Homeಮುಖಪುಟಕಿಸಾನ್‌ ಏಕ್ತಾ ಮೋರ್ಚಾ ಸೇರಿ ಹಲವರ ಟ್ವಿಟರ್‌ ಖಾತೆ ತಾತ್ಕಾಲಿಕ ಅಮಾನತು! ಭುಗಿಲೆದ್ದ ಆಕ್ರೋಶ

ಕಿಸಾನ್‌ ಏಕ್ತಾ ಮೋರ್ಚಾ ಸೇರಿ ಹಲವರ ಟ್ವಿಟರ್‌ ಖಾತೆ ತಾತ್ಕಾಲಿಕ ಅಮಾನತು! ಭುಗಿಲೆದ್ದ ಆಕ್ರೋಶ

- Advertisement -
- Advertisement -

ನಿರ್ದಿಷ್ಟ ಕಾರಣ ನೀಡದೆಯೇ ಕಿಸಾನ್‌ ಏಕ್ತಾ ಮೋರ್ಚಾ ಸೇರಿ, ಕಾರವಾನ್ ಇಂಡಿಯಾ ಮತ್ತು ಹಲವು ಪ್ರಮುಖ ಸಂಸ್ಥೆ, ಸಂಘಟನೆ ಹಾಗೂ ಸಾರ್ವಜನಿಕ ವ್ಯಕ್ತಿಗಳ ಟ್ವಿಟರ್‌ ಖಾತೆಯನ್ನು ಟ್ವಿಟರ್ ಇಂಡಿಯಾ ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿದೆ.

ದೆಹಲಿ ರೈತ ಹೋರಾಟಕ್ಕೆ ಸಂಬಂಧಿಸಿದ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ @kisanEktaMorcha ವನ್ನು ತಾತ್ಕಾಲಿಕವಾಗಿ ಅಮಾನತನಲ್ಲಿಟ್ಟಿದೆ. ಜೊತೆಗೆ ಕಾರವಾನ್‌ ಪತ್ರಿಕೆಯ ಟ್ವಿಟರ್‌ ಖಾತೆಯನ್ನು ಅಮಾನತಿನಲ್ಲಿಟ್ಟಿದ್ದು, ಕಾನೂನಾತ್ಮಕ ಬೇಡಿಕೆಯ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಟ್ವಿಟರ್ ತಿಳಿಸಿದೆ.

ಇವುಗಳ ಜೊತೆಗೆ ಹನ್ಸಾರ್‌ ಮೀನಾ, ಟ್ರ್ಯಾಕ್ಟರ್‌2ಟ್ವಿಟರ್‌, ಸಿಪಿಎಂ ಮುಖಂಡರು ಮತ್ತು ನಟ ಸುಶಾಂತ್‌ ಸಿಂಗ್‌ ಅವರ ಖಾತೆಗಳನ್ನು ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ.

ಯುವ ನಾಯಕ ಕನ್ಹಯ್ಯ ಕುಮಾರ್‌ ಅವರ ಖಾತೆಯನ್ನು ಕೆಲ ಕಾಲ ಅಮಾನತನಲ್ಲಿಡಲಾಗಿತ್ತು, ಆದರೆ ಈಗ ಸಕ್ರಿಯವಾಗಿದೆ ಎಂದು ಸ್ವತಃ ಕನ್ಹಯ್ಯ ಕುಮಾರ್‌ ತಿಳಿಸಿದ್ದಾರೆ.

ಟ್ವಿಟರ್‌ನ ಈ ಕ್ರಮವನ್ನು ಹಲವರು ವಿರೋಧಿಸಿದ್ದಾರೆ. ಕಿಸಾನ್‌ ಏಕ್ತಾ ಮೋರ್ಚಾ ಟ್ವಿಟರ್‌ ಖಾತೆ ಅಮಾನತನ್ನು ಹಿಂಪಡೆಯಲು ಆಗ್ರಹಿಸಿ ಟ್ವೀಟ್‌ ಮಾಡುತ್ತಿದ್ದಾರೆ.

ಸರ್ಕಾರದ ವಿರುದ್ಧ ತೀವ್ರ ವಿಮರ್ಶಾತ್ಮಕವಾಗಿರುವ ಪತ್ರಿಕೆ, ಪತ್ರಕರ್ತ, ಸಂಸ್ಥೆ, ಸಾರ್ವಜನಿಕ ವ್ಯಕ್ತಿಗಳನ್ನು ಹಲವು ರೀತಿಯಲ್ಲಿ ಗುರಿಯಾಗಿಸಿ, ಬಾಯಿ ಮುಚ್ಚಿಸುವ ಪ್ರಯತ್ನವನ್ನು ಆಡಳಿತಾರೂಢ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್‌ ಇಂಡಿಯಾ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.


ಇದನ್ನೂ ಓದಿ: ಭಾರತದ ಸಂಪತ್ತನ್ನು ಮೋದಿ ತನ್ನ ಕ್ರೋನಿ ಕ್ಯಾಪಿಟಲಿಸ್ಟ್‌ ಗೆಳೆಯರಿಗೆ ಧಾರೆಯೆರೆಯುತ್ತಿದ್ದಾರೆ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...