ಇರಾನ್‌ನ ಪರಮಾಣು ಮತ್ತು ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಬೃಹತ್ ದಾಳಿಯ ನಂತರ ಇರಾನ್ ಶನಿವಾರ ಮುಂಜಾನೆ ಪ್ಯಾಲೆಸ್ತೀನ್ ಆಕ್ರಮಿತ ಇಸ್ರೇಲ್‌ನ ರಾಜಧಾನಿ ಸೇರಿದಂತೆ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಕನಿಷ್ಠ 40 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಪ್ರತಿಕಾರ
ಶುಕ್ರವಾರ ರಾತ್ರಿ ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗುತ್ತಿದ್ದಂತೆ ಟೆಲ್ ಅವೀವ್ ಮತ್ತು ಜೆರುಸಲೆಮ್ ಮೇಲೆ ಸ್ಫೋಟಗಳು ಕೇಳಿಬಂದವು. ಶುಕ್ರವಾರ ಮುಂಜಾನೆ ಇಸ್ರೇಲ್ ನಡೆಸಿದ ಭಾರಿ ದಾಳಿಯ ನಂತರ ಇದು ಸಂಭವಿಸಿದೆ. ಇರಾನ್ ದಾಳಿಯ ನಂತರ ನಿವಾಸಿಗಳು ಬಂಕರ್‌ಗಳಲ್ಲಿ ಆಶ್ರಯ ಪಡೆಯುವಂತೆ ಶನಿವಾರ ಬೆಳಿಗ್ಗೆ ಅದರ ಮಿಲಿಟರಿ ಕರೆ ನೀಡಿದೆ.
ಇರಾನ್ ಮೇಲೆ ದಾಳಿ ಮಾಡಿ ಹಲವಾರು ಉನ್ನತ ಮಟ್ಟದ ಮಿಲಿಟರಿ ಕಮಾಂಡರ್‌ಗಳು ಮತ್ತು ಆರು ಪರಮಾಣು ವಿಜ್ಞಾನಿಗಳನ್ನು ಕೊಂದು “ಅಪರಾಧ” ಮಾಡಿದ ನಂತರ ಇಸ್ರೇಲ್ “ಕಠಿಣ ಶಿಕ್ಷೆಯನ್ನು ನಿರೀಕ್ಷಿಸಬೇಕು” ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ. ದೂರದರ್ಶನದ ಭಾಷಣದಲ್ಲಿ ಅವರು ಇಸ್ರೇಲ್ ಅನ್ನು “ನಾಶ” ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಇಸ್ರೇಲ್‌ನ ದಾಳಿಗಳು “ಯುದ್ಧವನ್ನು ಪ್ರಾರಂಭಿಸಿವೆ” ಮತ್ತು ಪರಿಣಾಮಗಳಿಲ್ಲದೆ “ಹಿಟ್ ಅಂಡ್ ರನ್” ದಾಳಿಗಳನ್ನು ಮಾಡಲು ಅದಕ್ಕೆ ಅನುಮತಿ ನೀಡುವುದಿಲ್ಲ ಎಂದು ಅವರು ಹೇಳಿದ್ದು, “ಜಿಯೋನಿಸ್ಟ್ ಆಡಳಿತ [ಇಸ್ರೇಲ್] ತನ್ನ ಅಪರಾಧದ ಪರಿಣಾಮಗಳಿಂದ ಪಾರಾಗುವುದಿಲ್ಲ. ನಮ್ಮ ಪ್ರತಿಕ್ರಿಯೆ ಅರ್ಧದಷ್ಟು ಅಳತೆಯಾಗಿರುವುದಿಲ್ಲ ಎಂದು ಇರಾನ್ ರಾಷ್ಟ್ರಕ್ಕೆ ಖಾತರಿ ನೀಡಬೇಕು” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
#BREAKING Videos obtained by Iran International show thick orange smoke and a massive fire in Zanjan, northern Iran, where an army base was reportedly targeted by Israeli airstrikes. The fire is still burning hours after the attack. pic.twitter.com/G7OENEmhyd
— Iran International English (@IranIntl_En) June 14, 2025
