Homeರಂಜನೆಕ್ರೀಡೆನಿವೃತ್ತಿ ನಿರ್ಧಾರ ಘೋಷಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ನಿವೃತ್ತಿ ನಿರ್ಧಾರ ಘೋಷಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

- Advertisement -
- Advertisement -

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ 2022 ರ ಆಸ್ಟ್ರೇಲಿಯಾ ಓಪನ್ ಟೆನ್ನಿಸ್‌ ಟೂರ್ನಿ ತಾವು ಆಡುವ ಕೊನೆಯ ಸರಣಿಯಾಗಲಿದೆ ಎಂದು ಪ್ರಕಟಿಸಿದ್ದಾರೆ. 35 ವರ್ಷದ ಟೆನಿಸ್ ತಾರೆ ಸಾನಿಯಾ ಆಸ್ಟ್ರೇಲಿಯನ್ ಮಹಿಳಾ ಡಬಲ್ಸ್ ಸರಣಿಯ ಮೊದಲ ಸುತ್ತಿನ ಸೋಲಿನ ನಂತರ ನಿವೃತ್ತಿ ಘೋಷಿಸಿದ್ದಾರೆ.

ಸಾನಿಯಾ ಮಿರ್ಜಾ ಮತ್ತು ಅವರ ಸಹ ಆಟಗಾರ್ತಿ ಉಕ್ರೇನಿನ ನಾಡಿಯಾ ಕಿಚೆನೊಕ್ ಒಂದು ಗಂಟೆ 37 ನಿಮಿಷ ನಡೆದ ಪಂದ್ಯದಲ್ಲಿ 4-6, 6-7 (5) ಸೆಟ್‌ಗಳಿಂದ ಸ್ಲೊವೇನಿಯಾದ ತಮಾರಾ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ ವಿರುದ್ಧ ಸೋಲನುಭವಿಸಿದ್ದಾರೆ.

“ನಾನು ಆಡುವುದಿಲ್ಲ ಎಂದು ಹೇಳುವುದು ಅಷ್ಟು ಸುಲಭವಲ್ಲ, ನಿವೃತ್ತಿ ನಿರ್ಧಾರಕ್ಕೆ ಕೆಲವು ಕಾರಣಗಳಿವೆ. ನಾನು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ ನಾನು ಹೆಚ್ಚು ದೂರದ ಊರುಗಳಿಗೆ ಓಡಾಡುವ ಮೂಲಕ ನನ್ನ 3 ವರ್ಷದ ಮಗನನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದೇನೆ” ಎಂದಿದ್ದಾರೆ.

“ನನ್ನ ದೇಹ ನನಗೆ ಸಹಕರಿಸುತ್ತಿಲ್ಲ. ದಿನ ದಿನಕ್ಕೂ ಕ್ಷೀಣಿಸುತ್ತಿದೆ ಎನ್ನಿಸುತ್ತಿದೆ. ಇಂದು ನನ್ನ ಮೊಣಕಾಲು ನಿಜವಾಗಿಯೂ ನೋಯುತ್ತಿದೆ. ವಯಸ್ಸಾದಂತೆ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಹಾಗೆಂದು ನಾನು ಸೋತಿದ್ದೇನೆಂದಲ್ಲ. ಆದರೆ, ಈ ಅಂಶಗಳನ್ನು ನಾನು ಗಣನೆಗೆ ತೆಗೆದುಕೊಳ್ಳಬೇಕಿದೆ” ಎಂದು ಸಾನಿಯಾ ತಿಳಿಸಿರುವುದಾಗಿ ಫಸ್ಟ್‌ಪೋಸ್ಟ್‌ ವರದಿ ಮಾಡಿದೆ.

ಇದನ್ನೂ ಓದಿ: ಒಕ್ಕೂಟ ಸರ್ಕಾರ ತಿರಸ್ಕರಿಸಿದ ಟ್ಯಾಬ್ಲೊ ತಮಿಳುನಾಡಿನಾದ್ಯಂತ ಪ್ರದರ್ಶನ: ಸಿಎಂ ಸ್ಟಾಲಿನ್‌

‘ಈ ವರ್ಷದ ಸೀಸನ್‌ನಲ್ಲಿ ಪಾಲ್ಗೊಳ್ಳುತ್ತೇನೆ. ಯಾಕೆಂದರೆ ನಾನು ಈ ಟೂರ್ನಿಗಾಗಿ ಕಠಿಣ ಅಭ್ಯಾಸ ಮಾಡಿದ್ದೇನೆ. ತೂಕ ಇಳಿಸಿದ್ದೇನೆ, ಫಿಟ್ ಆಗಿ ಬರುವ ಮೂಲಕ ತಾಯಂದಿರಿಗೆ ಉತ್ತಮ ಮಾದರಿಯಾಗಿದ್ದೇನೆ. ಇತರೆ ತಾಯಿಂದಿರು ಸಹ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಪಡಬೇಕು. ಈ ಸೀಸನ್ ಬಳಿಕ ನನ್ನ ದೇಹ ಸಮರ್ಥವಾಗಿರಬಲ್ಲದೆಂದು ನನಗೆ ಅನ್ನಿಸುತ್ತಿಲ್ಲ’ ಎಂದಿದ್ದಾರೆ.

1986 ರ ನವೆಂಬರ್‌ 15 ರಂದು ಮುಂಬೈನಲ್ಲಿ ಜನಿಸಿದ ಸಾನಿಯಾ ಮಿರ್ಜಾ 2003 ರಲ್ಲಿ ಟೆನಿಸ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆಟದಲ್ಲಿ ಅತಿ ಹೆಚ್ಚಿನ ಕ್ರಮಾಂಕ ಪಡೆದ ಭಾರತೀಯ ಮಹಿಳೆಯಾಗಿದ್ದಾರೆ . 11 ಡಬಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ವಿಶ್ವಕ್ರಮಾಂಕದಲ್ಲಿ ಮೊದಲ ಶ್ರೇಯಾಂಕ ಪಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಅವರಿಗಿದೆ. ಸಾನಿಯಾ 2010 ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾದರು.


ಇದನ್ನೂ ಓದಿ: ’ಸೂಕ್ಷ್ಮ ವಿಚಾರಗಳಿಗೆ ವಿವಾದದ ಸ್ಪರ್ಶ ನೀಡುವುದು ಬಿಜೆಪಿ, ಸಿಟಿ ರವಿ ಅವರಿಗೆ ಕರತಲಾಮಲಕ’: ಜೆಡಿಎಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...