Homeಮುಖಪುಟಗ್ರಾಮೀಣ ಪ್ರದೇಶಗಳಲ್ಲಿ 10 ರೂಗೆ ಸಿಗಲಿದೆ ’ಎಲ್‌ಇಡಿ’ ಬಲ್ಬ್‌‌!

ಗ್ರಾಮೀಣ ಪ್ರದೇಶಗಳಲ್ಲಿ 10 ರೂಗೆ ಸಿಗಲಿದೆ ’ಎಲ್‌ಇಡಿ’ ಬಲ್ಬ್‌‌!

2014 ರಲ್ಲಿ ಒಂದು ಎಲ್‌ಇಡಿ ಬಲ್ಬ್‌ಗೆ 310 ರುಪಾಯಿಗೆ ಮಾರಲಾಗುತ್ತಿತ್ತು. ನಂತರ ಅದರ ಬೆಲೆಯನ್ನು 70 ರುಪಾಯಿಗೆ ಇಳಿಸಲಾಗಿತ್ತು. ಈಗ ಇನ್ನೂ ಅಗ್ಗವಾಗಿದೆ.

- Advertisement -
- Advertisement -

ಗ್ರಾಮೀಣ ಪ್ರದೇಶಗಳಿಗೆ ಎಲ್‌ಇಡಿ ಬಲ್ಬ್ ಒಂದಕ್ಕೆ 10 ರುಪಾಯಿಯಂತೆ ನೀಡಲು ಭಾರತದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ ನಿಂದ (EESL) ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸರ್ಕಾರದ ಬೆಂಬಲ ಅಥವಾ ಪ್ರೋತ್ಸಾಹಧನ ಏನನ್ನೂ ಪಡೆಯದೆ ಆರು ಕೋಟಿ ಎಲ್‌ಇಡಿ ಬಲ್ಬ್ ವಿತರಿಸಲು ಅದು ಮುಂದಾಗಿದೆ.

ಸರ್ಕಾರಿ ಸ್ಯಾಮ್ಯದ EESLನ ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಜಾಗತಿಕ ಮಟ್ಟದಲ್ಲೇ ಅತ್ಯಂತ ಕಡಿಮೆ ಬೆಲೆಗೆ EESL ಎಲ್‌ಇಡಿ ಬಲ್ಬ್ ಒದಗಿಸಲಿದೆ. ಆ ಮೂಲಕ ಮೇಕ್ ಇನ್ ಇಂಡಿಯಾಗೆ ಒತ್ತು ನೀಡಲಿದೆ ಎಂದಿದ್ದಾರೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ UJALA (ಉನ್ನತ್ ಜ್ಯೋತಿ ಬೈ ಅಫೋರ್ಡಬಲ್ ಲೈಟಿಂಗ್ ಫಾರ್ ಆಲ್) ಯೋಜನೆ ಅಡಿಯಲ್ಲಿ ಇದನ್ನು ಪ್ರಸ್ತಾಪ ಮಾಡಲಾಗಿದೆ, ಇದರಿಂದ ವಿದ್ಯುತ್ ಸಹ ಉಳಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಕ್ಲೀನ್ ಡೆವಲಪ್‌ಮೆಂಟ್ ಮೆಕಾನಿಸಂ (ಸಿಡಿಎಂ) ಅಡಿಯಲ್ಲಿ ಗ್ರಾಮ UJALA ದಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಆ ಮೂಲಕ ಕಾರ್ಬನ್ ಕ್ರೆಡಿಟ್ಸ್ ಬರಲಿದ್ದು, 2014ರಲ್ಲಿ ಒಂದು ಎಲ್‌ಇಡಿ ಬಲ್ಬ್‌ಗೆ 310 ರುಪಾಯಿಗೆ ಮಾರಲಾಗುತ್ತಿತ್ತು. ಸರ್ಕಾರದ UJALA ಯೋಜನೆ ಅಡಿ ಅದರ ಬೆಲೆಯನ್ನು 70 ರುಪಾಯಿಗೆ ಕಡಿತ ಮಾಡಲಾಯಿತು. ಈಗಿನ ಯೋಜನೆಯು ಅದನ್ನು ಇನ್ನು ದರಕ್ಕೆ ಒದಗಿಸಲಾಗುತ್ತಿದೆ ಎನ್ನಲಾಗಿದೆ.

ಈಗಿನ ಹೊಸ ಯೋಜನೆ ಅಡಿಯಲ್ಲಿ ಕಾರ್ಬನ್ ಕ್ರೆಡಿಟ್ಸ್‌ನಿಂದ 60 ರುಪಾಯಿ ಬಂದರೆ, ಬಾಕಿ 10 ರುಪಾಯಿಯನ್ನು ಗ್ರಾಮೀಣ ಭಾಗದ ಗ್ರಾಹಕರು ಪಾವತಿಸುತ್ತಾರೆ. ಮೊದಲ ಹಂತವಾಗಿ 1 ಕೋಟಿ ಎಲ್‌ಇಡಿ ಬಲ್ಬ್ ವಿತರಿಸಲಾಗುತ್ತದೆ ಎನ್ನಲಾಗಿದ್ದು, ಒಟ್ಟಾರೆ 4000 ಕೋಟಿ ಹೂಡಿಕೆಯಲ್ಲಿ 600 ಕೋಟಿ ರೂ ಗ್ರಾಮೀಣ ಗ್ರಾಹಕರು ಪಾವತಿಸಿದರೆ, 3400 ಕೋಟಿ ರುಪಾಯಿ ಕಾರ್ಬನ್ ಕ್ರೆಡಿಟ್ ಆದಾಯದ ಮೂಲಕ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

EESL ಪ್ರಕಾರ, ಮೌಲ್ಯದ ದೃಷ್ಟಿಯಿಂದ ವಿಶ್ವದ ಎರಡನೇ ದೊಡ್ಡ ಮಾರುಕಟ್ಟೆ ಭಾರತವಾಗಿದೆ. ಈಗಿನ ವಿದ್ಯುತ್‌ ಬಲ್ಬ್‌ಗಳ ಮೂಲಕ ಹೆಚ್ಚಿನ ವಿದ್ಯುತ್ ವ್ಯರ್ಥವಾಗುತ್ತಿದೆ. ಸದ್ಯದ ವಿದ್ಯುತ್ ಬೇಡಿಕೆ ಉಚ್ಛ್ರಾಯ ಮಟ್ಟದ 9428 ಮೆಗಾವ್ಯಾಟ್ ತಲುಪುವುದನ್ನು UJALA ಯೋಜನೆಯ ಎಲ್‌ಇಡಿ ಬಲ್ಬ್‌ಗಳನ್ನು ಬಳಸುವ ಮೂಲಕ ತಡೆಯಬಹುದು.


ಓದಿ: ಕರ್ನಾಟಕದಲ್ಲಿ 1560ರೂ ವಿದ್ಯುತ್‌ ಬಿಲ್ ಕಟ್ಟಬೇಕಾದರೆ ದೆಹಲಿಯಲ್ಲಿ ಅಷ್ಟೂ ವಿದ್ಯುತ್‌ ಉಚಿತ!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...