ಖಮೇನಿ ಅವರ ಆಜ್ಞೆಯ ಮೇರೆಗೆ ಇಸ್ರೇಲ್‌ನಲ್ಲಿರುವ “ಡಜನ್‌ಗಟ್ಟಲೆ ಗುರಿಗಳು, ಮಿಲಿಟರಿ ಕೇಂದ್ರಗಳು ಮತ್ತು ವಾಯುನೆಲೆಗಳ ವಿರುದ್ಧ ದಾಳಿ ಮಾಡಲಾಗಿದೆ” ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ. ಶುಕ್ರವಾರ ರಾತ್ರಿ ಇಸ್ರೇಲ್ ಮೇಲೆ ಮೂರು ಪ್ರತ್ಯೇಕ ದಾಳಿ ಅಲೆಗಳು ಮತ್ತು ನೂರಾರು ಕ್ಷಿಪಣಿಗಳನ್ನು ಹಾರಿಸಲಾಯಿತು ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ತಿಳಿಸಿದೆ. ಕನಿಷ್ಠ ಒಂದು ಕ್ಷಿಪಣಿ ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ಪರಿಣಾಮ ಬೀರಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ.
ಇಸ್ರೇಲ್ ಮೇಲಿನ ದಾಳಿಯ ನಂತರ, ಶನಿವಾರ ಸ್ಥಳೀಯ ಸಮಯ ಮಧ್ಯಾಹ್ನ 2 ಗಂಟೆಯವರೆಗೆ ತನ್ನ ವಾಯುಪ್ರದೇಶವನ್ನು ಮುಚ್ಚಲಾಗುವುದು ಎಂದು ಇರಾನ್ ಘೋಷಿಸಿದೆ. ಅದೇ ಸಮಯದಲ್ಲಿ, ಹೊಸ ಇಸ್ರೇಲಿ ದಾಳಿಗಳನ್ನು ತಡೆಯಲು ರಾಜಧಾನಿ ಟೆಹ್ರಾನ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ IRNA ವರದಿ ಮಾಡಿದೆ.
ಶುಕ್ರವಾರ ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್-ಜನರಲ್ ಮೊಹಮ್ಮದ್ ಬಾಘೇರಿ ಮತ್ತು IRGC ಮುಖ್ಯಸ್ಥ ಹೊಸೇನ್ ಸಲಾಮಿ ಸೇರಿದಂತೆ ಹಲವಾರು ಉನ್ನತ ಇರಾನಿನ ಜನರಲ್‌ಗಳು ಮತ್ತು ವಿಜ್ಞಾನಿಗಳು ಸಾವನ್ನಪ್ಪಿದರು. ಆದಾಗ್ಯೂ, ಮೇಜರ್-ಜನರಲ್ ಮೊಹಮ್ಮದ್ ಪಕ್ಪೂರ್ ಅವರನ್ನು ಹೊಸೇನ್ ಸಲಾಮಿ ಬದಲಿಗೆ ಶೀಘ್ರವಾಗಿ ಬಡ್ತಿ ನೀಡಲಾಯಿತು.
ಇಸ್ರೇಲ್‌ನ ಶುಕ್ರವಾರದ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 78 ಜನರು ಸಾವನ್ನಪ್ಪಿದ್ದಾರೆ ಮತ್ತು 320 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾವನಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ.
Footage from the Iranian ballistic missile impact in central Israel. Medics say they’re treating at least 10 wounded. pic.twitter.com/iZtMAh8IlD
— Emanuel (Mannie) Fabian (@manniefabian) June 14, 2025
ದೇಶದ ಸರ್ವೋಚ್ಛ ನಾಯಕ ಖೊಮೇನಿಗೆ ನೂತತ IRGC ಮುಖ್ಯಸ್ಥ ಮೊಹಮ್ಮದ್ ಪಕ್ಪೂರ್ ಬರೆದ ಪತ್ರದಲ್ಲಿ, ಇಸ್ರೇಲ್ ಅನ್ನು ಉಲ್ಲೇಖಿಸಿ, “ಮಕ್ಕಳನ್ನು ಕೊಲ್ಲುವ ಆಡಳಿತಕ್ಕೆ ನರಕದ ದ್ವಾರಗಳು ತೆರೆಯುತ್ತವೆ” ಎಂದು ಹೇಳಿದ್ದಾರೆ.
