Homeಮುಖಪುಟಎನ್‌ಸಿಇಆರ್‌ಟಿ ಪಠ್ಯದಿಂದ ಚಾರ್ಲ್ಸ್ ಡಾರ್ವಿನ್ ಸಿದ್ದಾಂತ, ಆವರ್ತಕ ಕೋಷ್ಟಕಕ್ಕೆ ಕೋಕ್: ಸಚಿವ ಧರ್ಮೇಂದ್ರ ಪ್ರಧಾನ್

ಎನ್‌ಸಿಇಆರ್‌ಟಿ ಪಠ್ಯದಿಂದ ಚಾರ್ಲ್ಸ್ ಡಾರ್ವಿನ್ ಸಿದ್ದಾಂತ, ಆವರ್ತಕ ಕೋಷ್ಟಕಕ್ಕೆ ಕೋಕ್: ಸಚಿವ ಧರ್ಮೇಂದ್ರ ಪ್ರಧಾನ್

- Advertisement -
- Advertisement -

ಎನ್‌ಸಿಇಆರ್‌ಟಿ ಪ್ರಕಟಿಸಿರುವ 10ನೇ ತರಗತಿ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳಿಂದ ಚಾರ್ಲ್ಸ್ ಡಾರ್ವಿನ್ ಅವರ ವಿಕಾಸದ ಸಿದ್ಧಾಂತ ಮತ್ತು ಆವರ್ತಕ ಕೋಷ್ಟಕವನ್ನು ಕೈಬಿಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಭಾರತದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಪೂರೈಸುತ್ತದೆ. ಇದು ಕೋವಿಡ್-19 ಸಮಯದಲ್ಲಿ ಪಠ್ಯಕ್ರಮವನ್ನು ಕಡಿಮೆ ಮಾಡಲು ಪರಿಷ್ಕರಿಸುವ ಭಾಗವಾಗಿ 10 ನೇ ತರಗತಿಯ ಪಠ್ಯಪುಸ್ತಕಗಳಿಂದ ಆವರ್ತಕ ಕೋಷ್ಟಕ ಹಾಗೂ ಡಾರ್ವಿನ್‌ನ ವಿಕಾಸದ ಸಿದ್ಧಾಂತವನ್ನು ಕೈಬಿಟ್ಟಿದೆ ಎಂದು ಈ ವರ್ಷದ ಆರಂಭದಲ್ಲಿ ವರದಿಗಳು ಬಂದಿದ್ದವು.

ಎನ್‌ಸಿಇಆರ್‌ಟಿ ನಡೆಗೆ ಶಿಕ್ಷಣ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಪಠ್ಯಪುಸ್ತಕದಿಂದ ಮೊಘಲ್ ಸಾಮ್ರಾಜ್ಯ, ಮಹಾತ್ಮಗಾಂಧಿ ಹತ್ಯೆ, ಗುಜರಾತ್ ದಂಗೆ, ಡಾರ್ವಿನ್‌ನ ವಿಕಾಸವಾದ ಸಿದ್ಧಾಂತದ ಕುರಿತ ವಿವರಗಳನ್ನು ಪಠ್ಯಪುಸ್ತಕದಿಂದ ಕೈಬಿಡಲಾಗಿತ್ತು. ಮಂಡಳಿಯ ಈ ಕ್ರಮಕ್ಕೆ ಪ್ರತಿಪಕ್ಷಗಳು ಮತ್ತು ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ 10ನೇ ತರಗತಿ ಪಠ್ಯಪುಸ್ತಕದಲ್ಲೂ ಪ್ರಮುಖ ವಿಷಯದ ಪಠ್ಯಗಳನ್ನು ಕೈ ಬಿಟ್ಟಿದೆ.

ಈ ಬಗ್ಗೆ ಎನ್‌ಇಆರ್‌ಟಿಯ ಮಾಜಿ ಅಧ್ಯಕ್ಷ ಪ್ರೊ.ಕೃಷ್ಣಕುಮಾರ್ ಅವರು, ”ಮಂಡಳಿಯು ಮಾಡಿದ ಈ ಬದಲಾವಣೆಯು ತರ್ಕಬದ್ಧವೇ ಅಥವಾ ಸಮರ್ಥನೀಯವೇ?” ಎಂದು ಪ್ರಶ್ನೆ ಮಾಡಿದ್ದಾರೆ.

”ಇಂತಹ ಬದಲಾವಣೆಗೆ ವಿವರ ನೀಡಲು ಆಗುವುದಿಲ್ಲ. ವಿಕಾಸವಾದದ ಸಿದ್ಧಾಂತ ಇಲ್ಲದೆ ಒಬ್ಬ ಶಿಕ್ಷಕ, ವಿದ್ಯಾರ್ಥಿಗಳಿಗೆ ಬೋಧಿಸಲು ಹೇಗೆ ಸಾಧ್ಯ? ಪರಿವರ್ತಕ ಕೋಷ್ಟಕ ಇಲ್ಲದೆ ರಸಾಯನ ವಿಜ್ಞಾನ ಇಲ್ಲ” ಎಂದು ತಿಳಿಹೇಳಿದ್ದಾರೆ.

