ಪ್ಯಾಲೆಸ್ತೀನ್ ಆಕ್ರಮಿತ ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನು ಪ್ಯಾಲೆಸ್ತೀನಿ ಪ್ರತಿರೋಧ ಪಡೆ ಹಮಾಸ್ ಶನಿವಾರ ಶ್ಲಾಘಿಸಿದ್ದು, ಇಸ್ರೇಲ್ ಭಾರಿ ಪ್ರಚಾರ ಮಾಡುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಾದ “ಐರನ್ ಡೋಮ್ ಮತ್ತು ಡೇವಿಡ್‌ನ ಸ್ಲಿಂಗ್”ನ ದೌರ್ಬಲ್ಯವನ್ನು ಈ ದಾಳಿ ಬಹಿರಂಗಪಡಿಸಿದೆ ಎಂದು ಹೇಳಿದೆ. ಇಸ್ರೇಲ್ ಮೇಲೆ ಇರಾನ್ ದಾಳಿ
ಇರಾನ್‌ನ ಪರಮಾಣು ಕೇಂದ್ರ ಮತ್ತು ಇತರ ಪ್ರದೇಶಗಳನ್ನು ಗುರಿಯಾಗಿಸಿ ಶುಕ್ರವಾರ ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ ದೇಶದ ಪರಮಾಣು ವಿಜ್ಞಾನಿಗಳು, ಹಿರಿಯ ಸೇನಾಧಿಕಾರಿಗಳು ಹಾಗೂ ನಾಗರಿಕರ ಮೃತಪಟ್ಟಿದ್ದರು. ಇರಾನ್ ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸಿದ್ದು, ಈ ವರೆಗೆ ಇಬ್ಬರು ಮೃತಪಟ್ಟಿದ್ದು, 40 ಜನರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಇರಾನ್‌ನ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಪ್ಯಾಲೆಸ್ತೀನ್‌ನ ಪರ ಹೋರಾಟಗಾರ ಸಂಘಟನೆ ಹಮಾಸ್‌ನ ನಾಯಕ ಇಜ್ಜತ್ ಅಲ್-ರಿಷೇಕ್ ಅವರು, “ಐರನ್ ಡೋಮ್ ಮತ್ತು ಡೇವಿಡ್‌ನ ಸ್ಲಿಂಗ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಬಗ್ಗೆಗಿನ ಇಸ್ರೇಲ್‌ನ ಎಲ್ಲಾ ಪ್ರಚಾರದ ಹೊರತಾಗಿಯೂ ಇರಾನ್ ಇಸ್ರೇಲ್‌ನಲ್ಲಿರುವ ತಾಣಗಳನ್ನು ಯಶಸ್ವಿಯಾಗಿ ಗುರಿಯಾಗಿಸಿಕೊಂಡಿದೆ” ಎಂದು ಶ್ಲಾಘಿಸಿದ್ದಾರೆ.
ಇಸ್ರೇಲ್‌ನ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳು ವಿಫಲವಾಗಿವೆ ಮತ್ತು ದೇಶವು ಈ ಪ್ರದೇಶದ ಜನರಲ್ಲಿ ದೀರ್ಘಕಾಲದಿಂದ ಹೊತ್ತಿಸಿರುವ ಬೆಂಕಿಯಿಂದ ಅದು ಬಳಲುತ್ತದೆ ಎಂದು ಅಲ್-ರಿಷೇಕ್ ಅವರು ಹೇಳಿದ್ದಾರೆ ಎಂದು ಸ್ಥಳೀಯ ಪ್ಯಾಲೆಸ್ತೀನಿ ಸುದ್ದಿ ತಾಣಗಳು ತಿಳಿಸಿವೆ. “ಇರಾನ್‌ನ ಬಲವಾದ ಪ್ರತಿಕ್ರಿಯೆಯು ಇದನ್ನು ಸಾಬೀತುಪಡಿಸುತ್ತದೆ. ಇರಾನ್‌ನ ಕಾರ್ಯಾಚರಣೆಯು ಈ ಪ್ರದೇಶದಲ್ಲಿ ಇಸ್ರೇಲ್ ನಡೆಸುತ್ತಿರುವ ವರ್ಷಗಳ ಆಕ್ರಮಣದ ವಿರುದ್ಧದ ತೀವ್ರ ಮತ್ತು ನೇರ ಪ್ರತಿಕ್ರಿಯೆ” ಎಂದು ಅವರು ಹೇಳಿದ್ದಾರೆ.
