15ನೇ ಆವೃತ್ತಿಯ IPL2022 ರೋಚಕ ಘಟ್ಟಕ್ಕೆ ತಲುಪಿದೆ. ಲೀಗ್ ಹಂತದ ಕೇವಲ 6 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಪ್ಲೇಆಫ್ ಹಂತಕ್ಕೆ ತಲುಪಲು ತೀವ್ರ ಪೈಪೋಟಿ ಏರ್ಪಟ್ಟಿದೆ. ಸಾಂಘಿಕ ಪ್ರದರ್ಶನ ನೀಡಿರುವ ಗುಜರಾತ್ ಟೈಟನ್ಸ್ ತಂಡ ಅಗ್ರಸ್ಥಾನದೊಂದಿಗೆ ಈಗಾಗಲೇ ಪ್ಲೇಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಮೂರನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ತಲಾ 16 ಅಂಕ ಪಡೆದಿದ್ದು ಉಳಿದ ತಲಾ ಒಂದೊಂದು ಪಂದ್ಯಗಳಲ್ಲಿ ಗೆದ್ದರೂ, ಸೋತರೂ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಲಿವೆ. ಉಳಿದ ಒಂದು ಸ್ಥಾನಕ್ಕಾಗಿ RCB ಸೇರಿದಂತೆ 5 ತಂಡಗಳು ಸೆಣಸಾಟ ನಡೆಸುತ್ತಿದ್ದು, ಎಲ್ಲಾ ತಂಡಗಳಿಗೂ ಸಾಧ್ಯತೆಯಿದೆ. ಆದರೆ ಹೆಚ್ಚಿನ ಸಾಧ್ಯತೆ RCB ತಂಡಕ್ಕಿದೆ. ಆದರೆ ಈ ತಂಡಗಳು ಸೋತರಷ್ಟೆ ಅದಕ್ಕೆ ಅವಕಾಶ. ಅದು ಹೇಗೆ ಎಂಬುದನ್ನು ನೋಡೋಣ
ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಚನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇಆಫ್ ರೇಸ್‌ನಿಂದ ಈಗಾಗಲೇ ಹೊರಬಿದ್ದಿವೆ. ಉಳಿದ ಹೈದರಾಬಾದ್ ಸನ್‌ರೈಸರ್ಸ್ (10 ಅಂಕ), ಪಂಜಾಬ್ ಕಿಂಗ್ಸ್ (12 ಅಂಕ), ಕೋಲ್ಕತ್ತಾ ನೈಟ್ ರೈಡರ್ಸ್ (12 ಅಂಕ), ಡೆಲ್ಲಿ ಕ್ಯಾಪಿಟಲ್ಸ್ (14 ಅಂಕ) ಮತ್ತು RCB (14 ಅಂಕ) ಪ್ಲೇ ಆಫ್ ಆಸೆ ಜೀವಂತವಾಗಿಟ್ಟುಕೊಂಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆದರೆ ಈ ಐದು ತಂಡಗಳಲ್ಲಿ ಒಂದು ತಂಡ ಮಾತ್ರ ಪ್ಲೇ ಆಫ್ ಪ್ರವೇಶ ಸಾಧ್ಯ. 14 ಅಂಕ ಗಳಿಸಿರುವ RCB ಪ್ಲೇ ಆಫ್ ತಲುಪಬೇಕಾದರೆ ಉಳಿದ ನಾಲ್ಕು ತಂಡಗಳು ಸೋಲಬೇಕು ಮತ್ತು RCB ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದರು ದೊಡ್ಡ ಅಂತರದಲ್ಲಿ ಜಯಿಸಬೇಕು. ಆಗ ಅದು 16 ಅಂಕ ಗಳಿಸಿರುತ್ತದೆ. ಇನ್ನೂ ವಿವರವಾಗಿ ನೋಡುವ ಮೊದಲು ಅಂಕ ಪಟ್ಟಿಯ ಮೇಲೆ ಕಣ್ಣಾಡಿಸೋಣ ಬನ್ನಿ.

