Homeಮುಖಪುಟಮೋದಿ ಆಡಳಿತದಲ್ಲಿ ಭಾರತದ ಇಮೇಜ್‌ ಜಾಗತಿಕವಾಗಿ ಸುಧಾರಿಸಿಲ್ಲ: ವರದಿ

ಮೋದಿ ಆಡಳಿತದಲ್ಲಿ ಭಾರತದ ಇಮೇಜ್‌ ಜಾಗತಿಕವಾಗಿ ಸುಧಾರಿಸಿಲ್ಲ: ವರದಿ

- Advertisement -
- Advertisement -

ಕಳೆದ ಒಂದು ದಶಕದಲ್ಲಿ ಅಂದರೆ ಮೋದಿ ಆಡಳಿತದಲ್ಲಿ ‘ಭಾರತದ ಜಾಗತಿಕ ಖ್ಯಾತಿಯು ಸುಧಾರಣೆಯನ್ನು ಕಂಡಿಲ್ಲ’ ಎಂಬ ಮಹತ್ವದ ಅಂಶವನ್ನು ವರದಿಯೊಂದು ಬಹಿರಂಗ ಮಾಡಿದೆ. ಈ ವರದಿಯನ್ನು ಅಂತರಾಷ್ಟ್ರೀಯ ಖ್ಯಾತಿಯ ಎರಡು ಪ್ರಮುಖ ಶಿಕ್ಷಣ ತಜ್ಞರು ಸಮೀಕ್ಷೆಗಳು ಮತ್ತು ಅಭಿಪ್ರಾಯ ಸಂಗ್ರಹಣೆ ಮೂಲಕ ಸಿದ್ದಪಡಿಸಿದ್ದಾರೆ. ಈ ವರದಿಯು ಮೋದಿಯನ್ನು ‘ವಿಶ್ವಗುರು’ ಎಂದು ಹೇಳುತ್ತಿರುವ ಬಿಜೆಪಿಗೆ ಮತ್ತು ಕೆಲ ಮಾಧ್ಯಮಗಳಿಗೆ ದೊಡ್ಡ ಹಿನ್ನೆಡೆ ಉಂಟುಮಾಡಿದೆ.

‘ದಿ ಮೋದಿ ಮಿರಾಜ್: ಇಲ್ಯೂಷನ್ಸ್ ಅಂಡ್ ರಿಯಾಲಿಟಿ ಆಫ್ ಇಂಡಿಯಾಸ್ ಗ್ಲೋಬಲ್ ಸ್ಟ್ಯಾಂಡಿಂಗ್ ಅಂಡ್ ರೆಪ್ಯೂಟೇಶನ್’ ಎಂಬ ವರದಿಯನ್ನು ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಇರ್ಫಾನ್ ನೂರುದ್ದೀನ್ ಮತ್ತು ನೆದರ್‌ಲ್ಯಾಂಡ್‌ನ ಗ್ರೋನಿಂಗನ್ ವಿಶ್ವವಿದ್ಯಾಲಯದ ಡಾ.ರೀತುಂಬ್ರಾ ಮನುವಿ ಸಿದ್ದಪಡಿಸಿದ್ದಾರೆ. ಇದಲ್ಲದೆ ಲಂಡನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓರಿಯಂಟಲ್ ಮತ್ತು ಆಫ್ರಿಕನ್ ಸ್ಟಡೀಸ್‌ನ ಡಾ ಸುಬೀರ್ ಸಿನ್ಹಾ ಅವರು ವರದಿ ಸಿದ್ದಪಡಿಸುವ ವೇಳೆ ಪ್ರಧಾನ ಸಲಹೆಗಾರರಾಗಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸಿದ್ದಾರೆ, ಮೋದಿ ಜಗತ್ತಿನಲ್ಲಿ ಭಾರೀ ಪ್ರಭಾವ ಬೀರಿದ್ದಾರೆ, ಮೋದಿ ಅಡಳಿತದಲ್ಲಿ ಭಾರತದ ಇಮೇಜ್‌ ಜಾಗತಿಕವಾಗಿ ಹೆಚ್ಚಾಗಿದೆ ಎಂದು ಆಡಳಿತ ಪಕ್ಷವು ಆಗಾಗ್ಗೆ ಪ್ರತಿಪಾದಿಸುತ್ತಿದೆ ಎಂದು ವರದಿಯಲ್ಲಿ ಲೇಖಕರು ಉಲ್ಲೇಖಿಸಿದ್ದು, ಈ ನಿರೂಪಣೆಯನ್ನು ಭಾರತೀಯ ಮಾಧ್ಯಮಗಳು ಹೆಚ್ಚಾಗಿ ಪ್ರಚಾರ ಮಾಡುತ್ತಿದೆ ಎಂದು ಹೇಳಿದೆ.

