Homeಅಂತರಾಷ್ಟ್ರೀಯಇಸ್ರೇಲ್: ಫಿರಂಗಿಗಳು ಘರ್ಜಿಸುತ್ತಿರುವಾಗಲೂ ನಡೆಯುತ್ತಿವೆ ಮುಸ್ಲೀಮರು ಮತ್ತು ಯಹೂದಿಗಳ ಸೌಹಾರ್ದ ಕಾರ್ಯಕ್ರಮಗಳು!

ಇಸ್ರೇಲ್: ಫಿರಂಗಿಗಳು ಘರ್ಜಿಸುತ್ತಿರುವಾಗಲೂ ನಡೆಯುತ್ತಿವೆ ಮುಸ್ಲೀಮರು ಮತ್ತು ಯಹೂದಿಗಳ ಸೌಹಾರ್ದ ಕಾರ್ಯಕ್ರಮಗಳು!

ದೇಶದ ಪ್ರಧಾನಿಯೇ ಒಂದು ಸಮುದಾಯವನ್ನು ಅಪರಾಧ ಮತ್ತು ಹಿಂಸಾಚಾರಕ್ಕೆ ಪ್ರಚೋದಿಸಿದಾಗ ಸೌಹಾರ್ದತೆಯನ್ನು ಹುಟ್ಟಿಸುವ ಮತ್ತು ಹರಡುವ ಈ ಮೌಲ್ಯಯುತ ಕೆಲಸವನ್ನು ಜನರೇ ಖುದ್ದಾಗಿ ಮಾಡಬೇಕಿದೆ...

- Advertisement -
- Advertisement -

ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಲವರು ಶಾಂತಿಗಾಗಿ ಪ್ರಾರ್ಥಿಸುತ್ತಿರುವಾಗಲೇ ಕೆಲವರು ಐ ಸ್ಟ್ಯಾಂಡ್ ವಿತ್ ಇಸ್ರೇಲ್ ಎಂದು ಹಿಂಸಾಚಾರವನ್ನು ಬೆಂಬಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇಸ್ರೇಲ್ ನ ಅತೀ ಹೆಚ್ಚು ಪ್ರಸರಣಾ ಸಂಖ್ಯೆ ಹೊಂದಿರುವ HAARETZ (ಭೂಮಿ) ಪತ್ರಿಕೆ ಅತ್ಯುತ್ತಮ ಸಂಪಾಕೀಯ ಪ್ರಕಟಿಸಿದೆ. HAARETZ ನ ಪ್ರಧಾನ ಸಂಪಾದಕ ಅಲುಫ್ ಬೆನ್ ಬರೆದ ಸಂಪಾದಕೀಯವನ್ನು ಕನ್ನಡದ ಜನಪರ ಪತ್ರಕರ್ತ ನವೀನ್ ಸೂರಿಂಜೆ ಅನುವಾದಿಸಿದ್ದಾರೆ. ನಾನುಗೌರಿ.ಕಾಂ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

ಕಳೆದ ಹಲವು ದಿನಗಳಿಂದ ಇಸ್ರೇಲ್‌ನಲ್ಲಿ ಅರಬ್ಬರು ಮತ್ತು ಯಹೂದಿಗಳ ನಡುವಿನ ನೋವಿನ ಘರ್ಷಣೆಯ ಉತ್ತುಂಗಕ್ಕೆ ಏರಿದೆ. ಇವೆಲ್ಲವನ್ನೂ ಹೊರತುಪಡಿಸಿ ಸಮಾಜದ ಗಣ್ಯರೂ ಸೇರಿದಂತೆ ಸಾವಿರಾರು ಅರಬ್ ಮತ್ತು ಯಹೂದಿ ನಾಗರಿಕರು ಇಸ್ರೇಲಿ ನಗರಗಳಲ್ಲಿ, ಹಳ್ಳಿಗಳಲ್ಲಿ ನಡೆಸಿದ ಜಂಟಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅರಬರು, ಯಹೂದಿಗಳು ಎಂಬ ಯಾವ ವ್ಯತ್ಯಾಸವು ಇಸ್ರೇಲಿನ ಸಾಮಾನ್ಯ ಜನರ ಮಧ್ಯೆ ಇಲ್ಲ. ಮುಸ್ಲೀಮರು ಮತ್ತು ಯಹೂದಿಗಳು ಜೊತೆಗೂಡಿ ನಡೆಸುತ್ತಿರುವ ಹತ್ತಾರು ಕಾರ್ಯಕ್ರಮಗಳ ವಿಶೇಷತೆಯೆಂದರೆ ಅವು “ಫಿರಂಗಿಗಳು ಘರ್ಜಿಸುತ್ತಿರುವಾಗಲೂ” ನಡೆಯುತ್ತಿವೆ ಎಂಬುದೇ ಆಗಿದೆ. ಗಲಭೆಗಳು ಮತ್ತು ಆಕ್ರಮಣಗಳು ಇಸ್ರೇಲ್ ದೇಶದ ಸಾಮಾನ್ಯ ಯಹೂದಿ-ಅರಬ್ ಸಮುದಾಯಗಳಲ್ಲಿ ಯಾವ ವ್ಯತ್ಯಾಸವನ್ನು ಮಾಡಕೂಡದು. ಇದೊಂದೇ ನಮ್ಮ ಮುಂದಿರುವ ಅತೀ ದೊಡ್ಡ ಭರವಸೆಯಾಗಿದೆ. ಈ ಹಿಂದೆಯೂ ಇದೇ ರೀತಿ ಮುಸ್ಲಿಂ ಮತ್ತು ಯಹೂದಿಗಳ ಸೌಹಾರ್ದ ಕಾರ್ಯಕ್ರಮಗಳು ನಡೆದಿತ್ತು. ಆ ಕಾರ್ಯಕ್ರಮಗಳು ಗಲಭೆಗಳ ನಂತರ ನಡೆದಿದ್ದರೆ ಈ ಬಾರಿ ಸಂಘರ್ಷಗಳು ಜಾರಿಯಲ್ಲಿರುವಂತೆಯೇ ಮುಸ್ಲಿಂ ಮತ್ತು ಯಹೂದಿ ಸೌಹಾರ್ದ ಕಾರ್ಯಕ್ರಮಗಳೂ ಜಾರಿಯಲ್ಲಿದೆ.

