Homeಸಿನಿಮಾಕ್ರೀಡೆಕ್ರಿಕೆಟ್‌ ಗೆಲುವಿನ ನಾಗಲೋಟದಲ್ಲಿ ‘ವಿನ್’ಡಿಯಾ!

ಕ್ರಿಕೆಟ್‌ ಗೆಲುವಿನ ನಾಗಲೋಟದಲ್ಲಿ ‘ವಿನ್’ಡಿಯಾ!

- Advertisement -
- Advertisement -

2019 ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಗೆಲ್ಲುವ ಫೇವರೆಟ್ ತಂಡಗಳ ಪೈಕಿ ಒಂದಾಗಿದ್ದ ಭಾರತ ಸೆಮಿ ಫೈನಲ್ ತಲುಪಿ ಪಂದ್ಯದಿಂದ ಹೊರಬಂದಿತ್ತು. ವಿಶ್ವಕಪ್ ನಂತರದಲ್ಲಿ ನಡೆದ ಎಲ್ಲಾ ಟೂರ್ನಮೆಂಟ್‌ಗಳಲ್ಲಿ ಭಾರತದ ಸಾಧನೆ ಐತಿಹಾಸಿಕವಾದದ್ದು.

ವಿಶ್ವಕಪ್ ಪಂದ್ಯಾವಳಿಯ ನಂತರ ಸೆಪ್ಟೆಂಬರ್‌ನಲ್ಲಿ ವಿಂಡೀಸ್ ಜೊತೆಗೆ ಆರಂಭವಾದ ಟೂರ್ನಿಯಿಂದ ಈಗ ನ್ಯೂಜಿಲ್ಯಾಂಡ್‌ಗೆ ಭಾರತ ನಡೆಸಿರುವ ಟೂರ್‌ವರೆಗೂ ಭಾರತದ ಸಾಧನೆಯನ್ನು ಗಮನಿಸೋಣ.

ಸೆಪ್ಟೆಂಬರ್ ನಲ್ಲಿ ವಿಂಡೀಸ್ ವಿರುದ್ಧ ಭಾರತವು ಟೆಸ್ಟ್, ಏಕದಿನ ಪಂದ್ಯ ಹಾಗೂ ಟಿ-20 ಮೂರು ಪ್ರಕಾರಗಳಲ್ಲಿ ಆಡಿತ್ತು ಮೂರರಲ್ಲಿಯೂ ಭಾರತ ಕ್ರಮವಾಗಿ 2-0, 2-0, 2-0 ಅಂತರದಲ್ಲಿ ವಿಂಡೀಸ್‌ಗೆ ಯಾವುದೇ ಗೆಲ್ಲುವ ಅವಕಾಶ ಕೊಡದೆ ಜಯಭೇರಿ ಸಾಧಿಸಿತು.

ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಹಾಗೂ ಟೆಸ್ಟ್ ಮ್ಯಾಚ್‌ಗಳನ್ನು ಭಾರತ ಆಡಿತ್ತು. ಟಿ-20 ಯಲ್ಲಿ ಸಮಬಲ ಸಾಧಿಸಿದರೆ (1-1) ಟೆಸ್ಟ್ ಪಂದ್ಯದಲ್ಲಿ 3-0 ಅಂತರದಲ್ಲಿ ವಿಜಯ ಸಾಧಿಸಿತು.

ನವೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಬಳಸಿದ ಬಾಂಗ್ಲಾದೇಶದ ವಿರುದ್ಧ ಭಾರತ ಟಿ-20 (2-1) ಹಾಗೂ ಟೆಸ್ಟ್ (2-0) ಪಂದ್ಯಗಳಲ್ಲಿ ಸೀರಿಸ್ ಗೆದ್ದುಕೊಂಡಿತ್ತು.