”ಪರಿಷ್ಕರಣೆ ಮಾಡಿರುವ ವಿಜ್ಞಾನ ಪಠ್ಯಪುಸ್ತಕದಲ್ಲಿ ಆವರ್ತಕ ಕೋಷ್ಟಕವನ್ನು ತೆಗೆದುಹಾಕಲಾಗಿದೆ. ಇದರಡಿ ಬರುವ ಪರಿಸರ ಸುಸ್ಥಿರತೆ ಹಾಗೂ ಇಂಧನ ಮೂಲಗಳು ಅಧ್ಯಾಯಗಳನ್ನು ಕೈಬಿಡಲಾಗಿದೆ. ವಿದ್ಯುತ್ ಮತ್ತು ಕಾಂತೀಯತೆಗೆ ವಿಜ್ಞಾನಿ ಮೈಕಲ್ ಫ್ಯಾರಡೆ ಸಲ್ಲಿಸಿದ ಕೊಡುಗೆಯ ಅಧ್ಯಯನದಿಂದ ವಿದ್ಯಾರ್ಥಿಗಳು ವಂಚಿತರಾಗುವಂತಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ: 10ನೇ ತರಗತಿ ಪಠ್ಯದಿಂದ ‘ಪ್ರಜಾಪ್ರಭುತ್ವ’ ಪಾಠವನ್ನೇ ಕೈಬಿಟ್ಟ ಎನ್‌ಸಿಇಆರ್‌ಟಿ

4000ಕ್ಕೂ ಅಧಿಕ ಸಂಶೋಧಕರು ಮತ್ತು ವಿಜ್ಞಾನಿಗಳು ಅಂಶಗಳನ್ನು ಪುನಃ ಪಠ್ಯದಲ್ಲಿ ಸೇರಿಸಲು ಅಧಿಕಾರಿಗಳನ್ನು ಒತ್ತಾಯಿಸಿ ಏಪ್ರಿಲ್‌ನಲ್ಲಿ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದರು.

”ಚಾರ್ಲ್ಸ್ ಡಾರ್ವಿನ್ ಅವರ ಜೈವಿಕ ವಿಕಾಸದ ಸಿದ್ಧಾಂತವನ್ನು ಕೈಬಿಡಲಾಗಿದೆ ಎಂದು ದೇಶದ ವೈಜ್ಞಾನಿಕ ಸಮುದಾಯವು ಭಾರೀ ನಿರಾಶೆಗೊಂಡಿದೆ” ಎಂದು ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ ಸೈನ್ಸ್ ಉಲ್ಲೇಖಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಜೂನ್ 21ರಂದು ಪುಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿಕ್ಷಣ ಸಚಿವ ಪ್ರಧಾನ್, ”ಈ ರೀತಿಯ ಏನೂ ಸಂಭವಿಸಿಲ್ಲ” ಎಂದು ಹೇಳಿದ್ದಾರೆ.

”COVID-19 ಸಮಯದಲ್ಲಿ, ಕೆಲವು ಪುನರಾವರ್ತಿತ ಭಾಗಗಳನ್ನು ಕಡಿಮೆ ಮಾಡಿ ಆ ನಂತರ ಮತ್ತೆ ಸೇರಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಆದ್ದರಿಂದ 8 ಮತ್ತು 9 ನೇ ತರಗತಿಗಳಲ್ಲಿನ ವಿಷಯವು ಬದಲಾಗಿಲ್ಲ. 10ನೇ ತರಗತಿಯ ಪುಸ್ತಕದಲ್ಲಿ, ವಿಕಾಸದ ಸಿದ್ಧಾಂತಕ್ಕೆ ಸಂಬಂಧಿಸಿದ ಕೆಲವು ಭಾಗವನ್ನು ಕಳೆದ ವರ್ಷ ಬಿಟ್ಟುಬಿಡಲಾಗಿದೆ ಮತ್ತು ಇದು 11 ಮತ್ತು 12 ನೇ ತರಗತಿಗಳಲ್ಲಿ ಬದಲಾಗಿಲ್ಲ” ಎಂದು ಸಚಿವರು ಹೇಳಿದರು.

9, 11 ಮತ್ತು 12 ನೇ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಆವರ್ತಕ ಕೋಷ್ಟಕವನ್ನು ಕಲಿಸಲಾಗುವುದು. 10 ನೇ ತರಗತಿಯ ನಂತರ ವಿಜ್ಞಾನವನ್ನು ತೆಗೆದುಕೊಳ್ಳದ ವಿದ್ಯಾರ್ಥಿಗಳಿಗೆ ಡಾರ್ವಿನ್ ಸಿದ್ಧಾಂತವನ್ನು ಕಲಿಸಲಾಗುವುದಿಲ್ಲ ಎಂದು ದೇವೇಂದ್ರ ಪ್ರಧಾನ್ ಅವರೇ ಒಪ್ಪಿಕೊಂಡರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read