Homeಮುಖಪುಟಕರ್ನಾಟಕದಲ್ಲಿ 1560ರೂ ವಿದ್ಯುತ್‌ ಬಿಲ್ ಕಟ್ಟಬೇಕಾದರೆ ದೆಹಲಿಯಲ್ಲಿ ಅಷ್ಟೂ ವಿದ್ಯುತ್‌ ಉಚಿತ!

ಕರ್ನಾಟಕದಲ್ಲಿ 1560ರೂ ವಿದ್ಯುತ್‌ ಬಿಲ್ ಕಟ್ಟಬೇಕಾದರೆ ದೆಹಲಿಯಲ್ಲಿ ಅಷ್ಟೂ ವಿದ್ಯುತ್‌ ಉಚಿತ!

ದೆಹಲಿ ಸರಕಾರವು ಖಾಸಗಿಯಿಂದ ವಿದ್ಯುತ್ತನ್ನು ಖರೀದಿಸುತ್ತಿದ್ದರೂ 200 ಯೂನಿಟ್ ವಿದ್ಯುತ್ತನ್ನು ದೆಹಲಿಯ ಎಲ್ಲಾ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದೆ. ಆದರೆ ಸ್ವತಃ ವಿದ್ಯುತ್‌ ಉತ್ಪಾದಿಸುವ ಕರ್ನಾಟದಲ್ಲಿ 200 ಯೂನಿಟ್‌ಗೆ 1560 ರೂ ನಿಗಧಿ ಮಾಡಿದೆ.

- Advertisement -
- Advertisement -

ಕರ್ನಾಟಕದಲ್ಲಿ 1560ರೂ ವಿದ್ಯುತ್‌ ಬಿಲ್ ಕಟ್ಟಬೇಕಾದರೆ ದೆಹಲಿಯಲ್ಲಿ ಅಷ್ಟೂ ವಿದ್ಯುತ್‌ ಉಚಿತ! ಹಾಗಾಗಿ ರಾಜ್ಯದಲ್ಲಿಯೂ ಸಹ ಕನಿಷ್ಟ ಮೂರು ತಿಂಗಳು 200 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ.

ಈ ರೀತಿಯ ಪೋಸ್ಟರ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅದೇ ಸಮಯದಲ್ಲಿ ಕರ್ನಾಟಕ ಆಮ್‌ ಆದ್ಮಿ ಪಕ್ಷವು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಲಾಕ್‌ಡೌನ್‌ನಿಂದ ಜನರು ಪಡಬಾರದ ಕಷ್ಟ ಪಡುತ್ತಿರುವಾಗ ಸರಕಾರ ಮಾತ್ರ ವಿದ್ಯುತ್ ದರವನ್ನು ಹೆಚ್ಚಿಸಿ ಜನರನ್ನು ಸಮಸ್ಯೆಗಳ ಕೂಪಕ್ಕೆ ತಳ್ಳುತ್ತಿದೆ. ಸರಕಾರಕ್ಕೆ ಜನರ ಕಷ್ಟಕ್ಕೆ ಸ್ಪಂದಿಸುವ ಅಂತಃಕರಣವಿಲ್ಲವೇ? ಜನರಿಗಲ್ಲದ ಸರಕಾರ ಮತ್ತೆ ಯಾರಿಗೆ? ಎಂದು ಪ್ರಶ್ನೆ ಮಾಡಿದೆ.

ದೆಹಲಿ ಸರಕಾರವು ಖಾಸಗಿಯಿಂದ ವಿದ್ಯುತ್ತನ್ನು ಖರೀದಿಸುತ್ತಿದ್ದರೂ 200 ಯೂನಿಟ್ ವಿದ್ಯುತ್ತನ್ನು ದೆಹಲಿಯ ಎಲ್ಲಾ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದೆ. ಆದರೆ ಕರ್ನಾಟದಲ್ಲಿ 200 ಯೂನಿಟ್‌ಗೆ 1560 ರೂ ನಿಗಧಿ ಮಾಡಿದೆ. ಅಂತೆಯೇ ದೆಹಲಿಯಲ್ಲಿ 201 ರಿಂದ 400 ಯೂನಿಟ್ ವಿದ್ಯುತ್ ಬಳಸಿದಲ್ಲಿ 50% ಸಬ್ಸಿಡಿಯನ್ನು ಅಲ್ಲಿನ ಸರಕಾರ ನೀಡಿ 1075ರೂ ನಿಗಧಿಪಡಿಸಿದರೆ ಕರ್ನಾಟಕದಲ್ಲಿ ಮಾತ್ರ 3120 ರೂ ಆಗಿರುತ್ತದೆ. ಇಷ್ಟೊಂದು ಪ್ರಮಾಣದ ವ್ಯತ್ಯಾಸ ಮೋಸವಲ್ಲವೇ ಎಂದು ಆಮ್‌ ಆದ್ಮಿ ಪಕ್ಷ ಪ್ರಶ್ನಿಸಿದೆ.

