Homeಕರ್ನಾಟಕಒಳ ಮೀಸಲಾತಿ ವಿವಾದ ಇತ್ಯರ್ಥಗೊಳ್ಳಲೇಬೇಕು; ಏಕೆ ಮತ್ತು ಹೇಗೆ?: ಕರ್ನಾಟಕ ಜನಶಕ್ತಿಯಿಂದ ಹೇಳಿಕೆ

ಒಳ ಮೀಸಲಾತಿ ವಿವಾದ ಇತ್ಯರ್ಥಗೊಳ್ಳಲೇಬೇಕು; ಏಕೆ ಮತ್ತು ಹೇಗೆ?: ಕರ್ನಾಟಕ ಜನಶಕ್ತಿಯಿಂದ ಹೇಳಿಕೆ

- Advertisement -
- Advertisement -

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಶಿಪಾರಸ್ಸು ಮಾಡಿರುವ ಡಾ. ನಾಗಮೋಹನ್‌ ದಾಸ್‌ ವರದಿಯನ್ನು ಮತ್ತೆ ಮುಂದಕ್ಕೆ ತಗೆದುಕೊಂಡು ಹೋಗದೆ, ಎಲ್ಲಾ ಶೋಷಿತ ಸಮುದಾಯಗಳ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮಾರ್ಪಾಡುಗಳ ಜೊತೆ, ಈ ಕೂಡಲೇ ಜಾರಿ ಮಾಡಬೇಕೆಂದು ಕರ್ನಾಟಕ ಜನಶಕ್ತಿ ಹೇಳಿದೆ.

ಈ ಕುರಿತು ಸಂಘಟನೆಯ ಪರವಾಗಿ ನೂರ್‌ ಶ್ರೀಧರ್‌, ಮಲ್ಲಿಗೆ ಸಿರಿಮನೆ, ಕೆ.ಎಲ್. ಅಶೋಕ್,  ಕುಮಾರ್‌ ಸಮತಳ ಅವರು ಹೇಳಿಕೆ ಹೊರಡಿಸಿ, ಖಾಸಗೀಕರಣ ಹಾಗೂ ಗುತ್ತಿಗೆಕರಣಗಳು ಮೀಸಲಾತಿಯನ್ನು ನೆಲಸಮ ಮಾಡುತ್ತಾ ಹೋಗುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಎಲ್ಲಾ ಸಮುದಾಯಗಳಲ್ಲೂ ಶಿಕ್ಷಿತ ಯುವಜನರ ಸಂಖ್ಯೆ ಹೆಚ್ಚುತ್ತಿದೆ, ಆದರೆ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ಪ್ರತಿಯೊಂದು ತಳ ಸಮುದಾಯಗಳಲ್ಲೂ ವಿದ್ಯಾವಂತ ನಿರುದ್ಯೋಗಿಗಳ ಅಥವಾ ಅರೆಬರೆ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅವಕಾಶಗಳೇ ವಿರಳವಾಗುತ್ತಿರುವ ಸಂದರ್ಭದಲ್ಲಿ ಒಳ ಮೀಸಲಾತಿಯ ವಿಚಾರ ಬಂದೊಡನೆ ʼಇರುವ ಮೀಸಲಾತಿಯನ್ನೂ ಇನ್ನ್ಯಾರು ಕಸಿದುಕೊಂಡುಬಿಡುತ್ತಾರೋ ಎಂಬ ಆತಂಕಕ್ಕೆ ಶೋಷಿತ ಸಮುದಾಯಗಳು ಒಳಗಾಗುತ್ತಿವೆ. ಪರ – ವಿರೋಧದ ವಾದ ವಿವಾದಗಳು ಶುರುವಾಗುತ್ತಿವೆ. ಈ ಆತಂಕವನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳಲು ಕಾಯುತ್ತಿರುವ ಶಕ್ತಿಗಳು ಉಪ್ಪು ಸವರಿ ಕೆರಳಿಸುವ ಕೆಲಸ ಮಾಡುತ್ತಿವೆ. ಈ ಪರಿಸ್ಥಿತಿ ನಮ್ಮನ್ನು ಮತ್ತಷ್ಟು ದುರ್ಬಲಗೊಳಿಸುತ್ತಿದೆ. ಶೋಷಿತ ಸಮುದಾಯಗಳ ನಡುವಿನ ಒಡಕನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಶೋಷಿತ ಸಮುದಾಯಗಳ ಐಕ್ಯತೆ ಮತ್ತು ಎಲ್ಲಾ ಸಮುದಾಯಗಳಿಗೆ ಸೂಕ್ತ ಸಾಮಾಜಿಕ ನ್ಯಾಯವನ್ನು ಬಯಸುವವರೆಲ್ಲರೂ ಸಂಯಮದಿಂದ ಆಲೋಚಿಸಿ, ಕ್ರಿಯಾಶೀಲ ಪಾತ್ರವಹಿಸಿ ಈ ವಿವಾದವನ್ನು ಅಂತ್ಯಗೊಳಿಸಿಕೊಳ್ಳಬೇಕಿದೆ. ಅಷ್ಟು ಮಾತ್ರವಲ್ಲ, ಶೋಷಿತರೆಲ್ಲರೂ ಜೊತೆಗೂಡಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು, ಖಾಸಗಿ ಮತ್ತು ಗುತ್ತಿಗೆ ಕ್ಷೇತ್ರಗಳಲ್ಲೂ ಮೀಸಲಾತಿ ದಕ್ಕಿಸಿಕೊಳ್ಳಲು ಹೋರಾಟ ರೂಪಿಸಬೇಕಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯು ಸಲಹೆ ನೀಡಿದೆ.

