Homeಮುಖಪುಟರಾಷ್ಟ್ರೀಯ ಲಾಂಛನ ವಿರೂಪ; ಬಿಜೆಪಿ ವಿರುದ್ಧ ಪ್ರತಿಪಕ್ಷಗಳಿಂದ ವಾಗ್ದಾಳಿ

ರಾಷ್ಟ್ರೀಯ ಲಾಂಛನ ವಿರೂಪ; ಬಿಜೆಪಿ ವಿರುದ್ಧ ಪ್ರತಿಪಕ್ಷಗಳಿಂದ ವಾಗ್ದಾಳಿ

- Advertisement -
- Advertisement -

“ತಾಳ್ಮೆ ಹಾಗೂ ಘನತೆಯಿಂದ ಕೂಡಿದ ನಾಲ್ಕು ತಲೆಯ ಸಿಂಹವನ್ನು ಶತಮಾನದಿಂದ ನೋಡುತ್ತಿದ್ದೇವೆ. ಆದರೆ ಅಶೋಕ ಚಕ್ರವರ್ತಿಯ ಸಿಂಹಗಳು ಸಹ ಈಗ ಕೋಪಗೊಂಡಿವೆ…” ಎಂಬ ಟೀಕೆಗಳು ವ್ಯಕ್ತವಾಗಿವೆ.

ಹೊಸ ಸಂಸತ್ ಭವನದ ಮೇಲ್ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದರು. ಆದರೆ ರಾಷ್ಟ್ರೀಯ ಲಾಂಛನವು ಮೂಲವನ್ನು ಹೋಲುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಟ್ವೀಟ್ ಮಾಡಿ, “ರಾಷ್ಟ್ರೀಯ ಲಾಂಛನದಲ್ಲಿರುವ ಸಿಂಹಗಳು ಸೌಮ್ಯವಾದ ಅಭಿವ್ಯಕ್ತಿಯನ್ನು ಹೊಂದಿವೆ. ಆದರೆ ಹೊಸ ಶಿಲ್ಪದಲ್ಲಿ ನರಭಕ್ಷಕ ಪ್ರವೃತ್ತಿ ಕಾಣಬಹುದು” ಎಂದು ಟೀಕಿಸಿದೆ.

“ಆಕರ್ಷಕತೆಯಿಂದ ವಿರೂಪದ ಕಡೆಗೆ, ಫಿಟ್‌ನಿಂದ ಕೊಬ್ಬಿನ ಕಡೆಗೆ, ಸೌಂದರ್ಯದಿಂದ ಕುರೂಪದ ಕಡೆಗೆ ರಾಷ್ಟ್ರೀಯ ಲಾಂಛನವೂ ಏಕೆ ಕೆಟ್ಟ ಸ್ವಭಾವವನ್ನು ಹೊಂದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ರಾಷ್ಟ್ರವು ವಿಫಲವಾಗಿದೆ” ಎಂದು ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಆಶಿಷ್‌ ದುಅ ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಜವಾಹರ್ ಸಿರ್ಕಾರ್ ಪ್ರತಿಕ್ರಿಯೆ ನೀಡಿದ್ದು, “ನಮ್ಮ ರಾಷ್ಟ್ರೀಯ ಲಾಂಛನಕ್ಕೆ ಮಾಡಿದ ಅವಮಾನ” ಎಂದಿದ್ದಾರೆ.

ಎನ್‌ಡಿಟಿವಿ ಜೊತೆ ಮಾತನಾಡಿದ ಅವರು, “ಸಿಂಹದ ಮುಖದ ನೋಟದಲ್ಲಿ ಆಕ್ರಮಣಶೀಲತೆ ಇದೆ ಎಂದು ಸೂಕ್ಷ್ಮವಾಗಿ ಗಮನಿಸಬಹುದು, ಆದರೆ ಸಾಮ್ರಾಟ್ ಅಶೋಕ ಹೇಳಲು ಪ್ರಯತ್ನಿಸಿದ್ದು ಇದಲ್ಲ. ತುಂಬಾ ಆಕ್ರಮಣಕಾರಿ ಜೀವಿಗಳ ಮುಖದಲ್ಲಿನ ಶಾಂತ ಅಭಿವ್ಯಕ್ತಿಯನ್ನು ಸಾಮ್ರಾಟ್ ಅಶೋಕ ತೆರೆದಿಟ್ಟಿದ್ದನು. ಅಶೋಕನು ನೀಡಲು ಪ್ರಯತ್ನಿಸುತ್ತಿದ್ದ ಶಾಂತಿಯ ಸಂದೇಶದ ಸಾಕಾರವಾಗಿ ಸಿಂಹಗಳನ್ನು ನೋಡಬಹುದು” ಎಂದು ಸ್ಪಷ್ಟಪಡಿಸಿದ್ದಾರೆ.