ಆರ್‌ಸಿಬಿ 13 ಪಂದ್ಯಗಳಲ್ಲಿ 14 ಅಂಕ ಗಳಿಸಿದ್ದರೂ ಸಹ ಅದರ ನೆಟ್ ರನ್‌ರೇಟ್ -323 ಇರುವುದು ಸಮಸ್ಯೆಯಾಗಿದೆ. ಅದರೊಂದಿಗೆ ಪ್ಲೇಆಫ್ ಪೈಪೋಟಿಯಲ್ಲಿರುವ ಉಳಿದ ನಾಲ್ಕು ತಂಡಗಳ ನೆಟ್ ರನ್‌ರೇಟ್ ಹೆಚ್ಚಿದೆ ಮತ್ತು ಕೆಲವು ತಂಡಗಳಿಗೆ ಇನ್ನು ಎರಡು ಪಂದ್ಯ ಆಡುವ ಅವಕಾಶವಿದೆ. ಹಾಗಾಗಿ ಅವುಗಳು ಸೋತರಷ್ಟೆ ಆರ್‌ಸಿಬಿಗೆ ಅವಕಾಶ. ಒಂದೊಂದೆ ತಂಡಗಳ ವಿವರ ನೋಡೋಣ.
ಡೆಲ್ಲಿ ಕ್ಯಾಪಿಟಲ್ಸ್
13 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕ ಗಳಿಸಿರುವ ಉತ್ತಮ ಎನ್ನಬಹುದಾದ +255 ನೆಟ್ ರನ್‌ರೇಟ್ ಹೊಂದಿದೆ. ಅದು ಶನಿವಾರ ಮುಂಬೈ ಎದುರು ಸೆಣಸಲಿದೆ. ಅಲ್ಲಿ ಸೋತರೂ ಅದರ ಪ್ಲೇ ಆಫ್ ಕನಸು ಭಗ್ನಗೊಳ್ಳಲಿದೆ. ಅದು ಆರ್‌ಸಿಬಿಗೆ ರಹದಾರಿ ಮಾಡಿಕೊಡುತ್ತದೆ. ಒಂದು ವೇಳೆ ಆ ಪಂದ್ಯ ಗೆದ್ದಲ್ಲಿ ಅದು ಪ್ಲೇ ಆಫ್ ಪ್ರವೇಶಿಸುತ್ತದೆ ಮತ್ತು ಆರ್‌ಸಿಬಿ ಮನೆಗೆ ಹೋಗುತ್ತದೆ. ಏಕೆಂದರೆ ಡೆಲ್ಲಿ ನೆಟ್ ರನ್‌ರೇಟ್ ಆರ್‌ಸಿಬಿಗಿಂತ ಹೆಚ್ಚಿದೆ.
ಇದನ್ನೂ ಓದಿ: ‘ಈ ಸಲ ಕಪ್ ನಮ್ದೆ’ ಆಗಲು RCB ಮುಂದಿನ ನಾಲ್ಕೂ ಪಂದ್ಯಗಳನ್ನು ಗೆಲ್ಲಲೇಬೇಕು, ಜೊತೆಗೆ ಅದೃಷ್ಟವೂ ಇರಬೇಕು
ಹೈದರಾಬಾದ್ ಸನ್‌ರೈಸರ್ಸ್
12 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 10 ಅಂಕ ಗಳಿಸಿರುವ ಹೈದರಾಬಾದ್ ತಂಡ -270 ರನ್ ರೇಟ್ ಹೊಂದಿದೆ. ಅದು ಮಂಗಳವಾರ ಚನ್ನೈ ಎದುರು ನಡೆಯುವ ಪಂದ್ಯದಲ್ಲಿ ಸೋಲಬೇಕು ನಂತರ ಭಾನುವಾರ ನಡೆಯುವ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಗೆಲ್ಲಬೇಕು. ಆಗ ಅದು ಒಟ್ಟು 12 ಅಂಕ ಗಳಿಸಿರುತ್ತದೆ (ಆರ್‌ಸಿಬಿಗಿಂತ ಕಡಿಮೆ)
ವ್ಯತ್ಯಾಸ ನೋಡಿ.
ನಿಮ್ಮ ಮಕ್ಕಳು ಏನಾಗಬೇಕು?