ಭಾರತೀಯರು ತಮ್ಮ ದೇಶದ ಜಾಗತಿಕ ಖ್ಯಾತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ, ಆದ್ದರಿಂದ ಭಾರತವು ಇತಿಹಾಸದಲ್ಲಿ ಅತಿದೊಡ್ಡ ಚುನಾವಣೆಯನ್ನು ಪ್ರಾರಂಭಿಸುತ್ತಿರುವಾಗ ಮೋದಿ ಈ ವಿಷಯದಲ್ಲಿ ಯಶಸ್ವಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುವುದು ಬಹಳ ಮಹತ್ವದ್ದಾಗಿದೆ ಎಂದು ವರದಿ ಹೇಳಿದೆ.

ವರದಿಯು, 2023ರ ಪ್ಯೂ ಗ್ಲೋಬಲ್ ಆಟಿಟ್ಯೂಡ್ಸ್ ಸಮೀಕ್ಷೆಯ ವರದಿಯ ಡೇಟಾವನ್ನು ಉಲ್ಲೇಖಿಸಿದೆ. 23 ದೇಶಗಳಲ್ಲಿ 46% ವಯಸ್ಕರು ಭಾರತದ ಬಗ್ಗೆ ಉತ್ತಮ ದೃಷ್ಟಿಕೋನ, ಅಭಿಪ್ರಾಯ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ. ಇದಕ್ಕೆ ವಿರುದ್ಧವಾಗಿ 34% ಜನರು ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿಲ್ಲ ಎಂದು ವರದಿ ತಿಳಿಸಿದೆ.

ಸಮೀಕ್ಷೆ ನಡೆಸಿದ 12 ದೇಶಗಳಲ್ಲಿ ಕೇವಲ 37% ವಯಸ್ಕರು ಮೋದಿಯ ಬಗ್ಗೆ ವಿಶ್ವಾಸ, ನಂಬಿಕೆ ಹೊಂದಿರುವ ಬಗ್ಗೆ ಹೇಳಿದ್ದು, ಹೆಚ್ಚಿನ 40% ಜನರು ಮೋದಿಯ ಬಗ್ಗೆ ವಿಶ್ವಾಸ ನಮಗೆ ಇಲ್ಲ ಎಂದು ಹೇಳಿದ್ದಾರೆ.