“ಭವ್ಯವಾದ, ಶಾಂತಿಪ್ರಿಯ, ತಾಳ್ಮೆ ಮತ್ತು ವೈಭವದಿಂದ ಕೂಡಿದ ಸಿಂಹವು ಈಗ ತನ್ನ ಹೊಸ ನೋಟದಲ್ಲಿ ಕೋಪಗೊಂಡಿದೆ, ಕ್ರೂರವಾಗಿದೆ, ಬೆದರಿಸುತ್ತಿದೆ ಮತ್ತು ಹಿಂಸಾತ್ಮಕವಾಗಿ ಕಾಣುತ್ತಿದೆ. ಬಹುತೇಕ ದ್ವೇಷವನ್ನು ಹುಟ್ಟುಹಾಕುವ ರಂಗಾ ಬಿಲ್ಲಾ ಮತ್ತು ಅವರ 8 ವರ್ಷಗಳ ವಿಶ್ವಾಸಘಾತುಕ ಆಡಳಿತವನ್ನು ಇದು ಪುನರಾವರ್ತಿಸುತ್ತದೆ. ಮೋದಿ ಸರ್ಕಾರ ನಮ್ಮ ರಾಷ್ಟ್ರೀಯ ಲಾಂಛನವನ್ನು ಏಕೆ ವಿರೂಪಗೊಳಿಸಿದೆ ಎಂದು ನಾವು ಪ್ರಶ್ನಿಸಬಹುದೇ?” ಎಂದು ಕಾಂಗ್ರೆಸ್ ನಾಯಕ ವಿನಯ್‌ ಕುಮಾರ್‌ ದೊಕನಿಯ ಪ್ರಶ್ನಿಸಿದ್ದಾರೆ.

“ಈ ದೇಶದಲ್ಲಿ ಏನಾದ್ರೂ ಆಗ್ತಿದೆ ಎಲ್ಲರೂ ಸುಮ್ಮನಿರ್ತಾರಾ? ಇದು ರಾಷ್ಟ್ರೀಯ ಚಿಹ್ನೆಗೆ ಮಾಡಿದ ಅವಮಾನ” ಎಂದು ಚಲನಚಿತ್ರ ನಿರ್ದೇಶಕ ವಿನೋದ್ ಕಾಪ್ರಿ ಟ್ವೀಟ್ ಮಾಡಿದ್ದಾರೆ.

‌ಈ ಲಾಂಛನವು ಒಟ್ಟು 9,500 ಕೆಜಿ ತೂಕದ ಕಂಚಿನಿಂದ ಮಾಡಲ್ಪಟ್ಟಿದೆ, 6.5 ಮೀಟರ್ ಎತ್ತರವಿದೆ. ಲಾಂಛನವನ್ನು ಈಗಿನಂತೆ ಕಾಣುವಂತೆ ಮಾಡಲು 100ಕ್ಕೂ ಹೆಚ್ಚು ಕುಶಲಕರ್ಮಿಗಳು ಆರು ತಿಂಗಳ ಕಾಲ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಸಾಮ್ರಾಟ್ ಅಶೋಕನ ಕಾಲದ ನಾಲ್ಕು ತಲೆಯ ಸಿಂಹಕ್ಕೂ, ಹೊಸ ಸಂಸತ್‌‌ ಭವನದ ಮೇಲೆ ನಿರ್ಮಿಸಲಾಗಿರುವ ಸಿಂಹಕ್ಕೂ ವ್ಯತ್ಯಾಸಗಳು ಕಂಡು ಬರುತ್ತಿವೆ.

ಭಾರತದ ಲಾಂಛನವನ್ನು ಜನವರಿ 26, 1950ರಂದು ಅಂದರೆ ಭಾರತದ ಸಂವಿಧಾನವು ಜಾರಿಗೆ ಬಂದ ದಿನ ಅಂಗೀಕರಿಸಲಾಗಿದೆ.

ಬಿಜೆಪಿ ನಾಯಕನ ಸಮರ್ಥನೆ

ಬಿಜೆಪಿ ನಾಯಕ ಚಂದ್ರಕುಮಾರ್ ಬೋಸ್ ಪ್ರತಿಕ್ರಿಯೆ ನೀಡಿದ್ದು, “ಸಮಾಜದಲ್ಲಿ ಎಲ್ಲವೂ ವಿಕಸನವಾಗುತ್ತಿದೆ. ಸ್ವಾತಂತ್ರ್ಯದ 75 ವರ್ಷಗಳ ನಂತರ ನಾವು ಕೂಡ ವಿಕಸನಗೊಂಡಿದ್ದೇವೆ. ಕಲಾವಿದನ ಅಭಿವ್ಯಕ್ತಿಗೆ ಸರ್ಕಾರದ ಅನುಮೋದನೆ ಅಗತ್ಯವಿಲ್ಲ. ಎಲ್ಲದಕ್ಕೂ ನೀವು ಭಾರತ ಸರ್ಕಾರವನ್ನು, ಪ್ರಧಾನಿ ಮೋದಿಯನ್ನು ದೂಷಿಸಲು ಸಾಧ್ಯವಿಲ್ಲ. ಸಂರಚನೆಯಲ್ಲಿ ಬದಲಾವಣೆ, ಮಾರ್ಪಾಡು ಇದೆ ಎಂಬ ವಾದವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಾವು ಯಾವಾಗಲೂ ಟೀಕಿಸಬಾರದು. ಬಹುಶಃ ಭಾರತ ಇಂದು ವಿಭಿನ್ನವಾಗಿದೆ” ಎಂದು ಸಮರ್ಥಿಸಿದ್ದಾರೆ.

