Homeಅಂತರಾಷ್ಟ್ರೀಯಇಸ್ರೇಲ್‌ ಪರವಾದ ಭಾರತದ ನಿಲುವು; ಪ್ಯಾಲಿಸ್ತೇನ್‌ ವಿಷಾದದ ಪತ್ರ

ಇಸ್ರೇಲ್‌ ಪರವಾದ ಭಾರತದ ನಿಲುವು; ಪ್ಯಾಲಿಸ್ತೇನ್‌ ವಿಷಾದದ ಪತ್ರ

- Advertisement -
- Advertisement -

ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ನಡುವಿನ ದೀರ್ಘಕಾಲದ ಸಂಘರ್ಷ ಸದ್ಯಕ್ಕೆ ಒಂದು ಶಾಂತಿಯುತ ನಿಲುಗಡೆಗೆ ಬಂದಿದೆ. ಆದರೆ ಎರಡು ನೆರೆ ಹೊರೆಯ ದೇಶಗಳ ನಡುವಿನ ಅಸ್ತಿತ್ವದ ಈ ಹೋರಾಟ ಬೂದಿ ಮುಚ್ಚಿದ ಕೆಂಡವಿದ್ದಂತೆ. ಮತ್ತೆ ಯಾವಾಗ ಬೇಕಿದ್ದರೂ ಬಿಕ್ಕಟ್ಟು ಉಲ್ಬಣಿಸಿ ಪರಸ್ಪರ ಕಚ್ಚಾಟಗಳಿಗೆ ಮತ್ತು ಅಮಾಯಕರ ಸಾವಿಗೆ ಕಾರಣವಾಗಬಹುದು.

ವಿಶ್ವಸಂಸ್ಥೆ ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ನಡುವಿನ ಸಂಬಂಧವನ್ನು ಸರಿಪಡಿಸಲು ಇದುವರೆಗೆ ಹಲವು ಸುತ್ತಿನ ಮಾತುಕತೆಯನ್ನು ಮತ್ತು ಸಂಧಾನ ಯತ್ನವನ್ನು ನಡೆಸಿವೆ. ಆದರೆ ಯಾವ ಪ್ರಯತ್ನಗಳೂ ಇದುವರೆಗೆ ಸಫಲವಾಗಿಲ್ಲ. ಇದರ ನಡುವೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ಯಾಲಿಸ್ತೇನ್ ಮೇಲೆ ನಡೆದ ಇಸ್ರೇಲ್ ಧಾಳಿಯಲ್ಲಿ ಸಾವಿರಾರು ಪ್ಯಾಲಿಸ್ತೇನಿಗಳ ಮಾನವ ಹಕ್ಕನ್ನು ನಿಗ್ರಹಿಸಲಾಗಿದೆ ಎಂಬ ರೆಸಲ್ಯೂಶನ್ ಒಂದನ್ನು  ಮಂಡಿಸಲಾಗಿದ್ದು 24 ರಲ್ಲಿ 15 ಪರವಾದ ಮತಗಳಿಂದ ಈ ರೆಸಲ್ಯೂಶನ್ ಅಂಗೀಕಾರಗೊಂಡಿದೆ. ಆದರೆ ಭಾರತ ಮಾನವ ಹಕ್ಕುಗಳ ಆಯೋಗದ ಈ ರೆಸಲ್ಯೂಶನ್ ಪ್ರಕ್ರಿಯೆಗೆ ಗೈರು ಹಾಜರಾಗುವ ಮೂಲಕ ತನ್ನ ವಿದೇಶಾಂಗ ನೀತಿಯಲ್ಲಿ ಮಹತ್ವವಾದ ಬದಲಾವಣೆಗಳಾಗಿರುವ ಕುರಿತು ಅನುಮಾನ ಮೂಡಿಸಿದೆ.

ಭಾರತದ ಗೈರು ಹಾಜರಾತಿಯ ಸಂಬಂಧ ಪ್ಯಾಲಿಸ್ತೇನ್ ನ ವಿದೇಶಾಂಗ ಮಂತ್ರಿ ರೈದ್ ಮಲ್ಕಿ ಭಾರತದ ವಿದೇಶಾಂಗ ಮಂತ್ರಿ  ಎಸ್. ಜೈಶಂಕರ್ ಅವರಿಗೆ ವಿಷಾದದ ಪತ್ರವನ್ನು ಬರೆದಿದ್ದಾರೆ.

