Homeಅಂತರಾಷ್ಟ್ರೀಯಗಾಜಾಕ್ಕೆ ವಿಶ್ವಸಂಸ್ಥೆಯ 100 ಲಾರಿಗಳ ಆಹಾರ ಸಾಮಗ್ರಿ ಪ್ರವೇಶಕ್ಕೆ ಅನುವು ಮಾಡಿದ ಇಸ್ರೇಲ್

ಗಾಜಾಕ್ಕೆ ವಿಶ್ವಸಂಸ್ಥೆಯ 100 ಲಾರಿಗಳ ಆಹಾರ ಸಾಮಗ್ರಿ ಪ್ರವೇಶಕ್ಕೆ ಅನುವು ಮಾಡಿದ ಇಸ್ರೇಲ್

- Advertisement -
- Advertisement -

ವಿಶ್ವಸಂಸ್ಥೆಯ ತಂಡಗಳು ಗಾಜಾ ನಿರಾಶ್ರಿತರ ದಿನನಿತ್ಯದ ಅಗತ್ಯಕ್ಕಾಗಿ ಸಂಗ್ರಹಿಸಿದ್ದ 90ಕ್ಕೂ ಹೆಚ್ಚು ಲಾರಿ ಲೋಡ್‌ಗಳ ಮಾನವೀಯ ನೆರವು ಪ್ರವೇಶಕ್ಕೆ ಇಸ್ರೇಲ್ 11 ವಾರಗಳ ದೀರ್ಘಾವಧಿಯ ದಿಗ್ಬಂಧನದ ನಂತರ ಅನುವು ಮಾಡಿದೆ.

ಹಿಟ್ಟು, ಶಿಶು ಆಹಾರ ಮತ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡ ಸಹಾಯವನ್ನು ಬುಧವಾರ ರಾತ್ರಿ ಕೆರೆಮ್ ಶಾಲೋಮ್ ಕ್ರಾಸಿಂಗ್‌ನಿಂದ ತೆಗೆದುಕೊಂಡು ವಿತರಣೆಗಾಗಿ ಗೋದಾಮುಗಳಿಗೆ ಸಾಗಿಸಲಾಯಿತು. ಗುರುವಾರ ಹಲವಾರು ಬೇಕರಿಗಳು ಹಿಟ್ಟಿನಿಂದ ಬ್ರೆಡ್ ಉತ್ಪಾದಿಸಲು ಪ್ರಾರಂಭಿಸಿದವು. ಇಸ್ರೇಲ್ ಮಿಲಿಟರಿ ಅನುಮೋದಿಸಿದ ಏಕ ಪ್ರವೇಶ ಮಾರ್ಗದಲ್ಲಿ ಭದ್ರತೆಯ ಕೊರತೆಯಿಂದಾಗಿ ಮೂರು ದಿನ ವಿಳಂಬವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಇಸ್ರೇಲಿ ಅಧಿಕಾರಿಗಳು ಬುಧವಾರ ಕೆರೆಮ್ ಶಾಲೋಮ್ ಮೂಲಕ ಹೆಚ್ಚುವರಿಯಾಗಿ 100 ಲಾರಿ ಲೋಡ್‌ಗಳ ಪ್ರವೇಶಕ್ಕೆ ಅನುಮತಿಸಿದ್ದಾರೆ ಎಂದು ಹೇಳಿದ್ದಾರೆ. “ಗಾಜಾದಲ್ಲಿನ ಅಪಾರ ಅಗತ್ಯಗಳನ್ನು ಪೂರೈಸಲು ಅದು ಎಲ್ಲಿಯೂ ಸಾಕಾಗುವುದಿಲ್ಲ. ಯುದ್ಧದ ಮೊದಲು ಪ್ರತಿದಿನ ಸರಾಸರಿ 500 ಲಾರಿಗಳು ಪ್ರದೇಶವನ್ನು ಪ್ರವೇಶಿಸುತ್ತಿದ್ದವು” ಎಂದು ವಿಶ್ವಸಂಸ್ಥೆ ಹೇಳಿದೆ.

