ವಿರೋಧ ಪಕ್ಷ ಒಕ್ಕೂಟ ಇಂಡಿಯಾದ ಕಾರ್ಯಚಟುವಟಿಕೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತೃಪ್ತಿ ವ್ಯಕ್ತಪಡಿಸಿದ್ದು, ಅವಕಾಶ ಸಿಕ್ಕರೆ ಮೈತ್ರಿಕೂಟದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಇಂಗಿತವನ್ನು ಸೂಚಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿರುವಾಗಲೆ ಇಂಡಿಯಾ ಒಕ್ಕೂಟವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಅವರು ಹೇಳಿದ್ದಾರೆ. ‘ಇಂಡಿಯಾ’ದ ಜವಾಬ್ದಾರಿ
“ನಾನು ಇಂಡಿಯಾ ಒಕ್ಕೂಟವನ್ನು ರಚಿಸಿದ್ದೇನೆ, ಈಗ ಅದನ್ನು ನಿರ್ವಹಿಸುವುದು ಮುನ್ನಡೆಸುವವರಿಗೆ ಬಿಟ್ಟದ್ದು. ಅವರು ಉತ್ತಮ ಪ್ರದರ್ಶನವನ್ನು ನೀಡಲು ಸಾಧ್ಯವಾಗದಿದ್ದರೆ, ನಾನು ಏನು ಮಾಡಲು ಸಾಧ್ಯ?ಎಲ್ಲರೂ ಜೊತೆಯಲ್ಲಿ ಮುನ್ನಡೆಸಬೇಕು ಎಂದು ನಾನು ಹೇಳುತ್ತೇನೆ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಿಜೆಪಿಯ ಪ್ರಭಲ ವಿರೋಧಿ ಶಕ್ತಿಯಾಗಿದ್ದರೂ ಅವರು ಯಾಕೆ ಮೈತ್ರಿಕೂಟವನ್ನು ಮುನ್ನಡೆಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅವಕಾಶ ನೀಡಿದರೆ ನಾನು ಅದರ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುತ್ತೇನೆ. ನಾನು ಪಶ್ಚಿಮ ಬಂಗಾಳದಿಂದ ಹೊರಗೆ ಹೋಗಲು ಬಯಸುವುದಿಲ್ಲ, ಆದರೆ ಇಲ್ಲಿಂದಲೆ ಅದನ್ನು ಮುನ್ನಡೆಸಲು ನನಗೆ ಸಾಧ್ಯ” ಎಂದು ಅವರು ಹೇಳಿದ್ದಾರೆ. ‘ಇಂಡಿಯಾ’ದ ಜವಾಬ್ದಾರಿ
ಬಿಜೆಪಿಯನ್ನು ಎದುರಿಸಲು ರಚಿಸಲಾದ ಇಂಡಿಯಾ ಮೈತ್ರಿಕೂಟದಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ವಿರೋಧ ಪಕ್ಷಗಳನ್ನು ಒಳಗೊಂಡಿದೆ. ಆದಾಗ್ಯೂ, ಮೈತ್ರಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಸಮನ್ವಯದ ಕೊರತೆಯ ಕಾರಣಕ್ಕೆ ವಿವಿಧ ವಲಯಗಳಿಂದ ಟೀಕೆಗೆ ಗುರಿಯಾಗಿದೆ.
ತಮ್ಮ ಅಹಂಗಳನ್ನು ಬದಿಗಿಟ್ಟು ಮಮತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕಿಯಾಗಿ ಗುರುತಿಸುವಂತೆ ಕಾಂಗ್ರೆಸ್ ಮತ್ತು ಇತರ ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳಿಗೆ ಅವರ ಪಕ್ಷದ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಕರೆ ನೀಡಿದ ಕೆಲವೆ ದಿನಗಳ ನಂತರ ಮಮತಾ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಅದ್ಭುತ ಪ್ರದರ್ಶನವನ್ನು ನೀಡಿದ್ದು, ಪಕ್ಷದ ನೇತೃತ್ವದ ಆಡಳಿತರೂಢ ಮಹಾಯುತಿ ಮೈತ್ರಿಕೂಟವನ್ನು ಪ್ರಚಂಡ ವಿಜಯದತ್ತ ಮುನ್ನಡೆಸಿ ದಾಖಲೆ ಸಂಖ್ಯೆಯ ಸ್ಥಾನಗಳನ್ನು ಪಡೆದುಕೊಂಡಿದೆ. ಈ ನಡುವೆ ಜಾರ್ಖಂಡ್ ಚುನಾವಣೆಯಲ್ಲಿ ಜೆಎಂಎಂ ಕೂಡಾ ಅದ್ಭುತ ಪ್ರದರ್ಶನ ನೀಡಿದ್ದು ಇಂಡಿಯಾ ಮೈತ್ರಿಕೂಟ ಜಾರ್ಖಂಡ್‌ನಲ್ಲಿ ಮತ್ತೆ ಅಧಿಕಾರ ವಹಿಸಿಕೊಂಡಿದೆ.
ಅದಾಗ್ಯೂ, ಕಾಂಗ್ರೆಸ್ ತನ್ನ ಸೋಲಿನ ಸರಣಿಯನ್ನು ಮುಂದುವರೆಸಿದೆ. ಮಹಾರಾಷ್ಟ್ರದಲ್ಲಿ ಪಕ್ಷವು ತನ್ನ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ಜಾರ್ಖಂಡ್‌ನಲ್ಲಿ ಆಡಳಿತಾರೂಢ JMM ಜೊತೆಗೆ ಸಣ್ಣ ಮಿತ್ರ ಪಕ್ಷವಾಗಿ ಕಾಂಗ್ರೆಸ್ ಜೊತೆಗೂಡಿದೆ. ಇತರ ಮಿತ್ರಪಕ್ಷಗಳು ಕಾಂಗ್ರೆಸ್ ಅನ್ನು ಮೀರಿಸಿದ್ದು ವಿರೋಧ ಪಕ್ಷದ ಒಕ್ಕೂಟದಲ್ಲಿ ಅದರ ಪಾತ್ರವು ಮತ್ತಷ್ಟು ಕ್ಷೀಣಿಸಿದೆ.
ಮತ್ತೊಂದೆಡೆ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಪ್ರತಿಭಟನೆಯಂತಹ ವಿವಾದಗಳ ನಡುವೆಯು ಬಿಜೆಪಿಯನ್ನು ಸೋಲಿಸುವ ಮೂಲಕ ಟಿಎಂಸಿಯು ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆ ಪ್ರಾಬಲ್ಯ ಮೆರೆದಿದೆ. ಸಿಪಿಐ(ಎಂ) ನೇತೃತ್ವದ ಲೆಫ್ಟ್ ಫ್ರಂಟ್, ಅದರ ಮಿತ್ರಪಕ್ಷವಾದ ಸಿಪಿಐ(ಎಂಎಲ್) ಲಿಬರೇಶನ್ ಮತ್ತು ಕಾಂಗ್ರೆಸ್, ಇಂಡಿಯಾ ಮೈತ್ರಿಯ ರಾಷ್ಟ್ರೀಯ ಮಟ್ಟದ ಮಿತ್ರ ಪಕ್ಷವಾದ ಟಿಎಂಸಿಯ ಮುಂದೆ ಹಿನ್ನಡೆ ಅನುಭವಿಸಿವೆ. ಅವರ ಅಭ್ಯರ್ಥಿಗಳು ಠೇವಣಿ ಕೂಡಾ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಜಗನ್ ನಡೆಸಿದ್ದ ಸೋಲಾರ್ ಒಪ್ಪಂದದಲ್ಲಿ ನಾಯ್ಡು ಸರ್ಕಾರ ಅದಾನಿಯನ್ನು ರಕ್ಷಿಸುತ್ತಿದೆ – ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ ಶರ್ಮಿಳಾ ಆರೋಪ ಸ್ಸವ fಗವಸಾವ್ದಅವ ಅfವವದಸವಸಸವದ ಅfವಾವಾದವ