ಪತ್ರದಲ್ಲಿ “ಭಾರತ ಗಣತಂತ್ರವು  ದೀರ್ಘಾವಧಿಯ ಮತ್ತು ಬಹು ಮುಖ್ಯವಾದ ಒಂದು ಸಂದರ್ಭದಲ್ಲಿ ನ್ಯಾಯ ಮತ್ತು ಶಾಂತಿಯ ಸಲುವಾಗಿ ಅಂತರಾಷ್ಟ್ರೀಯ ಸಮುದಾಯದ ಜೊತೆ ನಿಲ್ಲುವ ಅವಕಾಶನ್ನು ಕಳೆದುಕೊಂಡಿದೆ” ಎನ್ನುವ ಮೂಲಕ ಭಾರತದ ಇಂದಿನ ನಡೆ ದೀರ್ಘಾವಧಿಯ ಭಾರತ ಪ್ಯಾಲಿಸ್ತೇನ್ ಸಂಬಂಧವನ್ನು ದುರ್ಬಲಗೊಳಿಸಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಈ ರೆಸಲ್ಯೂಶನ್ ಬಹುರಾಷ್ಟ್ರಗಳ ವ್ಯಾಪಕ ಮಾತುಕತೆಯ ಫಲವಾಗಿ ಹುಟ್ಟಿಕೊಂಡಿದೆ. ಈ ರೆಸಲ್ಯೂಶನ್ ನಲ್ಲಿ ಭಾರತದ ಗೈರು ಹಾಜರಾತಿ ಪ್ಯಾಲಿಸ್ತೇನಿಯರ ಮತ್ತು ಜಗತ್ತಿನ ಎಲ್ಲರ ಮಾನವ ಹಕ್ಕುಗಳನ್ನು ರಕ್ಷಿಸುವ  ಮಹತ್ವದ ಪ್ರಕ್ರಿಯೆಯನ್ನು ನಿಗ್ರಹಿಸುವಂತಹ ನಡೆಯಾಗಿದೆ ಎಂದು ರೈದ್ ಮಲ್ಕಿ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಶ್ವ ಮಾನವ ಹಕ್ಕುಗಳ ಆಯೋಗ ಕೈಗೊಂಡ ಈ ರೆಸಲ್ಯೂಶನ್ ಇಸ್ರೇಲ್ ನಡೆಸಿದೆ ಎನ್ನಲಾದ ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯ ತನಿಖೆ ನಡೆಸಲು ದಾರಿ ಮಾಡಿಕೊಡುವ ಪ್ರಯತ್ನವಾಗಿದೆ. ಇದುವರೆಗೆ ಇಸ್ರೇಲ್ ಪ್ಯಾಲಿಸ್ತೇನ್‌ನಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಯಾವುದೇ ಸ್ವತಂತ್ರ ತನಿಖಾ ಆಯೋಗದಿಂದ ಅವಕಾಶ ನೀಡಿಲ್ಲ. ಹೊಸ ರೆಸಲ್ಯೂಶನ್ ಇಸ್ರೇಲ್ ನಡೆಸುತ್ತಿದೆ ಎನ್ನಲಾದ ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಕುರಿತಾಗಿ ಸ್ವತಂತ್ರ ನಿಯೋಗದಿಂದ ತನಿಖೆಗೆ ಇಸ್ರೇಲ್ ಮೇಲೆ ಒತ್ತಡ ಹೇರಲಿದೆ.

ಭಾರತದ ಬೆಂಬಲ ಸಂಪೂರ್ಣ ಇಸ್ರೇಲ್ ಕಡೆ ವಾಲಿದೆಯೇ? 

