ಬೆದರಿಕೆ ಎದುರಿಸುತ್ತಿರುವ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಿತ ದಂಪತಿಗಳಿಗೆ ಮಹಾರಾಷ್ಟ್ರದ ಎಲ್ಲಾ ಜಿಲ್ಲೆಗಳಾದ್ಯಂತ ಇರುವ ಸರ್ಕಾರಿ ಅತಿಥಿ ಗೃಹಗಳನ್ನು ಸುರಕ್ಷಿತ ಮನೆಗಳಾಗಿ ಗೊತ್ತುಪಡಿಸಬೇಕೆಂದು ಬಾಂಬೆ ಹೈಕೋರ್ಟ್ ಸೋಮವಾರ ಸೂಚಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸರ್ಕಾರಿ ಅತಿಥಿ ಗೃಹಗಳು ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ಹೊಂದಿರುವುದರಿಂದ ಅಂತಹ ದಂಪತಿಗಳ ರಕ್ಷಣೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯವು ಸೂಚಿಸಿದೆ.
ಅಂತರ್ಜಾತಿ ಅಥವಾ ಅಂತರ್‌ಧರ್ಮೀಯ ವಿವಾಹಗಳಿಂದ ಕಿರುಕುಳ ಎದುರಿಸುತ್ತಿರುವ ರಾಜ್ಯದ ದಂಪತಿಗಳ ಸುರಕ್ಷತೆ ಮತ್ತು ರಕ್ಷಣೆಗಾಗಿ ಕರಡು ನೀತಿ ಸುತ್ತೋಲೆಯನ್ನು ಸಿದ್ಧಪಡಿಸುವಂತೆ ಮಹಾರಾಷ್ಟ್ರ ಸಾಮಾಜಿಕ ನ್ಯಾಯ ಮತ್ತು ಗೃಹ ಇಲಾಖೆಗೆ ನ್ಯಾಯಾಲಯ ಸೂಚಿಸಿದೆ. ಬೆದರಿಕೆ ಎದುರಿಸುತ್ತಿರುವ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಿಶೇಷ ವಿವಾಹ ಕಾಯಿದೆಯಡಿ ಮುಂಬೈನಲ್ಲಿ ಮದುವೆಯಾಗಲು ಬಯಸಿರುವ ವಿಭಿನ್ನ ಧರ್ಮಗಳ 24 ವರ್ಷ ವಯಸ್ಸಿನ ಜೋಡಿಯು, ಅವರ ಕುಟುಂಬಗಳಿಂದ ರಕ್ಷಣೆಯನ್ನು ಕೋರಿ 2023 ರಲ್ಲಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ದಂಪತಿಗಳು ತಮ್ಮ ಮನವಿಯಲ್ಲಿ, ಶಕ್ತಿ ವಾಹಿನಿ ಮಾರ್ಗಸೂಚಿಗಳ ಪ್ರಕಾರ ಸುರಕ್ಷಿತ ಮನೆಗಳಲ್ಲಿ ವಸತಿ ನೀಡುವಂತೆ ಕೋರಿದ್ದರು.
2018 ರಲ್ಲಿ, ಸರ್ಕಾರೇತರ ಸಂಸ್ಥೆ ಶಕ್ತಿ ವಾಹಿನಿಯ ಮನವಿಯ ಮೇರೆಗೆ ಸರ್ವೋಚ್ಚ ನ್ಯಾಯಾಲಯವು ಅಂತರ್ಧರ್ಮೀಯ ಮತ್ತು ಅಂತರ್ಜಾತಿ ವಿವಾಹಿತ ದಂಪತಿಗಳನ್ನು ರಕ್ಷಿಸಲು ಆದೇಶವನ್ನು ನೀಡಿತು. ವಿಚಾರಣೆಯ ವೇಳೆ, ಅಂತಹ ದಂಪತಿಗಳನ್ನು ರಕ್ಷಿಸಲು ಎಲ್ಲಾ ರಾಜ್ಯಗಳು ವಿಶೇಷ ಘಟಕಗಳನ್ನು ಸ್ಥಾಪಿಸಲಿದೆ ಎಂದು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಹೈಕೋರ್ಟ್ ನಿರ್ದೇಶನದ ನಂತರ ಅರ್ಜಿದಾರ ದಂಪತಿಗಳು ಪೊಲೀಸ್ ರಕ್ಷಣೆಯೊಂದಿಗೆ ಮುಂಬೈನಲ್ಲಿ ವಿವಾಹವಾಗಿದ್ದರು. ಆದಾಗ್ಯೂ, ವಿಶೇಷ ಘಟಕಗಳನ್ನು ಸ್ಥಾಪಿಸಲಾಗಿಲ್ಲ ಮತ್ತು ಮಹಾರಾಷ್ಟ್ರದಲ್ಲಿ ಸುರಕ್ಷಿತ ಮನೆಗಳನ್ನು ಗೊತ್ತುಪಡಿಸದ ಕಾರಣ, ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಶಕ್ತಿ ವಾಹಿನಿ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ನ್ಯಾಯಾಲಯವು ಹೆಚ್ಚುವರಿ ನಿರ್ದೇಶನಗಳನ್ನು ನೀಡಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ದೆಹಲಿ ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾಡಲಾಗಿರುವಂತೆ ಮಹಾರಾಷ್ಟ್ರದಲ್ಲಿ ಸುರಕ್ಷಿತ ಮನೆಗಳ ಲಭ್ಯತೆಯ ಬಗ್ಗೆ ಪ್ರಚಾರ ಮಾಡಿ ಮತ್ತು ಸಂಕಷ್ಟದಲ್ಲಿರುವ ದಂಪತಿಗಳಿಗೆ ಉಚಿತ ಸಹಾಯವಾಣಿಯನ್ನು ಸ್ಥಾಪಿಸುವಂತೆ ಅರ್ಜಿದಾರರ ವಕೀಲರು ಸೂಚಿಸಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಸಮುದಾಯವನ್ನು ‘ಪ್ರವರ್ಗ-2ಎ’ಗೆ ಸೇರಿಸದಂತೆ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹ; ಸಿಎಂಗೆ ಮನವಿ ಸಲ್ಲಿಕೆ
ಪಂಚಮಸಾಲಿ ಸಮುದಾಯವನ್ನು ‘ಪ್ರವರ್ಗ-2ಎ’ಗೆ ಸೇರಿಸದಂತೆ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹ; ಸಿಎಂಗೆ ಮನವಿ ಸಲ್ಲಿಕೆ