ಅಗತ್ಯ ಆಹಾರಗಳ ಗಮನಾರ್ಹ ಕೊರತೆ ಮತ್ತು ಗಗನಕ್ಕೇರುತ್ತಿರುವ ಬೆಲೆಗಳ ನಡುವೆ, 2.1 ಮಿಲಿಯನ್ ಜನಸಂಖ್ಯೆಯಲ್ಲಿ ತೀವ್ರ ಮಟ್ಟದ ಹಸಿವಿನ ಬಗ್ಗೆ ಮಾನವೀಯ ಸಂಘಟನೆಗಳು ಎಚ್ಚರಿಸಿವೆ ಎಂದು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ನೆಲೆಸಿರುವ ಪ್ಯಾಲೆಸ್ಟೀನಿಯನ್ ಪ್ರಾಧಿಕಾರದ ಆರೋಗ್ಯ ಸಚಿವ ಮಜೀದ್ ಅಬು ರಂಜಾನ್ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ 29 ಮಕ್ಕಳು ಮತ್ತು ವೃದ್ಧರು “ಹಸಿವಿಗೆ ಸಂಬಂಧಿಸಿದ” ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.

ಮುಂಬರುವ ತಿಂಗಳುಗಳಲ್ಲಿ ಅರ್ಧ ಮಿಲಿಯನ್ ಜನರು ಹಸಿವನ್ನು ಎದುರಿಸಲಿದ್ದಾರೆ ಎಂದು ವಿಶ್ವಸಂಸ್ಥೆ ಬೆಂಬಲಿತ ಇಂಟಿಗ್ರೇಟೆಡ್ ಫುಡ್ ಸೆಕ್ಯುರಿಟಿ ಫೇಸ್ ಕ್ಲಾಸಿಫಿಕೇಶನ್ (ಐಪಿಸಿ) ನಡೆಸಿದ ಮೌಲ್ಯಮಾಪನ ತಿಳಿಸಿದೆ.

ವಿಶ್ವಸಂಸ್ಥೆ ಮತ್ತು ಅದರ ಪಾಲುದಾರರು 140,000 ಟನ್‌ಗಳಿಗಿಂತ ಹೆಚ್ಚು ಆಹಾರವನ್ನು ಹೊಂದಿದ್ದಾರೆ. ಸುಮಾರು 6,000 ಲಾರಿ ಲೋಡ್‌ಗಳು ಎರಡು ತಿಂಗಳವರೆಗೆ ಗಾಜಾದ ಇಡೀ ಜನಸಂಖ್ಯೆಯನ್ನು ಪೋಷಿಸಲು ಸಾಕಾಗುತ್ತದೆ. ವಿಶ್ವಸಂಸ್ಥೆಯ ಕಾರ್ಯಕರ್ತರು ಇದನ್ನು ಗಾಜಾಕ್ಕೆ ತರಲು ಸಿದ್ಧರಾಗಿದ್ದಾರೆ ಎಂದು ಯುಎನ್ ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯೂಎಫ್‌ಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್ 2ರಂದು ಇಸ್ರೇಲ್ ದೇಶವು ಗಾಜಾಗೆ ಎಲ್ಲಾ ನೆರವು ಮತ್ತು ವಾಣಿಜ್ಯ ಸರಬರಾಜುಗಳನ್ನು ನಿಲ್ಲಿಸಿತು ಮತ್ತು ಎರಡು ವಾರಗಳ ನಂತರ ತನ್ನ ಮಿಲಿಟರಿ ದಾಳಿಯನ್ನು ಪುನರಾರಂಭಿಸಿತು, ಹಮಾಸ್‌ನೊಂದಿಗಿನ ಎರಡು ತಿಂಗಳ ಕದನ ವಿರಾಮವನ್ನು ಕೊನೆಗೊಳಿಸಿತ್ತು. ಗಾಜಾದಲ್ಲಿ ಇನ್ನೂ ಬಂಧಿಸಲ್ಪಟ್ಟಿರುವ 58 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಸಶಸ್ತ್ರ ಗುಂಪಿನ ಮೇಲೆ ಒತ್ತಡ ಹೇರಲು ಈ ಕ್ರಮಗಳು ಉದ್ದೇಶಿಸಲ್ಪಟ್ಟಿವೆ ಎಂದು ಅದು ಹೇಳಿದೆ. ಈ ಒತ್ತೆಯಾಳುಗಳಲ್ಲಿ ಇನ್ನೂ 23 ಮಂದಿ ಜೀವಂತವಾಗಿದ್ದಾರೆ ಎಂದು ನಂಬಲಾಗಿದೆ. ಇಸ್ರೇಲ್ ಯಾವುದೇ ಸಹಾಯದ ಕೊರತೆ ಇಲ್ಲ ಎಂದು ಹೇಳಿದೆ ಮತ್ತು ಹಮಾಸ್ ತನ್ನ ಹೋರಾಟಗಾರರಿಗೆ ನೀಡಲು ಅಥವಾ ಹಣ ಸಂಗ್ರಹಿಸುವುದಕ್ಕಾಗಿ ಈ ನೆರವು ಸರಬರಾಜುಗಳನ್ನು ಮಾರಾಟ ಮಾಡಲು ಕದಿಯುತ್ತಿದೆ ಎಂದು ಆರೋಪಿಸಿದೆ. ಈ ಆರೋಪವನ್ನು ಹಮಾಸ್ ನಿರಾಕರಿಸಿದೆ. ಸಹಾಯವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂಬ ಇಸ್ರೇಲ್ ಆರೋಪವನ್ನು ವಿಶ್ವಸಂಸ್ಥೆಯೂ ನಿರಾಕರಿಸಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಹೇಳಿಕೆಯಲ್ಲಿ ಈ ಹೇಳಿಕೆಯನ್ನು ಪುನರಾವರ್ತಿಸಿದರು. ”ಫ್ರಾನ್ಸ್, ಕೆನಡಾ ಮತ್ತು ಯುಕೆ ನಾಯಕರು ಇಸ್ರೇಲ್ ಪ್ಯಾಲೆಸ್ಟೀನಿಯನ್ ಮಕ್ಕಳನ್ನು ಹಸಿವಿನಿಂದ ಬಳಲುಸುತ್ತಿದೆ ಎಂದು ಹೇಳುವ ಹಮಾಸ್‌ನ ಪ್ರಚಾರಕ್ಕೆ ಇಂಬು ಕೊಟ್ಟಿದ್ದಾರೆ” ಎಂದು ನೆತನ್ಯಾಹು ಆರೋಪಿಸಿದ್ದಾರೆ.

ಇಸ್ರೇಲ್ ಮಿಲಿಟರಿ ತನ್ನ ಹೊಸದಾಗಿ ವಿಸ್ತರಿಸಿದ ನೆಲದ ಆಕ್ರಮಣವನ್ನು ಮುಂದುವರಿಸಲು ಮತ್ತು ಪ್ಯಾಲೆಸ್ಟೀನಿಯನ್ ಪ್ರದೇಶದ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲು ಸೀಮಿತ ಪ್ರಮಾಣದ ಆಹಾರವನ್ನು ಅನುಮತಿಸುವುದಾಗಿ ನೆತನ್ಯಾಹು ಈ ಹಿಂದೆ ಹೇಳಿದ್ದರು.

ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳು ಅಮೆರಿಕ-ಇಸ್ರೇಲಿ ಯೋಜನೆಗೆ ಸಹಕರಿಸುವುದಿಲ್ಲ ಎಂದು ಹೇಳಿವೆ. ಇದು ಮೂಲಭೂತ ಮಾನವೀಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅವು ಹೇಳಿವೆ.

ದಕ್ಷಿಣದ ನಗರವಾದ ರಫಾದಲ್ಲಿರುವ ರೆಡ್‌ಕ್ರಾಸ್ ಫೀಲ್ಡ್ ಆಸ್ಪತ್ರೆಗೆ ಒಂದು ಲಾರಿ ಲೋಡ್ ವೈದ್ಯಕೀಯ ಸಾಮಗ್ರಿಗಳನ್ನು ತಂದಿರುವುದಾಗಿ ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ (ICRC) ತಿಳಿಸಿದೆ.

