Homeಅಂತರಾಷ್ಟ್ರೀಯಇರಾನ್‌ ಪ್ರತಿಕಾರ | ಇಸ್ರೇಲ್‌ನಾದ್ಯಂತ ಕ್ಷಿಪಣಿ ದಾಳಿ; 40 ಜನರಿಗೆ ಗಾಯ

ಇರಾನ್‌ ಪ್ರತಿಕಾರ | ಇಸ್ರೇಲ್‌ನಾದ್ಯಂತ ಕ್ಷಿಪಣಿ ದಾಳಿ; 40 ಜನರಿಗೆ ಗಾಯ

- Advertisement -
- Advertisement -

ಇರಾನ್‌ನ ಪರಮಾಣು ಮತ್ತು ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿದ ಬೃಹತ್ ದಾಳಿಯ ನಂತರ ಇರಾನ್ ಶನಿವಾರ ಮುಂಜಾನೆ ಪ್ಯಾಲೆಸ್ತೀನ್‌ ಆಕ್ರಮಿತ ಇಸ್ರೇಲ್‌ನ ರಾಜಧಾನಿ ಸೇರಿದಂತೆ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಕನಿಷ್ಠ 40 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್‌ ಪ್ರತಿಕಾರ

ಶುಕ್ರವಾರ ರಾತ್ರಿ ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗುತ್ತಿದ್ದಂತೆ ಟೆಲ್ ಅವೀವ್ ಮತ್ತು ಜೆರುಸಲೆಮ್ ಮೇಲೆ ಸ್ಫೋಟಗಳು ಕೇಳಿಬಂದವು. ಶುಕ್ರವಾರ ಮುಂಜಾನೆ ಇಸ್ರೇಲ್ ನಡೆಸಿದ ಭಾರಿ ದಾಳಿಯ ನಂತರ ಇದು ಸಂಭವಿಸಿದೆ. ಇರಾನ್‌ ದಾಳಿಯ ನಂತರ ನಿವಾಸಿಗಳು ಬಂಕರ್‌ಗಳಲ್ಲಿ ಆಶ್ರಯ ಪಡೆಯುವಂತೆ ಶನಿವಾರ ಬೆಳಿಗ್ಗೆ ಅದರ ಮಿಲಿಟರಿ ಕರೆ ನೀಡಿದೆ.

