Homeಮುಖಪುಟನಿಮ್ಮ ಸ್ನೇಹಿತರೊಂದಿಗೆ ಹೀಗೆ ನಡೆದುಕೊಂಡಲ್ಲಿ ಅವರಿಗೂ ನಿಮ್ಮ ಮೇಲೆ ಗೌರವ ಮೂಡುತ್ತದೆ

ನಿಮ್ಮ ಸ್ನೇಹಿತರೊಂದಿಗೆ ಹೀಗೆ ನಡೆದುಕೊಂಡಲ್ಲಿ ಅವರಿಗೂ ನಿಮ್ಮ ಮೇಲೆ ಗೌರವ ಮೂಡುತ್ತದೆ

- Advertisement -
- Advertisement -

ಜೀವನ ಕಲೆಗಳು: ಅಂಕಣ -17

ಪರಸ್ಪರ ವೈಯುಕ್ತಿಕ ಸಂಬಂಧಗಳು (ಇಂಟರ್-ಪರ್ಸನಲ್ ರಿಲೇಶನ್ಷಿಪ್ ಅಥವಾ ಟ್ರಾನ್ಸಾಕ್ಷನಲ್ ಎನಾಲಿಸಿಸ್)

ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳ ನಡುವಣ ಗಾಢವಾದ ಸಂಬಂಧವನ್ನು ಪರಸ್ಪರ ವೈಯುಕ್ತಿಕ ಸಂಬಂಧ (ಇಂಟರ್-ಪರ್ಸನಲ್ ರಿಲೇಶನ್ಷಿಪ್) ಎಂದು ಕರೆಯಬಹುದು.

ಈ ವ್ಯಕ್ತಿಗಳು:

·         ಒಂದೇ ಮನೆತನದವರಾಗಿರಬಹುದು (ತಂದೆ-ತಾಯಿ-ಮಕ್ಕಳು, ಚಿಕ್ಕಪ್ಪ-ದೊಡ್ಡಪ್ಪ-ಮಾವ ಇತ್ಯಾದಿ).

·         ಒಂದೇ ಜಾತಿ/ಧರ್ಮಕ್ಕೆ ಸೇರಿದವರಾಗಿರಬಹುದು.

·         ಸಹೋದ್ಯೋಗಿ/ಸಹಪಾಠಿಗಳಾಗಿರಬಹುದು.

·         ಒಂದೇ ಕಾರ್ಯತಂಡಕ್ಕೆ ಸೇರಿದವರು/ಬೆಂಬಲಿಗರಾಗಿರಬಹುದು.

·         ಸ್ನೇಹಿತರಾಗಿರಬಹುದು.

·         ಗುರು-ಶಿಷ್ಯ ಸಂಬಂಧವಾಗಿರಬಹುದು.

·         ಮದುವೆ/ಪ್ರೇಮ ಸಂಬಂಧದವರಾಗಿರಬಹುದು.

ಕಾರಣಾಂತರಗಳಿಂದ, ಕಾಲ ಕ್ರಮೇಣ ಇವರ ಪರಸ್ಪರ ವೈಯುಕ್ತಿಕ ಸಂಬಂಧ ಇನ್ನೂ ಬಲಶಾಲಿಯಾಗುತ್ತ ಹೋಗಬಹುದು ಅಥವಾ ಸಡಿಲವಾಗಬಹುದು. ಆದರೆ ಈ ಸಂಬಂಧ ಗಟ್ಟಿಯಾದ ಬುನಾದಿಯ ಮೇಲೆ ನಿಂತಿದ್ದರೆ ಕಾಲ, ದೇಶ, ದೂರ, ಸಮಯದ ಹೊಡೆತಕ್ಕೆ ಬಗ್ಗದೆ, ಗಟ್ಟಿಯಾಗಿಯೇ ಉಳಿಯುತ್ತದೆ.

ಈ ರೀತಿಯ ಸಂಬಂಧದಲ್ಲಿ ಇರುವವರು:

·         ಯಾವುದಾದರೊಂದು ಸಮಾನ ಗುರಿ ಅಥವಾ ಉದ್ದೇಶ ಹೊಂದಿರಬೇಕು.

·         ಅವರೆಲ್ಲರೂ ಏಕ ಮನಸ್ಕಅಥವಾ ಒಂದೇ ತರಹದ ಯೋಚನೆಯುಳ್ಳವರಾಗಿರಬೇಕು.

