HomeUncategorizedGaza Ceasefire: ಇಸ್ರೇಲಿನಿಂದ 110 ಫೆಲೆಸ್ತೀನಿಯನ್ನರ ಬಿಡುಗಡೆ

Gaza Ceasefire: ಇಸ್ರೇಲಿನಿಂದ 110 ಫೆಲೆಸ್ತೀನಿಯನ್ನರ ಬಿಡುಗಡೆ

- Advertisement -
- Advertisement -

ಗುರುವಾರ ರಾತ್ರಿಯಾಗುತ್ತಿದ್ದಂತೆ, ಇಸ್ರೇಲಿ ಜೈಲು ಪ್ರಾಧಿಕಾರವು ಆಕ್ರಮಿತ ಪಶ್ಚಿಮ ದಂಡೆಯ ಓಫರ್ ಜೈಲಿನಿಂದ 110 ಫೆಲೆಸ್ತೀನಿಯನ್ನರನ್ನು ಬಿಡುಗಡೆ ಮಾಡಿದೆ. ಅವರಲ್ಲಿ ಜೆನಿನ್ ಎಂಬ ಸಂಘರ್ಷ ಪೀಡಿತ ನಗರದ ಪ್ರಮುಖ ಮಾಜಿ ಹಮಾಸ್ ನಾಯಕನೂ ಸೇರಿದ್ದಾನೆ.

ಓಫರ್ ಜೈಲಿನ ಮೇಲಿರುವ ಪಶ್ಚಿಮ ದಂಡೆಯ ಬೀಟುನಿಯಾ ಪಟ್ಟಣದಲ್ಲಿ ಗುರುವಾರ ಇಸ್ರೇಲಿ ಮಿಲಿಟರಿ ಬಂಧಿತರ ಬಿಡುಗಡೆಯ ಕುರಿತು ಫೆಲೆಸ್ತೀನಿಯನ್ನರು ನಡೆಸುತ್ತಿದ್ದ ಸಾರ್ವಜನಿಕ ಆಚರಣೆಗಳನ್ನು ಸ್ಥಗಿತಗೊಳಿಸಿದೆ.

ಇಸ್ರೇಲಿ ಪಡೆಗಳು ರಬ್ಬರ್-ಲೇಪಿತ ಉಕ್ಕಿನ ಗುಂಡುಗಳನ್ನು ಹಾರಿಸಿದವು ಮತ್ತು ಸಣ್ಣ ಗುಂಪನ್ನು ತೆರವುಗೊಳಿಸಲು ಅಶ್ರುವಾಯು ಮತ್ತು ಸ್ಟನ್ ಗ್ರೆನೇಡ್‌ಗಳನ್ನು ಬಳಸಿದವು. “ಭದ್ರತಾ ಪಡೆಗಳು ಹಮಾಸ್ ಸಂಘಟನೆಗಳನ್ನು ಬೆಂಬಲಿಸುವ ಪ್ರದರ್ಶನಗಳನ್ನು ಅನುಮತಿಸುವುದಿಲ್ಲ” ಎಂದು ನೋಡುಗರಿಗೆ ಎಚ್ಚರಿಕೆ ನೀಡುವ ಅರೇಬಿಕ್ ಭಾಷೆಯ ಕರಪತ್ರಗಳನ್ನು ಅವರು ತೂರಿದರು.

ಸ್ಥಳೀಯ ಅರೆವೈದ್ಯರ ಪ್ರಕಾರ ಈ ಸಂದರ್ಭ ಕನಿಷ್ಠ 61 ಪ್ಯಾಲೆಸ್ತೇನಿಯನ್ನರು ಗಾಯಗೊಂಡಿದ್ದಾರೆ. ಫೆಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿ ತನ್ನ ಸದಸ್ಯರು ಲೈವ್ ಗುಂಡುಗಳು, ರಬ್ಬರ್ ಗುಂಡುಗಳು ಮತ್ತು ಅಶ್ರುವಾಯುಗಳಿಂದ ಗಾಯಗೊಂಡ ರೋಗಿಗಳಿಗೆ ಮತ್ತು ಕೆಳಗೆ ಬಿದ್ದವರಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ಹೇಳಿದೆ.