ಇರಾನ್ ಮೇಲೆ ನಡೆಸಿದ ಅನಿರೀಕ್ಷಿತ ದಾಳಿಯ ಸಮಯದಲ್ಲಿ ಇಸ್ರೇಲ್ ಸೇನೆಯು ಇರಾನ್‌ನಾದ್ಯಂತ 200 ಕ್ಕೂ ಹೆಚ್ಚು ಗುರಿಗಳನ್ನು ಹೊಡೆದಿದೆ ಎಂದು ಹೇಳಿದೆ. ಇರಾನ್‌ನ ಪ್ರತೀಕಾರದ ದಾಳಿಯ ಮೊದಲು ಮಾತನಾಡಿದ್ದ ಇಸ್ರೇಲ್ ಮಿಲಿಟರಿ ವಕ್ತಾರ ಬ್ರಿಗೇಡಿಯರ್-ಜನರಲ್ ಎಫೀ ಡೆಫ್ರಿನ್, ಇಸ್ರೇಲ್ ಸೈನ್ಯವು “ದಾಳಿಯನ್ನು ಮುಂದುವರಿಸುತ್ತಿದೆ” ಎಂದು ಹೇಳಿದ್ದರು.
ಇರಾನ್‌ನ ಇಸ್ಫಹಾನ್‌ನಲ್ಲಿರುವ ಪರಮಾಣು ಕೇಂದ್ರಗಳನ್ನು ಸೇನೆ ಗುರಿಯಾಗಿಸಿಕೊಂಡಿದ್ದು, ಕಾರ್ಯಾಚರಣೆ “ಇನ್ನೂ ಮುಂದುವರೆದಿದೆ” ಎಂದು ಡೆಫ್ರಿನ್ ಹೇಳಿದ್ದರು. ಅದಕ್ಕೂ ಮೊದಲು, ಇಸ್ರೇಲ್ ಇರಾನ್‌ನಲ್ಲಿರುವ ನಟಾಂಜ್ ಪರಮಾಣು ಪುಷ್ಟೀಕರಣ ತಾಣದ ಮೇಲೆಯೂ ದಾಳಿ ಮಾಡಿದೆ.
ಶನಿವಾರ ಮುಂಜಾನೆ ಇರಾನ್‌ನ ರಾಜಧಾನಿ ಟೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಿಂದ ಬೆಂಕಿ ಮತ್ತು ಭಾರೀ ಹೊಗೆ ಹೊರಹೊಮ್ಮಿತು ಎಂದು AFP ಪತ್ರಕರ್ತರೊಬ್ಬರು ಹೇಳಿದ್ದು, ಸ್ಥಳೀಯ ಮಾಧ್ಯಮಗಳು ಕೂಡಾ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ ಎಂದು ಖಚಿತಪಡಿಸಿವೆ. ಇರಾನ್ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ ಮತ್ತು ರಾಜಧಾನಿಯಾದ್ಯಂತ ಸ್ಫೋಟಗಳ ಶಬ್ದ ಕೇಳಿಬರುತ್ತಿದೆ ಎಂದು ಹೇಳಿತ್ತು.
ಇಸ್ರೇಲ್ ನಡೆಸಿದ ಈ ದಾಳಿಯನ್ನು ವಿರೋಧಿಸಿ ತಮ್ಮ ದೇಶದ ಮಿಲಿಟರಿ ಪ್ರತಿಕ್ರಿಯೆಯನ್ನು ನಿರೀಕ್ಷಿಸಿ ನೂರಾರು ಜನರು ರಾತ್ರಿಯಿಡೀ ಇರಾನ್‌ನ ರಾಜಧಾನಿ ಟೆಹ್ರಾನ್‌ನ ಬೀದಿಗಳಿಗೆ ಇಳಿದು ರಾಷ್ಟ್ರೀಯ ಧ್ವಜಗಳನ್ನು ಬೀಸುತ್ತಾ ಮತ್ತು ಇಸ್ರೇಲ್ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ.