ಇರಾನ್ ಮೇಲೆ ದಾಳಿ ಮಾಡಿ ಹಲವಾರು ಉನ್ನತ ಮಟ್ಟದ ಮಿಲಿಟರಿ ಕಮಾಂಡರ್‌ಗಳು ಮತ್ತು ಆರು ಪರಮಾಣು ವಿಜ್ಞಾನಿಗಳನ್ನು ಕೊಂದು “ಅಪರಾಧ” ಮಾಡಿದ ನಂತರ ಇಸ್ರೇಲ್‌ “ಕಠಿಣ ಶಿಕ್ಷೆಯನ್ನು ನಿರೀಕ್ಷಿಸಬೇಕು” ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ. ದೂರದರ್ಶನದ ಭಾಷಣದಲ್ಲಿ ಅವರು ಇಸ್ರೇಲ್ ಅನ್ನು “ನಾಶ” ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಇಸ್ರೇಲ್‌ನ ದಾಳಿಗಳು “ಯುದ್ಧವನ್ನು ಪ್ರಾರಂಭಿಸಿವೆ” ಮತ್ತು ಪರಿಣಾಮಗಳಿಲ್ಲದೆ “ಹಿಟ್ ಅಂಡ್ ರನ್” ದಾಳಿಗಳನ್ನು ಮಾಡಲು ಅದಕ್ಕೆ ಅನುಮತಿ ನೀಡುವುದಿಲ್ಲ ಎಂದು ಅವರು ಹೇಳಿದ್ದು, “ಜಿಯೋನಿಸ್ಟ್ ಆಡಳಿತ [ಇಸ್ರೇಲ್] ತನ್ನ ಅಪರಾಧದ ಪರಿಣಾಮಗಳಿಂದ ಪಾರಾಗುವುದಿಲ್ಲ. ನಮ್ಮ ಪ್ರತಿಕ್ರಿಯೆ ಅರ್ಧದಷ್ಟು ಅಳತೆಯಾಗಿರುವುದಿಲ್ಲ ಎಂದು ಇರಾನ್ ರಾಷ್ಟ್ರಕ್ಕೆ ಖಾತರಿ ನೀಡಬೇಕು” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಖಮೇನಿ ಅವರ ಆಜ್ಞೆಯ ಮೇರೆಗೆ ಇಸ್ರೇಲ್‌ನಲ್ಲಿರುವ “ಡಜನ್‌ಗಟ್ಟಲೆ ಗುರಿಗಳು, ಮಿಲಿಟರಿ ಕೇಂದ್ರಗಳು ಮತ್ತು ವಾಯುನೆಲೆಗಳ ವಿರುದ್ಧ ದಾಳಿ ಮಾಡಲಾಗಿದೆ” ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ. ಶುಕ್ರವಾರ ರಾತ್ರಿ ಇಸ್ರೇಲ್ ಮೇಲೆ ಮೂರು ಪ್ರತ್ಯೇಕ ದಾಳಿ ಅಲೆಗಳು ಮತ್ತು ನೂರಾರು ಕ್ಷಿಪಣಿಗಳನ್ನು ಹಾರಿಸಲಾಯಿತು ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ತಿಳಿಸಿದೆ. ಕನಿಷ್ಠ ಒಂದು ಕ್ಷಿಪಣಿ ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ಪರಿಣಾಮ ಬೀರಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ.

ಇಸ್ರೇಲ್ ಮೇಲಿನ ದಾಳಿಯ ನಂತರ, ಶನಿವಾರ ಸ್ಥಳೀಯ ಸಮಯ ಮಧ್ಯಾಹ್ನ 2 ಗಂಟೆಯವರೆಗೆ ತನ್ನ ವಾಯುಪ್ರದೇಶವನ್ನು ಮುಚ್ಚಲಾಗುವುದು ಎಂದು ಇರಾನ್ ಘೋಷಿಸಿದೆ. ಅದೇ ಸಮಯದಲ್ಲಿ, ಹೊಸ ಇಸ್ರೇಲಿ ದಾಳಿಗಳನ್ನು ತಡೆಯಲು ರಾಜಧಾನಿ ಟೆಹ್ರಾನ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ IRNA ವರದಿ ಮಾಡಿದೆ.

ಶುಕ್ರವಾರ ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್-ಜನರಲ್ ಮೊಹಮ್ಮದ್ ಬಾಘೇರಿ ಮತ್ತು IRGC ಮುಖ್ಯಸ್ಥ ಹೊಸೇನ್ ಸಲಾಮಿ ಸೇರಿದಂತೆ ಹಲವಾರು ಉನ್ನತ ಇರಾನಿನ ಜನರಲ್‌ಗಳು ಮತ್ತು ವಿಜ್ಞಾನಿಗಳು ಸಾವನ್ನಪ್ಪಿದರು. ಆದಾಗ್ಯೂ, ಮೇಜರ್-ಜನರಲ್ ಮೊಹಮ್ಮದ್ ಪಕ್ಪೂರ್ ಅವರನ್ನು ಹೊಸೇನ್ ಸಲಾಮಿ ಬದಲಿಗೆ ಶೀಘ್ರವಾಗಿ ಬಡ್ತಿ ನೀಡಲಾಯಿತು.

ಇಸ್ರೇಲ್‌ನ ಶುಕ್ರವಾರದ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 78 ಜನರು ಸಾವನ್ನಪ್ಪಿದ್ದಾರೆ ಮತ್ತು 320 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾವನಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ.