ಸರ್ಕಾರ ಮತ್ತೆ ಕಾಲಾಹರಣ ಮಾಡದೆ, ರಾಜಕೀಯ ಲಾಭ – ನಷ್ಟಗಳ ಲೆಕ್ಕ ಹಾಕುತ್ತಾ ಕೂರದೆ, ಎಲ್ಲಾ ಸಮುದಾಯಗಳ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯ ಸಮ್ಮತವಾಗಿ ಮತ್ತು ವಿವೇಕಯುತವಾಗಿ ಒಳ ಮೀಸಲಾತಿಯನ್ನು ಅನುಮೋದಿಸಿ ಜಾರಿಗೊಳಿಸಲು ಮುಂದಾಗಬೇಕಿದೆ ಎಂದು ಅದು ಒತ್ತಾಯಿಸಿದೆ.

ಮತ್ತೆ ಮುಂದೆ ಹೋಗದೆ, ಅಗತ್ಯ ಪರಿಷ್ಕರಣೆಗಳೊಂದಿಗೆ, ಡಾ. ನಾಗಮೋಹನ್‌ ದಾಸ್‌ ವರದಿ ಈ ಕೂಡಲೇ ಅನುಮೋದನೆಗೊಳ್ಳಬೇಕು ಏಕೆ? ಎಂದು ಪ್ರಕಟಣೆಯಲ್ಲಿ ಈ ಕೆಳಗಿನಂತೆ ವಿವರಿಸಿದೆ.

