Homeಅಂತರಾಷ್ಟ್ರೀಯಅಮೆರಿಕ ಅಧ್ಯಕ್ಷ ಟ್ರಂಪ್‌ ಬಂಧನಕ್ಕೆ ವಾರಂಟ್ ಹೊರಡಿಸಿದ ಇರಾನ್: ಇಂಟರ್‌ಪೋಲ್ ಸಹಾಯ ಯಾಚನೆ

ಅಮೆರಿಕ ಅಧ್ಯಕ್ಷ ಟ್ರಂಪ್‌ ಬಂಧನಕ್ಕೆ ವಾರಂಟ್ ಹೊರಡಿಸಿದ ಇರಾನ್: ಇಂಟರ್‌ಪೋಲ್ ಸಹಾಯ ಯಾಚನೆ

ಜನವರಿಯಲ್ಲಿ ಕ್ರಾಂತಿಕಾರಿ ಗಾರ್ಡ್‌ನ ದಂಡಯಾತ್ರೆಯ ಕುಡ್ಸ್ ಫೋರ್ಸ್‌ನ ಮೇಲ್ವಿಚಾರಣೆ ವಹಿಸಿದ್ದ ಸೊಲೈಮಾನಿ ಮತ್ತು ಇತರರನ್ನು ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್‌ ದಾಳಿಯಲ್ಲಿ ಕೊಲ್ಲಲಾಗಿತ್ತು.

- Advertisement -
- Advertisement -

ಬಾಗ್ದಾದ್‌ನಲ್ಲಿ ಇರಾನಿನ ಉನ್ನತ ಜನರಲ್‌ಅನ್ನು ಡ್ರೋನ್ ದಾಳಿ ಮೂಲಕ ಕೊಂದಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರರನ್ನು ಬಂಧಿಸಲು ಇರಾನ್ ವಾರಂಟ್ ಹೊರಡಿಸಿದೆ. ಅದಕ್ಕಾಗಿ ಇಂಟರ್‌ಪೋಲ್ ಸಹಾಯ ಕೇಳಿದ್ದೇವೆ ಎಂದು ಸ್ಥಳೀಯ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

ಇದರಿಂದ ಸದ್ಯಕ್ಕೆ ಡೊನಾಲ್ಡ್‌ ಟ್ರಂಪ್‌ಗೆ ಯಾವುದೇ ಬಂಧನದ ಅಪಾಯವಿಲ್ಲದಿದ್ದರೂ ಇದು, ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯನ್ನು ಒತ್ತಿಹೇಳುತ್ತದೆ. ವಿಶ್ವಶಕ್ತಿಗಳೊಂದಿಗಿನ ಟೆಹ್ರಾನ್ ಪರಮಾಣು ಒಪ್ಪಂದದಿಂದ ಟ್ರಂಪ್ ಏಕಪಕ್ಷೀಯವಾಗಿ ಅಮೆರಿಕವನ್ನು ಹಿಂತೆಗೆದುಕೊಂಡಾಗಿನಿಂದ ಈ ಉದ್ವಿಗ್ನತೆ ಹೆಚ್ಚಾಗಿದೆ.

ಬಾಗ್ದಾದ್‌ನಲ್ಲಿ ಜನವರಿ 3 ರಂದು ಜನರಲ್ ಕಾಸ್ಸೆಮ್ ಸೊಲೈಮಾನಿಯನ್ನು ಕೊಂದ  ಆರೋಪದಲ್ಲಿ ಟ್ರಂಪ್ ಮತ್ತು 30 ಕ್ಕೂ ಹೆಚ್ಚು ಇತರರು ಕೊಲೆ ಮತ್ತು ಭಯೋತ್ಪಾದನೆ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಟೆಹ್ರಾನ್ ಪ್ರಾಸಿಕ್ಯೂಟರ್ ಅಲಿ ಅಲ್ಕಾಸಿಮೆಹ್ರ್ ಹೇಳಿದ್ದಾರೆ.

ಫ್ರಾನ್ಸ್‌ನ ಲಿಯಾನ್ ಮೂಲದ ಇಂಟರ್‌ಪೋಲ್ ಇರಾನ್‌ ಕೋರಿಕೆಗೆ ತಕ್ಷಣ ಸ್ಪಂದಿಸಲಿಲ್ಲ ಎನ್ನಲಾಗಿದೆ.

ಟ್ರಂಪ್ ಮತ್ತು ಇತರರಿಗೆ ಇರಾನ್ “ರೆಡ್ ನೋಟಿಸ್” ನೀಡಬೇಕೆಂದು ವಿನಂತಿಸಿದೆ ಎಂದು ಅಲ್ಕಾಸಿಮೆಹರ್ ಹೇಳಿದ್ದಾರೆ. ಇದು ಇಂಟರ್ಪೋಲ್ ಹೊರಡಿಸಿದ ಉನ್ನತ ಮಟ್ಟದ ಬಂಧನ ವಿನಂತಿಯನ್ನು ಪ್ರತಿನಿಧಿಸುತ್ತದೆ.

ವಿನಂತಿಯನ್ನು ಸ್ವೀಕರಿಸಿದ ನಂತರ, ಇಂಟರ್‌ಪೋಲ್ ಸಮಿತಿಯಿಂದ ಸಭೆ ಸೇರಿ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಬೇಕೆ ಅಥವಾ ಬೇಡವೇ ಎಂದು ಚರ್ಚಿಸುತ್ತದೆ. ಇಂಟರ್‌ಪೋಲ್ ಯಾವುದೇ ಸೂಚನೆಗಳನ್ನು ಸಾರ್ವಜನಿಕವಾಗಿ ಮಾಡುವ ಅವಶ್ಯಕತೆಯಿಲ್ಲ, ಆದರೂ ಕೆಲವು ಅದರ ವೆಬ್‌ಸೈಟ್‌ನಲ್ಲಿ ಪ್ರಕಟವಾಗುತ್ತವೆ.

ಜನವರಿಯಲ್ಲಿ ಕ್ರಾಂತಿಕಾರಿ ಗಾರ್ಡ್‌ನ ದಂಡಯಾತ್ರೆಯ ಕುಡ್ಸ್ ಫೋರ್ಸ್‌ನ ಮೇಲ್ವಿಚಾರಣೆ ವಹಿಸಿದ್ದ ಸೊಲೈಮಾನಿ ಮತ್ತು ಇತರರನ್ನು ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್‌ ದಾಳಿಯಲ್ಲಿ ಕೊಲ್ಲಲಾಗಿತ್ತು. ಇದು ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿತು. ಅಂತಿಮವಾಗಿ ಇರಾಕ್‌ನಲ್ಲಿ ಅಮೆರಿಕದ ಸೈನಿಕರನ್ನು ಗುರಿಯಾಗಿಸಿಕೊಂಡು ಖಂಡಾಂತರ ಕ್ಷಿಪಣಿ ದಾಳಿ ನಡೆಸುವ ಮೂಲಕ ಇರಾನ್ ಪ್ರತೀಕಾರ ತೀರಿಸಿಕೊಂಡಿತ್ತು.


ಮತ್ತಷ್ಟು ಸುದ್ದಿಗಳು

ಯುದ್ಧಕೋರ ಅಮೆರಿಕಾದ ಇರಾನ್ ಮೇಲಿನ ದುಸ್ಸಾಹಸ ಫಲ ನೀಡುವುದೇ ಇಲ್ಲ ಪೆಟ್ಟು ಕೊಡುವುದೇ?

ಇರಾನ್- ಅಮೆರಿಕ ಯುದ್ಧದಲ್ಲಿ ಅಮೆರಿಕದ ಕಾಲಾಳು ಆಗಲು ಹೊರಟ ಭಾರತ

ಟ್ರಂಪ್ ಇರಾನ್ ಮೇಲೆ ಬಿದ್ರೆ, ಮೋದಿ ನಮ್ಮ ಮೇಲೆ ಬಿದ್ದವುನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...