ಗಾಜಾದ ನಾಗರಿಕರ ಸಾವುನೋವುಗಳನ್ನು ಕಡಿಮೆ ಮಾಡಲು ಇಸ್ರೇಲ್ ಮಾಡಿರುವ ಪ್ರಯತ್ನಗಳು ಯಶಸ್ವಿಯಾಗಲಿಲ್ಲ ಮತ್ತು ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದನ್ನು ಹಮಾಸ್ ಸಂಘಟನೆಯವರು ತಡೆಯುತ್ತಿದ್ದಾರೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ರಾಯಿಟರ್ಸ್ ವರದಿ ಮಾಡಿದ್ದು, ಸಾವಿರಾರು ಪ್ಯಾಲೆಸ್ಟೀನಿಯಾದವರ ಸಾವಿಗೆ ಕಾರಣವಾದ ಇಸ್ರೇಲ್‌ನ ಕ್ರಮಗಳು ಹೊಸ ಪೀಳಿಗೆಯಲ್ಲಿ ದ್ವೇಷದ ಬೀಜಗಳನ್ನು ಬಿತ್ತುವ ಸಾಧ್ಯತೆಯ ಬಗ್ಗೆ ನೆತನ್ಯಾಹು ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
”ಯಾವುದೇ ನಾಗರಿಕರ ಸಾವುಗಳು ದುರಂತದ ಸಂಗತಿ. ನಾವು ನಾಗರಿಕರನ್ನು ಹೊರತರಲು ಎಲ್ಲವನ್ನೂ ಮಾಡುತ್ತಿದ್ದೇವೆ, ಆದರೆ ಹಮಾಸ್ ಅವರನ್ನು ಹಾನಿಕಾರಕ ಪ್ರದೇಶದಲ್ಲಿ ಇರಿಸಲು ಎಲ್ಲವನ್ನೂ ಮಾಡುತ್ತಿದೆ” ಎಂದು ನೆತನ್ಯಾಹು ಹೇಳಿದರು.
”ನಾಗರಿಕರಿಗೆ ನಾವು ಕರಪತ್ರಗಳನ್ನು ಕಳುಹಿಸುತ್ತೇವೆ, (ನಾವು) ಅವರನ್ನು ಅವರ ಸೆಲ್ ಫೋನ್‌ಗಳ ಮೂಲಕ ಸಂಪರ್ಕಿಸುತ್ತೇವೆ” ಎಂದು ಅವರು ಸೇರಿಸಿದರು.
ಇದನ್ನೂ ಓದಿ: ಸಿರಿಯಾ ಅಧ್ಯಕ್ಷ ಅಸ್ಸಾದ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದ ಫ್ರಾನ್ಸ್