1. ಪರಿಶಿಷ್ಟ ಜಾತಿಗಳೊಳಗೆ ವಿವಿಧ ಕುಲ ಸಮುದಾಯಗಳು ಇರುವುದು ವಾಸ್ತವ, ಅವುಗಳ ಸಮಾಜಿಕ ಆರ್ಥಿಕ ಸ್ಥಿತಿಗತಿಗಳಲ್ಲಿ ಗಣನೀಯ ವ್ಯತ್ಯಾಸ ಇರುವುದೂ ಸತ್ಯ. ದೊಡ್ಡ ಸಂಖ್ಯಾಬಲವಿದ್ದರೂ ಅವಕಾಶಗಳನ್ನು ಸಾಪೇಕ್ಷವಾಗಿ ಕಡಿಮೆ ಪಡೆದಿರುವ ಮಾದಿಗ ಸಮುದಾಯ ಸುಮಾರು ಮೂರು ದಶಕಳಿಂದ ಒಳ ಮೀಸಲಾತಿಗಾಗಿ ಆಗ್ರಹಿಸಿ ಹೋರಾಡುತ್ತಾ ಬರುತ್ತಿದೆ. ತನ್ನ ಹೋರಾಟದ ಮೂಲಕ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಪ್ರೀಂ ಕೋರ್ಟು ಒಳ ಮೀಸಲಾತಿಯ ಹಕ್ಕೊತ್ತಾಯವನ್ನು ಅನುಮೋದಿಸುವಂತೆ ಮಾಡುವುದರಲ್ಲಿ ಯಶಸ್ವಿಗೊಂಡಿದೆ. ಇದು ಆ ಸಮುದಾಯ ಲಾಬಿ ಮಾಡಿ ಪಡೆಯುತ್ತಿರುವ ಹಕ್ಕಲ್ಲ, ಸತತ ಸಂಘರ್ಷ ನಡೆಸಿ ಪಡೆಯುತ್ತಿರುವ ಪಾಲು ಎಂಬುದನ್ನು ನಾವು ನೀವೆಲ್ಲರೂ ಒಪ್ಪಿಕೊಳ್ಳಲೇಬೇಕಿದೆ. ಈ ಸಮುದಾಯ ಬಹಳ ಕಾದಿದೆ. ಇನ್ನು ಕಾಯಿಸುವುದು ಯಾವ ರೀತಿಯಿಂದಲೂ ನ್ಯಾಯವಲ್ಲ. ಹಾಗಾಗಿಯೇ ಒಳ ಮೀಸಲಾತಿ ಈ ಬಾರಿ ಜಾರಿಯಾಗಲೇಬೇಕಿದೆ.

2. ಒಳ ಮೀಸಲಾತಿ ವಿವಾದದಿಂದಾಗಿ ಶೋಷಿತರ ನಡುವಿನ ಐಕ್ಯತೆಗೆ ಈಗಾಗಲೇ ಸಾಕಷ್ಟು ಧಕ್ಕೆಯಾಗಿದೆ. ಪರಸ್ಪರ ದೋಷಾರೋಪಣೆ ಮಾಡುವ, ಕೆಲವೊಮ್ಮೆ ಶತ್ರುಗಳಂತೆ ಕಾಣುವ ಮನೋಭಾವ ಸಮುದಾಯಗಳ ನಡುವಿನ ಬಂಧವನ್ನು ಸಾಕಷ್ಟು ದುರ್ಬಲಗೊಳಿಸಿದೆ. ಇದರ ದುರ್ಲಾಭ ಪಡೆದುಕೊಂಡ ಮನುವಾದಿ ಶಕ್ತಿಗಳು ಮಾದಿಗ ಸಮುದಾಯದ ಒಂದು ಭಾಗವನ್ನು ಈಗಾಗಲೇ ತಮ್ಮ ತೆಕ್ಕೆಗೆ ಎಳೆದುಕೊಂಡಿವೆ. ಮೀಸಲಾತಿಯನ್ನೇ ವಿರೋಧಿಸುವ ಮನುವಾದಿಗಳು ಅವಕಾಶವಾದಿ ರಾಜಕೀಯ ಉದ್ದೇಶದಿಂದ ತಾವು ಮಾದಿಗರ ಪರ ಇರುವಂತೆ ಕಪಟ ನಟನೆ ಮಾಡುತ್ತಿದ್ದಾರೆ. ಒಂದು ವೇಳೆ ಈ ಬಾರಿ ಇದು ಇತ್ಯರ್ಥಗೊಳ್ಳದೆ ಮುಂದುವರಿದಲ್ಲಿ ಪರಿಶಿಷ್ಟ ಸಮುದಾಯಗಳ ನಡುವಿನ ಮಾನಸಿಕ ಬಿರುಕು ಮತ್ತಷ್ಟು ಹೆಚ್ಚಾಗುತ್ತದೆ, ಮಾತ್ರವಲ್ಲ, ನಮ್ಮ ಸಮುದಾಯದ ಮತ್ತಷ್ಟು ಜನಸಂಖ್ಯೆಯನ್ನು ಬಿಜೆಪಿ ಮತ್ತು ಸಂಘಪರಿವಾರಗಳು ದಿಕ್ಕು ತಪ್ಪಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಅನಾಹುತವನ್ನು ತಡೆಗಟ್ಟಬೇಕಾದರೆ ಈ ಬಾರಿ ಒಳ ಮೀಸಲಾತಿ ಜಾರಿಯಾಗಲೇಬೇಕಿದೆ.

