Homeಸಿನಿಮಾಕ್ರೀಡೆ'ಈ ಸಲ ಕಪ್ ನಮ್ದೆ' ಆಗಲು RCB ಮುಂದಿನ ನಾಲ್ಕೂ ಪಂದ್ಯಗಳನ್ನು ಗೆಲ್ಲಲೇಬೇಕು, ಜೊತೆಗೆ ಅದೃಷ್ಟವೂ...

‘ಈ ಸಲ ಕಪ್ ನಮ್ದೆ’ ಆಗಲು RCB ಮುಂದಿನ ನಾಲ್ಕೂ ಪಂದ್ಯಗಳನ್ನು ಗೆಲ್ಲಲೇಬೇಕು, ಜೊತೆಗೆ ಅದೃಷ್ಟವೂ ಇರಬೇಕು

ಪ್ಲೇಆಫ್‌ ಪ್ರವೇಶಿಸಿದರೆ ಅಲ್ಲಿನ ಎಲಿಮಿನೇಟರ್, ಕ್ವಾಲಿಫೈಯರ್ ಮತ್ತು ಫೈನಲ್ ಈ ಎಲ್ಲಾ ಪಂದ್ಯಗಳಲ್ಲಿ RCB ಗೆಲ್ಲಲೇಬೇಕಿದೆ.

- Advertisement -
- Advertisement -

‘ಈ ಸಲ ಕಪ್ ನಮ್ದೆ’ ಇದು RCB ಅಭಿಮಾನಿಗಳ 13 ವರ್ಷದ ಕೂಗು. ಆದರೆ ಇದುವರೆಗೂ 3 ಬಾರಿ ಫೈನಲ್ ತಲುಪಿರುವ RCB ತಂಡ ಒಮ್ಮೆಯೂ ಗೆಲುವು ಸಾಧಿಸಿ ಕಪ್ ತನ್ನದಾಗಿಸಿಕೊಳ್ಳಲು ಸಾಧ್ಯವಾಗಿಲ್ಲ. 15ನೇ ಆವೃತ್ತಿಯ ಈ ಬಾರಿಯ IPL2022 ನಲ್ಲಿ ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ ಅದು ನಂತರ ಸೋಲುಗಳ ಸುಳಿಗೆ ಸಿಲುಕಿ ಪ್ಲೇಆಫ್ ತಲುಪಲು ಒದ್ದಾಡುತ್ತಿದೆ. ಈ ಬಾರಿಯಾದರೂ ಆರ್‌ಸಿಬಿ ಕಪ್ ಗೆಲ್ಲಬೇಕಾದರೆ ಮುಂದಿನ ನಾಲ್ಕೂ ಪಂದ್ಯಗಳನ್ನು ಗೆಲ್ಲಲೇಬೇಕು, ಜೊತೆಗೆ ಅದೃಷ್ಟವೂ ಇರಬೇಕು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದರು ಗೆದ್ದರಷ್ಟೆ ಅದು ಮುಂದಕ್ಕೆ ಸಾಗಲು ಸಾಧ್ಯ. ಇಲ್ಲದಿದ್ದಲ್ಲೆ ಮನೆಗೆ ಹೋಗಬೇಕಾಗುತ್ತದೆ. ಜೊತೆಗೆ ಅದೃಷ್ಟ ಎಂದರೆ ಮೇ 21ರ ಶನಿವಾರ ನಡೆಯುವ ಮುಂಬೈ ಮತ್ತು ಡೆಲ್ಲಿ ನಡುವಿನ ಪಂದ್ಯದಲ್ಲಿ ಡೆಲ್ಲಿ ಸೋತರಷ್ಟೇ ಆರ್‌ಸಿಬಿಗೆ ಅವಕಾಶ. ಒಂದು ವೇಳೆ ಆ ಪಂದ್ಯದಲ್ಲಿ ಡೆಲ್ಲಿ ಗೆಲುವು ಸಾಧಿಸಿದರೆ ಅದು ಪ್ಲೇಆಫ್ ಪ್ರವೇಶಿಸುತ್ತದೆ. ಆರ್‌ಸಿಬಿ ಟೂರ್ನಿಯಿಂದ ಹೊರಬೀಳುತ್ತದೆ. ಅದು ಹೇಗೆಂದು ವಿವರವಾಗಿ ನೋಡೋಣ.

