Homeಮುಖಪುಟ'ಸ್ನೇಹಿತರ' ಮೇಲಿನ ದಾಳಿಯು ಮೋದಿಯ ಕುರ್ಚಿ ಅಲುಗಾಡುತ್ತಿರುವುದನ್ನು ತೋರಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

‘ಸ್ನೇಹಿತರ’ ಮೇಲಿನ ದಾಳಿಯು ಮೋದಿಯ ಕುರ್ಚಿ ಅಲುಗಾಡುತ್ತಿರುವುದನ್ನು ತೋರಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

- Advertisement -
- Advertisement -

ತೆಲಂಗಾಣದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಚುನಾವಣೆ ಘೋಷಣೆಯಾದ ಬಳಿಕ ರಾಹುಲ್ ಗಾಂಧಿಯೇಕೆ ಅದಾನಿ–ಅಂಬಾನಿ ಬಗ್ಗೆ ಮಾತನಾಡುತ್ತಿಲ್ಲ. ಏನಾದರೂ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರಾ? ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಸ್ನೇಹಿತರ ಮೇಲಿನ ದಾಳಿಯು ಕಾಲ ಬದಲಾಗುತ್ತಿದೆ ಮತ್ತು ನರೇಂದ್ರ ಮೋದಿ ಅವರ ಕುರ್ಚಿ ಅಲುಗಾಡುತ್ತಿದೆ ಎಂಬುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಕಾಲ ಬದಲಾಗುತ್ತಿದೆ, ಸ್ನೇಹಿತ ಇನ್ನು ಮುಂದೆ ಸ್ನೇಹಿತನಲ್ಲ, ಮೂರನೇ ಹಂತದ ಚುನಾವಣೆ ಮುಗಿದ ಬಳಿಕ ಇಂದು ಪ್ರಧಾನಿ ತಮ್ಮ ಸ್ನೇಹಿತರ ಮೇಲೆಯೇ ದಾಳಿ ನಡೆಸುತ್ತಿದ್ದಾರೆ. ಇದು ಮೋದಿಯವರ ಕುರ್ಚಿ ಅಲುಗಾಡುತ್ತಿರುವುದನ್ನು ತೋರಿಸುತ್ತದೆ. ಇದು ಫಲಿತಾಂಶಗಳ ನಿಜವಾದ ಪ್ರವೃತ್ತಿಯಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಆರೋಪಿಸಿದಂತೆ ಕೈಗಾರಿಕೋದ್ಯಮಿಗಳು ಕಾಂಗ್ರೆಸ್‌ಗೆ  ಕಪ್ಪುಹಣ ನೀಡಿದ್ದರೆ ಜಾರಿ ನಿರ್ದೇಶನಾಲಯ  ಮತ್ತು ಇತರ ಏಜೆನ್ಸಿಗಳು ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ತೆಲಂಗಾಣದ ವೇಮುಲವಾಡದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ ಪಕ್ಷವು ಏಕಾಏಕಿ ಅಂಬಾನಿ–ಅದಾನಿಯ ವಿಷಯದ ಬಗ್ಗೆ ಟೀಕಿಸುವುದನ್ನು ನಿಲ್ಲಿಸಿದೆ. ತೆಲಂಗಾಣದ ಮಣ್ಣಿನಲ್ಲಿ ನಿಂತು ಕೇಳುತ್ತೇನೆ, ಕಾಂಗ್ರೆಸ್‌ಗೆ ಎಷ್ಟು ಹಣ ತಲುಪಿದೆ? ಯಾವ ಒಪ್ಪಂದ ಮಾಡಿಕೊಂಡಿದೆ? ಅಂಬಾನಿ–ಅದಾನಿ ಬಗ್ಗೆ ಟೀಕಿಸುವುದನ್ನು ರಾತ್ರಿ ಕಳೆಯುವುದರೊಳಗಾಗಿ ನಿಲ್ಲಿಸಿದ್ದು ಏಕೆ ಎನ್ನುವುದನ್ನು ಜನರಿಗೆ ಹೇಳಬೇಕು ಎಂದು ಹೇಳಿದ್ದರು.