3. ಮೀಸಲಾತಿಯ ಪ್ರಮಾಣ ಹೆಚ್ಚಿಸಿಕೊಳ್ಳಲು ಮತ್ತು ಗುತ್ತಿಗೆ ಕ್ಷೇತ್ರದಲ್ಲೂ ಮೀಸಲಾತಿ ಜಾರಿಯಾಗುವಂತೆ ಮಾಡಲು ಶೋಷಿತ ಸಮುದಾಯಗಳೆಲ್ಲವೂ ಒಗ್ಗೂಡಿ ಹೋರಾಟ ರೂಪಿಸಬೇಕಾದ ಅಗತ್ಯವಿದೆ. ಆದರೆ ಈಗಿನ ಒಳ ಭಿನ್ನಾಭಿಪ್ರಾಯಗಳನ್ನು ಅಂತ್ಯಗೊಳಿಸಿಕೊಂಡರೇನೇ ಐಕ್ಯ ಚಳವಳಿ ರೂಪಿಸುವ ನಿಟ್ಟಿನಲ್ಲಿ ಮುನ್ಸಾಗಲು ಸಾಧ್ಯವಾಗುತ್ತದೆ. ಹಾಗಾಗಿಯೂ ಒಳ ಮೀಸಲಾತಿ ವಿವಾದ ಇತ್ಯರ್ಥಗೊಳ್ಳಬೇಕಿದೆ.

ಸದ್ಯದ ಸ್ಥಿತಿಯಲ್ಲಿ, ಒಳ ಮೀಸಲಾತಿಯನ್ನು ಜಾರಿ ಮಾಡುವುದರ ಬಗ್ಗೆ ತಾತ್ವಿಕವಾಗಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ, [ಇದ್ದರೂ ಸುಪ್ರೀಂ ಕೋರ್ಟು ಆದೇಶ ನೀಡಿರುವುದರಿಂದ ಜಾರಿ ಮಾಡಲೇಬೇಕಿದೆ]. ಭಿನ್ನಾಭಿಪ್ರಾಯವಿರುವುದು ನಾಗಮೋಹನ್‌ ದಾಸ್‌ ವರದಿ ಶಿಫಾರಸು ಮಾಡಿರುವ ಹಂಚಿಕೆಯಲ್ಲಿ “ತಮಗೆ 0.5% ಅಥವಾ 1% ಕಡಿಮೆ ಆಯಿತು” ಅಥವಾ “ನಮ್ಮ ಪಂಗಡಕ್ಕೆ ಸೇರಬೇಕಾದ ಒಂದೆರಡು ಕುಲಗಳನ್ನು ಮತ್ತೊಂದು ಪಂಗಡದಡಿ ಸೇರಿಸಲಾಗಿದೆ” ಎಂಬ ಭಿನ್ನಸ್ವರಗಳು ಮಾತ್ರ. ಈ ಭಿನ್ನ ಅಭಿಪ್ರಾಯಗಳನ್ನು ದೊಡ್ಡ ಭಿನ್ನಾಭಿಪ್ರಾಯಗಳನ್ನಾಗಿ ಮಾಡಿಕೊಳ್ಳದೆ ಪರಸ್ಪರ ಕೊಟ್ಟು ತಗೆದುಕೊಳ್ಳುವ ವಿಶಾಲ ಮನೋಭಾವದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಎಲ್ಲಾ ಸಾಧ್ಯತೆಗಳಿವೆ ಎಂದು ಜನಶಕ್ತಿ ಸಂಘಟನೆಯು ಆಶಾಭಾವನೆಯನ್ನು ವ್ಯಕ್ತಪಡಿಸಿದೆ.

