22 ವರ್ಷದ ಯುವತಿ ಮಹ್ಸಾ ಅಮಿನಿ ಸಾವಿನ ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಇರಾನ್ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಹಿಜಾಬ್‌ಗಳನ್ನು ತೆಗೆದು ಸುಟ್ಟು ಹಾಕುತ್ತಿದ್ದಾರೆ.
ಇರಾನಿನ ಕುಖ್ಯಾತ ‘ಮೊರಾಲಿಟಿ ಪೊಲೀಸರು’ ಟೆಹ್ರಾನ್‌ನಲ್ಲಿ ಬಂಧಿಸಿದ ನಂತರ ಕೋಮಾಕ್ಕೆ ಹೋದ ಯುವತಿ ಶುಕ್ರವಾರ ಕೊನೆಯುಸಿರೆಳೆದಿದ್ದಳು. ಸರ್ಕಾರಿ ಮಾಧ್ಯಮ ಹಾಗೂ ಮತ್ತು ಯುವತಿಯ ಕುಟುಂಬವು ಸಾವಿನ ಕುರಿತು ಮಾಹಿತಿ ನೀಡಿದವು. ಯುವತಿಯ ಅನುಮಾನಾಸ್ಪದ ಸಾವಿಗೆ ಕಾರಣರಾದವರಿಗೆ ಶಿಕ್ಷೆ ವಿಧಿಸಬೇಕು ಎಂದು ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
22 ವರ್ಷದ ಮಹ್ಸಾ ಅಮಿನಿ ತನ್ನ ಕುಟುಂಬದೊಂದಿಗೆ ಇರಾನ್ ರಾಜಧಾನಿಗೆ ಭೇಟಿ ನೀಡುತ್ತಿದ್ದರು. ಇಸ್ಲಾಮಿಕ್ ಗಣರಾಜ್ಯದಲ್ಲಿ ಮಹಿಳೆಯರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಜಾರಿಗೊಳಿಸುವ ಹೊಣೆಗಾರಿಕೆಯನ್ನು ಹೊತ್ತಿರುವ ಪೊಲೀಸ್ ಘಟಕವು ಅಮಿನಿ ಅವರನ್ನು ಮಂಗಳವಾರ ಬಂಧಿಸಿತು. ಸಾರ್ವಜನಿಕವಾಗಿ ಹೆಡ್‌ಸ್ಕ್ರಾಪ್ (ಹಿಜಾಬ್) ಧರಿಸಬೇಕೆಂದು ಕಡ್ಡಾಯ ಮಾಡಲಾಗಿದ್ದು, ಯುವತಿ ಧರಿಸಿರಲಿಲ್ಲ ಎಂದು ದಾಳಿ ಮಾಡಲಾಗಿತ್ತು.
Do you really want to know how Iranian morality police killed Mahsa Amini 22 year old woman? Watch this video and do not allow anyone to normalize compulsory hijab and morality police.
The Handmaid's Tale by @MargaretAtwood is not a fiction for us Iranian women. It’s a reality. pic.twitter.com/qRcY0KsnDk
— Masih Alinejad 🏳️ (@AlinejadMasih) September 16, 2022
‘ಮೊರಲಿಟಿ ಪೊಲೀಸರು’ ಬಂಧಿಸಿದ ಬಳಿಕ ಯುವತಿ ಸಾವಿಗೀಡಾಗಿದ್ದು ಇರಾನ್‌ನಲ್ಲಿ ಹೋರಾಟದ ಕಿಡಿ ಹಚ್ಚಿದೆ.
Surreal; Iranian regime beats those who protested against the brutal death of #MahsaAmini in an effort to convince everyone that Mahsa was not beaten to death.
Today students in AmirKabir University in Tehran protesting against the killing of #MahsaAmini— Masih Alinejad 🏳️ (@AlinejadMasih) September 19, 2022
ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊಗಳು ವೈರಲ್ ಆಗುತ್ತಿವೆ. ಪ್ರತಿಭಟನೆಗಳ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಕೆಲವು ವೀಡಿಯೊಗಳಲ್ಲಿ, ಪ್ರತಿಭಟನಾಕಾರರನ್ನು ಚದುರಿಸಲು ಇರಾನ್ ಪಡೆಗಳು ಅಶ್ರುವಾಯು ಬಳಸುತ್ತಿರುವುದನ್ನು ಕಾಣಬಹುದು.
ಏಳು ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಹಿಜಾಬ್ ಧರಿಸಬೇಕೆಂಬ ಕಾನೂನಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಪ್ರತಿಭಟನೆಯ ಭಾಗವಾಗಿ ಸಾಂಕೇತಿಕವಾಗಿ ಕೆಲವು ಮಹಿಳಾ ಪ್ರತಿಭಟನಾಕಾರರು ತಮ್ಮ ಕೂದಲನ್ನು ಕತ್ತರಿಸಿ, ಹಿಜಾಬ್‌ಗಳನ್ನು ಸುಟ್ಟುಹಾಕಿದ್ದಾರೆ.
To the world who still don’t know that in Iran #WalkingUnveiled is a punishable crime. Yes these
women who removed their hijab can get jailed, beaten & kicked out from job. But like the women's suffrage movement, Iranian women making history.#مهسا_امینی pic.twitter.com/pu3uUA1teM— Masih Alinejad 🏳️ (@AlinejadMasih) September 19, 2022
ಇರಾನಿನ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಮಾಸಿಹ್ ಅಲಿನೆಜಾದ್ ಅವರು ವೀಡಿಯೊಗಳನ್ನು ಟ್ವೀಟ್ ಮಾಡಿದ್ದಾರೆ.