ಇರಾನ್‌ನಿಂದ ಡಜನ್ಗಟ್ಟಲೆ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದ್ದು, ಕೆಲವು ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ ಎಂದು ಅದು ತಿಳಿಸಿದೆ. ಪ್ಯಾಲೆಸ್ತೀನ್ ಆಕ್ರಮಿತ ಇಸ್ರೇಲ್‌ನ ರಾಜಧಾನಿ ಟೆಲ್ ಅವೀವ್‌ನ ಡೌನ್‌ಟೌನ್‌ನಲ್ಲಿರುವ ಗಗನಚುಂಬಿ ಕಟ್ಟಡಗಳ ಮೇಲೆ ಹೊಗೆ ಬರುತ್ತಿದೆ ಎಂದು ಎಎಫ್‌ಪಿ ಪತ್ರಕರ್ತರೊಬ್ಬರು ವರದಿ ಮಾಡಿದ್ದಾರೆ.
ಇರಾನಿನ ಕ್ಷಿಪಣಿ ದಾಳಿಯ ನಂತರ ತನ್ನ ರಕ್ಷಣಾ ತಂಡಗಳು ಪ್ರತಿಕ್ರಿಯಿಸುತ್ತಿವೆ ಎಂದು ಇಸ್ರೇಲ್‌ನ ಅಗ್ನಿಶಾಮಕ ಸೇವೆ ತಿಳಿಸಿದೆ. ಈ ತಂಡಗಳು ಎತ್ತರದ ಕಟ್ಟಡದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕೆಲಸವೂ ಮಾಡುತ್ತಿದೆ ಎಂದು ಅದು ತಿಳಿಸಿದೆ.
Unlike Zionist terrorists hiding in shelters, Iranians—confident in God’s will and their country’s air defense capabilities—were calmly brewing fresh wood-fire tea under direct anti-air fire, preparing for Eid al-Ghadir celebrations in Imam Khomeini Square in Tehran. pic.twitter.com/ySlOs7uH5b
— Iran Military (@IRIran_Military) June 14, 2025
ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ಸರ್ಕಾರಗಳು ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಸಂಗ್ರಹಿಸುತ್ತಿದೆ ಎಂದು ಪದೇ ಪದೇ ಆರೋಪಿಸಿದ್ದು, ಆದರೆ ಇರಾನ್ ಅದನ್ನು ನಿರಂತರವಾಗಿ ನಿರಾಕರಿಸುತ್ತಲೆ ಬಂದಿದೆ. ಈ ನಡುವೆ, ಇರಾನ್ ತನ್ನ ಪರಮಾಣು ಕಾರ್ಯಕ್ರಮದಲ್ಲಿ “ಹಿಂದಿರುಗಿಸಲಾಗದ ಹಂತ”ವನ್ನು ತಲುಪುತ್ತಿದೆ ಎಂದು ಇಸ್ರೇಲ್ ಗುಪ್ತಚರ ಇಲಾಖೆ ತೀರ್ಮಾನಿಸಿದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಇರಾನ್ ಪ್ರತಿಕಾರ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಇಸ್ರೇಲ್-ಇರಾನ್ ಸಂಘರ್ಷ: ಕಚ್ಚಾ ತೈಲ ಬೆಲೆಗಳು 7%ಕ್ಕಿಂತ ಹೆಚ್ಚು ಏರಿಕೆ
ಇಸ್ರೇಲ್-ಇರಾನ್ ಸಂಘರ್ಷ: ಕಚ್ಚಾ ತೈಲ ಬೆಲೆಗಳು 7%ಕ್ಕಿಂತ ಹೆಚ್ಚು ಏರಿಕೆ

