4 ದಶಕಗಳ ನಂತರ ಒಲಿಂಪಿಕ್ಸ್ ಹಾಕಿ ಪುರುಷರ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದ ಭಾರತ ತಂಡ ಇಂದು ಮುಂಜಾನೆ ಬೆಲ್ಜಿಯಂ ವಿರುದ್ಧ 2-5 ಅಂತರದಲ್ಲಿ ಸೋಲೊಪ್ಪಿಕೊಂಡಿದೆ. ಕನಿಷ್ಟ ಕಂಚಿಗಾಗಿ ಕಾದಾಡಲು ಭಾರತ ಕಾಯುತ್ತಿದೆ.
ಇಂದಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಶುಭಾರಂಭ ಮಾಡಿತ್ತು. ಎರಡನೇ ನಿಮಿಷದಲ್ಲಿಯೇ ಬೆಲ್ಜಿಯಂ ಪರವಾಗಿ ಗೋಲು ಗಳಿಸಿದರೂ ಅದನ್ನು ಮೆಟ್ಟಿ ನಿಂತ ಭಾರತ ಮೊದಲ 15 ನಿಮಿಷಗಳ ಪಂದ್ಯದಲ್ಲಿ 2-1 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಮಂದೀಪ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್ ಭಾರತದ ಪರವಾಗಿ ಗೋಲು ಗಳಿಸಿದ್ದರು. ಆದರೆ ನಂತರದ 15 ನಿಮಿಷಗಳ ಆಟದಲ್ಲಿ ಬೆಲ್ಜಿಯಂನ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಗೋಲು ಗಳಿಸಿ 2-2 ಅಂತರಕ್ಕೆ ತಂದರು. ಮೂರನೇ ಕ್ವಾರ್ಟರ್‌ನಲ್ಲಿ ಎರಡು ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಕೊನೆಯ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಸತತ ಮೂರು ಗೋಲು ಗಳಿಸುವ ಮೂಲಕ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿತು.
ಸೋಲು ಗೆಲುವುಗಳು ಜೀವನದ ಭಾಗ. ಭಾರತದ ಪುರುಷರ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀಡಿದ ಉತ್ತಮ ಪ್ರದರ್ಶನ ಮಾತ್ರವೇ ಮುಖ್ಯವಾದುದು. ನಮ್ಮ ಆಟಗಾರರ ಬಗ್ಗೆ ಭಾರತವು ಹೆಮ್ಮೆ ಪಡುತ್ತದೆ. ಭಾರತ ತಂಡದ ಮುಂದಿನ ಪಂದ್ಯಕ್ಕೆ ಮತ್ತು ಅವರ ಭವಿಷ್ಯದ ಆಟಕ್ಕೆ ಶುಭಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Wins and losses are a part of life. Our Men’s Hockey Team at #Tokyo2020 gave their best and that is what counts. Wishing the Team the very best for the next match and their future endeavours. India is proud of our players.
— Narendra Modi (@narendramodi) August 3, 2021
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ-ಜರ್ಮಿನಿ ಸೆಣಸುತ್ತಿದ್ದು ಅಲ್ಲಿ ಸೋತ ತಂಡದ ಎದರು ಭಾರತ ತಂಡವು ಕಂಚಿಗಾಗಿ ಕಾದಾಟ ನಡೆಸಬೇಕಿದೆ.
ಇದನ್ನೂ ಓದಿ: ಒಲಿಂಪಿಕ್ಸ್ | ಮಹಿಳಾ ಹಾಕಿ ತಂಡವನ್ನು ಮೊದಲ ಬಾರಿಗೆ ಸೆಮಿಗೆ ತಲುಪಿಸಿದ ಐತಿಹಾಸಿಕ ಗೋಲ್…