‘ರಾಷ್ಟ್ರ ಲಾಂಛನ ತಿರುಚುವುದು ಶಿಕ್ಷಾರ್ಹ ಅಪರಾಧ’

‘ರಾಷ್ಟ್ರ ಲಾಂಛನವನ್ನು ತಿರುಚುವುದು ಶಿಕ್ಷಾರ್ಹ ಅಪರಾಧ’ ಎಂದು ಚಿಂತಕ, ರಾಜಕೀಯ ವಿಶ್ಲೇಷಕರಾದ ರಾಜಾರಾಮ್ ತಲ್ಲೂರು ತಿಳಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ ಪೋಸ್ಟ್ ಮಾಡಿರುವ ಅವರು, “ಸಾರನಾಥದ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿರುವ ಅಶೋಕ ಚಕ್ರವರ್ತಿಯ -ಲಯನ್ ಕ್ಯಾಪಿಟಲ್- ಈ ದೇಶದ ಲಾಂಛನ. THE STATE EMBLEM OF INDIA (PROHIBITION OF IMPROPER USE) ACT, 2005 ACT NO. 50 OF 2005 ಎಂಬ ಸಾಂವಿಧಾನಿಕ ರಕ್ಷಣೆ ಈ ಲಾಂಛನಕ್ಕಿದೆ. ಈ ಲಾಂಛನವನ್ನು ವಿರೂಪಗೊಳಿಸುವುದು ಶಿಕ್ಷಾರ್ಹ ಅಪರಾಧ” ಎಂದು ಎಚ್ಚರಿಸಿದ್ದಾರೆ.

“ಒಕ್ಕೂಟ ಸರ್ಕಾರಕ್ಕೆ ಈ ಲಾಂಛನದ ಬಳಕೆಯನ್ನು ನಿರ್ದೇಶಿಸುವ ಕಾನೂನುಬದ್ಧ ಅಧಿಕಾರ ಇದೆಯೇ ಹೊರತು ಇದನ್ನು ವಿರೂಪಗೊಳಿಸುವ ಅಥವಾ ತನ್ನ ಮನಸ್ಸಿಗೆ ಬಂದಂತೆ ಸ್ವರೂಪದಲ್ಲಿ ಬದಲಾವಣೆಗಳನ್ನು ಮಾಡುವ ಹಕ್ಕಿಲ್ಲ. ಈಗ ಹೊಸ ಸಂಸತ್ ಭವನದ ಮೇಲುಭಾಗದಲ್ಲಿ ಉದ್ಘಾಟನೆಗೊಂಡಿರುವ ವ್ಯಗ್ರ ಸಿಂಹಗಳನ್ನು ಹೊಂದಿರುವ ಪ್ರತಿಮೆಗೂ ಮತ್ತು ಸಾರನಾಥದ ಪ್ರಶಾಂತ ಮುದ್ರೆಯ ಘನಗಂಭೀರ ಸಿಂಹಗಳಿರುವ ದೇಶದ ಲಾಂಛನಕ್ಕೂ ಎದ್ದು ಕಾಣುವ ವ್ಯತ್ಯಾಸ ತೋರುತ್ತಿದೆ. ಇದನ್ನು ಉದ್ಘಾಟನೆಗೆ ಮುನ್ನ ಒಕ್ಕೂಟ ಸರ್ಕಾರ ಗಮನಿಸಬೇಕಿತ್ತು. ಇದೊಂದು ಲೋಪವೇ ಸರಿ” ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಲೇ ಗಾಂಡುಗಳ,ಇಷ್ಟು ದಿನ ಸಿಂಹ ಸೈಲಾಂಟಾಗಿ ಕುಳಿತಿತ್ತು,ಆದರೆ ಈಗ ಸಿಂಹ ಘರ್ಜನೆ ಮಾಡ್ತಿದೆ ಪ್ರಪಂಚದಾದ್ಯಂತ ಆ ಸಂಕೇತ ಕಣ್ರೋ ಇದು ಕಲಬೆರಕೆಗಳಾ

  2. ರಾಷ್ಟ್ರೀಯ ಲಾಂಚನವನ್ನು ಬೇಕಾಬಿಟ್ಟಿಯಾಗಿ ತಮಗಿಶ್ಟ ಬಂದಂತೆ ಬದಲಾಯಿಸುವ ಯಾವ ಅದಿಕಾರವೂ, ಯಾವ ಸರ್ಕಾರಕ್ಕೂ ಇಲ್ಲ. ಆದ್ದರಿಂದ ಮೋದಿ ಸರ್ಕಾರದ ಈ ಕ್ರಮ ಕಂಡನಾರ್ಹ.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...