·         ಒಂದೇ ತರಹದ ಹಿನ್ನೆಲೆಯಿಂದ ಬಂದವರಾದರೆ ಇನ್ನೂ ಉತ್ತಮ.

·         ಒಬ್ಬರ ವಿಚಾರವನ್ನು ಇನ್ನೊಬ್ಬರು ಗೌರವಿಸುವಂತಹವರಾಗಿ, ನಡುವೆ ನಂಬಿಕೆಯ ಸೇತುವೆ ಇರಬೇಕು.

·         ಇಬ್ಬರ ನಡುವೆ ಆರೋಗ್ಯಕರ ಸಂಬಂಧವಿರಬೇಕು.

·         ಇಬ್ಬರ ನಡುವಿನ ಸಂಬಂಧ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿರಬೇಕು.

ವ್ಯಕ್ತಿಗಳು ಎಷ್ಟೇ ಸಭ್ಯ/ಸುಶಿಕ್ಷಿತರಾಗಿದ್ದರೂ ಸಹ ಭಿನ್ನಾಭಿಪ್ರಾಯ ಬರುವುದು ಸಹಜ. ಸಂಬಂಧ ನಿರ್ವಹಣೆಯ ಕಲೆ ತಿಳಿದಿದ್ದಲ್ಲಿ ಸಂಬಂಧವನ್ನು ಸುಗಮವಾಗಿ ಮುಂದುವರೆಸಬಹುದು.

ಸಂಬಂಧಗಳ ಸಮರ್ಪಕ ನಿರ್ವಹಣೆಗೆ ಹಲವು ಸರಳ ವಿಧಾನಗಳು:

ಬೇರೆಯವರನ್ನು ದೂರಬೇಡಿ, ಅಲೋಚನೆ ಅಥವಾ ಅವಮಾನಿಸಬೇಡಿ. ಬೇರೆಯವರು ನಿಮ್ಮ ಬಗ್ಗೆ ಅದೇ ರೀತಿ ನಡೆದುಕೊಂಡಲ್ಲಿ ನಿಮಗೆ ಹೇಗೆ ಸರಿಹೊಂದುವುದಿಲ್ಲವೋ, ಅದೇ ರೀತಿ ಅವರಿಗೂ ಬೇಸರ ಆಗುತ್ತದೆ ಎಂಬುದನ್ನು ಅರಿಯಿರಿ. ಬೇರೆಯವರ ಬಗ್ಗೆ ನಿಮ್ಮ ಅನಿಸಿಕೆ/ಪ್ರತ್ಯಾದಾನ (ಫೀಡ್-ಬ್ಯಾಕ್) ನೀಡಲು ಬೇಕಾದಷ್ಟು ಸರಳ ಮಾರ್ಗಗಳಿವೆ.

ಬೇರೆಯವರ ಕೆಲಸ / ವ್ಯಕ್ತಿತ್ವಕ್ಕೆ ಮೆಚ್ಚುಗೆ ತೋರಿಸಿ. ಅವರ ಒಳ್ಳೆಯ ಗುಣ/ಕೆಲಸ ಕಂಡಕೂಡಲೇ ಅವರನ್ನು ಅಭಿನಂದಿಸಿ. ಕೇವಲ ತೋರಿಕೆಗೆ ಮಾಡದೆ ಪ್ರಾಮಾಣಿಕವಾಗಿ ನಿಮ್ಮ ಮೆಚ್ಚುಗೆ ತೋರಿಸಿ.

ಹಸನ್ಮುಖವಿರಲಿ. ಒಂದು ಮುಗುಳ್ನಗೆ ನಿಮ್ಮ ಮೌಲ್ಯವನ್ನು ವೃದ್ಧಿಸುತ್ತದೆ.

ಇತರರು ಹೇಳುತ್ತಿರುವುದರಲ್ಲಿ/ ಅವರ ವ್ಯಕ್ತಿತ್ವದಲ್ಲಿ ಆಸಕ್ತಿ ತೋರಿಸಿ. ಮುಕ್ತವಾಗಿ ಒಪ್ಪಿಕೊಳ್ಳದಿದ್ದರೂ ಸಹ ಎಲ್ಲರೂ ತಮ್ಮ ಬಗ್ಗೆ ಕೊಚ್ಚಿಕೊಳ್ಳಲು ಇಷ್ಟಪಡುತ್ತಾರೆ, ಅಂತಹ ಸನ್ನಿವೇಶದಲ್ಲಿ ಅವರು ಹೇಳುವುದನ್ನು ಆಸಕ್ತಿಯಿಂದ ಸಕ್ರಿಯವಾಗಿ ಕೇಳಿಸಿಕೊಳ್ಳಿ.