ಟೂರ್ನಿಯುದ್ದಕ್ಕೂ ಸಾಂಘಿಕ ಪ್ರದರ್ಶನ ನೀಡಿರುವ ಗುಜರಾತ್ ಟೈಟನ್ಸ್ ತಂಡ 10 ಗೆಲುವುಗಳೊಂದಿಗೆ 20 ಅಂಕ ಗಳಿಸಿ ಅಗ್ರಸ್ಥಾನದೊಂದಿಗೆ ಈಗಾಗಲೇ ಪ್ಲೇಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಮೂರನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ತಲಾ 16 ಅಂಕ ಪಡೆದಿದ್ದು, ಉಳಿದ ತಲಾ ಒಂದೊಂದು ಪಂದ್ಯಗಳಲ್ಲಿ ಗೆದ್ದರೂ, ಸೋತರೂ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಲಿವೆ. ಉಳಿದ ಒಂದು ಸ್ಥಾನಕ್ಕಾಗಿ RCB ಸೇರಿದಂತೆ 5 ತಂಡಗಳು ಸೆಣಸಾಟ ನಡೆಸುತ್ತಿವೆ. ಆದರೆ ಹೆಚ್ಚಿನ ಸಾಧ್ಯತೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು RCB ತಂಡಕ್ಕಿದೆ.

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಚನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇಆಫ್ ರೇಸ್‌ನಿಂದ ಈಗಾಗಲೇ ಹೊರಬಿದ್ದಿವೆ. ಉಳಿದ ಹೈದರಾಬಾದ್ ಸನ್‌ರೈಸರ್ಸ್ (10 ಅಂಕ), ಪಂಜಾಬ್ ಕಿಂಗ್ಸ್ (12 ಅಂಕ), ಕೋಲ್ಕತ್ತಾ ನೈಟ್ ರೈಡರ್ಸ್ (12 ಅಂಕ), ಡೆಲ್ಲಿ ಕ್ಯಾಪಿಟಲ್ಸ್ (14 ಅಂಕ) ಮತ್ತು RCB (14 ಅಂಕ) ಪ್ಲೇ ಆಫ್ ಆಸೆ ಜೀವಂತವಾಗಿಟ್ಟುಕೊಂಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆದರೆ ಈ ಐದು ತಂಡಗಳಲ್ಲಿ ಒಂದು ತಂಡ ಮಾತ್ರ ಪ್ಲೇ ಆಫ್ ಪ್ರವೇಶ ಸಾಧ್ಯ. 14 ಅಂಕ ಗಳಿಸಿರುವ RCB ಪ್ಲೇ ಆಫ್‌ ತಲುಪಬೇಕಾದರೆ ಅದು ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದರು ದೊಡ್ಡ ಅಂತರದಲ್ಲಿ ಜಯಿಸಬೇಕು. ಆಗ ಅದು 16 ಅಂಕ ಗಳಿಸಿರುತ್ತದೆ. ಇನ್ನೂ ವಿವರವಾಗಿ ನೋಡುವ ಮೊದಲು ಅಂಕ ಪಟ್ಟಿಯ ಮೇಲೆ ಕಣ್ಣಾಡಿಸೋಣ ಬನ್ನಿ.