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ. ಎಸ್. ತಿರುಮೂರ್ತಿ ಅಲ್ ಅಕ್ಸಾ ಮಸೀದಿಯ ಮೇಲೆ ರಂಜಾನ್ ಪ್ರಾರ್ಥನೆಯ ವೇಳೆ ಇಸ್ರೇಲ್  ಅತಿಕ್ರಮವಾದ ಒತ್ತುವರಿಯನ್ನು ಮಾಡಲು ಮುಂದಾಗಿದ್ದೇ ಈ ಸೂಕ್ಷ್ಮ ಪ್ರದೇಶದಲ್ಲಿ ಶಾಂತಿ  ಭಂಗಕ್ಕೆ ಕಾರಣವಾಗಿದೆ ಎಂದು ಹೇಳಿದ್ದರು. ಆದರೆ 3 ದಿನಗಳ ನಂತರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ (General Assembly) ಯಲ್ಲಿ ಭಾರತ ಭದ್ರತಾ ಮಂಡಳಿಯಲ್ಲಿ ಹೇಳಿದ ಈ ಹೇಳಿಕೆಯನ್ನು ಹಿಂಪಡೆದಿದೆ. ಮತ್ತು ಸಾಮಾನ್ಯ ಸಭೆಯಲ್ಲಿ ಭಾರತ ಪ್ಯಾಲಿಸ್ತೇನಿಯರಿಗೆ ಕೇವಲ ಸಿಂಪತಿಯನ್ನು ಅಷ್ಟೇ ವ್ಯಕ್ತಪಡಿಸಿದೆ.

ಪ್ಯಾಲಿಸ್ತೇನ್ ಗೆ ತನ್ನ ಪ್ರಬಲ ಬೆಂಬಲ ಮತ್ತು ತನ್ನ ದೀರ್ಘಕಾಲದ ನಿಲುವು ‘ಎರಡು ದೇಶ ನೀತಿ’  ಬದ್ಧತೆಯನ್ನು ಭಾರತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಹೇಳಿತ್ತು. ಆದರೆ ತನ್ನ ಈ ನಿಲುವನ್ನು ಭಾರತ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬದಲಾಯಿಸಿದೆ.

ಇಸ್ರೇಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೇರಳ ಮೂಲದ ನರ್ಸ್‌ ಸೌಮ್ಯ ಸಂತೋಶ್‌ ಹಮಾಸ್‌ ರಾಕೇಟ್‌ ದಾಳಿಗೆ ಮೃತಪಟ್ಟಿದ್ದಾರೆ. ಅವರ ಸಾವಿಗೆ ವಿಷಾಧ ವ್ಯಕ್ತಪಡಿಸಿದೆಯಷ್ಟೇ. ಆದರೆ ಇಸ್ರೇಲ್‌ ಪ್ಯಾಲಿಸ್ತೇನ್‌ ಮೇಲೆ ನಡೆಸಿದ ವ್ಯವಸ್ಥಿತ ಮಿಲಿಟರಿ ದಾಲಿಯ ಬಗ್ಗೆ ಭಾರತ ಯಾವುದೇ ಆಕ್ಷೇಪವನ್ನಾಗಲಿ ತನ್ನ ನಿಲುವನ್ನಾಗಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಕಟಿಸಿಲ್ಲ. ಇದರಿಂದ ಭಾರತ ಇಷ್ಟು ದಿನ ವಿಶ್ವ ಸಂಸ್ಥೆಯಲ್ಲಿ ಪ್ಯಾಲಿಸ್ತೇನ್‌ ಗೆ ನೀಡಿದ್ದ ಬೆಂಬಲವನ್ನು ಮುಂದುವರೆಸಿಲ್ಲ. ಬದಲಾಗಿ ಈಗ ಭಾರತದ ಆದ್ಯತೆ ಇಸ್ರೇಲ್‌ ಕಡೆಗೆ ಹೊರಳಿರುವುದು ವಿಶ್ವ ಸಂಸ್ಥೆಯಲ್ಲಿ ಬಹಿರಂಗವಾಗಿದೆ.