ರಮಲ್ಲಾದ ಬೀದಿಗಳಲ್ಲಿ ಫೆಲೆಸ್ತೀನ್ ಯನ್ನರು ಬಿಡುಗಡೆಯಾದ ನಂತರ ಹರ್ಷೋದ್ಗಾರಗಳು ಕೇಳಿಬಂದವು. ಅಲ್ಲಿ ಬಿಡುಗಡೆಯಾದ ಕೆಲವು ಬಂಧಿತರನ್ನು ಭೇಟಿ ಮಾಡಲು ನೂರಾರು ಜನರು ಸೇರಿದ್ದರು. ಅಲ್ಲಿ ನೆರೆದಿದ್ದವರಲ್ಲಿ ಅನೇಕರು ಹಮಾಸ್‌ನ ಮಿಲಿಟರಿ ವಿಭಾಗವಾದ ಅಲ್-ಕಸ್ಸಾಮ್ ಬ್ರಿಗೇಡ್‌ಗಳಿಗೆ ಬೆಂಬಲವಾಗಿ ಘೋಷಣೆಗಳನ್ನು ಕೂಗಿದರು. ಹತ್ತಿರದ ಬೆಟ್ಟದ ಮೇಲೆ ಫತಾ ಬೆಂಬಲಿಗರ ಸಣ್ಣ ಗುಂಪು ಜಮಾಯಿಸಿತ್ತು.

ಬಿಡುಗಡೆಯಾದವರಲ್ಲಿ 30 ಮಕ್ಕಳಿದ್ದರು – ಕೆಲವರು ಆರೋಪವಿಲ್ಲದೆ ಬಂಧಿಸಲ್ಪಟ್ಟಿದ್ದರು ಮತ್ತು ಯಾರಿಗೂ ಶಿಕ್ಷೆಯಾಗಿಲ್ಲ ಎಂದು ಕಾನೂನು ನೆರವು ಸಂಸ್ಥೆಯಾದ ಅದಾಲಾ ತಿಳಿಸಿದೆ. ಜೀವಾವಧಿ ಶಿಕ್ಷೆ ವಿಧಿಸಲಾದ 32 ಕೈದಿಗಳು ಮತ್ತು “ಹೆಚ್ಚಿನ ಶಿಕ್ಷೆ” ವಿಧಿಸಲಾದ 48 ಕೈದಿಗಳು ಸಹ ಬಿಡುಗಡೆಯಾಗಿದ್ದಾರೆ. ಗಂಭೀರ ಶಿಕ್ಷೆ ವಿಧಿಸಲಾದ ಕೆಲವರನ್ನು ದೋಹಾದಲ್ಲಿ ಒಪ್ಪಿಕೊಂಡ ಕದನ ವಿರಾಮ ಒಪ್ಪಂದದ ನಿಯಮಗಳ ಪ್ರಕಾರ ಈಜಿಪ್ಟ್‌ಗೆ ಬಿಡುಗಡೆ ಮಾಡಲಾಗಿದೆ.

ಗುರುವಾರ ಬಿಡುಗಡೆಯಾದ ಪ್ರಮುಖ ವ್ಯಕ್ತಿಯೂ ಆಗಿರುವ  ಪಶ್ಚಿಮದಂಡೆಯನ್ನು ಆಳುವ ಫತಾಹ್ ಪಕ್ಷದ ಮಿಲಿಟರಿ ವಿಭಾಗವಾದ ಅಲ್-ಅಕ್ಸಾ ಹುತಾತ್ಮರ ಬ್ರಿಗೇಡ್‌ನ ಮಾಜಿ ಕಮಾಂಡರ್ ಜಕಾರಿಯಾ ಜುಬೇದಿಯ ಒಬ್ಬರಾಗಿದ್ದಾರೆ. ಅವರ ತಾಯಿ, ಸಹೋದರ ಮತ್ತು ಮಗ ಎಲ್ಲರೂ ಇಸ್ರೇಲಿ ಮಿಲಿಟರಿಯಿಂದ ಕೊಲ್ಲಲ್ಪಟ್ಟಿದ್ದಾರೆ.

ಮಾಜಿ ಬಾಲನಟ ಜುಬೇದಿ, ಆ ಸಂಘರ್ಷದ ನಂತರ ತಮ್ಮ ತವರು ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ದಿ ಫ್ರೀಡಂ ಥಿಯೇಟರ್ ಅನ್ನು ಸಹ-ಸ್ಥಾಪಿಸಿದರು. ಇವರನ್ನು 2019ರಲ್ಲಿ ಬಂಧಿಸಲಾಯಿತು ಮತ್ತು ಇಸ್ರೇಲಿಗಳ ವಿರುದ್ಧ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ಆರೋಪ ಹೊರಿಸಲಾಗಿತ್ತು. 2021ರಲ್ಲಿ ಇಸ್ರೇಲ್‌ನ ಹೆಚ್ಚಿನ ಭದ್ರತೆಯ ಗಿಲ್ಬೋವಾ ಜೈಲಿನಿಂದ ಹೊರಬಂದ ಗುಂಪಿನಲ್ಲಿ ಒಬ್ಬರಾದ ನಂತರ, ಹಲವಾರು ದಿನಗಳ ನಂತರ ಮತ್ತೆ ಬಂಧಿಸಲ್ಪಟ್ಟರು. ಇದರ ನಂತರ ಅವರು ಅನೇಕ ಪ್ಯಾಲೆಸ್ತೇನಿಯನ್ನರಲ್ಲಿ ಆರಾಧನಾ ಸ್ಥಾನಮಾನವನ್ನು ಗಳಿಸಿದರು.