ಸ್ವತಃ ವಿದ್ಯುತ್ ಉತ್ಪತ್ತಿ ಮಾಡುತ್ತಿರುವ ಕರ್ನಾಟಕದಲ್ಲಿ ಮಾತ್ರ ಜನರಿಗೆ ಅಳತೆ ಮೀರಿದ ದರವನ್ನು ವಿಧಿಸಲಾಗುತ್ತಿದೆ. ಸರಕಾರ ತಕ್ಷಣ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಬೇಕು. ಇದರಿಂದ ಸರಕಾರದ ಬೊಕ್ಕಸಕ್ಕೆ ಅಂತಹ ನಷ್ಟವೇನೂ ಇಲ್ಲ. ಇದನ್ನು ಶಾಶ್ವತವಾಗಿ ಮಾಡಲು ಸಾಧ್ಯವಾಗದಿದ್ದರೆ ಕನಿಷ್ಟ ಆರು ತಿಂಗಳ ತನಕ ಇದನ್ನು ಜಾರಿಗೊಳಿಸಬೇಕು ಎಂದು ಆಪ್‌ ಒತ್ತಾಯಿಸಿದೆ.

2015ರ ಚುನಾವಣೆಗೂ ಮುನ್ನವೇ ಅಲ್ಲಿನ ಆಪ್‌ ಪಕ್ಷವು ಬಿಜಿಲಿ ಆಫ್‌, ಪಾನೀ ಮಾಫ್ (ವಿದ್ಯುತ್‌ ದರ ಅರ್ಧ, ನೀರಿನ ದರ ಉಚಿತ)‌ ಎಂಬ ಘೊಷಣೆಯನ್ನು ಪ್ರಣಾಳಿಕೆಯಲ್ಲಿ ನೀಡಿತ್ತು. ಆನಂತರ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದುಬಂದ ನಂತರ ಆ ಆಶ್ವಾಸನೆಯನ್ನು ಸಂಪೂರ್ಣವಾಗಿ ವಿಸ್ತರಿಸಿತ್ತು. ಅದಲ್ಲದೆ ಶಿಕ್ಷಣ, ಆರೋಗ್ಯ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಆಪ್‌ ಸರ್ಕಾರ ಮಾಡಿದ ಸಕಾರಾತ್ಮಕ ಕೆಲಸಗಳು ಅವರು ಮತ್ತೆ 2020ರಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಸಹಕಾರಿಯಾಗಿವೆ.

ರಾಜ್ಯ ನಡೆಸುವುದು ಹವಾನಿಯಂತ್ರಿತ ಕೋಣೆಗಳ ಒಳಗಡೆಯಲ್ಲ, ಬಡ ಜನರ ಸಮಸ್ಯೆಗಳ ಮಧ್ಯೆ ಕೂಡ. ಸರಕಾರಕ್ಕೆ ಅವರ ಕಷ್ಟಗಳನ್ನು ಅರಿಯವ ಅಂತಃಕರಣ ಬೇಕು. ಇದಕ್ಕಾಗಿ ತಕ್ಷಣ 200 ಯೂನಿಟ್ ತನಕ ಉಚಿತ 24 ಗಂಟೆಗಳ ಕಾಲ ವಿದ್ಯುತ್ತನ್ನು ರಾಜ್ಯದಲ್ಲಿ ಪೂರೈಸಬೇಕು ಎಂದು ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದೆ ಎಂದು ರಾಜ್ಯ ಜಂಟಿ ಕಾರ್ಯದರ್ಶಿಗಳಾದ ದರ್ಶನ್ ಜೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: ದೆಹಲಿಯ 14 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್‌ ಕೊಟ್ಟ ಕೇಜ್ರಿವಾಲ್‌ ಸರ್ಕಾರ!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. You know the current situations going around in the world. People are not able to have there required day meals. So the government have to understand the situations and have to help the needy one with the essentials bills like electricity water and so on. I hope the government will help the needy and come with a good idea so that the people can leave peacefully in this current situations. Thanking you!!!
    Khalid Khan

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...