ದೇಶದ ಸರ್ವೋಚ್ಛ ನಾಯಕ ಖೊಮೇನಿಗೆ ನೂತತ IRGC ಮುಖ್ಯಸ್ಥ ಮೊಹಮ್ಮದ್ ಪಕ್ಪೂರ್ ಬರೆದ ಪತ್ರದಲ್ಲಿ, ಇಸ್ರೇಲ್ ಅನ್ನು ಉಲ್ಲೇಖಿಸಿ, “ಮಕ್ಕಳನ್ನು ಕೊಲ್ಲುವ ಆಡಳಿತಕ್ಕೆ ನರಕದ ದ್ವಾರಗಳು ತೆರೆಯುತ್ತವೆ” ಎಂದು ಹೇಳಿದ್ದಾರೆ.

ಇರಾನ್ ಮೇಲೆ ನಡೆಸಿದ ಅನಿರೀಕ್ಷಿತ ದಾಳಿಯ ಸಮಯದಲ್ಲಿ ಇಸ್ರೇಲ್‌ ಸೇನೆಯು ಇರಾನ್‌ನಾದ್ಯಂತ 200 ಕ್ಕೂ ಹೆಚ್ಚು ಗುರಿಗಳನ್ನು ಹೊಡೆದಿದೆ ಎಂದು ಹೇಳಿದೆ. ಇರಾನ್‌ನ ಪ್ರತೀಕಾರದ ದಾಳಿಯ ಮೊದಲು ಮಾತನಾಡಿದ್ದ ಇಸ್ರೇಲ್ ಮಿಲಿಟರಿ ವಕ್ತಾರ ಬ್ರಿಗೇಡಿಯರ್-ಜನರಲ್ ಎಫೀ ಡೆಫ್ರಿನ್, ಇಸ್ರೇಲ್ ಸೈನ್ಯವು “ದಾಳಿಯನ್ನು ಮುಂದುವರಿಸುತ್ತಿದೆ” ಎಂದು ಹೇಳಿದ್ದರು.

ಇರಾನ್‌ನ ಇಸ್ಫಹಾನ್‌ನಲ್ಲಿರುವ ಪರಮಾಣು ಕೇಂದ್ರಗಳನ್ನು ಸೇನೆ ಗುರಿಯಾಗಿಸಿಕೊಂಡಿದ್ದು, ಕಾರ್ಯಾಚರಣೆ “ಇನ್ನೂ ಮುಂದುವರೆದಿದೆ” ಎಂದು ಡೆಫ್ರಿನ್ ಹೇಳಿದ್ದರು. ಅದಕ್ಕೂ ಮೊದಲು, ಇಸ್ರೇಲ್ ಇರಾನ್‌ನಲ್ಲಿರುವ ನಟಾಂಜ್ ಪರಮಾಣು ಪುಷ್ಟೀಕರಣ ತಾಣದ ಮೇಲೆಯೂ ದಾಳಿ ಮಾಡಿದೆ.

ಶನಿವಾರ ಮುಂಜಾನೆ ಇರಾನ್‌ನ ರಾಜಧಾನಿ ಟೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಿಂದ ಬೆಂಕಿ ಮತ್ತು ಭಾರೀ ಹೊಗೆ ಹೊರಹೊಮ್ಮಿತು ಎಂದು AFP ಪತ್ರಕರ್ತರೊಬ್ಬರು ಹೇಳಿದ್ದು, ಸ್ಥಳೀಯ ಮಾಧ್ಯಮಗಳು ಕೂಡಾ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ ಎಂದು ಖಚಿತಪಡಿಸಿವೆ. ಇರಾನ್ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ ಮತ್ತು ರಾಜಧಾನಿಯಾದ್ಯಂತ ಸ್ಫೋಟಗಳ ಶಬ್ದ ಕೇಳಿಬರುತ್ತಿದೆ ಎಂದು ಹೇಳಿತ್ತು.