ಹಾಗಾಗಿ, ಈ ಭಯಾನಕ ಘಟನಗಳು, ಸಾವು ನೋವುಗಳು, ಹತಾಶೆಯಿಂದ ಅಘಾತಕ್ಕೊಳಗಾಗಿರುವ ಇಸ್ರೇಲ್‌ನಲ್ಲಿ ಎಲ್ಲವೂ ಕಳೆದು ಹೋಗಿಲ್ಲ ಎಂಬ ಆಶಾಭಾವ ಮೂಡುತ್ತಿದೆ. ಸಂಘರ್ಷದ ಮಧ್ಯೆಯೇ ಹಲವು ಸಮಾಜಿಕ ಸಂಘಟನೆಗಳ ನೇತೃತ್ವದಲ್ಲಿ ಮುಸ್ಲಿಂ ಮತ್ತು ಯಹೂದಿಗಳ ಸಹ ಜೀವನ ನಡೆಸಲು ಬೇಕಾಗುವ ವಾತಾವರಣ ನಿರ್ಮಿಸುತ್ತಿರುವುದು ಸಮಾನತೆ ಮತ್ತು ಪರಸ್ಪರ ಗೌರವ ಹುಟ್ಟಿಸುವ ಮೊದಲ ಬೀಜಗಳೆಂದು ನಾವು ನೋಡಬಹುದು. ದೇಶದಲ್ಲಿ ಎಲ್ಲವೂ ಸರಿಯಿದ್ದಾಗ ಸೌಹಾರ್ದತೆಯಿಂದ ವಾಸಿಸುವುದು ದೊಡ್ಡ ವಿಚಾರವಲ್ಲ. ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದಾಗಲೇ ಜನರ ಸೌಹಾರ್ದ ಮನಸ್ಥಿತಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಈ ದೇಶದ ಅಭಿವೃದ್ದಿಗೆ ಎಲ್ಲಾ ಸಮುದಾಯಗಳ ಕೊಡುಗೆಯಿದೆ. ಅರಬರು/ಮುಸ್ಲಿಮರು/ಯಹೂದಿಗಳು ಸೇರಿದಂತೆ ಸಮುದಾಯಗಳ ಅಭಿವೃದ್ದಿಯ ಕೊಡುಗೆಯಿಂದ ಇಸ್ರೇಲ್ ಗಟ್ಟಿಗೊಂಡಿದೆ. ಕೆಲ ಮಾನವ ಹಕ್ಕು ನಾಗರಿಕ ಸಂಘಟನೆಗಳು ಸೌಹಾರ್ದತೆಗಾಗಿ ಕೆಲಸ ಮಾಡಿದೆ. ಸಮ ಸಮಾಜಕ್ಕಾಗಿ ಕೆಲಸ ಮಾಡುವ ಅಂತಹ ಸಂಘಟನೆಗಳ ಕೆಲಸ ಫಲಿತಾಂಶ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಷ್ಟೊಂದು ಸಂಘರ್ಷಗಳ ಮಧ್ಯೆಯೂ ನಮಗೂ ಅದಕ್ಕೂ ಯಾವ ಸಂಬಂಧವಿಲ್ಲ ಎಂಬಂತೆ ಸೌಹಾರ್ದಯುತವಾಗಿ ಬದುಕುವ ಇಸ್ರೇಲಿನ ಹಲವು ಪ್ರದೇಶಗಳು ಇದಕ್ಕೆ ನಿದರ್ಶನವಾಗಿದೆ. ಯಾರು ಏನೇ ಪ್ರಯತ್ನಪಟ್ಟರೂ ನಾವುಗಳು ಹಂಚಿಕೊಂಡು ಬದುಕುವುದನ್ನು ತಪ್ಪಿಸಲಾಗದು.