ಮಂಗಳವಾರ ಜಾರ್ಖಂಡ್‌ನಲ್ಲಿ ನಡೆದ ರ್ಯಾಲಿಯಲ್ಲಿ ಅದಾನಿಯನ್ನು ಉಲ್ಲೇಖಿಸಿದ ರಾಹುಲ್, “ಮೋದಿ-ಅದಾನಿ ಸರ್ಕಾರ” ಬೇಕಾ ಅಥವಾ ದಲಿತರು, ಹಿಂದುಳಿದವರು, ರೈತರು, ಆದಿವಾಸಿಗಳು ಮತ್ತು ಬಡವರ ಸರ್ಕಾರ ಬೇಕಾ ಎಂಬುದನ್ನು ಜನರು ನಿರ್ಧರಿಸಬೇಕು ಎಂದು ಹೇಳಿದ್ದರು.

ರಾಯ್ ಬರೇಲಿಯಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡುತ್ತಾ, ಪ್ರಧಾನಿ ನನ್ನ ಸಹೋದರನನ್ನು ರಾಜಕುಮಾರ ಎಂದು ಕರೆಯುತ್ತಾರೆ ಆದರೆ ಅವರು ಚಕ್ರವರ್ತಿ, ಅವರು ಸ್ಪಷ್ಟೀಕರಣಗಳನ್ನು ನೀಡುತ್ತಿದ್ದಾರೆ ಏಕೆಂದರೆ ಅವರು ಇಡೀ ದೇಶದ ಆಸ್ತಿಯನ್ನು ಕೆಲವು ಕೋಟ್ಯಾಧಿಪತಿಗಳಿಗೆ ನೀಡಿದ್ದನ್ನು ಜನರು ನೋಡಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಅವರ ವೀಡಿಯೊವನ್ನು ಹಂಚಿಕೊಂಡ ಕಾಂಗ್ರೆಸ್ ಕಾರ್ಯದರ್ಶಿ (ಆಡಳಿತ) ಗುರ್ದೀಪ್ ಸಪ್ಪಲ್, ಮೋದಿ ಅವರ ‘ಟೈಟಾನಿಕ್’ ಮುಳುಗುತ್ತಿದೆಯೇ ಮತ್ತು ಅವರು ತಮ್ಮ “ಆತ್ಮ ಸ್ನೇಹಿತರನ್ನು” ಮುಳುಗುತ್ತಿರುವ ಹಡಗಿನಿಂದ ಏಕೆ ತಳ್ಳುತ್ತಿದ್ದಾರೆ ಎಂದು ಕೇಳಿದರು. ಮೋದಿ ಅವರು ಅದಾನಿ ಮತ್ತು ಅಂಬಾನಿಯ ಮನೆಗಳಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಯಾವಾಗ ಕಳುಹಿಸುತ್ತಿದ್ದಾರೆಂದು ದೇಶಕ್ಕೆ ತಿಳಿಸಬೇಕು.  ಅಧಿಕಾರಿಗಳು ಟೆಂಪೋಗಳಲ್ಲಿ ಹಣ ತುಂಬಿದ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ್ದಾರೆ ಹೊರತು ಟೆಂಪೋವನ್ನು  ಸೀಜ್‌ ಮಾಡಿಲ್ಲ, ಈ ಅಧಿಕಾರಿಗಳನ್ನು ಯಾವಾಗ ವಜಾ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ದ್ವೇಷಪೂರಿತ ಭಾಷಣ: ಮೋದಿಯಿಂದ ವಿವರಣೆ ಕೇಳಲು ಚು.ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಕಾಂಗ್ರೆಸ್‌ ಹೈಕೋರ್ಟ್‌ ಮೊರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...