Homeಮುಖಪುಟಸಿಂಧೂ ಒಪ್ಪಂದ ರದ್ದತಿ ನಂತರ ಪಂಜಾಬ್, ಹಿಮಾಚಲದ ಪ್ರಮುಖ ಅಣೆಕಟ್ಟುಗಳಲ್ಲಿ ಭದ್ರತೆ ಹೆಚ್ಚಳ

ಸಿಂಧೂ ಒಪ್ಪಂದ ರದ್ದತಿ ನಂತರ ಪಂಜಾಬ್, ಹಿಮಾಚಲದ ಪ್ರಮುಖ ಅಣೆಕಟ್ಟುಗಳಲ್ಲಿ ಭದ್ರತೆ ಹೆಚ್ಚಳ

- Advertisement -
- Advertisement -

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸಿದ ನಂತರ ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಸಿಂಧೂ ಜಲಾನಯನ ಪ್ರದೇಶದಾದ್ಯಂತದ ಇರುವ ಪ್ರಮುಖ ಅಣೆಕಟ್ಟುಗಳು ಮತ್ತು ಪ್ರಧಾನ ಕಾಮಗಾರಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ಸಿಂಧೂ ಒಪ್ಪಂದ ರದ್ದತಿ

ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ (ಬಿಬಿಎಂಬಿ) ನಿರ್ವಹಿಸುವ ಭಾಕ್ರಾ ಮತ್ತು ಪಾಂಗ್ ಅಣೆಕಟ್ಟುಗಳು ಮತ್ತು ಪಂಜಾಬ್ ನೀರಾವರಿ ಇಲಾಖೆಯಿಂದ ನಿರ್ವಹಿಸಲ್ಪಡುವ ರಂಜಿತ್ ಸಾಗರ್ ಅಣೆಕಟ್ಟು ಯೋಜನೆ (ಥೀನ್ ಅಣೆಕಟ್ಟು) ಮತ್ತು ಎರಡೂ ರಾಜ್ಯಗಳಲ್ಲಿನ ಹಲವಾರು ಪ್ರಧಾನ ಕಾಮಗಾರಿಗಳಿಗೆ ಭದ್ರತಾ ಬೆದರಿಕೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಗುರುತಿಸಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

“ಅಣೆಕಟ್ಟುಗಳು ಭಯೋತ್ಪಾದಕ ದಾಳಿಗಳಿಗೆ ನಿರೋಧಕವಾಗಿರಬಹುದು, ಆದರೆ ಬಾಹ್ಯ ರಚನೆಗಳು, ಪ್ರಸರಣ ಮಾರ್ಗಗಳು, ಇತರ ಸ್ಥಾಪನೆಗಳು ಮತ್ತು ಉದ್ಯೋಗಿಗಳನ್ನು ಗುರಿಯಾಗಿಸು ಸಾಧ್ಯತೆಯಿದೆ. ಭೌತಿಕ ಹಾನಿಗಿಂತ ಹೆಚ್ಚಾಗಿ, ಒಂದು ಸಣ್ಣ ಘಟನೆಯೂ ಸಹ ಭಯವನ್ನು ಉಂಟುಮಾಡಲಿದೆ” ಎಂದು ಹೆಸರು ಬಹಿರಂಗಪಡಿಸಲು ಬಯಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು TNIE ವರದಿ ಮಾಡಿದೆ.

ಪಂಜಾಬ್‌ನಲ್ಲಿ ಪೊಲೀಸ್ ಇಲಾಖೆಯ ಕಟ್ಟಡಗಳ ಮೇಲೆ ಗ್ರೆನೇಡ್‌ ದಾಳಿಯ ಘಟನೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಅಂತಹ 16 ಘಟನೆಗಳು ವರದಿಯಾಗಿವೆ ಮತ್ತು ರಾಜ್ಯ ಪೊಲೀಸರು ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ, ಇದರಿಂದಾಗಿ ಹೆಚ್ಚಿನ ಭದ್ರತಾ ಕ್ರಮಗಳು ಅಗತ್ಯವಾಗಿವೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ಬಿಯಾಸ್ ಸಟ್ಲೆಜ್ ಲಿಂಕ್ ಯೋಜನೆಯ ಭದ್ರತೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ವಹಿಸಿಕೊಂಡಿತ್ತು. ಅಲ್ಲಿ ಅರೆಸೈನಿಕ ಪಡೆಯ 235 ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ಲಕ್ಷಾಂತರ ಜನರಿಗೆ ಪ್ರಯೋಜನವಾಗುವ ನೀರಾವರಿ, ಪ್ರವಾಹ ನಿಯಂತ್ರಣ ಮತ್ತು ವಿದ್ಯುತ್ ಉತ್ಪಾದನೆಗೆ ಈ ಯೋಜನೆ ಅತ್ಯಗತ್ಯವಾಗಿದೆ. ಭಾಕ್ರಾ ಅಣೆಕಟ್ಟಿನಲ್ಲಿ ಕೂಡಾ ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಪೊಲೀಸರ ಬದಲಿಗೆ ಸಿಐಎಸ್‌ಎಫ್ ಅನ್ನು ನಿಯೋಜಿಸಲು ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸಿಂಧೂ ಒಪ್ಪಂದ ರದ್ದತಿ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ರಾಜಸ್ಥಾನ | ಮಸೀದಿ ಹೊರಗೆ ಗುಂಪುಕಟ್ಟಿ ಪ್ರಚೋದನಕಾರಿ ಘೋಷಣೆ ಕೂಗಿದ ಬಿಜೆಪಿ ಶಾಸಕ; ಎಫ್‌ಐಆರ್

ರಾಜಸ್ಥಾನ | ಮಸೀದಿ ಹೊರಗೆ ಗುಂಪುಕಟ್ಟಿ ಪ್ರಚೋದನಕಾರಿ ಘೋಷಣೆ ಕೂಗಿದ ಬಿಜೆಪಿ ಶಾಸಕ; ಎಫ್‌ಐಆರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -