Homeಮುಖಪುಟನೂತನ ಶಾಸಕರಿಗೆ ಪ್ರೇರಣಾ ಉಪನ್ಯಾಸ ನೀಡಲು ಗುರುರಾಜ ಕರ್ಜಗಿ, ರವಿಶಂಕರ್ ಗುರೂಜಿಗೆ ಆಹ್ವಾನ: ತೀವ್ರ ವಿರೋಧ

ನೂತನ ಶಾಸಕರಿಗೆ ಪ್ರೇರಣಾ ಉಪನ್ಯಾಸ ನೀಡಲು ಗುರುರಾಜ ಕರ್ಜಗಿ, ರವಿಶಂಕರ್ ಗುರೂಜಿಗೆ ಆಹ್ವಾನ: ತೀವ್ರ ವಿರೋಧ

- Advertisement -
- Advertisement -

ನೂತನ ಶಾಸಕರಿಗೆ ಏರ್ಪಡಿಸಿರುವ ಕಾರ್ಯಾಗಾರದಲ್ಲಿ ಪ್ರೇರಣಾ ಉಪನ್ಯಾಸ ನೀಡಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಡೆ, ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ್ ಗುರೂಜಿ, ಜಮಾತೆ ಇಸ್ಲಾಮಿ ಹಿಂದ್ ನ ಮುಹಮ್ಮದ್ ಕುಂಞ, ಬ್ರಹ್ಮಕುಮಾರಿಯ ಆಶಾ ದೀದಿ ಮತ್ತು ಬಲಪಂಥೀಯ ಬರಹಗಾರ ಗುರುರಾಜ ಕರ್ಜಗಿಯವರನ್ನು ಆಹ್ವಾನಿಸಿರುವ ಸ್ಪೀಕರ್ ಯು.ಟಿ ಖಾದರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹೊಸದಾಗಿ ಆಯ್ಕೆಯಾದ ಸುಮಾರು 58 ಶಾಸಕರಿಗೆ ಜೂನ್ 26 ರಿಂದ 28ರ ವರೆಗೆ ನೆಲಮಂಗಲದಲ್ಲಿರುವ ವೀರೇಂದ್ರ ಹೆಗ್ಗಡೆಯವರ ‘ಕ್ಷೇಮವನ’ದಲ್ಲಿ ಮೂರುದಿನಗಳ ಶಿಬಿರ ಏರ್ಪಡಿಸಲಾಗಿದೆ. ಆದರೆ ಅಲ್ಲಿ ಮಾತನಾಡಲು ಆಹ್ವಾನಿಸಿರುವ ವ್ಯಕ್ತಿಗಳು ಒಂದಲ್ಲ ಹಲವು ರೀತಿಯಲ್ಲಿ ವಿವಾದಾತ್ಮಕವೆನಿಸಿದ್ದಾರೆ. ವಿವಾದಾತ್ಮಕ ಗುರು ರವಿಶಂಕರ್ ಗುರೂಜಿ ಮೇಲೆ ಅಕ್ರಮ ಭೂಪರಭಾರೆ ಪ್ರಕರಣವಿದೆ. ಅಲ್ಲದೇ ಅವರು ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ನಕ್ಸಲರಾಗುತ್ತಾರೆ ಎಂಬ ದ್ವೇ‍ಷದ ಹೇಳಿಕೆ ನೀಡಿದ್ದರು. ಇನ್ನು ಡಾ. ವಿರೇಂದ್ರ ಹೆಗಡೆಯವರು ಬಿಜೆಪಿ ನಾಮನಿರ್ದೇಶಿತ ರಾಜ್ಯಸಭಾ ಸಂಸದರಾಗಿದ್ದಾರೆ. ಡಾ. ಗುರುರಾಜ್ ಕರ್ಜಗಿ ಬಲಪಂಥೀಯ ಭಾಷಣಕಾರರಾಗಿದ್ದು, ಇತಿಹಾಸ ತಿರುಚುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಬ್ರಹ್ಮಕುಮಾರಿಯ ಆಶಾ ದೀದಿ ಹಾಗೂ ಮೊಹಮ್ಮದ್ ಕುಂಞ ಸಹ ನೂತನ ಶಾಸಕರಿಗೆ ಪ್ರೇರಣೆ ಹೇಗೆ ನೀಡಬಲ್ಲರು ಎಂಬ ಪ್ರಶ್ನೆಗಳೆದ್ದಿವೆ.

ಹೊಸದಾಗಿ ಚುನಾಯಿತರಾಗಿ ಬಂದ ಶಾಸಕರಿಗೆ ಪಾಠ ಮಾಡಲು ನ್ಯಾಯಮೂರ್ತಿ ನಾಗಮೋಹನ ದಾಸ, ಗೋಪಾಲಗೌಡ, ರವಿವರ್ಮಕುಮಾರ, ಸಿ.ಎಸ್ ದ್ವಾರಕಾನಾಥ, ರಮೇಶ ಕುಮಾರ್ ಮುಂತಾದ ನುರಿತ ಸಂವಿಧಾನ ತಜ್ಞರು, ಕಾನೂನು ಪರಿಣಿತರು, ಹಿರಿಯ ಹಾಲಿ ಮತ್ತು ಮಾಜಿ, ಸ್ಪೀಕರ್ ಗಳು, ಶಾಸಕರು, ಅನುಭವಿ ಪತ್ರಕರ್ತರನ್ನು ಆಹ್ವಾನಿಸಿ ಉಪನ್ಯಾಸ ನೀಡಿಸಬೇಕು. ಆದರೆ ಸ್ಪೀಕರ್ ಖಾದರ್ ಸಾಹೇಬರು ಅದನ್ನು ಬಿಟ್ಟು ಆಧ್ಯಾತ್ಮವನ್ನು ದುಡ್ಡು ಮಾಡಿಕೊಳ್ಳುವ ದಂಧೆಯನ್ನಾಗಿ ಮಾಡಿಕೊಂಡವರಿಂದ, ಕೋಮುವಾದಿ ಸಂಘಟನೆಗಳ ಜೊತೆ ಗುರುತಿಸಿಕೊಂಡವರಿಂದ ನೂತನ ಶಾಸಕರಿಗೆ ಪ್ರವಚನ ಮಾಡಿಸಲು ಹೊರಟಿದ್ದಾರೆ‌. ಇದರ ಅಗತ್ಯವಿಲ್ಲ‌‌. ಸ್ಪೀಕರ್ ಖಾದರ್ ಸಾಹೇಬರು ಮೈ ಮರೆಯದಿರಲಿ. ಎಲ್ಲರಿಗೂ ಒಳ್ಳೆಯವರಾಗಲು ಹೋಗಿ ನಿಮ್ಮ ಕಾಲ ಮೇಲೆ ನೀವೇ ಕಲ್ಲು ಹಾಕಿಕೊಳ್ಳಬೇಡಿ.. ಯಾರದೋ ಮಾತನ್ನು ಕೇಳಿ ಜನ ಆಡಿಕೊಳ್ಳುವಂತೆ ಮಾಡಬೇಡಿ. ಶಾಸಕರಿಗೆ ಧಾರ್ಮಿಕ ಗುರುಗಳ ಪಾಠ ಸಂವಿಧಾನಕ್ಕೆ ಅಪಚಾರ ಎಂದು ಹಿರಿಯ ಪತ್ರಕರ್ತರಾದ ಸನತ್ ಕುಮಾರ ಬೆಳಗಲಿ ಅಭಿಪ್ರಾಯಪಟ್ಟಿದ್ದಾರೆ.