ದಕ್ಷಿಣ ಅಲ್-ಮವಾಸಿ ಪ್ರದೇಶದಲ್ಲಿ ಚಾರಿಟಿ ಯುಕೆ-ಮೆಡ್‌ನ ಫೀಲ್ಡ್ ಆಸ್ಪತ್ರೆಯನ್ನು ನಡೆಸುವ ಉಸ್ತುವಾರಿ ಹೊಂದಿರುವ ನರ್ಸ್ ಮ್ಯಾಂಡಿ ಬ್ಲಾಕ್‌ಮನ್, ಗಾಜಾದಲ್ಲಿನ ಪರಿಸ್ಥಿತಿಯನ್ನು “ಹೃದಯ ವಿದ್ರಾವಕ” ಎಂದು ಬಣ್ಣಿಸಿದ್ದಾರೆ, ಆಹಾರದ ಕೊರತೆ ಅಪಾಯಕಾರಿಯಾಗಿದೆ ಎಂದಿದ್ದಾರೆ.

ಆಸ್ಪತ್ರೆಗೆ ಬರುವ ರೋಗಿಗಳು ತಮ್ಮ ಹಿಂದಿನ ಎರಡು ಅವಧಿಗಳಿಗಿಂತ “ಗೋಚರವಾಗಿ ತೆಳ್ಳಗಿದ್ದಾರೆ” ಮತ್ತು ಸಿಬ್ಬಂದಿ ಅವರಿಗೆ ದಿನಕ್ಕೆ ಒಂದು ಊಟವನ್ನು ಮಾತ್ರ ನೀಡಲು ಸಾಧ್ಯವಾಯಿತು, ಅದರಲ್ಲಿ ಅಕ್ಕಿ ಮತ್ತು ಕೆಲವು ದ್ವಿದಳ ಧಾನ್ಯಗಳು ಸೇರಿವೆ ಎಂದು ಅವರು ಬಿಬಿಸಿಗೆ ತಿಳಿಸಿದರು.

“ಜನರು ನಿರಂತರವಾಗಿ ಸ್ಥಳಾಂತರಗೊಳ್ಳಬೇಕಾಗಿದೆ ಮತ್ತು ಅವರ ಮಕ್ಕಳಿಗೆ ಆಹಾರವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಮರುದಿನ ಏನಾಗಲಿದೆ ಎಂದು ಯಾರಿಗೂ ತಿಳಿದಿಲ್ಲ. ನಿರಂತರ ಸಂಕಟ ಮತ್ತು ನಿರಂತರ ಆತಂಕವಿದೆ” ಎಂದು ಅವರು ಹೇಳಿದರು.

ಈ ಸಾಮಗ್ರಿಗಳ ನೆರವು ಗಾಜಾವನ್ನು ಪ್ರವೇಶಿಸುವ ಮೊದಲು, WFPಯ ಹಿರಿಯ ಅಧಿಕಾರಿ ಆಂಟೊಯಿನ್ ರೆನಾರ್ಡ್ ಅವರು, ಸಹಾಯ ಸಂಸ್ಥೆಗಳು ಇಸ್ರೇಲಿ ಮಿಲಿಟರಿ ಲಾರಿಗಳನ್ನು ಅಪಾಯಕಾರಿ ಎಂದು ಪರಿಗಣಿಸುವ ಮಾರ್ಗದಲ್ಲಿ ಚಲಿಸುವಂತೆ ಬಯಸಿದ್ದರಿಂದ ಅದನ್ನು ಸಂಗ್ರಹಿಸುವಲ್ಲಿ ಸಮಸ್ಯೆಗಳು ಉದ್ಭವಿಸಿದವು ಎಂದಿದ್ದಾರೆ.