ಪ್ಯಾಲಿಸ್ತೇನ್‌ ನೊಂದಿಗೆ ಇಸ್ರೇಲ್‌ ನಡವಳಿಕೆ ಮತ್ತು ಭಾರತದ ಮೌನ ಸಮ್ಮತಿ

ಮೇ 27 ರಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ಯಾಲಿಸ್ತೇನ್‌ ರೆಸಲ್ಯೂಶನ್‌ ನಲ್ಲಿ ಗೈರಾಗುವುದೊರೊಂದಿಗೆ ಭಾರತ ಈಗ ಮೊದಲಿನ ಇಸ್ರೇಲ್‌-ಪ್ಯಾಲಿಸ್ತೇನ್‌ ನಡುವೆ ಸಮತೋಲನದ ವಿದೇಶಾಂಗ ಸಂಬಂಧ ನೀತಿಗೆ ತಿಲಾಂಜಲಿ ಹಾಡಿ ಸದ್ಯ ಭಾರತದ ಬೆಂಬಲ ಇಸ್ರೇಲ್‌ ಕಡೆಗೆ ವಾಲಿದೆ.

ಕಳೆದ ಕೆಲವು ವರ್ಷಗಳಿಂದ ಭಾರತ ಇಸ್ರೇಲ್‌ ಪ್ಯಾಲಿಸ್ತೇನ್‌ ಕುರಿತಾದ ಹೇಳಿಕೆಗೆ ಚಿಕ್ಕ ಅಸಮ್ಮತಿಯನ್ನು ಸೂಚಿಸುತ್ತಿತ್ತು. ಹಾಗೇ ಪ್ಯಾಲಿಸ್ತೇನ್‌ ನಡೆಗೂ ವಿರೋಧವನ್ನು ಆಕ್ಷೇಪವನ್ನು ವ್ಯಕ್ತಪಡಿಸುತ್ತ ಬಂದಿದೆ. ಹಿಂದೆ ಪ್ಯಾಲಿಸ್ತೇನ್‌ ನ ಚಟುವಟಿಕೆಗಳು ಇಸ್ರೇಲ್‌ ವಿರುದ್ಧದ ಪ್ರತಿರೋಧ ಎಂದು ಹೇಳಿ ಸಮರ್ಥಿಸುತ್ತಿದ್ದ ಭಾರತ ಈಗ ಆ ನಡೆಯನ್ನು ಕೈ ಬಿಟ್ಟಿದೆ. ಕೆಲವು ಕಾಲ ಪ್ಯಾಲಿಸ್ತೇನ್‌ ಪರವಾಗಿ ವಿಶ್ವ ಸಂಸ್ಥೆಯಲ್ಲಿ ಮತ ಚಲಾಯಿಸುತ್ತಿದ್ದ ಭಾರತ ಮುಂದೆ ಯಾವ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಲಿದೆ ಎನ್ನುವುದು ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ಸಂಬಂಧವನ್ನು ನಿರ್ಧರಿಸಲಿದೆ.

ಭಾರತದ ವಿದೇಶಾಂಗ ನೀತಿಯು ಕೇವಲ ಅಂತರಾಷ್ಟೀಯ ಸಂಬಂಧವನ್ನು ಮಾತ್ರ ಅವಲಂಬಿಸಿಲ್ಲ. ಬದಲಾಗಿ ದೇಶದ ಆಂತರಿಕ ವಿಷಯಗಳ ಮೇಲೂ ಪ್ಯಾಲಿಸ್ತೇನ್‌ ವಿಷಯ ಪರಿಣಾಮ ಬೀರಲಿದೆ. ಭಾರತದ 30 ಕೋಟಿಗೂ ಮೀರಿದ ಮುಸ್ಲೀಂ ಸಮುದಾಯದ ಹಿತಾಸಕ್ತಿಯ ಮೇಲೆ ಭಾರತದ ಬದಲಾದ ಇಸ್ರೇಲ್‌ ಪರವಾದ ನಿಲುವು ಪರಿಣಾಮ ಬೀರಲಿದೆ. ಜೊತೆಗೆ ಆಂತರಿಕವಾಗಿ ಭಾರತದಲ್ಲಿರು ದೊಡ್ಡ ಪ್ರಮಾಣದ ಮುಸ್ಲೀಂ ಸಮುದಾಯದಲ್ಲಿ ಅಭದ್ರತೆಯನ್ನು ಹುಟ್ಟಿಸುವ ಸಾಧ್ಯತೆ ಕೂಡ ಇದೆ. ಇದರ ಜತೆಗೆ  ಮಧ್ಯ ಏಷ್ಯಾದಲ್ಲಿ ಕೆಲಸ ಮಾಡುತ್ತಿರುವ ಭಾರತದ 60 ಲಕ್ಷ ಉದ್ಯೋಗಿಗಳ ಮೇಲೂ ಇದರ ಪರಿಣಾಮಗಳು ಉಂಟಾಗಲಿವೆ.