2008ರಲ್ಲಿ ನಡೆಸಿದ ಇದೇ ರೀತಿಯ ಸಮೀಕ್ಷೆಯಲ್ಲಿ, ಭಾರತದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಹೊರ ಬಂದಿತ್ತು. ಯುರೋಪಿಯನ್ನರಿಗೆ ಭಾರತದ ಬಗ್ಗೆ ಸಕಾರಾತ್ಮಕ ಅಭಿಪ್ರಾಯವಿತ್ತು. 15 ವರ್ಷಗಳ ನಂತರ ಯುರೋಪಿಯನ್ ರಾಷ್ಟ್ರಗಳಲ್ಲಿ ಸುಮಾರು 10 ಶೇಕಡಾ ಪಾಯಿಂಟ್‌ಗಳ ಗಮನಾರ್ಹ ಕುಸಿತ ಕಂಡುಬಂದಿದೆ. 2008ರಲ್ಲಿ ಫ್ರಾನ್ಸ್‌ನಲ್ಲಿ 70% ವಯಸ್ಕರು ಭಾರತದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದರು. 2023ಕ್ಕೆ ಇದರ ಅಂಕಿ-ಅಂಶಗಳು 39%ಕ್ಕೆ ಇಳಿಕೆಯಾಗಿದೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ 2008ರಲ್ಲಿ 63% ಜನರು ಭಾರತದ ಬಗ್ಗೆ ಅನುಕೂಲಕರ ದೃಷ್ಟಿಕೋನವನ್ನು ಹೊಂದಿದ್ದರು ಇದು 2023ರಲ್ಲಿ 51%ಕ್ಕೆ ಇಳಿದಿದೆ. ಕಳೆದ ವರ್ಷದ ಸಮೀಕ್ಷೆಯ ಪ್ರಕಾರ, ಕೇವಲ 23% ಅಮೆರಿಕನ್ನರು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವವು ಇದೆ ಎಂದು ನಂಬಿದ್ದರು. ಸುಮಾರು 40% ಅಮೆರಿಕನ್ನರು 2023ರಲ್ಲಿ ಮೋದಿಯ ಬಗ್ಗೆ ನಾವು ಕೇಳಿಲ್ಲ ಎಂದು ಹೇಳಿದ್ದಾರೆ. 37% ಅಮೆರಿಕನ್ನರು  ಮೋದಿಯ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದ ಬಗೆಗಿನ ವಿಶ್ವಾಸ ಸ್ವಲ್ಪ ಇದೆ ಅಥವಾ ಇಲ್ಲ ಎಂಬ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಮಾರ್ಚ್ 2024ರ ಯುಗೋವ್ ಸಮೀಕ್ಷೆಯ ಅತ್ಯಂತ ಜನಪ್ರಿಯ ವಿದೇಶಿ ರಾಜಕಾರಣಿಯ ಪಟ್ಟಿಯಲ್ಲಿ ಮೋದಿ 26ನೇ ಸ್ಥಾನದಲ್ಲಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗಿಂತ ಮೋದಿ ಹಿಂದಿದ್ದಾರೆ.  ಸಮೀಕ್ಷೆಯ ಪ್ರಕಾರ, 51% ಅಮೆರಿಕನ್ನರು ಮೋದಿಯವರ ಬಗ್ಗೆ ಕೇಳಿದ್ದಾರೆ. ಅವರಲ್ಲಿ ಕೇವಲ 22% ಜನರು ಮಾತ್ರ ಅವರ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದ್ದಾರೆ.

GlobeScan ನಡೆಸಿದ ಇತ್ತೀಚಿನ ಆನ್‌ಲೈನ್ ಸಮೀಕ್ಷೆಯಲ್ಲಿ 84% ರಷ್ಟು ಜನರು ಮೋದಿ ಸರ್ಕಾರ ಮಾನವ ಹಕ್ಕುಗಳ ಬಗ್ಗೆ ಸಮರ್ಥಿಸಬೇಕೆಂದು ನಂಬುತ್ತಾರೆ. ಸುಮಾರು 90% ರಷ್ಟು ಅಮೆರಿಕಾದಲ್ಲಿ ಸಿಖ್‌ ಪ್ರತ್ಯೇಕತಾವಾದಿ ನಾಯಕ ಪನ್ನೂನ್‌ ಹತ್ಯೆ ಸಂಚಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಮೋದಿ ಜಗತ್ತಿನಲ್ಲಿ ಪ್ರಭಾವ ಬೀರಿದ್ದಾರೆಂದು ಭ್ರಮೆ ಹರಡುವಲ್ಲಿ ಭಾರತೀಯ ಮಾಧ್ಯಮಗಳು ಸಹಭಾಗಿತ್ವವನ್ನು ಹೊಂದಿರಬಹುದು ಎಂದು ವರದಿಯು ಹೇಳಿದೆ, ಮಾನವ ಹಕ್ಕುಗಳು ಮತ್ತು ಪ್ರಜಾಸತ್ತಾತ್ಮಕ ಮಾನದಂಡಗಳಿಗೆ ಹೆಚ್ಚಿನ ಗೌರವದ ಕಡೆಗೆ ತನ್ನ ಮಾರ್ಗವನ್ನು ಬದಲಾಯಿಸಿದರೆ ಜಾಗತಿಕವಾಗಿ ಭಾರತದ ಪ್ರಭಾವವು ತ್ವರಿತವಾಗಿ ಬದಲಾಗಬಹುದು ಎಂದು ಲೇಖಕರು ಹೇಳಿದ್ದಾರೆ.

ಇದನ್ನು ಓದಿ: ಬಿಎಸ್ಪಿ ಉತ್ತರಾಧಿಕಾರಿ ಸ್ಥಾನದಿಂದ ಸೋದರಳಿಯ ಆಕಾಶ್ ಆನಂದ್‌ಗೆ ವಜಾ ಮಾಡಿದ ಮಾಯಾವತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...