ಬಿ.ಎಲ್ ಶಂಕರ್ ರವರು ತಮ್ಮ 45 ನೇ ವಯಸ್ಸಿಗೆಲ್ಲ ಜನತಾ ಪಕ್ಶದಲ್ಲಿ ಹಲವಾರು ಅವಕಾಶಗಳನ್ನು ಪಡೆದಿದ್ದರು. ಆಮೇಲೆ ಕಾಂಗ್ರೆಸ್ ಸೇರಿ ಪಕ್ಶದ ವಕ್ತಾರರು ಪೋಸ್ಟ್ ನಿಂದ ಮೇಲಕ್ಕೆ ಏರಲಿಲ್ಲ. ಶಾಸಕರಿಗೆ ಟ್ರೈನಿಂಗ್ ಕೊಡಲು ಶಂಕರ್ ರವರಿಗಿಂತ ಸೂಪರ್ ಸಂಪನ್ಮೂಲ ವ್ಯಕ್ತಿ ಬೇಕಿಲ್ಲ. ಆದರೂ ಶಂಕರ್ ರವರಿಗೆ ಒಂದು ಬಾಶಣಕ್ಕೂ ಅವಕಾಶ ಇಲ್ಲ ಎಂದು ನಾಗೇಗೌಡ ಕೀಲಾರ ಶಿವಲಿಂಗಯ್ಯನವರು ಕಿಡಿಕಾರಿದ್ದಾರೆ.

ಯು.ಟಿ.ಖಾದರ್ ಸಾಹೇಬರೇ.. ಈವರೆಗೆ ಈ ರಾಜ್ಯದಲ್ಲಿ ಅದೆಷ್ಟೋ ಸ್ಪೀಕರ್‌ಗಳು ಆಗಿ ಹೋಗಿದ್ದಾರೆ. ಅವರ್ಯಾರೂ ಮಾಡಿಸಿರದಂತಹ ಈ ಮೋಟಿವೇಶನಲ್ ಟಾಕ್‌ಗಳ ಅಗತ್ಯ ಈ ರಾಜ್ಯದ ಜನಪ್ರತಿನಿಧಿಗಳಿಗೆ ಯಾಕೆ ಬೇಕಿತ್ತು? ಇದನ್ನು ಮಾಡಿಸುವ ಮೂಲಕ ಖಂಡಿತಾ ನೀವು ಒಳ್ಳೆಯ ಹೆಸರನ್ನು ಗಳಿಸಲಾರಿರಿ ಎಂದು ಇಸ್ಮತ್ ಪಜೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಡಿಯಲಾಜಿಕಲ್ ಪಾಲಿಟಿಕ್ಸ್ ನಿಮಗೆ ಗೊತ್ತಿಲ್ಲದಿರಬಹುದು. ಆದರೆ ನಿಮ್ಮನ್ನು ರಾಜಕೀಯವಾಗಿ ಈ ಹಂತದವರೆಗೆ ತಂದ ಪಕ್ಷವನ್ನು ಅದರ ಜಾತ್ಯಾತೀತ ಸಿದ್ಧಾಂತವನ್ನು ಒಪ್ಪುವವರು ಯಾರು ಎಂಬ ಕನಿಷ್ಠ ಪ್ರಜ್ಞೆ ನಿಮಗಿಲ್ಲದಾಯಿತೇ..? ಈ ಜಾತ್ಯಾತೀತತೆ ಎಂದರೆ ಯಾರದೇ ಔದಾರ್ಯವಲ್ಲ.ಅದು ಈ ನೆಲದ ಮೂಲಗುಣ, ಈ ದೇಶದ ಸಂವಿಧಾನದ ಅಂತಃ ಸತ್ವ ಅಡಗಿರುವುದೇ ಅದರ ಪರಮ ಜಾತ್ಯಾತೀತ ಗುಣದಲ್ಲಿ.
ಅದನ್ನು ಬಿಲ್ಕುಲ್ ಒಪ್ಪದ ರವಿಶಂಕರ್ , ಸ್ಪಷ್ಟವಾಗಿ ಬಿಜೆಪಿಯೊಂದಿಗೆ ಗುರುತಿಸಿರುವ ವೀರೇಂದ್ರ ಹೆಗ್ಗಡೆ, ಮೊನ್ನೆ ಮೊನ್ನೆ ನಿಮ್ಮದೇ ಸರಕಾರ ಪಠ್ಯಪುಸ್ತಕಗಳ ವಿಚಾರದಲ್ಲಿ ತೆಗೆದುಕೊಂಡ ನಿಲುವನ್ನು ಯಾವ ಮುಚ್ಚುಮರೆಯೂ ಇಲ್ಲದೇ ವಿರೋಧಿಸಿ ಹಿಂದಿನ ಜನವಿರೋಧೀ ಬಿಜೆಪಿ ಸರಕಾರ ವಿಷಯುಕ್ತಗೊಳಿಸಿದ ಪಠ್ಯ ಪುಸ್ತಕಗಳ ಪರ ವಕಾಲತ್ತು ವಹಿಸಿದ ಗುರುರಾಜ ಕರ್ಜಗಿ ಮುಂತಾದವರಿಂದ ಎಂತಹ ಮೋಟಿವೇಶನಲ್ ಕ್ಲಾಸ್‌ಗಳು ಸಿಗಬಹುದು..? ಮೊನ್ನೆ ಮೊನ್ನೆಯವರೆಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೆಂದು ಶ್ರಮಿಸಿದ ದೇವನೂರು ಮಹಾದೇವ, ಪುರುಷೋತ್ತಮ ಬಿಳಿಮಲೆ ಮುಂತಾದ ಹಿರಿಯರನ್ನು ತಾವು ಇಷ್ಟು ಬೇಗ ಮರೆತಿರಾ..?