ಅರಬ್‌ ರಾಷ್ಟ್ರಗಳ ಇದುವರೆಗಿನ ಇಸ್ರೇಲ್‌ ಕುರಿತಾದ ದ್ವೇಷ ಕಡಿಮೆಯಾಗುತ್ತಿದೆ. ಯುಎಇ ಜೋರ್ಡಾನ್‌ ಮುಂತಾದ ರಾಷ್ಟ್ರಗಳು ಈಗ ಈಜಿಪ್ಟ್‌ ಜೊತೆಗೆ ಕೈಜೋಡಿಸಿದ್ದು ಇಸ್ರೇಲ್‌ ಬಗೆಗಿನ ತಮ್ಮ ನಿಲುವನ್ನು ಬದಲಿಸಿಕೊಂಡಿವೆ. ಅರಬ್‌ ವಲಯದಲ್ಲಿ ಹೆಚ್ಚುತ್ತಿರುವ ಐಎಸ್‌ಐಎಸ್‌ ಮತ್ತು ಹಮಾಸ್‌ ಪ್ರಭಾವವನ್ನು ತಗ್ಗಿಸಲು ಈಗ ಅರಬ್‌ ರಾಷ್ಟ್ರಗಳು ಇಸ್ರೇಲ್‌ ಕಡೆ ನಿಧಾನಕ್ಕೆ ವಾಲುತ್ತಿವೆ. ಜೊತೆಗೆ ಅಮೆರಿಕ ಪ್ರಭಾವವನ್ನು ಇದರಲ್ಲಿ ಅಲ್ಲಗಳೆಯುವಂತಿಲ್ಲ.

ಪಶ್ಚಿಮ ಏಷ್ಯಾದ ಈ ಎಲ್ಲ ಬೆಳವಣಿಗೆಗಳ ನಡುವೆ ಭಾರತ ಇಸ್ರೇಲ್ ಕಡೆ ವಾಲುತ್ತಿರುವ ಬೆಳವಣಿಗೆ ಮುಂದಿನ ದಿನಗಳಲ್ಲಿ  ಹಲವಾರು ಬಿಕ್ಕಟ್ಟುಗಳಿಗೆ ಮತ್ತು ಇರಾನ್‌ ಮತ್ತು ಭಾರತ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಮಿಲಿಟರಿ ತಂತ್ರಜ್ಞಾನ ಮತ್ತು ಉಪಕರಣಗಳಿಗೆ ಇಸ್ರೇಲ್‌ ಮೇಲಿನ ಅತಿಯಾದ ಅವಲಂಬನೆ ಕೂಡ ಭಾರತದ ಅಂತಾಷ್ಟ್ರೀಯ ಸಂಬಂಧಗಳ ಮೇಲೆ ದೀರ್ಘಕಾಲದ  ಪರಿಣಾಮವನ್ನು ಬೀರಲಿದೆ.

ಭಾರತ ಬಹಿರಂಗವಾಗಿ ಇಸ್ರೇಲ್‌ ಗೆ ಬೆಂಬಲವನ್ನು ನೀಡುತ್ತಿದ್ದರೂ ಇಸ್ರೇಲ್‌ ಮಾತ್ರ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಯಾಕೆಂದರೆ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಸಂಘರ್ಷದ ನಂತರ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜಗತ್ತಿನ ಇಪ್ಪತ್ತು ರಾಷ್ಟ್ರಗಳಿಗೆ ಇಸ್ರೇಲ್‌ ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು. ಆದರೆ ಆ ಇಪ್ಪತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಹೆಸರು ಇರಲಿಲ್ಲ. ಇದು ಇಸ್ರೇಲ್‌ ಭಾರತವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಹೇಳುತ್ತದೆ.

