Homeಕರ್ನಾಟಕಬೆಳಗಾವಿ| ವಿದೇಶಿ ಪ್ರತಿನಿಧಿಗಳ ಭೇಟಿಗೆ ಅವಕಾಶ ನಿರಾಕರಣೆ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ 'ಎದ್ದೇಳು ಕರ್ನಾಟಕ'

ಬೆಳಗಾವಿ| ವಿದೇಶಿ ಪ್ರತಿನಿಧಿಗಳ ಭೇಟಿಗೆ ಅವಕಾಶ ನಿರಾಕರಣೆ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ‘ಎದ್ದೇಳು ಕರ್ನಾಟಕ’

- Advertisement -
- Advertisement -

ಜಾಗತಿಕ ಚುನಾವಣಾ ನಿರ್ವಹಣಾ ಸಂಸ್ಥೆಗಳು (ಇಎಂಬಿ) ಪರವಾಗಿ ಭಾರತದ ಚುನಾವಣಾ ಪ್ರಕ್ರಿಯೆ ವೀಕ್ಷಿಸಲು ಆಗಮಿಸಿರುವ ವಿದೇಶಿ ಪ್ರತಿನಿಧಿಗಳ ತಂಡವನ್ನು ಭೇಟಿ ಮಾಡಲು ಸರ್ಕಾರ ಯಾರಿಗೂ ಅನುಮತಿ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ವಿವಿಧ ದೇಶಗಳ ಪ್ರತಿನಿಧಿಗಳನ್ನೊಳಗೊಂಡ ನಿಯೋಗ ಚುನಾವಣಾ ಪ್ರಕ್ರಿಯೆ ವೀಕ್ಷಿಸಲು ಭಾರತಕ್ಕೆ ಆಗಮಿಸಿದೆ. ಈ ಪೈಕಿ ಕಾಂಬೋಡಿಯಾ, ಮಾಲ್ಡೊವಾ, ನೇಪಾಳ, ಸಿಷೆಲ್ ಹಾಗೂ ಟ್ಯುನೇಷಿಯಾ ದೇಶಗಳ ಚುನಾವಣಾ ಆಯೋಗಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳ ತಂಡವೊಂದು ಬೆಳಗಾವಿಗೆ ಭೇಟಿ ಬಂದಿತ್ತು. ಈ ತಂಡವನ್ನು ಭೇಟಿ ಮಾಡಲು ಅಧಿಕಾರಿಗಳು ಅವಕಾಶ ನೀಡಿಲ್ಲ ಎಂದು ‘ಎದ್ದೇಳು ಕರ್ನಾಟಕ’ ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.

‘ಆಡಳಿತ ಪಕ್ಷದಿಂದ ಚುನಾವಣಾ ಆಯುಕ್ತರ ನೇಮಕ, ಚುನಾವಣಾ ಆಯೋಗ ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವುದು, ಆಡಳಿತ ಪಕ್ಷ ನೀತಿ ಸಂಹಿತೆ ಉಲ್ಲಂಘಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು, ಪ್ರತಿಪಕ್ಷಗಳ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದು, ಪ್ರತಿಪಕ್ಷ ನಾಯಕರ ಬಂಧನ, ಅಲ್ಪ ಸಂಖ್ಯಾತರ ವಿರುದ್ಧದ ದ್ವೇಷ ಭಾಷಣ, ಇವಿಎಂ, ವಿವಿಪ್ಯಾಟ್‌ಗಳ ಮೂಲಕ ವಂಚನೆ’ ಸೇರಿದಂತೆ ಚುನಾವಣಾ ವ್ಯವಸ್ಥೆಯ ವಸ್ತುಸ್ಥಿತಿಯನ್ನು ವಿದೇಶಿ ಪ್ರತಿನಿಧಿಗಳಿಗೆ ತಿಳಿಸಲು ಎದ್ದೇಳು ಕರ್ನಾಟಕ ಮುಂದಾಗಿತ್ತು. ಆದರೆ, ಇದಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಅವಕಾಶ ನೀಡಿಲ್ಲ ಎಂದು ತಿಳಿದು ಬಂದಿದೆ.