ಇಂದಿನ ತುರ್ತು ಅಗತ್ಯವೆಂದರೆ; ಸರ್ಕಾರ ಮೀನಾಮೇಶ ಎಣಿಸುತ್ತಾ ಕೂರದೆ, ಎಲ್ಲಾ ಸಮುದಾಯಗಳ ಆತಂಕ ಮತ್ತು ಅಹವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಆಗಸ್ಟ್‌ 19 ರ ಕ್ಯಾಬಿನೆಟ್‌ ಸಬೆಯಲ್ಲಿ ವಿವೇಕಯುವಾದ, ನ್ಯಾಯಸಮ್ಮತವಾದ ಮತ್ತು ಖಚಿತವಾದ ತೀರ್ಮಾನ ತೆಗೆದುಕೊಂಡು ವಿವಾದಕ್ಕೆ ತೆರೆ ಎಳೆಯಬೇಕಿದೆ. ಈ ವಿಚಾರದಲ್ಲಿ ತಮ್ಮ ವಿವೇಕ ಬಳಸಿ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿಗಳಿಗೆ ಎಲ್ಲಾ ಶೋಷಿತ ಸಮುದಾಯಗಳೂ ಅವಕಾಶ ನೀಡಬೇಕಿದೆ. ಹಾಗೂ ಕೆಲವು ಅಸಮಾಧಾನಗಳು ಉಳಿದರೆ ಅವನ್ನು ಆಲಿಸಿ ಅಗತ್ಯ ಬದಲಾವಣೆಗಳನ್ನು ಮಾಡಲು “ಪರಿಷ್ಕರಣಾ ಸಮಿತಿ” ಯೊಂದನ್ನು ಸರ್ಕಾರ ರಚಿಸಬೇಕಿದೆ ಎಂದು ಅದು ಹೇಳಿದೆ.

ಇದು ಒಂದು ಕುಟುಂಬದ ಸೋದರ-ಸೋದರಿಯರ ನಡುವೆ ಆಗುತ್ತಿರುವ ಪಾಲು ಹಂಚಿಕೆಯ ಪ್ರಶ್ನೆಯಾಗಿರುವುದರಿಂದ ಬಿಸಿಬಿಸಿ ಚರ್ಚೆಗಳು ಸಹಜ, ಆದರೆ ಕುಟುಂಬದ ಘನತೆಗೇ ಧಕ್ಕೆ ಬರದಂತೆ ನಡೆದುಕೊಳ್ಳುವ ಪ್ರಬುದ್ಧತೆಯನ್ನು ಪ್ರತಿಯೊಬ್ಬರೂ ತೋರಬೇಕಿದೆ. ವಿಶೇಷವಾಗಿ ಕರ್ನಾಟಕದ ಸಾಕ್ಷಿ ಪ್ರಜ್ಞೆಗಳಂತಿರುವ, ಸದಾ ತಳ ಸಮುದಾಯಗಳ ಹಿತ ಕಾಯಲು ತುಡಿದ, ದುಡಿದ ಹಿರಿಯ ಚೇತನಗಳಾದ ಡಾ. ನಾಗಮೋಹನ್‌ ದಾಸ್‌, ಕೋಟಗಾನಹಳ್ಳಿ ರಾಮಯ್ಯ, ದೇವನೂರ ಮಹಾದೇವ, ಎನ್. ವೆಂಕಟೇಶ್‌ ಮುಂತಾದ ಘನ ವ್ಯಕ್ತಿತ್ವಗಳಿಗೆ ಅಪಚಾರವಾಗದಂತೆ ಎಲ್ಲರೂ ಎಚ್ಚರಿಕೆ ವಹಿಸೋಣ ಎಂದು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇವೆ ಎಂದು ಸಂಘಟನೆಯು ಕೊನೆಯ ವಿನಮ್ರ ಮನವಿ ಮಾಡಿದೆ.