ಸಮತೋಲದ ಅಂತರಾಷ್ಟ್ರೀಯ ನೀತಿಯ ಅಗತ್ಯತೆ

ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಬಿಕ್ಕಟ್ಟಿನ ನಂತರ ವಿಶ್ವ ಸಂಸ್ಥೆಯಲ್ಲಿ ನಡೆದ ಮೂರು ಸಭೆಗಳು ಭಾರತ ಇಸ್ರೇಲ್‌ ಪರವಾದ ನಿಲುವನ್ನು ತಾಳಿರುವುದನ್ನು ಬಹಿರಂಗಗೊಳಿಸಿದೆ. ಆದರೆ ಇಸ್ರೇಲ್‌ ಪರವಾದ ಭಾರತ ನಿಲುವು ಹೆಚ್ಚು ಅಪಾಯಕಾರಿಯಾಗಿದೆ. ಜೊತೆಗೆ ಭಾರತದ ಒಳಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದುತ್ವದ ಪ್ರೊಪಗೆಂಡಾದ ಕುರಿತು ಹಲವು ದೇಶಗಳು ಕಳವಳವನ್ನು ವ್ಯಕ್ತಪಡಿಸಿವೆ. ಇಸ್ರೇಲ್‌ ಜೊತೆಗಿನ ಅತಿಯಾದ ನಿಕಟತೆ ಮುಸ್ಲೀಮ್‌ ರಾಷ್ಟ್ರಗಳಿಗೆ ಮತ್ತು ತೈಲ ಸಂಪದ್ಭರಿತವಾದ ಅರಬ್‌ ರಾಷ್ಟ್ರಗಳಿಗೆ ಮುಸ್ಲೀಂ ವಿರೋಧಿ ಜೂವ್ಸ್-ಹಿಂದು ಒಕ್ಕೂಟದಂತೆ ಬಿಂಬಿತವಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಭಾರತ ಇಷ್ಟು ವರ್ಷದವರೆಗೆ ಇಸ್ರೇಲ್‌ ಪ್ಯಾಲಿಸ್ತೇನ್ ವಿಚಾರದಲ್ಲಿ ಪಾಲಿಸಿಕೊಂಡು ಬಂದ ಸಮತೋಲನ ನಡೆಯನ್ನೇ ಮುಂದುವರೆಸಿಕೊಂಡು ಹೋಗುವುದು ಭಾರತದ‌ ದೃಷ್ಟಿಯಿಂದ ಅನುಕೂಲಕರ ವಿದೇಶಾಂಗ ನೀತಿಯಾಗಿರಲಿದೆ.

ಭಾರತ ಬಹುದೀರ್ಘ ಕಾಲದಿಂದಲೂ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಹಿಂಸೆ ಮತ್ತು ಸಂಘರ್ಷಗಳನ್ನು ತ್ಯಜಿಸಿ ಮಾತುಕತೆಯ ಮೂಲಕ ಭೌಗೋಳಿಕ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗಬೇಕು. ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಇರಡು ದೇಶಗಳು ಸಮಾನ ಸಾರ್ವಭೌಮ ರಾಷ್ಟ್ರಗಳೆಂದು ಎರಡೂ ಕಡೆಯವರು ಒಪ್ಪಬೇಕು ಎಂದು ಪ್ರತಿಪಾದಿಸುತ್ತ ಬಂದಿದೆ. ಭಾರತದ ಈ ವಿದೇಶಾಂಗ ನೀತಿ ಅತ್ಯಂತ ಜಾಣ್ಮೆಯದು ಮತ್ತು ಅಮೆರಿಕ ಮುಂತಾದ ದೇಶಗಳ ನಿಲುವಿಗಿಂತ ಹೆಚ್ಚು ಸಮತೋಲನದಿಂದ ಕೂಡಿದೆ. ಭಾರತ ಇಸ್ರೇಲ್‌ ಕಡೆಗೆ ವಾಲುವುದಕ್ಕಿಂತ ಇಸ್ರೇಲ್‌ ಪ್ಯಾಲಿಸ್ತೇನ್‌ ನಡುವೆ ಸಮತೋಲನದ ಸಂಬಂಧ ಮುಂದುವರೆಸಿಕೊಂಡು ಹೋಗುವುದು ಭಾರತದ ವಿದೇಶಾಂಗ ನೀತಿಯನ್ನು ಹೆಚ್ಚು ಆರೋಗ್ಯಕರವಾಗಿ ಇಡಲಿದೆ.

