Homeಮುಖಪುಟರೈತ ಹೋರಾಟದ ಬೆಂಬಲಿಗರ ಖಾತೆ ಅನ್‌ಬ್ಲಾಕ್: ಟ್ವಿಟ್ಟರ್‌ಗೆ ನೋಟಿಸ್ ಕಳುಹಿಸಿದ ಕೇಂದ್ರ

ರೈತ ಹೋರಾಟದ ಬೆಂಬಲಿಗರ ಖಾತೆ ಅನ್‌ಬ್ಲಾಕ್: ಟ್ವಿಟ್ಟರ್‌ಗೆ ನೋಟಿಸ್ ಕಳುಹಿಸಿದ ಕೇಂದ್ರ

- Advertisement -
- Advertisement -

ಹಲವು ಟ್ವಿಟ್ಟರ್‌ ಖಾತೆಗಳನ್ನು ನಿರ್ಬಂಧಿಸಲು ಕೇಂದ್ರ ಐಟಿ ಸಚಿವಾಲಯ ನಿರ್ದೇಶನ ನೀಡಿದ ಹೊರತಾಗಿಯು ರೈತ ಹೋರಾಟವನ್ನು ಬೆಂಬಲಿಸುವ ಹಲವು ಖಾತೆಗಳನ್ನು ಪುನಃ ಸ್ಥಾಪಿಸಿರುವ ಟ್ವಿಟ್ಟರ್‌ ವಿರುದ್ದ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದೆ.

ಕೇಂದ್ರ ಸರ್ಕಾರವು ಟ್ವಿಟ್ಟರ್‌ಗೆ 18 ಪುಟಗಳ ನೋಟಿಸ್ ಜಾರಿ ಮಾಡಿದ್ದು, ತನ್ನ ನೋಟಿಸ್‌ನಲ್ಲಿ ಐಟಿ ಕಾಯಿದೆಯ ಸೆಕ್ಷನ್ 69 ಎ ಅಡಿಯಲ್ಲಿ ಹೊರಡಿಸಲಾದ ನಿರ್ದೇಶನಗಳನ್ನು ಪಾಲಿಸದಿರುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದೆ. ಹಲವಾರು ಖಾತೆಗಳನ್ನು ನಿರ್ಬಂಧಿಸಿದ್ದ ಟ್ವಿಟ್ಟರ್‌ ಸೋಮವಾರ ರಾತ್ರಿಯೆ ಅವುಗಳನ್ನು ಮರುಸ್ಥಾಪಿಸಿತ್ತು.

ಇದನ್ನೂ ಓದಿ: ಕಿಸಾನ್‌ ಏಕ್ತಾ ಮೋರ್ಚಾ ಸೇರಿ ಹಲವರ ಟ್ವಿಟರ್‌ ಖಾತೆ ತಾತ್ಕಾಲಿಕ ಅಮಾನತು! ಭುಗಿಲೆದ್ದ ಆಕ್ರೋಶ

 

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಈ ಖಾತೆಗಳನ್ನು ತೆಗೆದುಹಾಕುವಂತೆ ಐಟಿ ಸಚಿವಾಲಯ ಟ್ವಿಟ್ಟರ್‌ಗೆ ನಿರ್ದೇಶನ ನೀಡಿತ್ತು. ಇದರಿಂದಾಗಿ ಸೋಮವಾರ ಬೆಳಿಗ್ಗೆ ಸುಮಾರು 100 ಟ್ವಿಟ್ಟರ್ ಖಾತೆಗಳು ಮತ್ತು ರೈತರ ಪ್ರತಿಭಟನೆಗೆ ಸಂಬಂಧಿಸಿದ 150 ಟ್ವೀಟ್‌ಗಳು ಟ್ವಿಟ್ಟರ್‌ ತೆಗೆದು ಹಾಕಿತ್ತು. ಆದರೆ, ಐಟಿ ಸಚಿವಾಲಯದ ಅಧಿಕಾರಿಗಳೊಂದಿಗಿನ ಸಭೆಯ ನಂತರ ಸೋಮವಾರ ತಡರಾತ್ರಿ ಖಾತೆಗಳನ್ನು ಪುನಃ ಸ್ಥಾಪಿಸಿತ್ತು.

“ಅಧಿಕಾರಿಗಳೊಂದಿಗೆ ನಮ್ಮ ಚರ್ಚೆಗಳು ಬಾಕಿ ಉಳಿದಿವೆ. ಸಚಿವಾಲಯದ ಕಾನೂನು ಕೋರಿಕೆಗೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ಈ ಖಾತೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದೇವೆ. ನಂತರ ಅಧಿಕಾರಿಗಳೊಂದಿಗೆ ನಡೆದ ಸಭೆಗಳಲ್ಲಿ, ಆ ಖಾತೆಗಳಲ್ಲಿನ ಪ್ರಶ್ನೆಗಳು ಮತ್ತು ಟ್ವೀಟ್‌ಗಳು ವಾಕ್‌ಸ್ವಾತಂತ್ಯ್ರ ಮತ್ತು ಸುದ್ದಿ ಮೌಲ್ಯವನ್ನು ಹೊಂದಿದೆ ಎಂದು ತಿಳಿಸಿದ್ದೇವೆ. ಆದ್ದರಿಂದ ಆ ಟ್ವೀಟ್‌ಗಳು ಮತ್ತು ಖಾತೆಗಳನ್ನು ನಿರ್ಭಂದಿಸಿಲ್ಲ. ಸಾರ್ವಜನಿಕರ ಅಭಿಪ್ರಾಯಗಳು ಮತ್ತು ಪಾರದರ್ಶಕತೆಯನ್ನು ರಕ್ಷಿಸುವುದು ಟ್ವಿಟ್ಟರ್‌‌ನ ಮೂಲಭೂತ ಕೆಲಸವಾಗಿದೆ” ಎಂದು ಟ್ವಿಟ್ಟರ್ ಮೂಲಗಳು ತಿಳಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಇದನ್ನೂ ಓದಿ: ಅಮಿತ್ ಶಾ ಟ್ವಿಟರ್ ಖಾತೆ ಬ್ಲಾಕ್: ಟ್ವಿಟರ್ ಅನ್ನು ತರಾಟೆಗೆ ತೆಗೆದುಕೊಂಡ ಸಂಸದೀಯ ಸಮಿತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...