ಇತ್ತಿಚೆಗಷ್ಟೆ ರೈತರನ್ನು ಬೆಂಬಲಿಸುವ ಹಾಗೂ ಅದರ ಬಗ್ಗೆ ಸುದ್ದಿಗಳನ್ನು ಹಂಚುವ ಹಲವು ಟ್ವಿಟ್ಟರ್ ಖಾತೆಗಳನ್ನು ನಿರ್ಬಂಧಿಸಿದ್ದ ಕೇಂದ್ರ ಸರ್ಕಾರ, ಮತ್ತೆ 1,178 ಟ್ವಿಟ್ಟರ್ ಖಾತೆಗಳನ್ನು ನಿರ್ಬಂಧಿಸಬೇಕು ಎಂದು ಟ್ವೀಟ್ಟರ್‌ಗೆ ಸೂಚಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಎಎನ್‌ಐ ಟ್ವೀಟ್ ಮಾಡಿರುವ ವರದಿಯಲ್ಲಿ, “ರೈತ ಹೋರಾಟಕ್ಕೆ ಸಂಬಂಧಿಸಿ ತಪ್ಪು ಮಾಹಿತಿ ಹಾಗೂ ಉದ್ರೇಕಕಾರಿ ವಿಷಯಗಳನ್ನು ಹರಡುತ್ತಿರುವ 1,178 ಪಾಕಿಸ್ತಾನಿ–ಖಾಲಿಸ್ತಾನಿ ಟ್ವಿಟರ್ ಖಾತೆಗಳನ್ನು ಕಿತ್ತು ಹಾಕುವಂತೆ ಕೇಂದ್ರ ಸರ್ಕಾರವು ಟ್ವಿಟರ್‌ಗೆ ಸೂಚಿಸಿದೆ. ಆದರೆ ಟ್ವಿಟ್ಟರ್ ಇದುವರೆಗೂ ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ಪಾಲಿಸಿಲ್ಲ” ಎಂದು ಮೂಲಗಳನ್ನು ಉಲ್ಲೇಖಿಸಿ ಹೇಳಿದೆ.
Government tells Twitter to remove 1178 Pakistani-Khalistani accounts spreading misinformation and provocative content around farmers' protests. Twitter yet to completely comply with orders: Sources pic.twitter.com/YGZLnjxbv3
— ANI (@ANI) February 8, 2021
ಇದನ್ನೂ ಓದಿ: ರೈತ ಹೋರಾಟದ ಬೆಂಬಲಿಗರ ಖಾತೆ ಅನ್‌ಬ್ಲಾಕ್: ಟ್ವಿಟ್ಟರ್‌ಗೆ ನೋಟಿಸ್ ಕಳುಹಿಸಿದ ಕೇಂದ್ರ
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಖಾತೆಗಳನ್ನು ತೆಗೆದುಹಾಕುವಂತೆ ಐಟಿ ಸಚಿವಾಲಯ ಟ್ವಿಟ್ಟರ್‌ಗೆ ನಿರ್ದೇಶನ ನೀಡಿತ್ತು. ಇದರಿಂದಾಗಿ ಫೆಬ್ರವರಿ 1 ರ ಸೋಮವಾರ ಬೆಳಿಗ್ಗೆ ಸುಮಾರು 100 ಟ್ವಿಟ್ಟರ್ ಖಾತೆಗಳು ಮತ್ತು ರೈತರ ಪ್ರತಿಭಟನೆಗೆ ಸಂಬಂಧಿಸಿದ 150 ಟ್ವೀಟ್‌ಗಳು ಟ್ವಿಟ್ಟರ್ ತೆಗೆದು ಹಾಕಿತ್ತು. ಆದರೆ, ಐಟಿ ಸಚಿವಾಲಯದ ಅಧಿಕಾರಿಗಳೊಂದಿಗಿನ ಸಭೆಯ ನಂತರ ಸೋಮವಾರ ತಡರಾತ್ರಿ ಖಾತೆಗಳನ್ನು ಪುನಃ ಸ್ಥಾಪಿಸಿತ್ತು.
ಫೆಬ್ರವರಿ 3 ರಂದು ಹಲವು ಟ್ವಿಟ್ಟರ್ ಖಾತೆಗಳನ್ನು ನಿರ್ಬಂಧಿಸಲು ಕೇಂದ್ರ ಐಟಿ ಸಚಿವಾಲಯ ನಿರ್ದೇಶನ ನೀಡಿದ ಹೊರತಾಗಿಯು ರೈತ ಹೋರಾಟವನ್ನು ಬೆಂಬಲಿಸುವ ಹಲವು ಖಾತೆಗಳನ್ನು ಪುನಃ ಸ್ಥಾಪಿಸಿರುವ ಟ್ವಿಟ್ಟರ್ ವಿರುದ್ದ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿತ್ತು. ತನ್ನ ನೋಟಿಸ್‌ನಲ್ಲಿ ಐಟಿ ಕಾಯಿದೆಯ ಸೆಕ್ಷನ್ 69 ಎ ಅಡಿಯಲ್ಲಿ ಹೊರಡಿಸಲಾದ ನಿರ್ದೇಶನಗಳನ್ನು ಪಾಲಿಸದಿರುವ ಪರಿಣಾಮಗಳ ಬಗ್ಗೆ ಎಚ್ಚರಿಕೆಯನ್ನೂ ಕೇಂದ್ರ ಸರ್ಕಾರ ನೀಡಿತ್ತು.
ಇದನ್ನೂ ಓದಿ: ಕುನಾಲ್ ಕಮ್ರಾ ಟ್ವೀಟ್‌ಗಳನ್ನು ಅನುಮತಿಸಿದ್ದಕ್ಕಾಗಿ ಟ್ವಿಟ್ಟರನ್ನು ತರಾಟೆಗೆ ಪಡೆದ ಸಂಸದೀಯ ಸಮಿತಿ!