ಡಿಸೆಂಬರ್‌ನಲ್ಲಿ ಕೆರೇಬಿಯನ್‌ರ ವಿರುದ್ಧ ಟಿ-20 ಯಲ್ಲಿ 2-1 ಹಾಗೂ ಏಕದಿನ ಪಂದ್ಯದಲ್ಲಿ 2-1 ಅಂತರದಿಂದ ಮತ್ತೊಮ್ಮೆ ಭಾರತ ವಿಜಯ ಸಾಧಿಸಿತು. ಜನವರಿ 2020ರ ಆರಂಭದಲ್ಲಿ ಶ್ರೀಲಂಕಾ ವಿರುದ್ಧ 2-0 ಅಂತರದಿಂದ ಟಿ-20 ಪಂದ್ಯವನ್ನು ಭಾರತ ಗೆದ್ದಿತು.

ಅದೇ ತಿಂಗಳಿನಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಆಸ್ಟ್ರೇಲಿಯಾ ತಂಡದ ವಿರುದ್ಧ ಮೂರು ಏಕದಿನ ಪಂದ್ಯವನ್ನು ಆಡಿತ್ತು. ಮೊದಲ ಪಂದ್ಯವನ್ನು ಸೋತಿದ್ದ ಭಾರತ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದು ಬಲಿಷ್ಠ ಆಸಿಸ್‌ಗೆ ಶಾಕ್ ನೀಡಿತ್ತು. ಆಸಿಸ್ ವಿರುದ್ಧದ ಪಂದ್ಯಾವಳಿಯ ನಂತರ ಭಾರತ ತಂಡ ಇದೀಗ ನ್ಯೂಜೀಲ್ಯಾಂಡ್‌ಗೆ ಪ್ರವಾಸ ನಡೆಸಿದೆ. ಈ ಪ್ರವಾಸದಲ್ಲಿ ಆತಿಥೇಯ ನ್ಯೂಜೀಲ್ಯಾಂಡ್ ವಿರುದ್ಧ ಟಿ-20, ಏಕದಿನ ಹಾಗೂ ಟೆಸ್ಟ್ ಮೂರು ಪ್ರಕಾರಗಳ ಪಂದ್ಯವನ್ನು ಆಡಲಿದೆ.

ನ್ಯೂಜೀಲ್ಯಾಂಡ್ ವಿರುದ್ಧ ಭಾರತದ ಐತಿಹಾಸಿಕ ಗೆಲುವು: ಜನವರಿ 24 ರಿಂದ ಶುರುವಾಗಿರುವ ಪಂದ್ಯಾವಳಿಯಲ್ಲಿ ಒಟ್ಟು 5 ಟಿ-20, 3 ಏಕದಿನ ಪಂದ್ಯ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈಗಾಗಲೇ 5 ಟಿ-20 ಪಂದ್ಯಗಳನ್ನು ಆಡಿದ್ದು 5-0 ಅಂತರದಲ್ಲಿ ಭರ್ಜರಿಯಾಗಿ ಐತಿಹಾಸಿಕ ವಿಜಯ ಸಾಧಿಸಿದೆ. ಐಸಿಸಿ ಸದಸ್ಯ ತಂಡಗಳ ಪೈಕಿ ಟಿ-20 ಪ್ರಕಾರದಲ್ಲಿ ಐದಕ್ಕೆ ಐದೂ ಪಂದ್ಯಗಳನ್ನು ಗೆದ್ದಿರುವ (ವೈಟ್‌ವಾಷ್) ಮೊದಲ ತಂಡವೆಂಬ ಗರಿಯು ಈಗ ಭಾರತದ ಪಾಲಾಗಿದೆ.

ಅಲ್ಲದೆ 2008 ರಿಂದ ನ್ಯೂಜೀ಼ಲ್ಯಾಂಡ್ ನೆಲದಲ್ಲಿ ಟಿ-20 ಸಿರೀಸ್ ಅನ್ನು ಭಾರತ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಅದನ್ನೂ ಸಾಧಿಸಿದೆ. ಇನ್ನೂ ಮುಂದಿನ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿಯೂ ಭಾರತ ಗೆಲ್ಲುವ ಫೇವರಿಟ್ ತಂಡವಾಗಿದೆ. ಒಟ್ಟಾರೆಯಲ್ಲಿ ಭಾರತ ವಿಶ್ವಕಪ್ ನಂತರದಲ್ಲಿ ಎಲ್ಲಾ ಪ್ರಕಾರಗಳ ಪಂದ್ಯದಲ್ಲಿ ವಿಜಯ ಸಾಧಿಸಿದೆ. ವಿಶೇಷವಾಗಿ ಟೆಸ್ಟ್ ಪಂದ್ಯಗಳಲ್ಲಿ ವೈಟ್‌ವಾಷ್ ಅನ್ನು ಸಾಧಿಸಿದೆ. ಭಾರತ ಐಸಿಸಿಯ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮುಂದುವರೆಸಿದೆ.

ದಾಖಲೆ ಬರೆದ ಕರ್ನಾಟಕದ ಕೆ.ಎಲ್. ರಾಹುಲ್

ಹಿಟ್‌ಮ್ಯಾನ್ ರೋಹಿತ್ ಶರ್ಮಾರ ಜೊತೆ ಆರಂಭಿಕ ಬ್ಯಾಟ್ಸ್ಮೆನ್ ಆಗಿ ಕಣಕ್ಕೆ ಇಳಿಯುತ್ತಿರುವ ರಾಹುಲ್ ವಿಶ್ವಕಪ್ ನಲ್ಲಿ ಹೇಳಿಕೊಳ್ಳುವಂತ ಸಾಧನೆಯನ್ನು ಮಾಡಿರಲಿಲ್ಲ. ಇದೀಗ ಶಿಖರ್ ಧವನ್‌ರ ಅನುಪಸ್ಥಿತಿಯಲ್ಲಿ ರಾಹುಲ್ ಆರಂಭಿಕ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಓಪನಿಂಗ್ ಅಲ್ಲಿ ಅತ್ಯುತ್ತಮ ಲಯ ಕಂಡುಕೊAಡಿರುವ ರಾಹುಲ್ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ, ಭಾರತ ತಂಡದ ನಂಬಿಕಾರ್ಹ ಭರವಸೆಯ ಬ್ಯಾಟ್ಸ್ಮೆನ್ ಆಗಿದ್ದಾರೆ.

ನ್ಯೂಜೀ಼ಲ್ಯಾಂಡ್ ವಿರುದ್ಧದ ಟಿ-20 ಸಿರೀಸ್ ಅಲ್ಲಿ ಎರಡು ಅರ್ಧ ಶತಕಗಳೊಂದಿಗೆ ಒಟ್ಟು 224 ರನ್ನ ಗಳಿಸಿ ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆದಿದ್ದು ಅಲ್ಲದೆ ಟಿ-20 ಸಿರೀಸ್ ಒಂದರಲ್ಲಿ ಅತ್ಯಧಿಕ ರನ್ ಗಳಿಸಿದ ಮೊದಲ ಭಾರತದ ಬ್ಯಾಟ್ಸ್ಮೆನ್ ಎಂಬ ಇತಿಹಾಸ ಬರೆದಿದ್ದಾರೆ. ಅಲ್ಲದೆ ವಿಶ್ವದ ಎರಡನೇ ಬ್ಯಾಟ್ಸ್ಮೆನ್ ಆಗಿದ್ದಾರೆ.

ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಸಾಧನೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಒಟ್ಟು 5,046 ಅಂಕಗಳೊಂದಿಗೆ ಟಾಪ್ 1 ಸ್ಥಾನದಲ್ಲಿದೆ.

ಏಕದಿನ ಕ್ರಿಕೆಟ್‌ನಲ್ಲಿ 7,748 ಅಂಕಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.

ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಎರಡರಲ್ಲೂ ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ವಿರಾಟ್ ಕೋಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಏಕದಿನ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬುಮ್ರಾ ಟಾಪ್ 1 ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್ ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.

ಟಿ-20 ಬ್ಯಾಟಿಂಗ್ ರ‍್ಯಾಕಿಂಗ್ ಅಲ್ಲಿ ಕರ್ನಾಟಕದ ಕೆ.ಎಲ್. ರಾಹುಲ್ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಭಾರತಕ್ಕೆ ಬುಮ್ರಾ ಬಲ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಟ್ರಂಪ್ ಕಾರ್ಡ್ ಆಗಿದ್ದ ಭರವಸೆಯ ಬೌಲರ್ ಜಸ್ಪ್ರಿತ್ ಬುಮ್ರಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಾನ ಗಳಿಸಿದಾಗಿನಿಂದಲೂ ಅತ್ಯುತ್ತಮ ಸಾಧನೆ ನೀಡಿದ್ದಾರೆ. ತನ್ನ ವಿಶಿಷ್ಟವಾದ ಬೌಲಿಂಗ್ ಶೈಲಿ ಹಾಗೂ ಯಾರ್ಕರ್‌ನಿಂದಾಗಿ ಬುಮ್ರಾ ವಿಶ್ವದ ಟಾಪ್ ಒನ್ ಬೌಲರ್ ಆಗಿದ್ದಾರೆ.