ನಾವು ಈಗಲೂ ಹೇಳುತ್ತೇವೆ. ನೀವು ನಮ್ಮ ಸೆಕ್ಯುಲರ್ ಸಾಹಿತಿಗಳನ್ನೂ ಕರೆಯಬೇಡಿ.
ನಮ್ಮ ದೇಶದಲ್ಲಿ ನಮ್ಮ ಪವಿತ್ರ ಸಂವಿಧಾನಕ್ಕಿಂತ ಮಿಗಿಲಾದ ಮೋಟಿವೇಟರ್ ಬೇರೊಂದಿಲ್ಲ. ಅದನ್ನೇ ಒಪ್ಪದವರಿಂದ ನೀವೆಂತಹ ಮೋಟಿವೇಶನ್ ಮಾಡಿಸಬಲ್ಲಿರಿ..? ನಮ್ಮ ಜನಪ್ರತಿನಿಧಿಗಳಿಗೆ ಎಲ್ಲಕ್ಕಿಂತ ತುರ್ತಾಗಿ ಬೇಕಿರುವುದು ಸಂವಿಧಾನದ ಅರಿವು. ಅದನ್ನು ಮನವರಿಕೆ ಮಾಡಿಸಿ ಕೊಡುವ ಒಂದು ತರಗತಿಯನ್ನು ವ್ಯವಸ್ಥೆ ಮಾಡಿಸಿ ಪುಣ್ಯ ಕಟ್ಕೊಳ್ಳಿ.. ಸೆಕ್ಯುಲರಿಸಮ್ಮನ್ನು ಮತ್ತು ಸಂವಿಧಾನವನ್ನು ಒಪ್ಪದವರಿಂದ ಮಾಡಿಸ ಹೊರಟ ಮೋಟಿವೇಶನಲ್ ಸೆಶನ್ ಕೂಡಲೇ ನಿಲ್ಲಿಸಿ ಎಂದು ಇಸ್ಮತ್ ಪಜೀರ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೇಂದ್ರದ ನೀತಿಯಿಂದ ಬಡವರ ಆಹಾರಕ್ಕೆ ಸಮಸ್ಯೆ: ಅಮಿತ್ ಶಾಗೆ ಸಿದ್ದರಾಮಯ್ಯ ಮನವರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...