Homeಕರ್ನಾಟಕಒಳಮೀಸಲಾತಿ: ಸರ್ಕಾರದ ನಿರ್ಲಕ್ಷ್ಯ, ಇಂದು ಮಧ್ಯರಾತ್ರಿಯಿಂದ ಹೋರಾಟಗಾರರ ಅಮರಣಾಂತ ಉಪವಾಸ ಸತ್ಯಾಗ್ರಹ

ಒಳಮೀಸಲಾತಿ: ಸರ್ಕಾರದ ನಿರ್ಲಕ್ಷ್ಯ, ಇಂದು ಮಧ್ಯರಾತ್ರಿಯಿಂದ ಹೋರಾಟಗಾರರ ಅಮರಣಾಂತ ಉಪವಾಸ ಸತ್ಯಾಗ್ರಹ

- Advertisement -
- Advertisement -

ಸರ್ಕಾರಕ್ಕೆ ಎಚ್ಚರಿಕೆ, ಜನತೆಗೆ ಕರೆ

ಬೆಂಗಳೂರು: ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿಯೂ ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸುತ್ತಿರುವ ಶೋಷಿತ ಸಮುದಾಯಗಳಿಗೆ ಇನ್ನೂ ಸಮಾನ ಹಕ್ಕುಗಳು ದಕ್ಕಿಲ್ಲ ಎಂದು ಆರೋಪಿಸಿ, ಒಳಮೀಸಲಾತಿ ಹೋರಾಟಗಾರರು ಆಗಸ್ಟ್ 14ರ ಮಧ್ಯರಾತ್ರಿಯಿಂದಲೇ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ ಎಂದು ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್‌ ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ದಶಕಗಳಿಂದಲೂ ಕೇಳಿ ಬರುತ್ತಿರುವ ಒಳಮೀಸಲಾತಿಯ ಬೇಡಿಕೆಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯ ಅನ್ವಯ ಜಾರಿಗೆ ತರುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೋರಾಟಗಾರ ಅಂಬಣ್ಣ ಅರೋಲಿಕರ್ ಸ್ಪಷ್ಟಪಡಿಸಿದ್ದಾರೆ.

ಮೂರು ದಶಕಗಳ ಕಾಲ ನಡೆದ ಈ ಹೋರಾಟ ಆಯೋಗ ರಚನೆ, ಅದರ ಅಧ್ಯಯನ, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ ಮತ್ತು ವರದಿ ಜಾರಿಗೆ ನಿರಂತರವಾಗಿ ನಡೆದಿದೆ. ಇದು ಆಳುವ ಸರ್ಕಾರಗಳ ಮಲತಾಯಿ ಧೋರಣೆಗೆ ಸ್ಪಷ್ಟ ನಿದರ್ಶನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. “ಹೋರಾಟವೇ ನಮ್ಮ ಜೀವನ, ಹೋರಾಟದಿಂದಲೇ ಪ್ರಗತಿ ಸಾಧನ” ಎಂದು ಅವರು ಘೋಷಿಸಿದರು.

ಹೋರಾಟದ ಸ್ವರೂಪ ಮತ್ತು ಸಿದ್ಧತೆಗಳು

ಈ ಹೋರಾಟಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ. ಮೊದಲ ತಂಡದಲ್ಲಿ ಕರಿಯಪ್ಪ ಗುಡಿಮನಿ, ದಾನಪ್ಪ ನಿಲೋಗಲ್, ಜೆ.ಬಿ. ರಾಜು, ಅಂಬಣ್ಣ ಅರೋಲಿಕರ್, ಲೋಕೇಶ್ ಗೋಸಂಘಿ, ಮತ್ತು ಉಮಾದೇವಿ ಅವರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಇವರಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ, ಎರಡನೇ ತಂಡದ ಸದಸ್ಯರಾದ ಚಂದ್ರು ತರಹುಣಿಸೆ, ಗಣೇಶ್, ಡೇವಿಡ್, ಮಂಜುನಾಥ್ ಮರಾಟ, ಮತ್ತು ವೇಣುಗೋಪಾಲ್ ಮೌರ್ಯ ಅವರು ಉಪವಾಸವನ್ನು ಮುಂದುವರೆಸಲಿದ್ದಾರೆ. ಈ ಮೂಲಕ ನಿರಂತರವಾಗಿ ಹೋರಾಟವನ್ನು ಜೀವಂತವಾಗಿ ಇಡಲು ನಿರ್ಧರಿಸಲಾಗಿದೆ ಎಂದರು.

