ಮಾಲಾ ಅಡಿಗ ಗ್ರಿನ್ನೆಲ್ ಕಾಲೇಜು, ಮಿನ್ನೆಸೋಟ ವಿಶ್ವ ವಿದ್ಯಾಲಯದ ಸಾರ್ವಜನಿಕ ಆರೋಗ್ಯ ಶಾಲೆ ಹಾಗೂ ಚಿಕಾಗೊ ವಿವಿಯ ಕಾನೂನು ಶಾಲೆಯ ಪದವೀಧರೆಯಾಗಿದ್ದಾರೆ. 2008 ರಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಪ್ರಚಾರಾಭಿಯಾನಕ್ಕೆ ಸೇರುವ ಮೊದಲು ಚಿಕಾಗೊ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಅಮೆರಿಕಾ ಚುನಾವಣೆ: ತಪ್ಪು ಮಾಹಿತಿ ನೀಡುವ 3 ಲಕ್ಷ ಟ್ವೀಟ್‌ಗಳನ್ನು ನಿರ್ಬಂಧಿಸಿದ ಟ್ವಿಟರ್!