ಇತರರನ್ನು “ಮುಖ್ಯ ವ್ಯಕ್ತಿ” ಎಂಬಂತೆ ಗಮನಿಸಿ. ಧನ್ಯವಾದ ತಿಳಿಸಿ.

ಎಲ್ಲ ಸಮಯದಲ್ಲೂ ವಾದಕ್ಕೆ ಇಳಿಯಬೇಡಿ. ನೀವೂ ತಪ್ಪು ಮಾಡಬಹುದು ಎಂಬುದನ್ನು ಮರೆಯಬೇಡಿ. ವಾದಕ್ಕೆ ಇಳಿಯದೆ, ಕೇವಲ ಸುಮ್ಮನಿದ್ದಲ್ಲಿ, ಅವರು ಹೇಳುತ್ತಿರುವುದು ನಿಮಗೆ ಸರಿಯಾಗಿ ಕೇಳುತ್ತದೆ, ತಪ್ಪು ಯಾರದು ಎಂಬುದೂ ಅರ್ಥವಾಗುತ್ತದೆ.

ನೀವು ತಪ್ಪು ಮಾಡಿದ್ದಲ್ಲಿ ಒಪ್ಪಿಕೊಳ್ಳಿ. ತಪ್ಪನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿ ಸಂಬಂಧ ಕೆಡಿಸಿಕೊಳ್ಳಬೇಡಿ.

ಕೋಪವನ್ನು ನಿಯಂತ್ರಿಸಿಕೊಳ್ಳಿ. ಕೋಪದ ಭರದಲ್ಲಿ ತೆಗೆದುಕೊಂಡ ನಿರ್ಧಾರ ಎಂದೂ ಸರಿಯಾಗಿರುವುದಿಲ್ಲ. ಮನಸ್ಸು ಶಾಂತವಾಗುವವರೆಗೆ ನಿಮ್ಮ ನಿರ್ಧಾರ ತಡೆಹಿಡಿಯಿರಿ.

ಆದೇಶದ ಬದಲಿಗೆ ಸಲಹೆ ನೀಡಿ. ಬೇರೆಯವರ ಆದೇಶದಂತೆ ನಡೆದುಕೊಳ್ಳಲು ಎಲ್ಲರಿಗೂ ಸರಿ ಎನಿಸುವುದಿಲ್ಲ ಆದ್ದರಿಂದ ನಿಮ್ಮ ಆದೇಶವನ್ನೂ ಸಲಹೆ ಎಂಬಂತೆ ತಿಳಿಸಿ.

ಈ ಸರಳ ವಿಧಾನಗಳಿಂದ ಎಲ್ಲಾ ಪರಸ್ಪರ ಸಂಬಂಧಗಳು ಸಾಕಷ್ಟು ಉತ್ತಮಗೊಳ್ಳುತ್ತವೆ. ಆದರೆ ಕೆಲವು ವಿಶೇಷ (ಗುರು-ಶಿಷ್ಯ, ಅಥವಾ ಪ್ರೇಮ) ಸಂಬಂಧಗಳಿಗೆ ಕೆಲವು ವಿಶೇಷ ನಿಯಮಗಳು ಅನ್ವಯಿಸುತ್ತವೆ.

ಗುರು ಶಿಷ್ಯರಿಬ್ಬರಿಗೂ ಇರಬೇಕಾದ ಕಲೆಗಳು: ತಾಳ್ಮೆ, ನಂಬಿಕೆ, ವಿಶ್ವಾಸ, ಮುಂದಿನ ಗುರಿಯ ಸ್ಪಷ್ಟತೆ ಮತ್ತು ಇಂದಿನ ವಾಸ್ತವಾಂಶದ ಅರಿವು.  ಗುರುವಿನಲ್ಲಿ ಇರಬೇಕಾದ ಕಲೆಗಳು: ಕಲಿಸಿ ಕ್ಷಮತೆ ಹೆಚ್ಚಿಸುವುದು, ತಪ್ಪನ್ನು ತಿದ್ದುವುದು, ಅಪಾಯದ ಬಗ್ಗೆ ಎಚ್ಚರಿಸುವುದು ಮತ್ತು ಅವಕಾಶಗಳನ್ನು ಹುಡುಕಿಕೊಡುವುದು. ಶಿಷ್ಯರಲ್ಲಿ  ಇರಬೇಕಾದ ಕಲೆಗಳು: ಗಮನವಿಟ್ಟು ಆದಷ್ಟು ಬೇಗ ಕಲಿಯುವುದು, ಮುಂತೊಡಗು (ಇನಿಷಿಯೇಟಿವ್ -ಮೊದಲ ಹೆಜ್ಜೆ), ಮತ್ತು ಸಂಬಂಧವನ್ನು ನಿಭಾಯಿಸುವುದು. ಗುರು-ಶಿಷ್ಯರಿಬ್ಬರೂ ತಮ್ಮ ಎಲ್ಲೆಗಳನ್ನು ಅರಿತು, ಮೀರದಂತೆ ವರ್ತಿಸಬೇಕು.