ಹೋರಾಟದ ತೀವ್ರತೆಯನ್ನು ವಿವರಿಸಿದ ಅಂಬಣ್ಣ ಅರೋಲಿಕರ್, ಬ್ರಿಟಿಷರು ರಾತ್ರೋರಾತ್ರಿ ಭಾರತವನ್ನು ಬಿಟ್ಟು ಹೋಗಲು ಗಾಂಧೀಜಿಯವರ ಸತ್ಯಾಗ್ರಹ ಮಾತ್ರವಲ್ಲ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಖದೇವ್ ಅವರಂತಹ ಕ್ರಾಂತಿಕಾರಿಗಳ ಬಲಿದಾನವೂ ಕಾರಣ ಎಂದು ನೆನಪಿಸಿಕೊಂಡರು.

ಈ ಸರ್ಕಾರವು ಕಾಲಹರಣ ಮಾಡುತ್ತಿದೆ, ಇದು ಕಾನೂನುಬಾಹಿರ, ಸಂವಿಧಾನಬಾಹಿರ, ಮತ್ತು ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ತಳೆದಿದೆ ಎಂದು ಅವರು ಹೇಳಿದರು. ಆದ್ದರಿಂದ, ಸ್ವಾತಂತ್ರ್ಯ ಸಿಗದ ನಮಗೆ “ಅನ್ನವೂ ಬೇಡ, ನೀರೂ ಬೇಡ” ಎಂದು ಘೋಷಿಸಿದ ಅವರು, ನಾಗಮೋಹನ್ ದಾಸ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಸರ್ಕಾರವು ಇದಕ್ಕೆ “ಕುಂಟು ನೆಪಗಳನ್ನು ಹೇಳಿದರೆ ನಮ್ಮ ಆಕ್ರೋಶ, ನಮ್ಮ ಸಹನೆಯ ಕಟ್ಟೆ ಒಡೆಯುತ್ತದೆ” ಎಂದು ಎಚ್ಚರಿಸಿದರು.

ಸಮತಾ ಸೈನಿಕ ದಳದ ಮಾದರಿಯಲ್ಲಿ ಹೋರಾಟ

ಉಪವಾಸ ಸತ್ಯಾಗ್ರಹದ ಸ್ಥಳದಲ್ಲಿ ಹೋರಾಟಗಾರರನ್ನು ರಕ್ಷಿಸಲು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮತಾ ಸೈನಿಕ ದಳದ ಪರಿಕಲ್ಪನೆಯಂತೆ ಉಳಿದ ಹೋರಾಟಗಾರರು ‘ರಕ್ಷಾ ಕವಚ’ದಂತೆ ಇರಬೇಕು ಎಂದು ಅಂಬಣ್ಣ ಕರೆ ನೀಡಿದರು.

ಅಂಬೇಡ್ಕರ್ ಅವರಿಗೆ ಭಾರತದ ಪ್ರಭುತ್ವವು ಬ್ರಿಟಿಷರಷ್ಟೇ ಕ್ರೂರವಾಗಿರುತ್ತದೆ ಎಂಬುದು ಗೊತ್ತಿತ್ತು, ಆದ್ದರಿಂದಲೇ ಅವರು ತಮ್ಮದೇ ಆದ ಸೈನ್ಯವನ್ನು ಕಟ್ಟಿದ್ದರು ಎಂದು ಅವರು ವಿವರಿಸಿದರು. ಈ ದಳಕ್ಕೆ ಬಿಳಿ ಮತ್ತು ಕಪ್ಪು ಬಣ್ಣದ ಡ್ರೆಸ್‌ಕೋಡ್ ಇತ್ತು, ಕೈಯಲ್ಲಿ ಲಾಠಿ ಮತ್ತು ಚಕ್ರದ ಚಿತ್ರಣವಿತ್ತು. ಈ ಹೋರಾಟಗಾರರು ನಿದ್ದೆಗೆಟ್ಟು ಹಗಲು ರಾತ್ರಿ ಟೆಂಟ್‌ ಸುತ್ತ ಕಾವಲು ಕಾಯಬೇಕು. ಉಪವಾಸದಲ್ಲಿರುವವರನ್ನು ಸರ್ಕಾರ ಎತ್ತಿಕೊಂಡು ಹೋಗಲು ಪ್ರಯತ್ನಿಸಿದರೆ, ಅದನ್ನು ಪ್ರತಿರೋಧಿಸಬೇಕು ಎಂದು ಸೂಚಿಸಿದರು. ಇದು ವ್ಯಕ್ತಿಗತ ಹೋರಾಟವಲ್ಲ, ಸಾಮೂಹಿಕ ಹೋರಾಟ ಎಂದು ಅವರು ಸ್ಪಷ್ಟಪಡಿಸಿದರು.