ಇಸ್ರೇಲ್‌ ಪ್ಯಾಲಿಸ್ತೇನ್‌ ಎರಡನ್ನೂ ನಿರಾಶೆಗೊಳಿಸಿದ ಭಾರತ

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಟ್ವೀಟ್‌ ಮತ್ತು ಪ್ಯಾಲಿಸ್ತೇನ್‌ ವಿದೇಶಾಂಗ ಮಂತ್ರಿ ರೈದ್‌ ಮಲ್ಕಿ ಅವರು ಎಸ್‌ ಜೈಶಂಕರ್‌ ಅವರಿಗೆ ಬರೆದ ವಿಷಾದದ ಪತ್ರದಿಂದ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿರುವುದು ಕಾಣುತ್ತದೆ. ಇಂತ ಸಂಪೂರ್ಣವಾಗಿ ಇಸ್ರೇಲ್‌ ಪರ ನಿಲುವನ್ನು ತಾಳಲಾಗದೇ ಅತ್ತ ತನ್ನ ಹಿಂದಿನ ಟು ಸ್ಟೇಟ್‌ ಪಾಲಿಸಿಯನ್ನು ಮುಂದುವರೆಸಿಕೊಂಡು ಹೋಗಲಾಗದೆ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಎರಡೂ ದೇಶಗಳಿಗೂ ನಿರಾಸೆಯನ್ನುಂಟುಮಾಡಿದೆ.

ಭಾರತದ ತನ್ನ ಈ ಹೊಸ ವಿದೇಶಾಂಗ ನೀತಿಯನ್ನು ಕೈಬಿಟ್ಟು ಮಧ್ಯ ಏಷ್ಯಾ ರಾಷ್ಟ್ರಗಳಿಗೆ ವಿಶೇಷ ರಾಯಭಾರಿಯನ್ನು ನೇಮಿಸಿ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ನಡುವೆ ಹಳಸಿರುವ ಭಾರತದ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವಂತೆ ನೋಡಿಕೊಳ್ಳುವುದೊಂದೇ ಭಾರತದ ಮುಂದಿರುವ ಸದ್ಯದ ಆಯ್ಕೆಯಾಗಿದೆ.

ಮೂಲ : ದಿ ವೈರ್‌ – ಶಶಿ ತರೂರ್

ಅನುವಾದ: ರಾಜೇಶ್ ಹೆಬ್ಬಾರ್


ಇದನ್ನೂ ಓದಿ: 20 ಸಾವಿರ ಕೋಟಿ ರೂಪಾಯಿ ಕೊರೊನಾ ಪ್ಯಾಕೇಜ್ ಘೋಷಿಸಿದ ಕೇರಳ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಮ್ಮ ವಿದೇಶಾ0ಗ ಸ್ವಲ್ಪ ಮಟ್ಟಿಗೆ ಅಮೇರಿಕಾ ದತ್ತ ವಾಳಿದಂತೆ ಕಂಡರೂ, ಈಗಲೂ ಸಮತೋಲನ ಮತ್ತು ಜಾಣ್ಮೆಯ ನೆಲೆಗತ್ತಿನಲ್ಲೇ ರೂಪಿತವಾಗಿದೆ.

    ಭಾರತೀಯ ಮುಸ್ಲಿಮರು ಅಭದ್ರತೆಗೆ ಒಳಗಾಗುತ್ತಾರೆ ಎನ್ನುವದಂತೂ ಶುದ್ಧ ಸುಳ್ಳು ಮತ್ತು ಅವಿವೇಕಿತನದ ಉತೃಷ್ಟಾತೆ

LEAVE A REPLY

Please enter your comment!
Please enter your name here

- Advertisment -

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...