ಕೆಲವೇ ಕೆಲವು ತಿಂಗಳುಗಳ ಹಿಂದೆ ಹೊರಳಿ ನೋಡಿ, ದೇಶಾದ್ಯಂತದ ಅರಬ್-ಯಹೂದಿ ವೈದ್ಯಕೀಯ ತಂಡಗಳು ಕರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಒಟ್ಟಾಗಿ ಹೋರಾಡಿದ್ದವು. ವೈರಸ್ ವಿರುದ್ಧ ಜನಸಮುದಾಯದ ಮಧ್ಯೆ ಸೌಹಾರ್ದಯುತವಾಗಿ ಕೆಲಸ ಮಾಡಿದ್ದನ್ನು ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈಗ ಅದೇ ತಂಡಗಳು ಹಿಂಸಾಚಾರದ ವಿರುದ್ಧ ಮತ್ತು ಪರಸ್ಪರ ಸೌಹಾರ್ಧಕ್ಕಾಗಿ ಕರೆ ನೀಡುತ್ತಿದ್ದಾರೆ.

ಕೆಲವು ರಾಜಕಾರಣಿಗಳು, ಸಮುದಾಯದ ಮುಖಂಡರು ಮತ್ತು ಮಾಧ್ಯಮಗಳು ಜನರನ್ನು ಪ್ರಚೋದಿಸುವ ಪ್ರಯತ್ನಗಳನ್ನು ಮಾಡುತ್ತಿವೆ. ಇಂತಹ ಕಂದಕಗಳನ್ನು ಸೃಷ್ಟಿಸುವವರ ಮಧ್ಯೆ ಮಾನವ ಹಕ್ಕುಗಳ ಪರವಾಗಿನ ಕೆಲ ಅರಬ್ ಮತ್ತು ಯಹೂದಿ ರಾಜಕೀಯ ಮುಖಂಡರು ಸಮುದಾಯಗಳ ಮಧ್ಯೆ ಸಂವಾದವನ್ನು ನಡೆಸುತ್ತಿದ್ದಾರೆ. ಇದು ಮನುಷ್ಯರ ಮಧ್ಯೆ ಇರುವ ಜ್ವಾಲೆಗಳನ್ನು ತಣಿಸುತ್ತಿದೆ.

ಇಸ್ರೇಲಿನಲ್ಲಿ ಸಮುದಾಯಗಳ ಮಧ್ಯೆ ಇರುವ ಆಳವಾದ ಭಿನ್ನಾಭಿಪ್ರಾಯಗಳನ್ನು ಅಲ್ಲಗಳೆಯುವಂತಿಲ್ಲ. ಜೆರುಸಲೆಮ್, ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆಯಲ್ಲಿನ ಘಟನೆಗಳು ಅರಬ್ ಮತ್ತು ಯಹೂದಿ ಸಮುದಾಯಗಳ ಮಧ್ಯೆ ಇರುವ ಸಂಘರ್ಷವನ್ನೇ ಸೂಚಿಸುತ್ತದೆ. ಇದ್ಯಾವುದಕ್ಕೂ ಯುದ್ದ, ಗಲಭೆಗಳು ಪರಿಹಾರವಲ್ಲ. ಪರಸ್ಪರ ಮಾತುಕತೆಗಳೇ ಈ ಸಂಘರ್ಷಕ್ಕೆ ಇರುವ ಪರಿಹಾರ. ಪರಸ್ಪರ ಸೌಹಾರ್ಧ ಸಂಬಂಧಗಳೇ ಈಗಿರುವ ಇಸ್ರೇಲಿನ ದುಗುಡಯುಕ್ತ ವಾತಾವರಣಕ್ಕೆ ಏಕೈಕ ಪರಿಹಾರವಾಗಿದೆ.

