Homeಮುಖಪುಟಲೋಕಸಭಾ ಚುನಾವಣೆ 2024: ಸಮಸ್ಯೆ ಪರಿಹರಿಸದ ಗುಜರಾತ್‌ ಸರ್ಕಾರ; ಮತದಾನ ಬಹಿಷ್ಕರಿಸಿದ ಹಲವು ಗ್ರಾಮಸ್ಥರು

ಲೋಕಸಭಾ ಚುನಾವಣೆ 2024: ಸಮಸ್ಯೆ ಪರಿಹರಿಸದ ಗುಜರಾತ್‌ ಸರ್ಕಾರ; ಮತದಾನ ಬಹಿಷ್ಕರಿಸಿದ ಹಲವು ಗ್ರಾಮಸ್ಥರು

- Advertisement -
- Advertisement -

ತಮ್ಮ ಧೀರ್ಘ ಕಾಲದ ಬೇಡಿಕೆಯನ್ನು ಗುಜರಾತ್‌ ಸರ್ಕಾರ ಈಡೇರಿಸಿಲ್ಲ ಎಂಬ ಕಾರಣಕ್ಕೆ ಮೂರು ಗ್ರಾಮಗಳ ಸುಮಾರು ಒಂದು ಸಾವಿರ ಮತದಾರರು ಮಂಗಳವಾರ ಲೋಕಸಭೆ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ, ಹಲವು ಗ್ರಾಮಗಳ ಜನರು ಸರ್ಕಾರದಿಂದ ತಮ್ಮ ಈಡೇರದ ಬೇಡಿಕೆಗಳಿಂದ ಭಾಗಶಃ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ, ಭರೂಚ್ ಜಿಲ್ಲೆಯ ಕೇಸರ್ ಗ್ರಾಮ, ಸೂರತ್ ಜಿಲ್ಲೆಯ ಸನಾಧಾರ ಮತ್ತು ಬನಸ್ಕಾಂತ ಜಿಲ್ಲೆಯ ಭಖಾರಿ ಮತದಾರರು ಮತದಾನವನ್ನು ಸಂಪೂರ್ಣವಾಗಿ ಬಹಿಷ್ಕರಿಸಿದರೆ, ಜುನಾಗಢ ಜಿಲ್ಲೆಯ ಭಟ್ಗಾಮ್ ಗ್ರಾಮ ಮತ್ತು ಬೋಡೋಲಿ ಮತ್ತು ಬೋಡೋಲಿ ಮತ್ತು ಮಹಿಸಾಗರ ಜಿಲ್ಲೆಯ ಕುಂಜರ ಗ್ರಾಮಗಳು ಚುನಾವಣೆಯನ್ನು ಭಾಗಶಃ ಬಹಿಷ್ಕರಿಸಿದವು. ಸನಧಾರ ಗ್ರಾಮವು ಬಾರ್ಡೋಲಿ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ ಮತ್ತು 320 ಮತದಾರರನ್ನು ಹೊಂದಿದೆ.

ಚುನಾವಣಾ ಆಯೋಗದ ವರದಿಯ ಪ್ರಕಾರ, ಸ್ಥಳೀಯ ಚುನಾವಣಾ ಆಡಳಿತ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹೊರಬರಲು, ತಮ್ಮ ಹಕ್ಕು ಚಲಾಯಿಸುವಂತೆ ಮನವೊಲಿಸಲು ಪ್ರಯತ್ನಿಸಿದರೂ 320 ಮತದಾರರಲ್ಲಿ ಯಾರೊಬ್ಬರೂ ಮತ ಚಲಾಯಿಸಲಿಲ್ಲ ಎನ್ನಲಾಗಿದೆ.

ಪಟಾನ್ ಸಂಸದೀಯ ಕ್ಷೇತ್ರಕ್ಕೆ ಒಳಪಡುವ ಬಕ್ರಿ ಗ್ರಾಮದ ಸುಮಾರು 300 ಮತದಾರರು ತಮ್ಮ ಗ್ರಾಮ ಪಂಚಾಯಿತಿ ವಿಭಜನೆಯನ್ನು ವಿರೋಧಿಸಿ ಸಾಮೂಹಿಕವಾಗಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಮನವೊಲಿಕೆಯ ಹೊರತಾಗಿಯೂ, ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸದ ನಿರ್ಧಾರದಲ್ಲಿ ದೃಢವಾಗಿ ಉಳಿದರು.

ಬೆಳಗ್ಗೆಯಿಂದಲೇ ಚುನಾವಣಾ ಸಿದ್ಧತೆ ನಡೆದಿದ್ದು, ಮತಗಟ್ಟೆ ಅಧಿಕಾರಿಗಳು ಕಾದು ಕುಳಿತಿದ್ದರೂ ಗ್ರಾಮಸ್ಥರು ಮತದಾನಕ್ಕೆ ಬಾರದೆ ಹೋಗಿದ್ದರು. ತಮ್ಮ ಗ್ರಾಮ ಪಂಚಾಯತಿ ವಿಂಗಡಣೆಯ ಬಗ್ಗೆ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ ಎಂದು ಅವರು ಹೇಳಿದರು.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಭರತಸಿಂಹ ದಾಭಿ ಕೂಡ ಗ್ರಾಮಕ್ಕೆ ಆಗಮಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಭರೂಚ್ ಜಿಲ್ಲೆಯ ಕೇಸರ್ ಗ್ರಾಮದ ಸುಮಾರು 350 ಮತದಾರರು ಮತದಾನ ಮಾಡದಿರುವ ತಮ್ಮ ನಿರ್ಧಾರದಲ್ಲಿ ಅಚಲವಾಗಿ ಉಳಿದರು ಮತ್ತು ದಿನದ ಅಂತ್ಯದ ವೇಳೆಗೆ ಒಂದೇ ಒಂದು ಮತವೂ ಚಲಾವಣೆಯಾಗಲಿಲ್ಲ.

ಮತದಾರರು ತಮ್ಮ ಮತಗಳನ್ನು ಬಹಿಷ್ಕರಿಸುವುದು ಇದೇ ಮೊದಲಲ್ಲ. ನದಿಗೆ ಸೇತುವೆ ನಿರ್ಮಿಸುವಂತೆ ಹಲವು ಬಾರಿ ಒತ್ತಾಯಿಸಿದರೂ ಸರ್ಕಾರ ಬೇಡಿಕೆ ಈಡೇರಿಸದ ಕಾರಣ ಈ ಹಿಂದೆಯೂ ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗುಜರಾತ್‌ನ ಒಟ್ಟು 26 ಲೋಕಸಭಾ ಸ್ಥಾನಗಳ ಪೈಕಿ 25 ಕ್ಷೇತ್ರಗಳಿಗೆ ಮಂಗಳವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಸೂರತ್ ಕ್ಷೇತ್ರವನ್ನು ಅವಿರೋಧವಾಗಿ ಗೆದ್ದಿದೆ.

ಇದನ್ನೂ ಓದಿ; ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...