Homeಕರ್ನಾಟಕ'ದಿಢೀರ್‌ ಆಗಿ ಕೆಲಸದಿಂದ ತೆಗೆದು ಹಾಕಲಾಗಿದೆ': ವಿಕ್ಟೋರಿಯ ಆಸ್ಪತ್ರೆಯಲ್ಲಿ ವಾರ್ಡ್‌ ಅಟೆಂಡರ್‌ಗಳಿಂದ ಪ್ರತಿಭಟನೆ

‘ದಿಢೀರ್‌ ಆಗಿ ಕೆಲಸದಿಂದ ತೆಗೆದು ಹಾಕಲಾಗಿದೆ’: ವಿಕ್ಟೋರಿಯ ಆಸ್ಪತ್ರೆಯಲ್ಲಿ ವಾರ್ಡ್‌ ಅಟೆಂಡರ್‌ಗಳಿಂದ ಪ್ರತಿಭಟನೆ

- Advertisement -
- Advertisement -

ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಕಳೆದ 10-25ವರ್ಷಗಳಿಂದ ವಾರ್ಡ್‌ ಅಟೆಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕಾರ್ಮಿಕರನ್ನು ಇಂದು ಬೆಳ್ಲಗ್ಗೆಯಿಂದ ದಿಡೀರ್‌ ಆಗಿ ಕೆಲಸದಿಂದ ತೆಗೆದು ಹಾಕಲಾಗಿದ್ದು, ಸುಮಾರು 56 ಮಂದಿ ವಾರ್ಡ್‌ ಅಟೆಂಡರ್‌ಗಳು ಕೆಲಸವನ್ನು ಕಳೆದುಕೊಂಡು ನ್ಯಾಯಕ್ಕಾಗಿ ಕರ್ನಾಟಕ ಲೇಬರ್‌ ಯೂನಿಯನ್‌ ವಿಕ್ಟೋರಿಯಾ ಘಟಕದ ಆಶ್ರಯದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಆಲ್‌ ಇಂಡಿಯಾ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್ ರಾಜ್ಯ ಸಮಿತಿ ಸದಸ್ಯೆ ಮೈತ್ರೈಯಿ, ಇಲ್ಲಿನ ವಾರ್ಡ್‌ ಅಟೆಂಡರ್‌ಗಳು ಕಳೆದ 20-25 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅವರನ್ನು ದಿಢೀರ್‌ ಆಗಿ ಕೆಲಸದಿಂದ ತೆಗೆದು ಹಾಕಲಾಗಿದೆ. ಕಾಂಟ್ರ್ಯಾಕ್ಟರ್‌ ಮತ್ತು ವಿಕ್ಟೋರಿಯಾ ಆಸ್ಪತ್ರೆ ಈ ಆದೇಶವನ್ನು ನೀಡಿದೆ. ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯ ಡೈರೆಕ್ಟರ್‌, ಮೆಡಿಕಲ್‌ ಸುಪರಿಂಡೆಂಟ್‌ ಡಾ.ದೀಪಕ್‌ ಹಾಗೂ ಡೀನ್‌ ಅವರಲ್ಲೂ ಮಾತುಕತೆಯನ್ನು ನಡೆಸಿದ್ದೇವೆ. ಅವರು ಈಗ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಎಲ್ಲಾ ಸಿಬ್ಬಂದಿಗಳಿಗೆ ನ್ಯಾಯ ಸಿಗುವವರಿಗೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

ಈ ಬಗ್ಗೆ ವಾರ್ಡ್‌ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದ ಶಶಿಕಲಾ ಅವರು ನಾನುಗೌರಿ.ಕಾಂ ಜೊತೆ ಮಾತನಾಡಿದ್ದು, ನಾನು 20 ವರ್ಷಗಳಿಂದ ವಿಕ್ಟೋರಿಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ, ಇಲ್ಲಿ 20ವರ್ಷ, 10ವರ್ಷ 7 ವರ್ಷ ಈಗೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದವರನ್ನು ದಿಡೀರ್‌ ಕೆಲಸದಿಂದ ತೆಗೆದು ಹಾಕಲಾಗಿದೆ. ಎರಡು ತಿಂಗಳಿನಿಂದ ನಮಗೆ ವೇತನ ಕೊಟ್ಟಿಲ್ಲ, ನಿನ್ನೆ ವೇತನ ಕೇಳಿದ್ದಕ್ಕೆ ಇವತ್ತು 56 ಮಂದಿಯನ್ನು ತೆಗೆದು ಹಾಕಲಾಗಿದೆ. ನಾವು ವಾರ್ಡ್‌ ಒಳಗೆ ಕೆಲಸ ಮಾಡುವವರು, ಈಗ ನೀವು ಬೇಡ ಎಂದು ನಮ್ಮನ್ನು ತೆಗೆದು ಹಾಕಿ ಸೆಕ್ಯೂರಿಟಿಯವರನ್ನು ನೇಮಕ ಮಾಡುವುದಾಗಿ ಹೇಳಿದ್ದಾರೆ. ಹೊಸ ಕಾಂಟ್ರಾಕ್ಟರ್‌ ಬಂದಾಗ ನಮ್ಮನ್ನು ತೆಗೆದುಕೊಳ್ಳುವುದಾಗಿಯೂ ಹೇಳಿದ್ದರು. ಆದರೆ ಈಗ ನಮ್ಮನ್ನು ತೆಗೆದು ಹಾಕಲಾಗಿದೆ. ನಾವು ಆಫೀಸರ್‌ ಆಗಿರುವ ಕವಿತಾ ಅವರನ್ನು ಭೇಟಿ ಮಾಡಿದಾಗ ಅವರು ಸುಪರಿಂಡೆಂಟ್‌ ಡಾ.ದೀಪಕ್‌  ಬರಬೇಕು, ಅವರ ಬಂದ ಮೇಲೆ ಹೇಳುತ್ತೇನೆ ಎಂದು ಹೇಳಿದ್ದರು. ಅವರು ನಿನ್ನೆ ಬಂದಿದ್ದರು ಆ ಬಳಿಕ ಈ ರೀತಿ ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ಸಂದೇಶ ಕಳುಹಿಸಿದ್ದಾರೆ. ಆದ್ದರಿಂದ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಭಟನಾ ನಿರತಾ ಬೀಬಿ ಆಯಿಶಾ ಅವರು ನಾನುಗೌರಿ.ಕಾಂ ಜೊತೆ ಮಾತನಾಡಿದ್ದು, ನಾನು ಮತ್ತು ನನ್ನ ಪತಿ ಇಲ್ಲಿ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಈಗ ಹೊಸ ಏಜೆನ್ಸಿ ಬಂದು ನಮ್ಮಿಬ್ಬರು ಸೇರಿ 56 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ನಮ್ಮಿಬ್ಬರಿಗೂ ಕೆಲ ಇಲ್ಲದ ಕಾರಣ ನಮ್ಮ ಮನೆಯಲ್ಲಿ ಯಾರಿಗೂ ದುಡಿಮೆ ಇಲ್ಲದಾಗಿದೆ. ಮಕ್ಕಳು ಸಣ್ಣ ಸಣ್ಣವರಾಗಿದ್ದು ನಮಗೆ ಈಗ ದಿಕ್ಕು ತೋಚದಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಮೋದಿ ಆಡಳಿತದಲ್ಲಿ ಭಾರತದ ಇಮೇಜ್‌ ಜಾಗತಿಕವಾಗಿ ಸುಧಾರಿಸಿಲ್ಲ: ವರದಿ

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...