ಮೇ 16ರ ಸೋಮವಾರದ ಪಂದ್ಯದ ಅಂತ್ಯಕ್ಕೆ

ಆರ್‌ಸಿಬಿ 13 ಪಂದ್ಯಗಳಲ್ಲಿ 14 ಅಂಕ ಗಳಿಸಿದ್ದರೂ ಸಹ ಅದರ ನೆಟ್‌ ರನ್‌ರೇಟ್ -323 ಇರುವುದು ಸಮಸ್ಯೆಯಾಗಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 13 ಪಂದ್ಯಗಳಲ್ಲಿ 14 ಅಂಕ ಗಳಿಸಿದೆ ಮತ್ತು ಅದರ ನೆಟ್‌ ರನ್‌ರೇಟ್ +255 ಇರುವುದು ಅದಕ್ಕೆ ವರವಾಗಿ ಪರಿಣಮಿಸಿದೆ.

ಗುರುವಾರ ಆರ್‌ಸಿಬಿ ತಂಡ ತನ್ನ ಲೀಗ್‌ನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಎದುರು ಕಣಕ್ಕಿಳಿಯಲಿದೆ. ಅಲ್ಲಿ ಗೆದ್ದರಷ್ಟೆ ಅದಕ್ಕೆ ಅವಕಾಶ. ಗೆಲುವು ಸಾಧಿಸಿದರೆ 16 ಅಂಕಗಳೊಂದಿಗೆ ತನ್ನ ಲೀಗ್ ಹೋರಾಟ ಮುಕ್ತಾಯಗೊಳಿಸಿ ಡೆಲ್ಲಿ ಸೋಲಿಗಾಗಿ ಕಾಯುತ್ತಾ ಕೂರಬೇಕಿದೆ. ಒಂದು ವೇಳೆ ಆ ಪಂದ್ಯದಲ್ಲಿ ಆರ್‌ಸಿಬಿ ಸೋತಲ್ಲಿ ಅದು ಟೂರ್ನಿಯಿಂದ ಹೊರಬೀಳುತ್ತದೆ. ಏಕೆಂದರೆ ಆಗ ಅದು ಕೇವಲ 14 ಅಂಕ ಗಳಿಸಿರುತ್ತದೆ ಮತ್ತು ಅದರ ನೆಟ್ ರನ್‌ ರೇಟ್ ಡೆಲ್ಲಿ, ಕೋಲ್ಕತಾ ತಂಡಗಳಿಗಿಂತ ಕಡಿಮೆ ಇರುವುದರಿಂದ ಅವುಗಳಿಗೆ ಪ್ಲೇ ಆಫ್ ಅವಕಾಶವಿರುತ್ತದೆ.

ಡೆಲ್ಲಿ ತಂಡವೂ ಸಹ ಆರ್‌ಸಿಬಿ ಸೋಲಿಗಾಗಿ ಕಾಯುತ್ತಿದೆ. ಏಕೆಂದರೆ ಅದು ತನ್ನ ಕೊನೆಯ ಪಂದ್ಯ ಮುಂಬೈ ಇಂಡಿಯನ್ಸ್ ಎದುರು ಆಡಲಿದೆ. ಅಲ್ಲಿ ಗೆದ್ದರೆ ಅದು ಸುಲಭವಾಗಿ ಪ್ಲೇ ಆಫ್ ಪ್ರವೇಶಿಸುತ್ತದೆ. ಒಂದು ವೇಳೆ ಅಲ್ಲಿ ಸೋತರೂ ಕೂಡ 14 ಅಂಕಗಳೊಂದಿಗೆ ಉತ್ತಮ ನೆಟ್ ರನ್‌ರೇಟ್ ಇರುವುದರಿಂದ ಅದಕ್ಕೆ ಪ್ಲೇ ಆಫ್ ಅವಕಾಶ ಹೆಚ್ಚು. ಅದಕ್ಕಾಗಿ ಅದು ಆರ್‌ಸಿಬಿ ಸೋಲನ್ನು ಎದುರು ನೋಡುತ್ತಿದೆ.