ಅತ್ಯಂತ ಒತ್ತಡದ ಕೊನೆಯ ಓವರ್‌ಗಳಲ್ಲಿಯೂ ಬೌಂಡರಿಗಳು ನೀಡದೆ ಬ್ಯಾಟ್ಸ್ಮೆನ್‌ಗಳು ತಿಣುಕಾಡುವಂತೆ ಮಾಡುವ ಪ್ರತಿಭಾವಂತ ಬೌಲರ್ ಬುಮ್ರಾ. ಟೆಸ್ಟ್ನಲ್ಲಿ 2.64, ಏಕದಿನ ಪಂದ್ಯಗಳಲ್ಲಿ 4.49 ಹಾಗೂ ಟಿ-20 ಅಲ್ಲಿ 6.66 ಎಕಾನಮಿಯನ್ನು (ಒವರ್ ಒಂದಕ್ಕೆ ನೀಡುವ ರನ್‌ಗಳ ಸರಾಸರಿ) ಕಾಪಾಡಿಕೊಂಡಿರುವ ಬುಮ್ರಾ ಭಾರತ ತಂಡದ ಬೌಲಿಂಗ್ ಬಲವಾಗಿದ್ದಾರೆ.

ಸುಧಾರಿಸಬೇಕಿದೆ ಫೀಲ್ಡಿಂಗ್

ಹೆಚ್ಚು ಹೊಸ ಹಾಗೂ ಅನಾನುಭವಿಗಳಿರುವ ತಂಡದಲ್ಲಿ ಫೀಲ್ಡಿಂಗ್ ನೀರಸವಾಗಿದೆ. ಕ್ಯಾಚ್‌ಗಳನ್ನು ಕೈಚೆಲ್ಲುವುದು, ಬೌಂಡರಿಗಳನ್ನು ಬಿಡುವುದು ಹೆಚ್ಚಾಗಿರುವುದು ನಾಯಕ ಕೋಹ್ಲಿಯ ಕೋಪಕ್ಕೂ ಕಾರಣವಾಗಿದೆ.

ಒಳ್ಳೆಯ ಅವಕಾಶಕ್ಕೆ ಕಾದಿರುವ ಪಾಂಡೆ

ಕರ್ನಾಟಕ ತಂಡದ ಭರವಸೆಯ ಓಪನರ್ ಮನೀಷ್ ಪಾಂಡೆ ಭಾರತದ ತಂಡದ ಟಿ-20 ಪಂದ್ಯದಲ್ಲಿ ಸ್ಥಾನ ಪಡೆದಿದ್ದು ಲೊವರ್ ಆರ್ಡರ್‌ನಲ್ಲಿ ಆಡುತ್ತಿದ್ದಾರೆ. ಮಿಡಲ್ ಆರ್ಡರ್‌ನಲ್ಲಿ ಬರುತ್ತಿರುವ ಶಿವಮ್ ದೂಬೆ ಐಪಿಎಲ್‌ನಲ್ಲಿ ಮಿಂಚಿದ್ದರಾದರೂ ನ್ಯೂಜೀ಼ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಓವರ್ ಒಂದರಲ್ಲಿ 34 ರನ್ ನೀಡಿ ಭಾರತದ ದುಬಾರಿ ಬೌಲರ್ ಆಗಿದ್ದಾರೆ. ಫೀಲ್ಡಿಂಗ್ ನಲ್ಲೂ ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ. ಇವರ ಬದಲಿಗೆ ಮನೀಷ್ ಪಾಂಡೆಗೆ ಅವಕಾಶ ನೀಡಬೇಕೆಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...