ಇಸ್ರೇಲಿನಿಂದ 8 ಒತ್ತೆಯಾಳುಗಳ ಬಿಡುಗಡೆ

ಇದಕ್ಕೂ ಮೊದಲು ಹಮಾಸ್ 8 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು.  ಗಾಝಾ ಕದನ ವಿರಾಮ ಒಪ್ಪಂದದ ಅಡಿಯಲ್ಲಿ 3ನೇ ಹಂತದ ಒತ್ತೆಯಾಳು-ಕೈದಿಗಳ ವಿನಿಮಯ ನಡೆದಂತಾಗಿದೆ.

ಹಮಾಸ್ ನಿಂದ ಗುರುವಾರ ಮೂರು ಇಸ್ರೇಲಿ ಒತ್ತೆಯಾಳುಗಳನ್ನು ಮತ್ತು ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲಿನ ದಾಳಿಯಲ್ಲಿ ಸೆರೆಹಿಡಿಯಲಾದ ಐದು ವಿದೇಶಿಯರನ್ನು ಬಿಡುಗಡೆ ಮಾಡಲಾಗಿದೆ. ಇವರನ್ನು ರೆಡ್ ಕ್ರಾಸ್ ಅಂತರ್ ರಾಷ್ಟ್ರೀಯ ಸಮಿತಿಗೆ ಹಮಾಸ್ ಹಸ್ತಾಂತರಿಸಿದೆ. ಇದಕ್ಕೆ ಪ್ರತಿಯಾಗಿ 110 ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಇಸ್ರೇಲ್ ಹೇಳಿತ್ತು.

ಹಮಾಸ್ ನಿಂದ ಒಟ್ಟು 8 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಝಾ ಪಟ್ಟಿಯಲ್ಲಿ ಯುದ್ಧವನ್ನು ಕೊನೆಗೊಳಿಸುವ ಗುರಿಯೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಮುಂದಾದರು. ಅದರ ಭಾಗವಾಗಿ ಹಂತ ಹಂತವಾಗಿ ಎರಡೂ ಕಡೆ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ.

ಮೊದಲು ಬಿಡುಗಡೆಯಾದ ಇಸ್ರೇಲಿ ಮಹಿಳಾ ಸೈನಿಕೆ ಆಗಮ್ ಬರ್ಗರ್ (20) ಫೆಲೆಸ್ತೀನಿಯನ್ ಪ್ರದೇಶದ ಉತ್ತರದಲ್ಲಿರುವ ಜಬಾಲಿಯಾದಲ್ಲಿ ರೆಡ್‌ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿಯ ಅಧಿಕಾರಿಗಳಿಗೆ ಹಸ್ತಾಂತರಿಸಲ್ಪಟ್ಟರು. ಬರ್ಗರ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿತ್ತು. ನಂತರ ಇಬ್ಬರು ಇಸ್ರೇಲಿಗಳು ಮತ್ತು ಐವರು ವಿದೇಶಿಯರನ್ನು ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಯಿತು.

ಜನವರಿ 25ರಂದು ಇಸ್ರೇಲ್​-ಹಮಾಸ್​ ಬಂಡುಕೋರರ ನಡುವಿನ ಗಾಝಾ ಪಟ್ಟಿ ಕದನ ವಿರಾಮ ಒಪ್ಪಂದದ ಅನುಸಾರ 2ನೇ ಹಂತದಲ್ಲಿ ಮತ್ತಷ್ಟು ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದ್ದರು. ಗಾಝಾದಲ್ಲಿ ಸುಮಾರು 16 ತಿಂಗಳ ಸೆರೆಯಲ್ಲಿದ್ದ ನಾಲ್ಕು ಇಸ್ರೇಲಿ ಮಹಿಳಾ ಸೈನಿಕರನ್ನು ಹಮಾಸ್ ಬಿಡುಗಡೆ ಮಾಡಿದೆ.

ವಾಷಿಂಗ್ಟನ್ | ವಿಮಾನ-ಹೆಲಿಕಾಪ್ಟರ್ ಅಪಘಾತ : ಎಲ್ಲಾ 67 ಪ್ರಯಾಣಿಕರು ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...