ಹಿಂಸೆಯ ತ್ರಿಶೂಲ ಹಿಡಿಯಬೇಕೆ?
ತ್ರಿವರ್ಣ ಧ್ವಜ ಹಿಡಿದು ಸಾಮರಸ್ಯದ ಹಾಡು ಹಾಡಬೇಕೆ?
ಆಯ್ಕೆ ನಿಮ್ಮದು…!#NaanuGauri #SaamarasyaUdupi #Udupi4unity #may14th2022 #Udupi #SayNoToViolence #airguns #PonnamPete #ಬಜರಂಗದಳ pic.twitter.com/7wvOHkgMOr— Naanu Gauri (@naanugauri) May 16, 2022
ಪಂಜಾಬ್ ಕಿಂಗ್ಸ್
13 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕ ಗಳಿಸಿರುವ ಪಂಜಾಬ್ ಕಿಂಗ್ಸ್ -043 ನೆಟ್ ರನ್ ರೇಟ್ ಹೊಂದಿದೆ. ಈ ತಂಡವು ಭಾನುವಾರ ಹೈದರಾಬಾದ್ ಎದುರು ನಡೆಯುವ ಪಂದ್ಯದಲ್ಲಿ ಸೋತರೆ ಆರ್‌ಸಿಬಿಗೆ ಅನುಕೂಲ. ಆಗ ಪಂಜಾಬ್ ಒಟ್ಟು 14 ಅಂಕ ಗಳಿಸಿರುತ್ತದೆ ಅಷ್ಟೇ.
ಕೋಲ್ಕತ್ತಾ ನೈಟ್ ರೈಡರ್ಸ್
13 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕ ಗಳಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ +160 ನೆಟ್ ರನ್ ರೇಟ್ ಹೊಂದಿದೆ. ಅದು ತನ್ನ ಕೊನೆಯ ಪಂದ್ಯವನ್ನು ಬುಧವಾರ ಲಕ್ನೋ ಸೂಪರ್ ಜೈಂಟ್ಸ್ ಎದುರು ಆಡಲಿದ್ದು ಅಲ್ಲಿ ಸೋತರೆ ಅದು ಮನೆಗೆ ಹೋಗುತ್ತದೆ. ಏಕೆಂದರೆ ಅದು ಕೇವಲ 12 ಅಂಕಗಳಿಗೆ ಸೀಮತವಾಗಲಿದೆ.
ಇಷ್ಟೆಲ್ಲಾ ಆಗಬೇಕಾದರೆ ಆರ್‌ಸಿಬಿ ತನ್ನ ಕಡೆಯ ಪಂದ್ಯ ಗುಜರಾತ್ ಎದುರು ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕು. ಅಲ್ಲಿ ಸೋತರೆ ಉಳಿದ ತಂಡಗಳಿಗೆ ವರವಾಗುತ್ತದೆ.
ಇದನ್ನೂ ಓದಿ: ಥಾಮಸ್ ಕಪ್: ಚೊಚ್ಚಲ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಾರತ
ಮುಂಬೈ ತಂಡ ಗೆಲ್ಲಲಿ ಎಂದು ಆರ್‌ಸಿಬಿ ಹಾರೈಸಬೇಕಾಗಿದೆ. ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಮುಂಬೈ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಡೆಲ್ಲಿ ಮತ್ತು ಹೈದರಾಬಾದ್ ವಿರುದ್ಧ ಆಡಲಿದೆ. ಆ ಎರಡನ್ನು ಗೆದ್ದರೆ ಆ ಎರಡೂ ತಂಡಗಳನ್ನು ತಮ್ಮೊಡನೆ ಮನೆಗೆ ಕರೆದುಕೊಂಡು ಹೋಗಬಹುದಾಗಿದೆ.
ಇದನ್ನೂ ಓದಿ: ಪೊನ್ನಂಪೇಟೆಯಲ್ಲಿ ಕೊಟ್ಟಿದ್ದು ಏರ್‌ಗನ್ ತರಬೇತಿ- ಸಿ.ಟಿ.ರವಿ; ನಡೆದದ್ದು ಯೋಗ ತರಬೇತಿ ಎಂದ ಹಿಂಜಾವೇ ಮುಖಂಡ