ಮದುವೆ ಪ್ರೇಮ ಸಂಬಂಧದಲ್ಲಿ ಪರಸ್ಪರ ಆಕರ್ಷಣೆ, ಸಾಮೀಪ್ಯ ಮತ್ತು ಬದ್ಧತೆ ಇರಬೇಕು. ಮೂರೂ ಅಂಶಗಳು ಹೆಚ್ಚಿದ್ದಷ್ಟು ಸಂಬಂಧವೂ ಬಲಶಾಲಿಯಾಗುತ್ತದೆ ಆದರೆ  ಯಾವುದೇ ಒಂದರಲ್ಲಿ ಕೊರತೆಯಾದರೂ ಸಹ ಸಂಬಂಧ ಕ್ಷೀಣವಾಗುತ್ತದೆ.

1967ರಲ್ಲಿ ಥಾಮಸ್ ಆಂಥೊನಿ ಹ್ಯಾರಿಸ್ ಬರೆದ ಸ್ವ-ಸಹಾಯ ಪುಸ್ತಕ “ಐ ಎಮ್ ಒಕೆ, ಯೂ ಆರ್ ಒಕೆ” (ನಾನೂ ಸರಿ, ನೀನೂ ಸರಿ) ಇದುವರೆಗೂ ಒಂದೂವರೆ ಕೋಟಿಗೂ ಹೆಚ್ಚು ಪ್ರತಿ ಮಾರಾಟವಾಗಿದ್ದು, ಎರಡು ವರ್ಷಗಳ ಕಾಲ ಅಮೇರಿಕದ ಬೆಸ್ಟ್-ಸೆಲ್ಲರ್ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಹ್ಯಾರಿಸ್ ಪರಸ್ಪರ ವೈಯುಕ್ತಿಕ ಸಂಬಂಧ ವ್ಯವಹಾರವನ್ನು ವಿಶ್ಲೇಷಿಸಿ, ವ್ಯಕ್ತಿಯ ಅಹಂ, ಸಂದರ್ಭಾನುಸಾರ, ಪೋಷಕ, ವಯಸ್ಕ ಮತ್ತು ಮಗುವಿನ (ಪೇರೆಂಟ್, ಅಡಲ್ಟ್ ಚೈಲ್ಡ್) ನಡತೆಯ ರೂಪಕ್ಕೆ ಮಾರ್ಪಾಡಾಗುತ್ತದೆ ಎನ್ನುತ್ತಾರೆ. ಹ್ಯಾರಿಸ್ ಅವರ ತತ್ವವಾದ ಡಾ. ಎರಿಕ್ ಬೆರ್ನ್ ಅವರ “ಟ್ರಾನ್ಸಾಕ್ಷನಲ್ ಎನಾಲಿಸಿಸ್” ನಿಂದ ಪ್ರಭಾವಿತಗೊಂಡಿದೆ. ಇದರ ಆಧಾರದ ಮೇಲೆ ಅವರು ನಾಲ್ಕು ಜೀವನದ ಸನ್ನಿವೇಶಗಳನ್ನು ವರ್ಣಿಸುತ್ತಾರೆ.ಈ ನಾಲ್ಕು ಸನ್ನಿವೇಶದ ಅರ್ಥವನ್ನು ವಿವಿಧ ಶ್ರಾಸ್ತಜÕರು ಬೇರೆಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ.

·         ನಾನು ಸರಿಯಿಲ್ಲ, ನೀನು ಸರಿ.

·         ನಾನು ಸರಿ, ನೀನು ಸರಿಯಿಲ್ಲ.

·         ನಾನೂ ಸರಿ, ನೀನೂ ಸರಿ.

·         ನಾನೂ ಸರಿಯಿಲ್ಲ, ನೀನೂ ಸರಿಯಿಲ್ಲ.