ವಿದೇಶಿ ಪ್ರತಿನಿಧಿಗಳಿಗೆ ನೀಡಲು ಉದ್ದೇಶಿಸಿದ್ದ ವರದಿ 

“ವಿದೇಶಿ ಪ್ರತಿನಿಧಿಗಳ ತಂಡವನ್ನು ಭೇಟಿ ಮಾಡಲು ಯಾರಿಗೂ ಅವಕಾಶವಿಲ್ಲ. ನಮಗೆ ಸರ್ಕಾರದಿಂದ ಆದೇಶವಿದೆ. ನೀವು ಬೇಕಾದರೆ ಸುಪ್ರೀಂ ಕೋರ್ಟ್‌ಗೆ ತೆರಳಿ ಇದನ್ನು ಪ್ರಶ್ನಿಸಿ ಅಥವಾ ಚುನಾವಣಾ ಆಯೋಗದಿಂದ ಅನುಮತಿ ಪಡೆದುಕೊಂಡು ಬನ್ನಿ. ಆದರೆ, ನಾನು ಮಾತ್ರ ಅವಕಾಶ ನೀಡಲು ಸಾಧ್ಯವಿಲ್ಲ” ಎಂದು ಬೆಳಗಾವಿ ಜಿಲ್ಲಾಧಿಕಾರಿ ಹೇಳಿದ್ದಾಗಿ ಎದ್ದೇಳು ಕರ್ನಾಟಕದ ಮುಖಂಡರು ತಿಳಿಸಿದ್ದಾರೆ.

“ಕೇಂದ್ರ ಸರ್ಕಾರ ವಿದೇಶಿ ಪ್ರತಿನಿಧಿಗಳನ್ನು ಜನರಿಂದ ದೂರವಿಡುವ ಮೂಲಕ ಸತ್ಯ ಮರೆಮಾಚಲು ಮುಂದಾಗಿದೆ. ಇವಿಎಂ ತೆರೆಯುವುದು, ಮತದಾನ ಮಾಡುವುದು ಸೇರಿದಂತೆ ಕೆಲ ಪ್ರಾಥಮಿಕ ವಿಷಯಗಳನ್ನು ಮಾತ್ರ ಅವರಿಗೆ ತಿಳಿಸಲಾಗುತ್ತಿದೆ. ಚುನಾವಣೆಯಲ್ಲಿ ನಡೆಯುತ್ತಿರುವ ವಂಚನೆಯ ವಸ್ತುಸ್ಥಿತಿ ವಿದೇಶಿ ತಂಡಕ್ಕೆ ತಿಳಿದಿಲ್ಲ. ಅದನ್ನು ತಿಳಿಸಲು ಸರ್ಕಾರ ಅವಕಾಶ ನೀಡುತ್ತಿಲ್ಲ. ಪ್ರತಿನಿಧಿಗಳನ್ನೂ ಕೂಡ ತಮಗೆ ಬೇಕಾದ ದೇಶಗಳಿಂದ ಆಯ್ಕೆ ಮಾಡಲಾಗಿದೆ. ಇಲ್ಲಿ ಚುನಾವಣಾ ಪ್ರಕ್ರಿಯೆ ವೀಕ್ಷಿಸಲು ಬಂದವರ ದೇಶಗಳಲ್ಲೇ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ.

ವಿದೇಶಿ ಪ್ರತಿನಿಧಿಗಳ ಭೇಟಿಗೆ ಅವಕಾಶ ಸಿಗದ ಹಿನ್ನೆಲೆ ಎದ್ದೇಳು ಕರ್ನಾಟಕದ ಮುಖಂಡರು, ಇಎಂಬಿಗೆ ನೀಡಬೇಕಾದ ವರದಿ ಮತ್ತು ಮನವಿಯನ್ನು ಜಿಲ್ಲಾಧಿಕಾರಿಗೆ ನೀಡಿದ್ದಾರೆ.

ಇದನ್ನೂ ಓದಿ : ಬಿಜೆಪಿಯ ‘ಕೋಮು ದ್ವೇಷದ ಪೋಸ್ಟ್‌’ನ್ನು ತೆಗೆದು ಹಾಕುವಂತೆ ‘ಎಕ್ಸ್‌’ಗೆ ಸೂಚಿಸಿದ ಚು.ಆಯೋಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...