ಇನ್ನು ಕೋಲ್ಕತ್ತಾ ಮತ್ತು ಪಂಜಾಬ್ ತಂಡಗಳು ಡೆಲ್ಲಿ ಮತ್ತು ಆರ್‌ಸಿಬಿ ಎರಡೂ ತಂಡಗಳ ಸೋಲಿಗಾಗಿ ಪ್ರಾರ್ಥಿಸುತ್ತಿವೆ. ಏಕೆಂದರೆ ಆ ಎರಡು ತಂಡಗಳು ತಲಾ 12 ಅಂಕ ಗಳಿಸಿದ್ದು ತಮ್ಮ ಕಡೆಯ ಪಂದ್ಯದಲ್ಲಿ ಅತಿ ದೊಡ್ಡ ಅಂತರದಲ್ಲಿ ಗೆದ್ದು ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್‌ಗೇರಲು ಕನಸು ಕಾಣುತ್ತಿವೆ. ಹೈದರಾಬಾದ್ ಸನ್‌ರೈಸರ್ಸ್ ತಂಡ ಕೇವಲ 10 ಅಂಕ ಗಳಿಸಿದ್ದು, ಉಳಿದ ಎರಡೂ ಪಂದ್ಯ ದೊಡ್ಡ ಅಂತರದಲ್ಲಿ ಗೆದದ್ದು 14 ಅಂಕ ಮತ್ತು ಉತ್ತಮ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಕನಸು ಕಾಣುತ್ತಿದೆ. ಆದರೆ ಅದರ ಸಾಧ್ಯತೆ ತೀರಾ ಕಡಿಮೆ ಇದೆ.

ಒಂದು ವೇಳೆ ಆರ್‌ಸಿಬಿ ಬಯಸಿದಂತೆ ಅದು ಗುಜರಾತ್ ಎದುರು ಗೆದ್ದು, ಡೆಲ್ಲಿ ತಂಡವು ಮುಂಬೈ ಎದುರು ಸೋತರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುತ್ತದೆ. ಆದರೆ ಅಲ್ಲಿ ಅದು ಅಗ್ರ 4ರಲ್ಲಿ 4 ಸ್ಥಾನದಲ್ಲಿರುವುದರಿಂದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ 3ನೇ ಸ್ಥಾನದ ತಂಡದೊಂದಿಗೆ ಕಣಕ್ಕಿಳಿದು ಗೆಲುವು ಸಾಧಿಸಬೇಕು. ನಂತರ ಸೆಮಿಫೈನಲ್ (2ನೇ ಕ್ವಾಲಿಫೈಯರ್) ಪಂದ್ಯದಲ್ಲಿ ಗೆಲುವು ಸಾಧಿಸಬೇಕು ಮತ್ತು ಅಂತಿಮವಾಗಿ ಫೈನಲ್‌ ನಲ್ಲಿ ಗೆಲುವು ಸಾಧಿಸಿದರೆ ಈ ಸಲ ಕಪ್ ನಮ್ದೆ ಎಂಬ ಘೋಷಣೆ ನಿಜವಾಗುತ್ತದೆ. ಕಷ್ಟದ ಹಾದಿ ಮುಂದಿದೆ. ಆದರೆ ಅಸಾಧ್ಯವಾದುದ್ದೇನಲ್ಲ. ಆರ್‌ಸಿಬಿ ಯಾವ ರೀತಿ ಪ್ರದರ್ಶನ ನೀಡುತ್ತದೆ ನೋಡೋಣ.

ಇದನ್ನೂ ಓದಿ: ಥಾಮಸ್ ಕಪ್: ಚೊಚ್ಚಲ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಾರತ

ಇದನ್ನೂ ಓದಿ: ಪೊನ್ನಂಪೇಟೆಯಲ್ಲಿ ಕೊಟ್ಟಿದ್ದು ಏರ್‌ಗನ್‌ ತರಬೇತಿ- ಸಿ.ಟಿ.ರವಿ; ನಡೆದದ್ದು ಯೋಗ ತರಬೇತಿ ಎಂದ ಹಿಂಜಾವೇ ಮುಖಂಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...