Homeಮುಖಪುಟ‘ಇನ್ಫೋಸಿಸ್‌ ಎಡಪಂಥೀಯರಿಗೆ ಸಹಾಯ ಮಾಡುತ್ತಿದೆ’ - ಆರೆಸ್ಸೆಸ್‌‌ ಮುಖವಾಣಿ ಪತ್ರಿಕೆ ಆಕ್ರೋಶ

‘ಇನ್ಫೋಸಿಸ್‌ ಎಡಪಂಥೀಯರಿಗೆ ಸಹಾಯ ಮಾಡುತ್ತಿದೆ’ – ಆರೆಸ್ಸೆಸ್‌‌ ಮುಖವಾಣಿ ಪತ್ರಿಕೆ ಆಕ್ರೋಶ

- Advertisement -
- Advertisement -

ಬೆಂಗಳೂರು ಮೂಲದ ಇನ್ಫೋಸಿಸ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಒಕ್ಕೂಟ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ನೂತನ ಆದಾಯ ತೆರಿಗೆ ಪೋರ್ಟಲ್‌ಗಳು ಗೊಂದಲಕಾರಿಯಾಗಿವೆ ಎಂದು ಆರ್‌ಎಸ್‌ಎಸ್‌ ಮುಖವಾಣಿ ಪಾಂಚಜನ್ಯ ನಿಯತಕಾಲಿಕೆ ವಿಶೇಷ ವರದಿ ಮಾಡಿದೆ.

ಪಾಂಚಜನ್ಯ ತನ್ನ ಸೆ.5ರ ಸಂಚಿಕೆಯಲ್ಲಿ ಈ ಕುರಿತು ಪ್ರಧಾನ ಲೇಖನ ಬರೆದಿದ್ದು, ಮುಖಪುಟದಲ್ಲಿ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಭಾವಚಿತ್ರ ಹಾಗೂ ’ಸಾಖ್‌ ಔರ್‌ ಆಘಾತ್‌’ (ಖ್ಯಾತಿ ಮತ್ತು ಅಘಾತ) ಎಂಬ ಶೀರ್ಷಿಕೆಯನ್ನು ನೀಡಲಾಗಿದೆ ಎಂಬುದಾಗಿ ದಿ ಹಿಂದೂ ವರದಿ ಮಾಡಿದೆ.

ಇನ್ಫೋಸಿಸ್‌ ರೂಪಿಸಿರುವ ಈ ಪೋರ್ಟಲ್‌ಗಳು ಕಳಪೆಯಾಗಿದ್ದು, ತೆರಿಗೆ ಸಂಗ್ರಹವನ್ನು ತಗ್ಗಿಸುವಂತಿವೆ. ವ್ಯವಸ್ಥೆಯನ್ನು ಸುಲಭಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲೆಂದು ಸರ್ಕಾರ ಗುತ್ತಿಗೆ ನೀಡಿದರೆ, ವ್ಯವಸ್ಥೆಯನ್ನೇ ಗೊಂದಲಕಾರಿ ಮಾಡಲಾಗಿದೆ. ಸರ್ಕಾರ ಅನುಸರಿಸುವ ಕಡಿಮೆ ಮಟ್ಟದ ವಾಣಿಜ್ಯ ಹರಾಜು ಪ್ರಕ್ರಿಯೆ ಕುರಿತೂ ಪಾಂಚಜನ್ಯ ಪ್ರಶ್ನೆ ಎತ್ತಿದ್ದು, “ಇನ್ಫೋಸಿಸ್‌ ತನ್ನ ವಿದೇಶಿ ಗ್ರಾಹಕರಿಗೂ ಇದೇ ರೀತಿಯ ಕಳಪೆ ಸೇವೆಯನ್ನೇ ನೀಡುತ್ತದೆಯೇ?” ಎಂದೂ ಪ್ರಶ್ನಿಸಿದೆ.

ಮತ್ತೊಂದು ಕುತೂಹಲಕಾರಿ ಸಂಗತಿಯೇನೆಂದರೆ, ಮೋದಿ ಸರ್ಕಾರವನ್ನು ಟೀಕಿಸುವ ಎಡಪಂಥೀಯ ಶಕ್ತಿಗಳಿಗೆ, ಸತ್ಯ ಶೋಧಕ ಸಂಸ್ಥೆಗಳಿಗೆ, ಸುದ್ದಿ ಪೋರ್ಟಲ್‌ಗಳಿಗೆ ಇನ್ಫೋಸಿಸ್‌ ಸಂಸ್ಥೆಯು ಹಣಕಾಸು ಒದಗಿಸುತ್ತಿದೆ ಎಂದು ಪಾಂಚಜನ್ಯ ಆರೋಪಿಸಿದೆ. ಇನ್ಫೋಸಿಸ್‌ ಇತ್ತ ಸರ್ಕಾರದ ಪೋರ್ಟಲ್‌ ಅನ್ನೂ ನಿರ್ವಹಿಸುತ್ತಿರುವುದು ಪೋರ್ಟಲ್‌ನ ಸುರಕ್ಷತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಆರೋಪಿಸಿದೆ.

ಆದರೆ ಆರೆಸ್ಸೆಸ್‌ ಲೇಖನವನ್ನು ನಿರಾಕರಿಸಿದೆ. ಇದು ವ್ಯಕ್ತಿಗತ ಲೇಖನವಾಗಿದ್ದು, ಇದಕ್ಕೂ ಆರೆಸ್ಸೆಸ್‌ಗೂ ಯಾವುದೆ ಸಂಬಂಧವಿಲ್ಲ ಎಂದು ಆರೆಸ್ಸೆಸ್‌ ಹೇಳಿದೆ.

ಇದನ್ನೂ ಓದಿ: ಗುಜರಾತ್‌ ಚುನಾವಣೆ: ಅಚ್ಛೇದಿನ್‌ ಬದಿಗೆ ಸರಿದು, ಮುನ್ನಲೆಗೆ ಬರಲಿದೆ ಹಿಂದುತ್ವ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...