ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ ಒಂದು ತಿಂಗಳು ಪೂರೈಸಿದೆ. ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಿದ್ದು, ಇದೀಗ ದೆಹಲಿ-ಗಾಜಿಯಾಬಾದ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 9 ಮತ್ತು 24 ಗಳನ್ನು ತಡೆದಿದ್ದಾರೆ.
ಇದನ್ನು ದೆಹಲಿ ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದು, ರೈತರ ಪ್ರತಿಭಟನೆಯಿಂದಾಗಿ NH-9 ಮತ್ತು NH-24 ಮುಚ್ಚಲ್ಪಟ್ಟಿದೆ. ಜನರು ಗಾಜಿಯಾಬಾದ್‌ಗೆ DND, ITO ಮತ್ತು ವಜೀರಾಬಾದ್‌ನ ಪರ್ಯಾಯ ಮಾರ್ಗದ ಮೂಲಕ ಹೋಗುವಂತೆ ಸಲಹೆ ಮಾಡಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಭಾರತದೊಂದಿಗೆ ಮಾತನಾಡುವಂತೆ ಒತ್ತಾಯ – ಅಮೆರಿಕದ ಸಂಸದರ ಪತ್ರ
Traffic Alert
NH-9 and NH-24 both are closed for Delhi to Ghaziabad due of farmer protests. People are advised to take alternate route for Ghaziabad via DND, ITO and Wazirabad.
COVID PRECAUTIONS :WEAR MASK, MAINTAIN SOCIAL DISTANCING, KEEP HAND HYGIENE.
— Delhi Traffic Police (@dtptraffic) December 26, 2020
ಶುಕ್ರವಾರ ಪೊಲೀಸರು ಶುಕ್ರವಾರ ಸಿಂಘೂ, ಗಾಜಿಪುರ, ಪಿಯಾವ್ ಮಣಿಯಾರಿ ಮತ್ತು ಇತರ ಗಡಿ ಕೇಂದ್ರಗಳನನ್ನು ಬಂದ್ ಮಾಡಿದ್ದು, ಪ್ರಯಾಣಿಕರನ್ನು ಲಾಂಪೂರ್, ಸಫಿಯಾಬಾದ್, ಪಲ್ಲಾ, ಮತ್ತು ಸಿಂಘೂ ಸ್ಕೂಲ್ ಟೋಲ್ ಗಡಿಗಳಲ್ಲಿ ಪ್ರಯಾಣಿಸುವಂತೆ ಹೇಳಿದ್ದರು. ಪ್ರತಿಭಟನೆಗಳು ತೀವ್ರಗೊಂಡ ಹಿನ್ನಲೆಯಲ್ಲಿ ಹಿಂಸಾತ್ಮಕ ತಿರುವು ಪಡೆಯದಂತೆ ಗಾಜಿಪುರ ಗಡಿಯಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿತ್ತು.
ಕಳೆದ ಒಂದು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ, ಕೇಂದ್ರದ ಜೊತೆ ಆರು ಸುತ್ತಿನ ಮಾತುಕತೆ ಮುರಿದು ಬಿದ್ದಿದೆ. ರೈತರು ಕೇಂದ್ರವು ಪರಿಚಯಿಸಿದ ನೂತನ ಕಾನೂನುಗಳನ್ನು ವಾಪಾಸು ಪಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅದರೆ ಕೇಂದ್ರ ಸರ್ಕಾರ ಇದ್ಯಾವುದನ್ನೂ ಕಿವಿಗೆ ಹಾಕಿಕೊಂಡಿಲ್ಲ. ನಿನ್ನೆ ಕೂಡಾ ಪ್ರಧಾನಿ ನರೇಂದ್ರ ಮೋದಿ ಕಾನೂನನ್ನು ಸಮರ್ಥನೆ ಮಾಡಿಕೊಂಡಿದ್ದು, ಪ್ರತಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ರೈತರು ತಮ್ಮ ಹೋರಾಟದ ಬಗ್ಗೆ ಸ್ಫಷ್ಟತೆ ಇದೆ, ನಮ್ಮನ್ನು ಯಾರೂ ದಾರಿ ತಪ್ಪಿಸುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿಯವರು ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ: ಹೋರಾಟ ನಿರತ ರೈತರ ಆರೋಪ
Delhi: Protesting farmers block main Delhi-Mohan Nagar road at UP Gate (Delhi-Ghaziabad border).
"NH-9 & NH-24 closed from Delhi to Ghaziabad due to farmers' protests. People are advised to take alternate route for Ghaziabad via DND, ITO & Wazirabad," tweets Delhi Traffic Police pic.twitter.com/ntnh4J7CFq
— ANI (@ANI) December 26, 2020