ಸಂಘಟನೆಯು ಈ ಕೆಳಗಿನಂತೆ ಬೇಡಿಕೆಗಳನ್ನು ಇಟ್ಟಿದೆ.

  • ಎಲ್ಲಾ ಶೋಷಿತ ಸಮುದಾಯಗಳ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮಾರ್ಪಾಡುಗಳ ಜೊತೆ ಸರ್ಕಾರ ಒಳ ಮೀಸಲಾತಿಯನ್ನು ಅನುಮೋದಿಸಿ ಜಾರಿಗೊಳಿಸಲಿ
  • ಪರಸ್ಪರ ಕೊಡುಕೊಳು ಮನೋಭಾವದ ಜೊತೆ ಸಮಸ್ಯೆ ಬಗೆಹರಿಯಲು ಎಲ್ಲಾ ಸಮುದಾಯಗಳು ಸಹಕರಿಸಲಿ
  • ದಶಕಗಳಿಂದ ಕಾದಿರುವ ಮತ್ತು ಹೋರಾಡಿರುವ ಸಮುದಾಯದ ಕನಸು ಈಗಾದರೂ ನನಸಾಗಲಿ
  • ಶೀಘ್ರವೇ ಮೀಸಲಾತಿಯ ವಿಸ್ತರಣೆ ಹಾಗೂ ಅನುಷ್ಠಾನಕ್ಕಾಗಿ ಎಲ್ಲಾ ಶೋಷಿತ ಸಮುದಾಯಗಳ ಐಕ್ಯ ಚಳವಳಿ ಮರುಹುಟ್ಟು ಪಡೆಯಲಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾಜಿ ರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ ಹಿಂದೆ ಇಡಿ ಒತ್ತಡ : ತನ್ನ ಹೊಸ ಪುಸ್ತಕದಲ್ಲಿ ಸಂಜಯ್ ರಾವುತ್ ಆರೋಪ

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಮೋದಿ ಸರ್ಕಾರದ ವಿರುದ್ಧ ಕೈಗೊಂಡ ಸ್ವತಂತ್ರ ರಾಜಕೀಯ ನಡೆಗಳಿಗೆ ಪ್ರತಿಯಾಗಿ, ಜಾರಿ ನಿರ್ದೇಶನಾಲಯದ (ಇಡಿ) ಒತ್ತಡಕ್ಕೆ ಮಣಿದು 2025ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು...

ಯುಎನ್‌ಐ ಮಾಧ್ಯಮ ಕಚೇರಿಗೆ ಬೀಗ : ಪೊಲೀಸರ ವರ್ತನೆಗೆ ಪತ್ರಿಕಾ ಸಂಘಗಳು, ವಿಪಕ್ಷ ನಾಯಕರಿಂದ ತೀವ್ರ ಖಂಡನೆ

ಶುಕ್ರವಾರ (ಮಾ.20) ರಾತ್ರಿ ದೆಹಲಿ ಪೊಲೀಸರು ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್‌ಐ) ಸುದ್ದಿ ಸಂಸ್ಥೆಯ ಕಚೇರಿಗೆ ಬೀಗ ಜಡಿದ ರೀತಿಗೆ ಪತ್ರಕರ್ತರ ಸಂಘಗಳು ಮತ್ತು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ದೆಹಲಿಯ...

ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್: ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್

ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರ ತೀವ್ರ ವಿರೋಧದ ನಡುವೆಯೂ ಕೃಷಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್ ಅವರ...

ಕೇರಳ ವಿಧಾನಸಭೆ ಚುನಾವಣೆ : ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಕೇಸ್!

ಏಪ್ರಿಲ್ 9ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಗೆ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ. ಸುರೇಂದ್ರನ್ ಮೇಲೆ ಬರೋಬ್ಬರಿ 242 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಈ ಮಾಹಿತಿ ಶನಿವಾರ...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಆರು ಮಂದಿ ಶಾಸಕರನ್ನು ಅಮಾನತುಗೊಳಿಸಿದ ಬಿಜೆಡಿ

ಮಾರ್ಚ್ 16ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಮಂದಿ ಶಾಸಕರನ್ನು ಒಡಿಶಾದ ಬಿಜು ಜನತಾದಳ (ಬಿಜೆಡಿ) ಅಮಾನತುಗೊಳಿಸಿದೆ ಎಂದು ವರದಿಯಾಗಿದೆ. ಒಟ್ಟು 8 ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ....

ಆಸ್ಕರ್ ನಾಮನಿರ್ದೇಶಿತ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರ ಪ್ರದರ್ಶನಕ್ಕೆ ಭಾರತದಲ್ಲಿ ನಿರ್ಬಂಧ!

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ಳನ್ನು ಇಸ್ರೇಲಿ ಸೈನಿಕರು ಸುಮಾರು 300 ಸುತ್ತು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿರುವ ಕಥೆಯನ್ನು ಹೇಳುವ, 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರದ ಪ್ರದರ್ಶನಕ್ಕೆ...

ವೈದ್ಯೆ ವಂದನಾ ದಾಸ್ ಹತ್ಯೆ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ನ್ಯಾಯಾಲಯ

ಕೊಲ್ಲಂ: ಆಸ್ಪತ್ರೆಯಲ್ಲಿ ನಡೆದ ಡಾ. ವಂದನಾ ದಾಸ್ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿ ಜಿ. ಸಂದೀಪ್ ಗೆ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಆರೋಪಿಗೆ ಮರಣದಂಡನೆ ವಿಧಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ...

ಕಾಂಗ್ರೆಸ್, ರಾಹುಲ್ ಗಾಂಧಿ ಬಿಜೆಪಿಯ ಬಿ-ಟೀಮ್: ಕೇರಳ ಸಿಎಂ ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿದ್ದಾರೆ.   ಕೇಂದ್ರೀಯ ಸಂಸ್ಥೆಗಳು ಕೇರಳ...

‘ಬಿಜೆಪಿ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ, ಕೊನೆಯವರೆಗೂ ಹೋರಾಡುತ್ತೇವೆ’; ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮತದಾರರ ಪಟ್ಟಿಯ ಪರಿಷ್ಕರಣೆಯ ಮೂಲಕ ಜನರ "ಮತದಾನದ ಹಕ್ಕನ್ನು ಕಸಿದುಕೊಳ್ಳಲು" ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.  "ಮೋದಿ ಜಿ...

ಏಳು ವರ್ಷಗಳ ನಂತರ ಯುಎಪಿಎ ಪ್ರಕರಣದಲ್ಲಿ ಇಬ್ಬರು ಕಾಶ್ಮೀರಿ ಯುವಕರನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯ

ಏಳು ವರ್ಷಗಳಿಗೂ ಹೆಚ್ಚು ಕಾಲದ ನಂತರ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಲ್ಪಟ್ಟ ಇಬ್ಬರು ಕಾಶ್ಮೀರಿ ಯುವಕರನ್ನು ಗುರುವಾರ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಮತ್ತು ದೆಹಲಿ ಪೊಲೀಸರು...