ರಾಜಧಾನಿ ರಸ್ತೆಗಳು ರಣಾಂಗಣವಾಗಲಿ

“ನಾವು ಅ. 16ರಂದು ಒಳಮೀಸಲಾತಿ ಜಾರಿಯಾಗಲಿದೆ ಎಂದು ಸಂತೋಷದಿಂದ ಇಲ್ಲಿಂದ ಹೋಗುತ್ತೇವೆ ಎಂದುಕೊಂಡಿದ್ದೆವು. ಆದರೆ ಸರ್ಕಾರವು ’16ರಲ್ಲ, 26ರಲ್ಲ, 46 ಮಾಡುತ್ತೇವೆ’ ಎಂದು ಹೊರಟಿದೆ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದ ಅವರು, “ಯಾವುದೇ ಕ್ಷಣದಲ್ಲಿಯೂ ಈ ರಾಜಧಾನಿಯ ರಸ್ತೆ ರಣಾಂಗಣವಾಗಲಿಕ್ಕೆ ಸಿದ್ಧರಾಗಬೇಕು” ಎಂದು ಕರೆ ನೀಡಿದರು. ಇದು ಒಂದು ಅಗ್ನಿಪರೀಕ್ಷೆ ಎಂದು ಹೋರಾಟಗಾರರಿಗೆ ಹೇಳಿದರು.

ಸುಪ್ರೀಂ ಕೋರ್ಟ್ ಒಪ್ಪಿದ ಒಳಮೀಸಲಾತಿಯನ್ನು ಜಾರಿಗೆ ತರದಿರುವುದು ನ್ಯಾಯಾಲಯದ ತೀರ್ಮಾನಕ್ಕೆ ಅಗೌರವ ಮತ್ತು ಸಂವಿಧಾನ ವಿರೋಧಿ ನಡೆ. ಇದು 101 ಜಾತಿಗಳನ್ನು ಮತ್ತಷ್ಟು ತಾತ್ಸಾರ ಮಾಡುವ ದುರಹಂಕಾರದ ಪ್ರತೀಕ ಎಂದು ಅವರು ಗುಡುಗಿದರು.

ಹುಟ್ಟುಹಬ್ಬವನ್ನು ತ್ಯಾಗ ಮಾಡಿದ ಹೋರಾಟಗಾರ

ಇದೇ ಸಂದರ್ಭದಲ್ಲಿ, ಅಂಬಣ್ಣ ಅರೋಲಿಕರ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದು, ಒಳಮೀಸಲಾತಿ ಹೋರಾಟಕ್ಕೆ ಅದನ್ನು ಸಮರ್ಪಿಸಿದ್ದಾರೆ. ದೇವನೂರು ಮಹಾದೇವ ಅವರು ಕೂಡಲೇ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿ, ಅವರಿಗೆ ತಂಡದ ಪರವಾಗಿ ಅಭಿನಂದನೆ ಸಲ್ಲಿಸಿದರು.

ಒಳಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದರೂ ಅದನ್ನು ಜಾರಿಗೊಳಿಸದಿರುವುದು ಸಂವಿಧಾನ ವಿರೋಧಿ ಮತ್ತು ಕೋರ್ಟ್ ತೀರ್ಪಿಗೆ ಅಗೌರವ ಎಂದು ಅರೋಲಿಕರ್ ಗುಡುಗಿದರು. ಇದು 101 ಜಾತಿಗಳನ್ನು ಮತ್ತಷ್ಟು ತಾತ್ಸಾರ ಮಾಡುವ ದುರಹಂಕಾರದ ಪರಮಾಧಿಕಾರ ಎಂದು ಆಕ್ರೋಶ ಹೊರಹಾಕಿದರು.

ಇದು ಅಂತಿಮ ಯುದ್ಧ: ಸರ್ಕಾರದ ನಿಲುವಿಗೆ ಸ್ಪಷ್ಟ ಸಂದೇಶ

“ಉಪವಾಸ ಸತ್ಯಾಗ್ರಹಿಗಳಿಗೆ ಸಾಯುವ ಪರಿಸ್ಥಿತಿ ಬಂದರೆ, ನಾವು ಸಾಯಲಿಕ್ಕೂ ಸಿದ್ಧ” ಎಂದು ಹೇಳಿದ ಅರೋಲಿಕರ್, ಇದು ಅಂತಿಮ ಯುದ್ಧ ಎಂದು ಘೋಷಿಸಿದರು.

ಎಲ್ಲರೂ ಈ ಹೋರಾಟದಲ್ಲಿ ಸೈನಿಕರಂತೆ ಭಾಗವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಬೇಕು. ಆದರೆ, ಅನಗತ್ಯ ವಾದ-ವಿವಾದಗಳಲ್ಲಿ ತೊಡಗಬಾರದು. ಜಾಲತಾಣಿಗರ ಯಾವುದೇ ಪ್ರಚೋದನೆಗಳಿಗೆ ಕಿವಿಗೊಡದೆ ತಮ್ಮ ಕೆಲಸವನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.