ಇರಾನ್ ಇಸ್ರೇಲ್‌ನಾದ್ಯಂತ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ಪ್ರತೀಕಾರದ ದಾಳಿ ”ಆಪರೇಷನ್ ಟ್ರೂ ಪ್ರಾಮಿಸ್ III” ಅನ್ನು ಪ್ರಾರಂಭಿಸಿದ ನಂತರ ಹಮಾಸ್ ಈ ಹೇಳಿಕೆ ನೀಡಿದೆ.
ಇರಾನಿನ ಪ್ರತಿಕ್ರಿಯೆಯನ್ನು “ಕಾನೂನುಬದ್ಧ” ಎಂದು ಬಣ್ಣಿಸಿದ ಅಲ್-ರಿಷೇಕ್ ಅವರು, ಪ್ಯಾಲೆಸ್ತೀನ್ ಆಕ್ರಮಿತ ಪ್ರದೇಶಗಳಲ್ಲಿ ಮತ್ತು ಅದರಾಚೆ ನಡೆಸುತ್ತಿರುವ ತನ್ನ ನಿರಂತರ ಕೃತ್ಯಗಳಿಗೆ ಇಸ್ರೇಲ್ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
“ಇರಾನ್‌ನ ಈ ತೀವ್ರ ಪ್ರತಿಕ್ರಿಯೆಯು ಯಾವುದೇ ದುರಹಂಕಾರವನ್ನು ಪ್ರಶ್ನಿಸದೆ ಬಿಡುವುದಿಲ್ಲ ಮತ್ತು ಯಾವುದೇ ಆಕ್ರಮಣಕ್ಕೆ ಶಿಕ್ಷೆಯಿಲ್ಲದೆ ಇರುವುದಿಲ್ಲ ಎಂದು ಸಾಬೀತುಪಡಿಸುತ್ತದೆ” ಎಂದು ಅವರು ಹೇಳಿದ್ದಾರೆ.
ತಮ್ಮ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಒಳಬರುವ ಬಹುಪಾಲು ಸ್ಪೋಟಕಗಳನ್ನು ತಡೆದಿವೆ ಎಂದು ಇಸ್ರೇಲಿ ಅಧಿಕಾರಿಗಳು ಹೇಳಿಕೊಂಡಿದ್ದರೂ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇದನ್ನು ನಿರಾಕರಿಸಿದ್ದು, ತಮ್ಮ ಕ್ಷಿಪಣಿಗಳು ಹಲವಾರು ಸೇನಾ ಗುರಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿ ಬಹು-ಪದರದ ವಾಯು ರಕ್ಷಣಾ ಗುರಾಣಿಯನ್ನು ಭೇದಿಸಿದೆ ಎಂದು ಹೇಳಿದೆ.
ಇಸ್ರೇಲಿ ನೀತಿಗಳಿಗೆ ವಿರುದ್ಧವಾಗಿ ದೀರ್ಘಕಾಲದಿಂದ ಇರಾನ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಹಮಾಸ್, ಈ ಬಲಪ್ರದರ್ಶನವನ್ನು ಪ್ರಾದೇಶಿಕ ಅಧಿಕಾರ ಸಮತೋಲನದಲ್ಲಿ ಒಂದು ಮಹತ್ವದ ತಿರುವು ಎಂದು ಶ್ಲಾಘಿಸಿದೆ. ಇಸ್ರೇಲ್ ಮೇಲೆ ಇರಾನ್ ದಾಳಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಇರಾನ್ ಪ್ರತಿಕಾರ | ಇಸ್ರೇಲ್‌ನಾದ್ಯಂತ ಕ್ಷಿಪಣಿ ದಾಳಿ; 40 ಜನರಿಗೆ ಗಾಯ
ಇರಾನ್ ಪ್ರತಿಕಾರ | ಇಸ್ರೇಲ್‌ನಾದ್ಯಂತ ಕ್ಷಿಪಣಿ ದಾಳಿ; 40 ಜನರಿಗೆ ಗಾಯ