ಮೊದಲನೆಯದು, “ನಾನು ಸರಿಯಿಲ್ಲ, ನೀನು ಸರಿ” ಎನ್ನುವುದು ಮಕ್ಕಳ ಮನೋಭಾವ. ಇದರಲ್ಲಿ ತಮ್ಮನ್ನು ತಾವು ಕೀಳಾಗಿಯೂ, ಮಿಕ್ಕವರನ್ನು ಹೆಚ್ಚಾಗಿಯೂ ಕಾಣುತ್ತಾರೆ. ಚಿಕ್ಕಂದಿನಿಂದ ಬೆಳೆಯುವ ಸಮಯದಲ್ಲಿ ತಮ್ಮ ಪೋಷಕರಿಂದ, ಶಿಕ್ಷಕರಿಂದ, ಸಹಪಾಠಿಗಳಿಂದ ಅಥವಾ ಬೇರೆಯವರಿಂದ ಅವಮಾನಿತ/ಭಯಬೀತರಾಗಿರುವ ಅನುಭವಗಳು ಇದಕ್ಕೆ ಕಾರಣವಾಗಿರಬಹುದು. ಇವರು ಮಿಕ್ಕವರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಾರೆ.

ಎರಡನೆಯದು, “ನಾನು ಸರಿ, ನೀನು ಸರಿಯಿಲ್ಲ” ಎನ್ನುವ ಪೋಷಕರ ವಾದ. ಅದರಲ್ಲಿ ತಮ್ಮನ್ನು ತಾವು ಹೆಚ್ಚು, ಮಿಕ್ಕವರು ಕೀಳು ಎನ್ನುವ ಅಹಂಭಾವ. ಕೋಪದ ಸ್ವಭಾವ, ತಮ್ಮನ್ನು ತಾವು ಹೊಗಳಿಕೊಳ್ಳುವುದು, ಇತರರನ್ನು ದೂಷಿಸುವುದು ಮತ್ತು ಎಲ್ಲವೂ ತಮ್ಮಿಂದಲೇ ಸಾಧ್ಯ ಎನ್ನುವ ಮನೋಭಾವ. ಬಹಳಷ್ಟು ಕಂಪನಿಯ ಉನ್ನತ ವ್ಯವಸ್ಥಾಪಕರು ಈ ಜಾಲದಲ್ಲಿ ಸಿಲುಕಿ ಒದ್ದಾಡುತ್ತಾರೆ.

ಮೂರನೆಯದು, “ನಾನೂ ಸರಿ, ನೀನೂ ಸರಿ” ಎಂಬುದು ವಯಸ್ಕರ ನಿಲುವು. ತಮ್ಮನ್ನು ತಾವು ಸರಿ ಎಂದುಕೊಂಡರೂ ಇನ್ನೊಬ್ಬರನ್ನು ಕೀಳು/ಮೇಲು ಎಂದು ಪರಿಗಣಿಸದೆ ಜೀವನವನ್ನು ಆತ್ಮಸ್ಥೈರ್ಯದೊಂದಿಗೆ ಮುನ್ನಡೆಸುವ ವ್ಯಕ್ತಿಗಳು. ಭಿನ್ನಾಭಿಪ್ರಾಯ ಬಂದರೂ ಸಹ ಅದನ್ನು ಪರಿಹರಿಸಿಕೊಂಡು ಸಂತೋಷವಾಗಿರುವ ಜನ.

ನಾಲ್ಕನೆಯದಾದ “ನಾನೂ ಸರಿಯಿಲ್ಲ ನೀನೂ ಸರಿಯಿಲ್ಲ” ಎಂಬ ನಿಲುವು ಸ್ವಲ್ಪ ಅಪರೂಪ ಆದರೆ ಜನರು ತಮ್ಮ ತಪ್ಪುಗಳನ್ನು ಇತರರ ಮೇಲೆ ಹೊರೆಸಲು ಪ್ರಯತ್ನಿಸಿ, ವಿಫಲರಾದಾಗ ತೆಗೆದುಕೊಳ್ಳುವಂತಹ ನಿಲುವು. ದ್ರೋಹ, ಸೇಡು ಮುಂತಾದ ಕಾರಣಗಳಿಂದ ವ್ಯಕ್ತವಾಗಬಹುದಾದ ವಿಪರೀತ ಭಾವನೆ. ಇದನ್ನು ಯಾವ ಕಾರಣಕ್ಕೂ ಬೆಳೆಯಗೊಡಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...