ಬಿಹಾರದಲ್ಲಿ ರಾಹುಲ್ ಗಾಂಧಿ ರ್‍ಯಾಲಿ
PC: [email protected]

ಇಂದು ಕೇಂದ್ರ ಬಜೆಟ್ ಮಂಡನೆಯ ದಿನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಭಾರತದ ಸಂಪತ್ತನ್ನು ಮೋದಿ ತನ್ನ ಕ್ರೋನಿ ಕ್ಯಾಪಿಟಲಿಸ್ಟ್‌ ಗೆಳೆಯರಿಗೆ ಧಾರೆಯೆರೆಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು “ಜನರ ಕೈಗೆ ಹಣ ನೀಡುವುದನ್ನು ಮರೆತುಬಿಡಿ, ಮೋದಿ ಸರ್ಕಾರ ತನ್ನ ಕ್ಯಾಪಿಟಲಿಸ್ಟ್‌ ಗೆಳೆಯರಿಗೆ ಇಡೀ ಭಾರತದ ಸಂಪತನ್ನು ಧಾರೆಯೆರೆಯಲು ಯೋಜಿಸುತ್ತಿದೆ” ಎಂದು ರಾಹುಲ್ ಕಿಡಿಕಾರಿದ್ದಾರೆ.

ಎಂಎಸ್‌ಎಂಇಗಳು, ರೈತರು ಮತ್ತು ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸಲು ಬೆಂಬಲ ನೀಡಿ. ಜೀವ ಉಳಿಸಲು ಆರೋಗ್ಯ ವೆಚ್ಚವನ್ನು ಹೆಚ್ಚಿಸಿ. ಗಡಿಗಳನ್ನು ಕಾಪಾಡಲು ರಕ್ಷಣಾ ವೆಚ್ಚವನ್ನು ಹೆಚ್ಚಿಸಿ ಎಂದು ಇಂದು ಬೆಳಗ್ಗೆ ರಾಹುಲ್ ಗಾಂಧಿ ಒತ್ತಾಯಿಸಿದ್ದರು.

ರೈತರ ಆದಾಯವನ್ನು ಹೆಚ್ಚಿಸಲು ಬಜೆಟ್ ಗಮನಹರಿಸುತ್ತದೆ, ಈ ದಿಕ್ಕಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರೈತರಿಗೆ ಸುಲಭವಾಗಿ ಸಾಲ ಪಡೆಯಲು ಸಾಧ್ಯವಾಗುತ್ತದೆ. ಕೃಷಿ ಮೂಲಸೌಕರ್ಯ ನಿಧಿಯ ಸಹಾಯದಿಂದ ಎಪಿಎಂಸಿ ಮಾರುಕಟ್ಟೆಗಳನ್ನು ಬಲಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪಿಎಂ ನರೇಂದ್ರ ಮೋದಿ ತಿಳಿಸಿದ್ದಾರೆ.

2021-2022ನೇ ಸಾಲಿನ ಕೇಂದ್ರ ಆಯವ್ಯಯವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಂಸತ್ತಿನಲ್ಲಿ ಮಂಡಿಸಿದ್ದು, ಮುಖ್ಯಾಂಶಗಳು ಇಲ್ಲಿವೆ.

 • ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೃಷಿ ಮೂಲಭೂತ ಸೌಕರ್ಯ  ಹಾಗೂ ಅಭಿವೃದ್ದಿ ಸೆಸ್ (ಎಐಡಿಸಿ) ಅನ್ನು ವಿಧಿಸುವ ಪ್ರಸ್ತಾವ ಮುಂದಿಟ್ಟಿದ್ದಾರೆ. ಪೆಟ್ರೋಲ್ ಮೇಲೆ ಲೀಟರ್ ಗೆ 2.50 ರೂ. ಹಾಗೂ ಡೀಸೆಲ್ ಮೇಲೆ 4 ರೂ. ಕೃಷಿ ಸೆಸ್ ವಿಧಿಸಲಾಗುತ್ತದೆ. ಈ ಸೆಸ್ ಫೆಬ್ರವರಿ 2ರಿಂದಲೇ  ಅನ್ವಯವಾಗಲಿದೆ.
 • ಕೈಗೆಟುಕುವ ಮನೆ ಖರೀದಿಸಲು ಸಿಗುವ 1.5 ಲಕ್ಷ ರೂ. ಸಾಲ ಸೌಲಭ್ಯ ಇನ್ನೂ ಒಂದು ವರ್ಷ ವಿಸ್ತರಣೆ
 • ಕೋವಿಡ್ ಸೆಸ್ ವಿಧಿಸದಿರಲು ನಿರ್ಧಾರ
 • 75 ವರ್ಷ ಮೇಲ್ಪಟ್ಟವರು ತೆರಿಗೆ ಪಾವತಿಸುವ ಅಗತ್ಯವಿಲ್ಲ
 • ಎಲ್ಲಾ ವರ್ಗದ ಕಾರ್ಮಿಕರಿಗೆ ಇನ್ನುಮುಂದೆ ಕನಿಷ್ಠ ವೇತನ ಅನ್ವಯವಾಗಲಿದೆ. ಸಮರ್ಪಕ ರಕ್ಷಣೆಯೊಂದಿಗೆ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ನೀಡಬೇಕು: ನಿರ್ಮಲಾ ಸೀತಾರಾಮನ್
 • ಒಂದೇ ದೇಶ, ಒಂದೇ ರೇಶನ್ ಕಾ‍ರ್ಡ್ ಪರಿಕಲ್ಪನೆ ಜಾರಿಗೆ
  69 ಕೋಟಿ ಜನ ಅಂದರೆ 86% ಫಲಾನುಭವಿಗಳು ಒಂದು ರಾಷ್ಟ್ರ, ಒಂದು ಪಡಿತರ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.
 • ಗ್ರಾಮೀಣ ಮೂಲ ಅಭಿವೃದ್ಧಿ ನಿಧಿಗೆ 30,000 ಕೋಟಿಯಿಂದ 40,000 ಕೋಟಿ ರೂ. ಮತ್ತು ಐದು ಪ್ರಮುಖ ಮೀನುಗಾರಿಕೆ ಬಂದರುಗಳನ್ನು ಆರ್ಥಿಕ ಚಟುವಟಿಕೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ.
 • ಕೃಷಿ ಸಾಲ ಗುರಿಯನ್ನು 16.5 ಲಕ್ಷ ಕೋ.ಗೆ ಹೆಚ್ಚಿಸಲು ವಿತ್ತ ಸಚಿವರ ಪ್ರಸ್ತಾವ
  ಕೃಷಿ ಕ್ಷೇತ್ರದ ಸಂವರ್ಧನೆಗಾಗಿ 2022 ರ ಹಣಕಾಸು ವರ್ಷದಲ್ಲಿ ಕೃಷಿ ಸಾಲದ ಗುರಿಯನ್ನು ವಿಸ್ತರಿಸಲಾಗುತ್ತದೆ. ಇದಕ್ಕಾಗಿ ಹಲವು ಕಲ್ಯಾಣ ಯೋಜನೆಗಳನ್ನು ನವೀಕರಣಗೊಳಿಸಲಾಗಿದೆ: ನಿರ್ಮಲಾ ಸೀತಾರಾಮನ್
 • 2022 ರ  ಹಣಕಾಸು ವರ್ಷದಲ್ಲಿ 2 ಪಿಎಸ್‌ಯು ಬ್ಯಾಂಕುಗಳು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ: ನಿರ್ಮಲಾ ಸೀತಾರಾಮನ್
 • 1 ಕೋಟಿ ಜನರಿಗೆ ಉಜ್ವಲಾ ಯೋಜನೆ ವಿಸ್ತರಣೆ. ಮುಂದಿನ ಮೂರು ವರ್ಷಗಳಲ್ಲಿ 100 ಜಿಲ್ಲೆಗಳು ಯೋಜನೆ ವ್ಯಾಪ್ತಿಗೆ
 • 1.15 ಲಕ್ಷ ಕೋಟಿ ರೂ. ರೈಲ್ವೆ ಇಲಾಖೆ ಮತ್ತು ವಿಮಾನಗಳ ಖಾಸಗೀಕರಣಕ್ಕೆ ವಿನಿಯೋಗ 2 ಮತ್ತು ಮೂರನೇ ಹಂತದ ನಗರಗಳಲ್ಲಿ ವಿಮಾನಗಳ ಖಾಸಗೀಕರಣ
 • ಮಾರ್ಚ್‌ 2022ರ ಹೊತ್ತಿಗೆ 8500 ಕಿ.ಮೀ. ಹೆದ್ದಾರಿ ನಿರ್ಮಾಣ, ತಮಿಳುನಾಡಿನಲ್ಲಿ 3500 ಕಿ.ಮೀ. ಕಾರಿಡಾರ್‌, ಕೇರಳದಲ್ಲಿ 65,000 ಕೋಟಿ ರೂ.ಗಳ 1100 ಕಿ.ಮೀ. ಉದ್ದದ ಹೆದ್ದಾರಿ, ಪಶ್ಚಿಮ ಬಂಗಾಳದಲ್ಲಿ 95,000 ಕೋಟಿ ರೂ. ವೆಚ್ಚದ 675 ಕಿ.ಮೀ. ಹೆದ್ದಾರಿ ಮತ್ತು ಮುಂದಿನ 3 ವರ್ಷಗಳಲ್ಲಿ ಅಸ್ಸಾಮ್‌ನಲ್ಲಿ 1300. ಕಿ.ಮೀ.
 • 61,000 ಕೋಟಿ ರೂ.ಗಳ ಹೊಸ ಆರೋಗ್ಯ ಮೂಲ ಸೌಕರ್ಯಗಳ ಯೋಜನೆ
  17,000 ಗ್ರಾಮೀಣ ಮತ್ತು 11000 ನಗರ ಆರೋಗ್ಯ ಕೇಂದ್ರಗಳ ಆರಂಭ.
 • ಮುಂದಿನ ಆರು ವರ್ಷಗಳಿಗೆ ಆರೋಗ್ಯ ಸೇವೆಗೆ 64,180 ಕೋಟಿ ರೂ.ಗಳು ಈ ಮೊತ್ತ ಮೂರು ಹಂತಗಳಲ್ಲಿ ವಿನಿಯೋಗಿಸಲಾಗುತ್ತದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ ಆಡಿಯಲ್ಲಿ ಕಾರ್ಯಚಟುವಟಿಕೆಗಳು
 • ಬಜೆಟ್‌ ಮೊದಲ ಭಾರತ ಆತ್ಮನಿರ್ಭರ ಭಾರತಕ್ಕೆ ಒತ್ತು,
 • ಇಲ್ಲಿಯವರೆಗೆ ಕೋವಿಡ್‌ ಪರಿಹಾರಕ್ಕೆ 27.1 ಲಕ್ಷ ಕೋಟಿ (GDP ಯ 13%) ಘೋಷಣೆ
  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ 2021-22ರ ಕೇಂದ್ರ ಆಯವ್ಯಯ ಮಂಡನೆ

ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಕೇಜ್ರಿವಾಲ್ ಕೃಷಿ ಕಾಯ್ದೆ ಪರ ಮಾತನಾಡಿದರೆಂದು ಎಡಿಟ್ ವಿಡಿಯೋ ಹಂಚಿಕೊಂಡ ಬಿಜೆಪಿಗರು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here