ಇಸ್ರೇಲ್ ನಡೆಸಿದ ಈ ದಾಳಿಯನ್ನು ವಿರೋಧಿಸಿ  ತಮ್ಮ ದೇಶದ ಮಿಲಿಟರಿ ಪ್ರತಿಕ್ರಿಯೆಯನ್ನು ನಿರೀಕ್ಷಿಸಿ ನೂರಾರು ಜನರು ರಾತ್ರಿಯಿಡೀ ಇರಾನ್‌ನ ರಾಜಧಾನಿ ಟೆಹ್ರಾನ್‌ನ ಬೀದಿಗಳಿಗೆ ಇಳಿದು ರಾಷ್ಟ್ರೀಯ ಧ್ವಜಗಳನ್ನು ಬೀಸುತ್ತಾ ಮತ್ತು ಇಸ್ರೇಲ್ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ.

ಇರಾನ್‌ನಿಂದ ಡಜನ್ಗಟ್ಟಲೆ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದ್ದು, ಕೆಲವು ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ ಎಂದು ಅದು ತಿಳಿಸಿದೆ. ಪ್ಯಾಲೆಸ್ತೀನ್ ಆಕ್ರಮಿತ ಇಸ್ರೇಲ್‌ನ ರಾಜಧಾನಿ ಟೆಲ್ ಅವೀವ್‌ನ ಡೌನ್‌ಟೌನ್‌ನಲ್ಲಿರುವ ಗಗನಚುಂಬಿ ಕಟ್ಟಡಗಳ ಮೇಲೆ ಹೊಗೆ ಬರುತ್ತಿದೆ ಎಂದು ಎಎಫ್‌ಪಿ ಪತ್ರಕರ್ತರೊಬ್ಬರು ವರದಿ ಮಾಡಿದ್ದಾರೆ.

ಇರಾನಿನ ಕ್ಷಿಪಣಿ ದಾಳಿಯ ನಂತರ ತನ್ನ ರಕ್ಷಣಾ ತಂಡಗಳು ಪ್ರತಿಕ್ರಿಯಿಸುತ್ತಿವೆ ಎಂದು ಇಸ್ರೇಲ್‌ನ ಅಗ್ನಿಶಾಮಕ ಸೇವೆ ತಿಳಿಸಿದೆ. ಈ ತಂಡಗಳು ಎತ್ತರದ ಕಟ್ಟಡದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕೆಲಸವೂ ಮಾಡುತ್ತಿದೆ ಎಂದು ಅದು ತಿಳಿಸಿದೆ.

ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ಸರ್ಕಾರಗಳು ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಸಂಗ್ರಹಿಸುತ್ತಿದೆ ಎಂದು ಪದೇ ಪದೇ ಆರೋಪಿಸಿದ್ದು, ಆದರೆ ಇರಾನ್ ಅದನ್ನು ನಿರಂತರವಾಗಿ ನಿರಾಕರಿಸುತ್ತಲೆ ಬಂದಿದೆ. ಈ ನಡುವೆ, ಇರಾನ್ ತನ್ನ ಪರಮಾಣು ಕಾರ್ಯಕ್ರಮದಲ್ಲಿ “ಹಿಂದಿರುಗಿಸಲಾಗದ ಹಂತ”ವನ್ನು ತಲುಪುತ್ತಿದೆ ಎಂದು ಇಸ್ರೇಲ್ ಗುಪ್ತಚರ ಇಲಾಖೆ ತೀರ್ಮಾನಿಸಿದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಇರಾನ್‌ ಪ್ರತಿಕಾರ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಇಸ್ರೇಲ್-ಇರಾನ್ ಸಂಘರ್ಷ: ಕಚ್ಚಾ ತೈಲ ಬೆಲೆಗಳು 7%ಕ್ಕಿಂತ ಹೆಚ್ಚು ಏರಿಕೆ

ಇಸ್ರೇಲ್-ಇರಾನ್ ಸಂಘರ್ಷ: ಕಚ್ಚಾ ತೈಲ ಬೆಲೆಗಳು 7%ಕ್ಕಿಂತ ಹೆಚ್ಚು ಏರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...