ಇಸ್ರೇಲಿನಲ್ಲಿ ಅರಬ್ಬರು ಮತ್ತು ಯಹೂದಿಗಳು ಒಂದೇ ನಗರಗಳಲ್ಲಿ ಅಕ್ಕಪಕ್ಕದಲ್ಲೇ ವಾಸಿಸುತ್ತಾರೆ. ವಿಶೇಷವಾಗಿ ಅಪಾರ್ಟ್ಮೆಂಟ್ ಕಟ್ಟಡಗಳು ಮತ್ತು ಸೈಟುಗಳನ್ನು ಹಂಚಿಕೊಳ್ಳುವುದರಲ್ಲಿ ಈವರೆಗೂ ತಾರತಮ್ಯ ಮಾಡಿಲ್ಲ. ಆದರೆ ಕಳೆದ ಕೆಲ ದಿನಗಳು ಎರಡೂ ಜನಸಮುದಾಯಗಳು ಭಯ ಮತ್ತು ಅಪನಂಬಿಕೆಯ ವಾತಾವರಣದಲ್ಲಿ ಬದುಕುತ್ತಿದೆ. ಇದು ಎಷ್ಟು ಅಪಾಯಕಾರಿ ಮತ್ತು ಜನರನ್ನು ಮಾನಸಿಕತೆಯ ಮೇಲೆ ಹೊಡೆತ ಬೀರುತ್ತೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕು. ಅದಕ್ಕಾಗಿಯೇ ನೆರೆಹೊರೆಯವರನ್ನು, ಬೇರೆ ಬೇರೆ ಸಮುದಾಯಗಳನ್ನು ಒಂದುಗೂಡಿಸುವ ಕಾರ್ಯಚಟುವಟಿಕೆಗಳು ಇಸ್ರೇಲಿನ ಸಧ್ಯದ ಅವಶ್ಯಕತೆಯಾಗಿದೆ.

ಸೌಹಾರ್ದತೆಯನ್ನು ಹುಟ್ಟಿಸುವ ಮತ್ತು ಹರಡುವ ಈ ಮೌಲ್ಯಯುತ ಕೆಲಸವನ್ನು ಜನರೇ ಖುದ್ದಾಗಿ ಮಾಡಬೇಕಿದೆ. ಏಕೆಂದರೆ ದೇಶದ ಪ್ರಧಾನಿಯೇ ಒಂದು ಸಮುದಾಯವನ್ನು ಅಪರಾಧ ಮತ್ತು ಹಿಂಸಾಚಾರಕ್ಕೆ ಪ್ರಚೋದಿಸಿದಾಗ ಈ ನೆಲ ಮೂಲವೇ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ‌.

******

ಅಲುಫ್ ಬೆನ್

ಅಲುಫ್ ಬೆನ್ ಇಸ್ರೇಲ್ ನ ಖ್ಯಾತ ಪತ್ರಕರ್ತರು. ಆ ದೇಶದ ನಂಬರ್ 1 ಪತ್ರಿಕೆಯ ಪ್ರಧಾನ ಸಂಪಾದಕರಾಗಿರುವ ಅಲುಫ್ ಬೆನ್ ಚಿಕ್ಕಪ್ಪ ಗಾಜಾ ಪಟ್ಟಿಯಲ್ಲಿ ನಡೆದ ದಾಳಿಯ ವೇಳೆ ಮೃತರಾಗಿದ್ದಾರೆ. ಹಲವು ಪ್ರತಿಷ್ಟಿತ ಪತ್ರಿಕೆಯಲ್ಲಿ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿರುವ ಅಲುಫ್ ಬೆನ್ ಇಸ್ರೇಲ್ ನ ಎಲ್ಲಾ ಗಲಭೆ, ಯುದ್ದಗಳನ್ನು ಖುದ್ದು ವರದಿ ಮಾಡಿದ್ದಾರೆ. ಮಾನವ ಹಕ್ಕುಗಳು, ಸಮಾನತೆಯ ಪ್ರತಿಪಾದಕರಾಗಿರುವ ಅಲುಫ್ ಬೆನ್ ಬರಹಗಳ ಜಗತ್ತಿನ ಎಲ್ಲಾ ಕಡೆ ನಡೆಯುವ ದೌರ್ಜನ್ಯವನ್ನು ವಿರೋಧಿಸುತ್ತಾರೆ. ಅವರ ಸಂಪಾದಕೀಯವನ್ನು ಅವರ ಆಶಯಕ್ಕೆ ಕುಂದು ಬಾರದ ರೀತಿಯಲ್ಲಿ ಅನುವಾದ ಮಾಡಲಾಗಿದೆ.

ಅನುವಾದ – ನವೀನ್ ಸೂರಿಂಜೆ (ಪತ್ರಕರ್ತರು)


ಇದನ್ನೂ ಓದಿ: ಇಸ್ರೇಲ್ ವಿರುದ್ಧ ಹಮಾಸ್ ದಾಳಿಗೆ ವಿರೋಧ: ಪ್ಯಾಲೆಸ್ಟೈನ್ ಬೆಂಬಲಿಸಿದ ಭಾರತ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...