“ಹಿಜಾಬ್ ಕಾರಣಕ್ಕೆ ಪೊಲೀಸರು ಮಹ್ಸಾ ಅಮಿನಿ ಅವರನ್ನು ಕೊಂದದ್ದನ್ನು ವಿರೋಧಿಸಿ ಇರಾನಿಯನ್ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಮೂಲಕ ಮತ್ತು ಹಿಜಾಬ್ ಅನ್ನು ಸುಡುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ. ನಾವು 7ನೇ ವಯಸ್ಸಿನ ನಂತರ ತಲೆಗೂದಲನ್ನು ಪ್ರದರ್ಶಿಸಿದರೆ ನಮಗೆ ಶಾಲೆಗೆ ಹೋಗಲು ಅಥವಾ ಉದ್ಯೋಗ ಪಡೆಯಲು ಅವಕಾಶವಿಲ್ಲ. ಈ ಲಿಂಗ ವರ್ಣಭೇದ ನೀತಿಯಿಂದ ನಾವು ಬೇಸತ್ತಿದ್ದೇವೆ” ಎಂದು ಮಹಿಳೆಯರು ಹೇಳಿದ್ದಾರೆ.
Iranian women show their anger by cutting their hair and burning their hijab to protest against the killing of #Mahsa_Amini by hijab police.
From the age of 7 if we don’t cover our hair we won’t be able to go to school or get a job. We are fed up with this gender apartheid regime pic.twitter.com/nqNSYL8dUb— Masih Alinejad 🏳️ (@AlinejadMasih) September 18, 2022
ಮಾಸಿಹ್ ಅಲಿನೆಜಾದ್ ಮಾಡಿರುವ ಮತ್ತೊಂದು ಟ್ವೀಟ್‌ನಲ್ಲಿ, “ಇದು ನಿಜವಾದ ಇರಾನ್. ಮಹ್ಸಾ ಅಮಿನಿಯ ಸಮಾಧಿ ಬಳಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿವೆ. ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಹಿಜಾಬ್ ಪೊಲೀಸರು 22 ವರ್ಷದ ಹುಡುಗಿಯನ್ನು ಕೊಂದರು ಮತ್ತು ಈಗ ಬಂದೂಕುಗಳನ್ನು ಬಳಸಿದ್ದಾರೆ” ಎಂದು ವಿಷಾದಿಸಿದ್ದಾರೆ.
This is the real Iran, Security forces in Iran’s Saqqez opened fire at peaceful protesters following the burial of #Mahsa_Amini.
Several protesters have been injured.
First Hijab police killed a 22 Yr old girl and now using guns and tear gas against grieving people.#مهسا_امینی pic.twitter.com/IgUdFEnJCS— Masih Alinejad 🏳️ (@AlinejadMasih) September 17, 2022
ಇದನ್ನೂ ಓದಿರಿ: ಇರಾನ್: ಹಿಜಾಬ್ ಧರಿಸಲಿಲ್ಲವೆಂದು ಬಂಧನಕ್ಕೊಳಗಾದ ಯುವತಿ ಅನುಮಾನಾಸ್ಪದವಾಗಿ ನಿಧನ; ಜನಾಕ್ರೋಶ
ತಮ್ಮ ಹಿಜಾಬ್‌ಗಳನ್ನು ತೆಗೆದ ಮಹಿಳೆಯರಿಗೆ ಇರಾನಿನ ಮೊರಾಲಿಟಿ ಪೊಲೀಸರಿಂದ ತೊಂದರೆಯಾಗುವ ರೀತಿಯಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಬಂದಿವೆ.
ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಮಹಿಳೆಯರ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಇರಾನಿನಲ್ಲಿ ಮಹಿಳೆಯರು ಕಡ್ಡಾಯವಾಗಿ ತಮ್ಮ ಕೂದಲನ್ನು ಮುಚ್ಚಿಕೊಳ್ಳಬೇಕಿದೆ. ಉದ್ದವಾದ, ಸಡಿಲವಾದ ಬಟ್ಟೆಗಳನ್ನು ಧರಿಸುವಂತಿಲ್ಲ. ಉಲ್ಲಂಘನೆ ಮಾಡಿದರೆ ಸಾರ್ವಜನಿಕ ಖಂಡನೆ, ದಂಡ ಅಥವಾ ಬಂಧನವನ್ನು ಎದುರಿಸಬೇಕಾಗುತ್ತದೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಹೋರಾಟಗಾರರು ಈ “ಅನೈತಿಕ ನಡವಳಿಕೆ”ಯ ವಿರುದ್ಧ ಸಿಡಿದೆದ್ದಿದ್ದಾರೆ. ಹಿಜಾಬ್ ಹೇರಿಕೆಯ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.



ಪ್ರಪಂಚದಲ್ಲಿ ಇರುವ ಎಲ್ಲಾ ಪ್ರಜ್ಞಾವಂತರೂ ಇರಾನಿನ ಮಹಿಳೆಯರ ಪರವಾಗಿ ದನಿ ಎತ್ತಬೇಕು.