ಈ ಮಾರ್ಗವು ತೀವ್ರವಾಗಿ ಹಸಿದ ನಾಗರಿಕರು ಮತ್ತು ಸಶಸ್ತ್ರ ಕ್ರಿಮಿನಲ್ ಗ್ಯಾಂಗ್‌ಗಳ ದಾಳಿಗೆ ಒಳಪಡಿಸಬಹುದು ಎಂಬ ಆತಂಕವಿದೆ. ಈಗ ಗಾಜಾದಲ್ಲಿ ಹಿಟ್ಟು ತುಂಬಿದ ಪ್ರತಿ ಟ್ರಕ್ ಸುಮಾರು $400,000 (£298,000) ಮೌಲ್ಯದ್ದಾಗಿದೆ. ನಾವು ಕಡಿಮೆ ಆಹಾರ ಒದಗಿಸಿದರೆ ಹೆಚ್ಚಿನ ಅಪಾಯ ಮತ್ತು ಆತಂಕ ಸೃಷ್ಟಿಯಾಗುತ್ತದೆ. ಗೋದಾಮುಗಳಿಗೆ ಸುರಕ್ಷಿತ ಮಾರ್ಗದಲ್ಲಿ “ದಿನಕ್ಕೆ ನೂರಾರು ಟ್ರಕ್‌ಗಳು” ಪ್ರಯಾಣಿಸುವುದು ಪರಿಹಾರವಾಗಿದೆ ಎಂದು ಅವರು ಹೇಳಿದರು.

ಗಾಜಾ ಬದಿಯಲ್ಲಿರುವ ನೆರವು ಸಂಸ್ಥೆಗಳು ತಮ್ಮ ಸರಕುಗಳೊಂದಿಗೆ ಸಶಸ್ತ್ರ ಕಾವಲುಗಾರರನ್ನು ನೇಮಿಸಲಿಲ್ಲ ಏಕೆಂದರೆ ಅದು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಕನಿಷ್ಠ 100 ನೆರವು ಲಾರಿಗಳನ್ನು ತರುವುದರಿಂದ ಜನಸಂಖ್ಯೆಯ “ಕನಿಷ್ಠ” ಆಹಾರ ಅಗತ್ಯಗಳನ್ನು ಮಾತ್ರ ಪೂರೈಸಬಹುದು. ಗಾಜಾದಾದ್ಯಂತ ಇಸ್ರೇಲಿ ಬಾಂಬ್ ದಾಳಿ ಮತ್ತು ಭೂ ಕಾರ್ಯಾಚರಣೆಗಳು ಮುಂದುವರೆದಿದೆ ಎಂದು ಹಮಾಸ್ ನಡೆಸುವ ಆರೋಗ್ಯ ಸಚಿವಾಲಯ ಗುರುವಾರ ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ 107 ಜನರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯು ಇದೆ ಎಂದು ರೆನಾರ್ಡ್ ವಿವರಿಸಿದರು.

ಹಮಾಸ್ ನಡೆಸುವ ನಾಗರಿಕ ರಕ್ಷಣಾ ಸಂಸ್ಥೆಯ ಪ್ರಕಾರ, ಗುರುವಾರ ಬೆಳಗಿನ ಜಾವದಿಂದ ಕನಿಷ್ಠ 52 ಜನರು ಸಾವನ್ನಪ್ಪಿದ್ದಾರೆ ಎಂದಿದೆ. ಪ್ಯಾಲೇಸ್ಟಿನಿಯನ್ ಮಾಧ್ಯಮಗಳು 16 ಜನರನ್ನು ಒಳಗೊಂಡಿವೆ ಎಂದು ವರದಿ ಮಾಡಿವೆ. ಅವರಲ್ಲಿ ಹೆಚ್ಚಿನವರು ಒಂದೇ ಕುಟುಂಬದ ಸದಸ್ಯರು, ಉತ್ತರ ಗಾಜಾದ ಜಬಾಲಿಯಾದಲ್ಲಿ ಮನೆ ಮೇಲೆ ದಾಳಿ ಮಾಡಿದಾಗ ಅವರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿವೆ.

ಮಹಾರಾಷ್ಟ್ರ| ಮಾವೋವಾದಿಗಳ ಹಿಡಿತವಿದ್ದ ಗಡ್ಚಿರೋಲಿಯಲ್ಲಿ ಅದಿರು ಸಂಸ್ಕರಣಾ ಘಟಕಕ್ಕೆ ಕೇಂದ್ರ ಅನುಮೋದನೆ; 1 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲು ಅನುಮತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....