“ನಮ್ಮ ಮನವಿ ಮತ್ತೊಂದು ಏನೂ ಇಲ್ಲ. ಸಾವಿರಕ್ಕೂ ಹೆಚ್ಚಿರುವ ಸಮಗ್ರ ಒಳಮೀಸಲಾತಿ ವರದಿ ಜಾರಿ ಮಾಡಬೇಕೆಂಬುದೇ ನಮ್ಮ ಬೇಡಿಕೆಯಾಗಿದೆ” ಎಂದರು. ಯಾವುದೇ ರಾಜಕಾರಣಿಗಳು ಟೆಂಟ್‌ಗೆ ಬರುವುದಾದರೆ, ಒಳಮೀಸಲಾತಿಯನ್ನು ಅಂಗೀಕಾರ ಮಾಡುವ ಆದೇಶ ಪತ್ರದೊಂದಿಗೆ ಬರಬೇಕು ಎಂದು ಸ್ಪಷ್ಟಪಡಿಸಿದರು. ಹೋರಾಟಕ್ಕೆ ಬೆಂಬಲವಾಗಿ ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಪ್ರತಿರೋಧ ಆರಂಭವಾಗುತ್ತದೆ ಎಂದು ತಿಳಿಸಿ, “ಜೈ ಭೀಮ್” ಎಂದು ಘೋಷಿಸಿದರು.

ಸರ್ಕಾರಕ್ಕೆ ಎಚ್ಚರಿಕೆ ಮತ್ತು ಬೆಂಬಲದ ಮಾತುಗಳು

ಇಂತಹ ಹೋರಾಟಕ್ಕೆ ಸರ್ಕಾರ ಅವಕಾಶ ನೀಡಬಾರದಿತ್ತು ಎಂದು ಜಾಗೃತ ಕರ್ನಾಟಕದ ಮುತ್ತುರಾಜ್ ಹೇಳಿದ್ದಾರೆ. ಇಷ್ಟು ದಿನ ಹಸಿವಿನಿಂದ ಬಳಲಿದವರು ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ನಡೆಸುವುದನ್ನು ನೋಡಿ ನೋವಾಗುತ್ತಿದೆ ಎಂದ ಅವರು, ಸರ್ಕಾರವು ಹೋರಾಟಗಾರರನ್ನು ಕರೆದು ಮಾತನಾಡಿ, ಉಪವಾಸ ಕೈಬಿಡುವಂತೆ ಮನವಿ ಮಾಡುವ ಮೂಲಕ ತನ್ನ ದೊಡ್ಡತನ ತೋರಬೇಕು ಎಂದು ಆಶಿಸಿದರು.

ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಎಲ್ಲರಿಗೂ ಶಕ್ತಿ ತುಂಬುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಒಳಮೀಸಲಾತಿ ಹೋರಾಟಗಾರ ಪ್ರಶಾಂತ್ ದಾನಪ್ಪ ಅವರು, “ಸಾಮಾಜಿಕ ಅನ್ಯಾಯದ ಜಿಡ್ಡುಗಟ್ಟಿದ ಮೌಲ್ಯಗಳಿಂದ ಸ್ವಾತಂತ್ರ್ಯವು ವಂಚಿತ ದುರ್ಬಲ ಸಮುದಾಯಗಳಿಗೆಲ್ಲಾ ಸಿಗಲಿ… ಬಾಬಾಸಾಹೇಬರ ಸಂವಿಧಾನದ ಆಶಯಗಳು ಚಿರಾಯುವಾಗಲಿ” ಎಂದು ಹಾರೈಸಿದರು.

“ನನ್ನ ಸಮುದಾಯವನ್ನು ಅತ್ಯಂತ ನಿಕೃಷ್ಟವಾಗಿ ಬೀದಿಗೆ ಬರುವಂತೆ ಮಾಡಿಬಿಟ್ಟರು, ನಾವು ಯಾವುದನ್ನು ನಂಬಿದ್ದೆವೋ ಅದೆಲ್ಲವೂ ಉರುಳುತ್ತಿದೆ, ಸಂವಿಧಾನದ ಕಣ್ಣುಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ, ಅದರೂ ನನ್ನ ಸಮುದಾಯದ ಸ್ಥಿತಿಯನ್ನು ನೆನಸಿಕೊಂಡರೆ ನಿಜಕ್ಕೂ ಬಹಳ ದುಃಖವೆನಿಸುತ್ತದೆ” ಎಂದು ಅವರು ತಮ್ಮ ಅಂತರಾಳದ ನೋವನ್ನು ಹಂಚಿಕೊಂಡರು.

ಒಳಮೀಸಲಾತಿ ತಕ್ಷಣ ಜಾರಿಗೆ ಆಗ್ರಹ: ಮುಖ್ಯಮಂತ್ರಿಯವರಿಗೆ ದೇವನೂರು ಮಹಾದೇವ ಬಹಿರಂಗ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...